ತುಮಕೂರು: ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ (Marriage) ಮಹಿಳೆ (Woman) ಇಂದು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ತುಮಕೂರು (Tumakuru) ನಗರದ ಬಯಲು ಆಂಜನೇಯ ಸ್ವಾಮಿ ದೇವಾಲಯದ (Bayalu Anjaneya Swamy Temple) ಬಳಿಯ ನಿವಾಸವೊಂದರಲ್ಲಿ ನಡೆದಿದೆ. ಮೇಘನಾ (30) ಮೃತ ದುರ್ದೈವಿಯಾಗಿದ್ದಾರೆ. ಗಂಡನ (Husband) ಮನೆಯವರ ಕಿರುಕುಳಕ್ಕೆ ಬೇಸತ್ತು ತಮ್ಮ ಮಗಳು ನೇಣಿಗೆ ಶರಣಾಗಿದ್ದಾಳೆ ಎಂದು ಮೇಘಣಾ ಕುಟುಂಬಸ್ಥರು ಆರೋಪಿಸಿದ್ದಾರೆ. ಅಂದಹಾಗೆ, ಕಳೆದ ನಾಲ್ಕು ವರ್ಷಗಳ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಶಿಡ್ಲಕಟ್ಟೆ ಗ್ರಾಮದ ಮೇಘನಾ ಅವರನ್ನು ತುಮಕೂರು ನಗರದ ಹನುಮಂತಪುರದ ಬಳಿ ವಾಸವಾಗಿದ್ದ ಮನೋಜ್ (35) ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.
ಘಟನೆ ಸಂಬಂಧ ಮಾಹಿತಿ ಪಡೆದುಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಾಗಿದೆ.
ಇದನ್ನೂ ಓದಿ: Baburao Chinchansur: ಬಿಜೆಪಿ ಎಂಎಲ್ಸಿ ಬಾಬುರಾವ್ ಚಿಂಚನಸೂರ್ ರಾಜೀನಾಮೆ! ಮತ್ತೆ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ಪೊಲೀಸ್ ಇಲಾಖೆ ಸಿಬ್ಬಂದಿಗೆ ಆರೋಗ್ಯ ತಪಾಸಣೆ
ರಾಜ್ಯದಲ್ಲಿ ಚುನಾವಣೆ ಕಾವು ಸದ್ದಿಲ್ಲದೇ ಹೆಚ್ಚಾಗುತ್ತಿದೆ. ಮತಬೇಟೆಗೆ ಸಿದ್ಧತೆ ನಡುವೆ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಆ ಸಮಸ್ಯೆಯ ಪರಿಹಾರಕ್ಕೆ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ.
ಹೌದು, ರಾಜ್ಯದಲ್ಲಿ ಚುನಾವಣೆ ಸಮಯ. ಈ ಬಾರಿ ಅಧಿಕಾರ ಯಾರದ್ದು ಎನ್ನುವ ಲೆಕ್ಕಾಚಾರದ ನಡುವೆ ಟಿವಿ, ಕುಕ್ಕರ್, ರೇಷನ್ ಹಂಚಲು ಮುಂದಾಗಿದ್ದಾರೆ. ಚುನಾವಣಾ ಆಯೋಗ ಈಗಾಗಲೇ ಪೊಲೀರಿಗೆ ಸೂಚನೆ ನೀಡಿದ್ದು, ಎಲ್ಲಾ ಚಟುವಟಿಕೆಗಳ ಮೇಲೆ ನಿಗಾವಹಿಸಲು ತಿಳಿಸಿದೆ. ಹಗಲು ರಾತ್ರಿ ಎನ್ನದೇ ಹದ್ದಿನ ಕಣ್ಣಿಟ್ಟು ಫೀಲ್ಡ್ನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಸಿಬ್ಬಂದಿಗೆ ಅನಾರೋಗ್ಯ ಉಂಟಾಗುತ್ತಿದೆ.
800 ಮಂದಿ ಸಿಬ್ಬಂದಿಗೆ ಆರೋಗ್ಯ ತಪಾಸಣೆ
ಚುನಾವಣೆ ಸಮೀಪದಲ್ಲಿ ಆರಕ್ಷಕ ಸಿಬ್ಬಂದಿಗೆ ಸಾಲು ಸಾಲು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಆಗ್ನೇಯ ವಿಭಾಗದ ಡಿಸಿಪಿ ಸಿಬ್ಬಂದಿಗೆ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಿಸಿದ್ದಾರೆ. ಅದರಂತೆ ಜಯದೇವ ಹಾಗೂ ಅಪೋಲೊ ಆಸ್ಪತ್ರೆ ಸಹಯೋಗದಲ್ಲಿ 14 ಠಾಣೆಗಳ 800 ಮಂದಿ ಸಿಬ್ಬಂದಿಗೆ ತಪಾಸಣೆ ಮಾಡಲಾಯಿತು.
800 ಮಂದಿಯ ಸಿಬ್ಬಂದಿಯಲ್ಲಿ ಶೇಕಡಾ 2ರಷ್ಟು ಜನರಿಗೆ ಬಿಪಿ ಸಮಸ್ಯೆ ಕಂಡು ಬಂದಿದೆ. ಗ್ಯಾಸ್ಟಿಕ್ ಹಾಗೂ ಹೃದಯ ಸಂಬಂಧಿ ಸಮಸ್ಯೆ ಪತ್ತೆಯಾಗಿದೆ. ಆರಕ್ಷಕರು ಸಮಾಜದ ರಕ್ಷಣೆಗೆ ಇರೋದು. ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ಆರೋಗ್ಯ ತಪಾಸಣೆ ಮಾಡಿದ್ದು ಒಳ್ಳೆಯ ಕೆಲಸ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ