Mysuru: 21 ವರ್ಷದ ಅರ್ಚಕನ ಜೊತೆ 35 ವರ್ಷದ ಮಹಿಳೆ ಎಸ್ಕೇಪ್; ನಂಬಿಸಿ ಕರೆದೊಯ್ದು ಕಾಡಲ್ಲೇ ಬಿಟ್ಟು ಹೋದ!

ಮಹದೇಶ್ವರ ದೇವಸ್ಥಾನದಲ್ಲಿ 35 ವರ್ಷದ ಗೃಹಿಣಿಯೊಬ್ಬಳು ಶಾಸ್ತ್ರ ಕೇಳಲು ಹೋದಾಗ 21 ವರ್ಷ ವಯಸ್ಸಿನ ಅರ್ಚಕ ಸಂತೋಷ್ ಪರಿಚಯವಾಗಿತ್ತು. ಮಹಿಳೆಗೆ ಬಾಳು ಕೊಡೋದಾಗಿ ನಂಬಿಸಿ ಕರೆದೊಯ್ದಿದ್ದ ಅರ್ಚಕ ಆಕೆಗೆ ಮೋಸ ಮಾಡಿದ್ದಾನೆ.

ಅರ್ಚಕ ಸಂತೋಷ್​, ಮಹಿಳೆ

ಅರ್ಚಕ ಸಂತೋಷ್​, ಮಹಿಳೆ

  • Share this:
ಮೈಸೂರು (ಜೂ 23): ಮಹಿಳೆಯೊರ್ವಳು (Women) ಚಿಕ್ಕ ವಯಸ್ಸಿನ ದೇವಸ್ಥಾನದ (Temple) ಅರ್ಚಕನ ಜೊತೆ ಪರಾರಿಯಾಗಿ ಎಂಥಾ ಎಡವಟ್ಟು ಮಾಡಿಕೊಂಡಿದ್ದಾಳೆ ಗೊತ್ತಾ. ಮದುವೆ ಆಗಿ 2 ಮಕ್ಕಳಿದ್ದರೂ ದೇವಸ್ಥಾನದ ಅರ್ಚಕನ ಜೊತೆ ಪರಾರಿಯಾಗಿದ್ದ ಮಹಿಳೆ 10 ದಿನಕ್ಕೆ ಬೀದಿಗೆ ಬಿದ್ದಿದ್ದಾಳೆ. ಬಾಳು ಕೊಡ್ತೀನಿ ಎಂದು ಕರೆದೊಯ್ದ ಅರ್ಚಕ ಮಹಿಳೆಯನ್ನು ಕಾಡಲ್ಲಿ ಬಿಟ್ಟು ಎಸ್ಕೇಪ್​ (Escape) ಆಗಿದ್ದಾನೆ. ಇಂತಹ ವಿಚಿತ್ರ ಘಟನೆ ನಡೆದಿರೋದು ಮೈಸೂರು (Mysuru) ಜಿಲ್ಲೆ ನಂಜನಗೂಡು ತಾಲೂಕು ಕೊಲೂಪುರ ಗ್ರಾಮದಲ್ಲಿ, ಮಹದೇಶ್ವರ ದೇವಸ್ಥಾನದಲ್ಲಿ ಪರಿಚಯವಾಗಿದ್ದ ಅರ್ಚಕನ ಜೊತೆ ಮಹಿಳೆ ಮನೆ ಬಿಟ್ಟು ಬಂದಿದ್ರು. ಅರ್ಚಕ ನನ್ನ ಜೊತೆ ಬಾ ನಿನಗೆ ಹೊಸ ಬಾಳು ಕೊಡುವುದಾಗಿ ಕರೆದೊಯ್ದಿದ್ದ ಬಳಿಕ  10 ದಿನ ಆಕೆಯ ಜತೆ ಸುತ್ತಾಡಿ ಕೊನೆಗೆ ಮಧ್ಯರಾತ್ರಿ ಕಾಡಲ್ಲಿ ಬಿಟ್ಟು ಹೋಗಿದ್ದಾನೆ. ಇಡೀ ರಾತ್ರಿ ಒಂಟಿಯಾಗಿ ಕಾಡಲ್ಲಿ ಪ್ರಿಯಕರನಿಗಾಗಿ ಕಾದು ಕಾದು  ಸುಸ್ತಾದ ಮಹಿಳೆ, ಬೆಳಗ್ಗೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾಳೆ.

ಅರ್ಚಕನನ್ನು ನಂಬಿ ಗಂಡ, ಮಕ್ಕಳನ್ನು ಬಿಟ್ಟ ಮಹಿಳೆ

ಮಹದೇಶ್ವರ ದೇವಸ್ಥಾನದಲ್ಲಿ 35 ವರ್ಷದ ಗೃಹಿಣಿಯೊಬ್ಬಳು ಶಾಸ್ತ್ರ ಕೇಳಲು ಹೋದಾಗ 21 ವರ್ಷ ವಯಸ್ಸಿನ ಅರ್ಚಕ ಸಂತೋಷ್ ಎಂಬಾತನ ಪರಿಚಯವಾಗಿತ್ತು. ಗೃಹಿಣಿ ಮತ್ತು ಅರ್ಚಕ ನಡುವೆ ಸಲುಗೆ ಬೆಳೆದು ಪ್ರೇಮಾಂಕುರವಾಗಿದೆ. ಎಲ್ಲಿಗಾದರೂ ಹೋಗಾಣ ಬಾ. ನಿನಗೆ ಬಾಳು ಕೊಡುವೆ ಎಂದು ಅರ್ಚಕ ನಂಬಿಸಿದ್ದ. ಈತನ ಮಾತಿಗೆ ಮರುಳಾದ ಮಹಿಳೆ, ಗಂಡ-ಮಕ್ಕಳನ್ನು ಬಿಟ್ಟು ಜೂ.12ರಂದು ತವರು ಮನೆಯಿಂದ ಅರ್ಚಕನ ಜೊತೆ ಪರಾರಿಯಾಗಿದ್ದಳು.

10 ದಿನ ಮಹಿಳೆಯ ಜೊತೆ ಸುತ್ತಾಡಿದ

ಅತ್ತ ಮಹಿಳಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರೆ, ಈಕೆ ಪ್ರಿಯಕರನ ಜತೆ ಊರು ಬಿಟ್ಟಿದ್ದಳು. ಅರ್ಚಕ ಮಹಿಳೆಯನ್ನು ಮದವೆ ಆಗ್ತಿನಿ ಅಂತ ಆಸೆ ಹುಟ್ಟಿಸಿ ಆಕೆಯೊಂದಿಗೆ ಸಂಬಂಧ ಹೊಂದಿದ್ದ. ಮಹಿಳೆಯನ್ನು ಕರೆದುಕೊಂಡು ಹೋಗಿದ್ದ ಸಂತೋಷ್, ದೇಗುಲ ಮತ್ತು ನಿರ್ಜನ ಪ್ರದೇಶದಲ್ಲಿ ಸುತ್ತಾಡಿಸಿದ. 10 ದಿನ ಆಕೆಯ ಜೊತೆಯೇ ಇದ್ದ, ಇದ್ದಕ್ಕಿದ್ದಂತೆ ನಿನ್ನೆ ವರಸೆ ಬದಲಿಸಿದ್ದಾನೆ. ಮದುವೆ ಆಗೋಕೆ ನಮ್ಮ ಮನೆಯಲ್ಲಿ ಒಪ್ಪಲ್ಲ ಎಂದು ಉಲ್ಟಾ ಹೊಡೆದಿದ್ದಾನೆ.

ಉಲ್ಟಾ ಹೊಡೆದ ಅರ್ಚಕ

ಎಲ್ಲಿಯಾದರೂ ದೂರ ಹೋಗಿ ಬದುಕೋಣ ಎಂದು ಮಹಿಳೆ ಹೇಳಿದ್ರು ಆಕೆಯ ಮಾತಿಗೆ ಅರ್ಚಕ ಒಪ್ಪಿಲ್ಲ. ಊರಿಗೆ ವಾಪಸ್ ಹೋಗೋಣ, ಅಲ್ಲಿಯೇ ನನಗೆ ತಾಳಿ ಕಟ್ಟು ನಾನು ನಿನ್ನೊಂದಿಗೇ ಬಾಳುವೆ ಎಂದು ಮಹಿಳೆ ಗೋಗರೆದ್ದಿದ್ದಾಳೆ. ಇದಕ್ಕೆ ಕಿವಿಗೊಡದ ಆತ, ಅಲ್ಲಿಗೆ ಹೋದರೆ ನಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಹೆದರಿಸಿದ್ದಾನೆ. ಕೊನೆಗೆ ಇಬ್ಬರೂ ಸಾವಲ್ಲಿ ಒಂದಾಗೋಣ, ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದ.

ಇದನ್ನೂ ಓದಿ: Bengaluru: ಕಾರಿನ ವೈಯರ್ ಕಚ್ಚಿದ ಇಲಿ, 5 ಲಕ್ಷ ಪರಿಹಾರ ಕೇಳಿದ ಭೂಪ; ಅಪಾರ್ಟ್​​ಮೆಂಟ್​ ನಿವಾಸಿ ರಂಪಾಟ

ರಾತ್ರಿ ಕಾಡಲ್ಲೇ ಮಹಿಳೆ ಬಿಟ್ಟು ಪರಾರಿ

ರಾತ್ರಿ 12 ಗಂಟೆ ಸುಮಾರಿಗೆ ಇಲ್ಲೇ ಇರುವ ಬರ್ತೀನಿ ಒಂದೈದು ನಿಮಿಷ ಅಂತ ಹೋದ ಸಂತೋಷ್ ವಾಪಸ್ ಬಂದಿಲ್ಲ. ಒಂಟಿಯಾಗಿ ಇಡೀ ರಾತ್ರಿ ಕಾಡಿನಲ್ಲೇ ಮಹಿಳೆ ಪ್ರಿಯಕರಿನಾಗಿ ಕಾದಿದ್ದಾಳೆ. ಕಾಡುಪ್ರಾಣಿಗಳ ಭೀತಿ, ಸರೀಸೃಪಗಳ ಭಯದಲ್ಲೇ ಕಾಲ ಕಳೆದಿದ್ದಾಳೆ. ಬೆಳಗಾದರೂ ಪ್ರಿಯಕರ ಬಂದಿಲ್ಲ.ನಡೆದುಕೊಂಡೇ ಕಾಡಂಚಿಗೆ ಬಂದು ಕುಳಿತಿದ್ದ ಒಬ್ಬಂಟಿ ಮಹಿಳೆಯನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ.

ಇದನ್ನೂ ಓದಿ: Textbook Row: ಪಠ್ಯ ಪರಿಷ್ಕರಣೆ ವಿವಾದ; ಹೌದು ಇದೆಲ್ಲಾ ಸೇರಿಸಿದ್ದೇವೆ ಏನೀಗ ಎಂದ ಸಚಿವ ಆರ್.ಅಶೋಕ್

ಮಹಿಳೆಯ ಕಣ್ಣೀರ ಕಥೆ ಕೇಳಿದ ಗ್ರಾಮಸ್ಥರು, ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರ ಮುಂದೆ ಮಹಿಳೆ ಕಣ್ಣೀರು ಹಾಕಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಗೋಗರೆದಿದ್ದಾಳೆ. ನನಗೆ ಸಂತೋಷ್ ಬೇಕು, ಆತನ ಜತೆ ಮಧ್ಯೆ ಮಾಡಿಸಿ. ಅವನು ಮದುವೆ ಆಗ್ತಿನಿ ಅಂತ ಕರೆದುಕೊಂಡು ಬಂದು ಈಗ ನಾಪತ್ತೆಯಾಗಿದ್ದಾನೆ. ನನಗೆ ನ್ಯಾಯ ಬೇಕು ಎಂದು ಕಣ್ಣೀರು ಹಾಕಿದ್ದಾಳೆ. ಮಹಿಳೆಯ ಮನವೊಲಿಸಿ ಪೊಲೀಸರು ಕರೆದೊಯ್ದಿದ್ದು, ಸಂತೋಷ್ ಪತ್ತೆಗೆ ಬಲೆ ಬೀಸಿದ್ದಾರೆ.
Published by:Pavana HS
First published: