Crime News: ಗೃಹಿಣಿಯ ಸಾವು: ಸ್ಯಾನಿಟೈಸರ್ ಸುರಿದು ಕೊಲೆಯ ಆರೋಪ: ಪಿಎಸ್ಐ ಸ್ಕ್ಯಾಮ್, ಬಂಧಿತ ಅಭ್ಯರ್ಥಿಯ ಸೋದರ ಆತ್ಮಹತ್ಯೆ

ಏಪ್ರಿಲ್ 20 ರಂದು ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಶಾಜಿಯಾ ಬಾನು ಅವರನ್ನು ನಗರ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಾಜಿಯಾ ಇಂದು ಮೃತರಾಗಿದ್ದರು.

ಶಾಜಿಯಾ ಭಾನು ಮತ್ತು ಇಮ್ರಾನ್ ಖಾನ್

ಶಾಜಿಯಾ ಭಾನು ಮತ್ತು ಇಮ್ರಾನ್ ಖಾನ್

  • Share this:
ಏಪ್ರಿಲ್ 20ರಂದು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಗೃಹಿಣಿ (Woman) ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸದ್ಯ ಗೃಹಿಣಿಯ ಸಾವಿನ (Death) ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಶಾಜಿಯಾ ಬಾನು ಮೃತ ಮಹಿಳೆ. ಆರ್ ಟಿ ನಗರ (RT Nagara, Bengaluru) ಪೊಲೀಸ್ ಠಾಣಾ ವ್ಯಾಪ್ತಿಯ ಮಠದಹಳ್ಳಿಯಲ್ಲಿ ಶಾಜಿಯಾ ಬಾನು ಪತಿ ಇಮ್ರಾನ್ ಖಾನ್ ಜೊತೆ ವಾಸವಾಗಿದ್ದರು. ಗಂಡನ ಕಿರುಕುಳಕ್ಕೆ (Harassment) ಬೇಸತ್ತ ಶಾಜಿಯಾ ಬಾನು ಸ್ಯಾನಿಟೈಸರ್ (Sanitiser) ಸುರಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದ್ರೆ ಶಾಜಿಯಾ ಬಾನು ಪೋಷಕರು ಮಗಳನ್ನು ಕೊಲೆ (Murder) ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇಮ್ರಾನ್ ಖಾನ್ ಮಗಳ ಜೊತೆ ಸದಾ ಜಗಳ ಮಾಡುತ್ತಿದ್ದನು. ಆತನೇ ಸ್ಯಾನಿಟೈಸರ್ ಸುರಿದು ಕೊಲೆ ಮಾಡಿದ್ದಾನೆ ಎಂದು ಶಾಜಿಯಾ ಪೋಷಕರು ಹೇಳುತ್ತಾರೆ.

ಏಪ್ರಿಲ್ 20 ರಂದು ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಶಾಜಿಯಾ ಬಾನು ಅವರನ್ನು ನಗರ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಾಜಿಯಾ ಇಂದು ಮೃತರಾಗಿದ್ದರು. ಇದೀಗ ಶಾಜಿಯಾ ಪೋಷಕರು ಅಳಿಯ ಇಮ್ರಾನ್ ಖಾನ್ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: CM Ibrahim ಯಾವ ಪಾತ್ರಕ್ಕೂ ಬೇಕಾದ್ರು ಸೂಕ್ತವಾಗುವ ವ್ಯಕ್ತಿ: CT Ravi ವ್ಯಂಗ್ಯ

ಡ್ರಗ್ಸ್ ಪೆಡ್ಲರ್ ಗಳ ಬಂಧನ

ಕೇರಳದಿಂದ ಡ್ರಗ್ಸ್ ಆಮದು ಮಾಡಿಕೊಂಡು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೋವಿನ್ ಜಾನ್ಸನ್, ಪ್ರಣವ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ಸೇಲ್ ಮಾಡುತ್ತಿದ್ದರು. ಎಂಡಿಎಂಎ, ಕ್ರಿಸ್ಟೈಲ್ ಮಾತ್ರೆಗಳನ್ನ ಕಡಿಮೆ ಬೆಲೆಗೆ ತಂದು ಮಾರತ್ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದರು. ಒಂದು ಗ್ರಾಂ ಡ್ರಗ್ಸ್ ಗೆ  ಹತ್ತು ಸಾವಿರಕ್ಕೆ ಮಾರಾಟ ಮಾಡಿ ಪೆಡ್ಲರ್ ಗಳು ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದರು. ಈ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಎಸ್ಐ ಸ್ಕ್ಯಾಮ್, ಬಂಧಿತ ಅಭ್ಯರ್ಥಿಯ ಸೋದರ ಆತ್ಮಹತ್ಯೆ

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧಿತ ಅಭ್ಯರ್ಥಿ ಮನು ಕುಮಾರ್ ಎಂಬಾತನ ಅಣ್ಣ ವಾಸು (36) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನದ ಗುಂಜೇವು ಗ್ರಾಮದ ಮನುಕುಮಾರ್  ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದನು. ಪರೀಕ್ಷೆಯಲ್ಲಿ ಅಕ್ರಮ ಬೆಳಕಿಗೆ ಬಂದ ಬಳಿಕ ಬಂಧನಕ್ಕೆ ಒಳಗಾಗಿರುವ ಅಭ್ಯರ್ಥಿಗಳ ಪೈಕಿ ಮನು ಕುಮಾರ್ ಸಹ ಒರ್ವ.

ತಮ್ಮನ ಬಂಧನದ ಬಳಿಕ ಮನುಕುಮಾರ್ ಮಾನಸಿಕವಾಗಿ ಬಂಧಿದ್ದರು. ತಮ್ಮನ ಉದ್ಯೋಗಕ್ಕಾಗಿ ವಾಸು ಸಾಲ ಮಾಡಿ ಹಣ ನೀಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಮನುಕುಮಾರ್ ಸಿಐಡಿ ಕಸ್ಟಡಿಯಲ್ಲಿದ್ದಾನೆ.

ವಾಸು ಬಂಧನ, ಮನು ಆತ್ಮಹತ್ಯೆಗೂ ಸಂಬಂಧ ಇಲ್ಲ ಅಂದ್ರು ತಾಯಿ

ನನ್ನ ಮಗ ವಾಸು ಆತ್ಮಹತ್ಯೆಗೂ ಮನುಕುಮಾರ್ ಪಿಎಸ್‌ಐ ಆಯ್ಕೆಗೂ ಯಾವುದೇ ಸಂಬಂಧವಿಲ್ಲ. ಪಿಎಸ್‌ಐಗೆ ಆಯ್ಕೆಯಾಗಿದ್ದ ನನ್ನ ಮಗ ಮನುಕುಮಾರ್ ತುಂಬ ಚೆನ್ನಾಗಿ ಓದುತ್ತಿದ್ದನು. ಅವನು ಓದಿದ ಕಡೆಯೆಲ್ಲ ಪ್ರಶಸ್ತಿ ತೆಗೆದುಕೊಂಡಿದ್ದನು. ವಾಸು ಆತ್ಮಹತ್ಯೆಗೂ ಮನುಕುಮಾರ್‌ ಗೂ ಸಂಬಂಧವಿಲ್ಲ. ನಾವು ಬಡವರು, ಒಂದು ಎಕರೆ ಜಮೀನಿದೆ, ಹೀಗಿರುವಾಗ ಹಣ ಕಟ್ಟಲು ಹೇಗೆ ಸಾಧ್ಯ ಎಂದು ವಾಸು ತಾಯಿ ಶಿವಮ್ಮ ಹೇಳಿದ್ದಾರೆ.

ಹಣ ಕೊಟ್ಟು ಕೆಲಸ ಪಡೆಯುವ ಶಕ್ತಿ ನಮಗಿಲ್ಲ

ಮನುಕುಮಾರ್ ಪಿಎಸ್‌ಐ ಆಗಿ ಆಯ್ಕೆಯಾದ ಬಗ್ಗೆಯೂ ವಾಸು ಸರಿಯಾಗಿ ವಿಚಾರಿಸಿರಲಿಲ್ಲ. ಹೀಗಿರುವಾಗ ವಾಸು ಸಾವಿಗೂ, ಮನುಕುಮಾರ್ ಆಯ್ಕೆಗೂ ಸಂಬಂಧವೇನು? ನನ್ನ ಮಗ ಹಣ ಕೊಟ್ಟು ಖಂಡಿತ ಕೆಲಸ ಪಡೆದಿಲ್ಲ. ಹಣ ಕೊಟ್ಟು ಕೆಲಸ ಪಡೆಯುವ ಶಕ್ತಿಯೂ ನಮಗೆ ಇಲ್ಲ.

ಇದನ್ನೂ ಓದಿ:  Kolar Murder: ಮಾತಾಡೋ ಸೋಗಿನಲ್ಲಿ ಮಹಿಳೆಯರ ಗಲಾಟೆ! ಕೊಲೆನಲ್ಲಿ ಕೊನೆಯಾಯ್ತು ವರ್ಷಗಳ ದ್ವೇಷ

ವಾಸು ಮತ್ತು ಆತನ ಹೆಂಡತಿ ನಡುವೆ ಸಣ್ಣಪುಟ್ಟ ಜಗಳವಾಗುತ್ತಿತ್ತು. ಸಿಐಡಿ ಪೊಲೀಸರು ನನ್ನ ಮಗನನ್ನು ಕರೆದುಕೊಂಡು ಬಂದಿದ್ದರು . ಎಲ್ಲಾ ಬರೆದುಕೊಂಡು ಹೋಗಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ಏನು ತಿಳಿದಿಲ್ಲ ಎಂದು ಶಿವಮ್ಮ ಹೇಳುತ್ತಾರೆ.
Published by:Mahmadrafik K
First published: