ಕೈಕೊಟ್ಟ ಹೆಂಡತಿ, ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಗಂಡ; ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

ರಂಗನಾಥ ಹಾಗೂ ಮೈಸೂರಿನ ಭವ್ಯಶ್ರೀ  ಮೂರು ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಹೀಗೆ ಮದುವೆಯಾದವರು ಬೆಂಗಳೂರಿಗೆ ಆಗಮಿಸಿ ಕೆ.ಆರ್​. ಪುರಂನ ದೇವಸಂದ್ರ ಪ್ರಿಯದರ್ಶಿನಿ ಲೇಔಟ್​ನಲ್ಲಿ ವಾಸವಾಗಿದ್ದಾರೆ.

news18-kannada
Updated:January 13, 2020, 5:47 PM IST
ಕೈಕೊಟ್ಟ ಹೆಂಡತಿ, ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಗಂಡ; ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ
ರಂಗನಾಥ ಭವ್ಯಶ್ರೀ ದಂಪತಿ.
  • Share this:
ಬೆಂಗಳೂರು (ಜನವರಿ 13); ಪ್ರೀತಿಸಿ ಮದುವೆಯಾಗಿದ್ದ ಹುಡುಗಿ ಕೈಕೊಟ್ಟು ತಂದೆ ತಾಯಿಯ ಜೊತೆಗೆ ತೆರಳಿ ವಿವಾಹ ವಿಚ್ಚೇಧನ ನೋಟೀಸ್​ ನೀಡಿದ್ದಕ್ಕೆ ಬೇಸರಗೊಂಡ ವಿವಾಹಿತ, ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯಗೆ ಯತ್ನಿಸಿರುವ ಘಟನೆ ನಗರದ ಕೆ.ಆರ್​. ಪುರಂನಲ್ಲಿ ನಡೆದಿದೆ. 

ರಂಗನಾಥ ಅಲಿಯಾಸ್​ ಕೇಬಲ್​ ರಂಗ (30) ಆತ್ಮಹತ್ಯೆಗೆ ಯತ್ನಿಸಿದ ವಿವಾಹಿತ. ಈತ ಸೆಲ್ಪಿ ವಿಡಿಯೋ ಮಾಡಿದ ನಂತರ ಮನೆ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ. ಶಬ್ಧ ಕೇಳಿದ ಅಕ್ಕಪಕ್ಕದ ಮನೆಯವರು ತಕ್ಷಣ ಸ್ಥಳಕ್ಕೆ ಧಾವಿಸಿ ರಂಗನಾಥನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ, ಆತನ ಪರಿಸ್ಥಿತಿ ಹದಗೆಟ್ಟಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗುತ್ತಿದೆ.

ಏನಿದು ಘಟನೆ?  

ರಂಗನಾಥ ಹಾಗೂ ಮೈಸೂರಿನ ಭವ್ಯಶ್ರೀ  ಮೂರು ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಹೀಗೆ ಮದುವೆಯಾದವರು ಬೆಂಗಳೂರಿಗೆ ಆಗಮಿಸಿ ಕೆ.ಆರ್​. ಪುರಂನ ದೇವಸಂದ್ರ ಪ್ರಿಯದರ್ಶಿನಿ ಲೇಔಟ್​ನಲ್ಲಿ ವಾಸವಾಗಿದ್ದಾರೆ.ಆದರೆ, ಇವರು ಮದುವೆಯಾಗಿದ್ದು ಹುಡುಗಿ ಮನೆ ಕಡೆಯವರಿಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಂಗನಾಥ ಮನೆಯಲ್ಲಿಲ್ಲದ ಸಮಯದಲ್ಲಿ ಮನೆಗೆ ಆಗಮಿಸಿರುವ ಭವ್ಯಶ್ರೀ ತಂದೆ-ತಾಯಿ ಆಕೆಯ ಮನಸ್ಸನ್ನು ಬದಲಿಸಿ ಮತ್ತೆ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ, ರಂಗನಾಥನಿಗೆ ನ್ಯಾಯಾಲಯದ ಮೂಲಕ ವಿವಾಹ ವಿಚ್ಚೇಧನ ನೊಟೀಸ್​ ನೀಡಿದ್ದಾರೆ.

ಇದರಿಂದ ಮನನೊಂದ ರಂಗನಾಥ ತನ್ನ ಸಾವಿಗೆ ಭವ್ಯಶ್ರೀ ಅವರ ತಂದೆ-ತಾಯಿಯೇ ಕಾರಣ ಎಂದು ವಿಡಿಯೋ ಮಾಡಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೆ.ಆರ್​. ಪುರಂ ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ : ಕಾಂಗ್ರೆಸ್​ಗೆ ಭಾರೀ ಮುಖಭಂಗ; ಸೋನಿಯಾ ಕರೆದ ಸಿಎಎ ವಿರುದ್ಧದ ವಿರೋಧ ಪಕ್ಷಗಳ ಸಭೆಗೆ ಯುಪಿಎ ಮೈತ್ರಿ ಪಕ್ಷಗಳೇ ಗೈರು!
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ