• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಚಿಕ್ಕಮಗಳೂರು: ಕಲ್ಯಾಣ ಮಂಟಪ ಬುಕ್ ಮಾಡಿದ್ದವರಿಗೆ ಅಡ್ವಾನ್ಸ್ ಹಣ ಕೊಡಲು ಮಾಲೀಕರ ಹಿಂದೇಟು

ಚಿಕ್ಕಮಗಳೂರು: ಕಲ್ಯಾಣ ಮಂಟಪ ಬುಕ್ ಮಾಡಿದ್ದವರಿಗೆ ಅಡ್ವಾನ್ಸ್ ಹಣ ಕೊಡಲು ಮಾಲೀಕರ ಹಿಂದೇಟು

ಕಲ್ಯಾಣ ಮಂಟಪ

ಕಲ್ಯಾಣ ಮಂಟಪ

ಮನೆಯಲ್ಲಿ ಸಿಂಪಲ್ ಆಗಿ ಮದ್ವೆ ಮಾಡ್ತೀವಿ ಪ್ಲೀಸ್ ಹಾಲ್‍ಗಳಿಗೆ ಕಟ್ಟಿರೋ ನಮ್ಮ ಹಣವನ್ನ ನಮಗೆ ವಾಪಸ್ ಕೊಡಿ ಅಂತ ವಧು-ವರರ ಸಂಬಂಧಿಕರು ಬೇಡಿಕೊಳ್ತಿದ್ದಾರೆ. ಆದ್ರೆ, ಕಲ್ಯಾಣ ಮಂಟಪದ ಮಾಲೀಕರು ನಮ್ಮ ಸಮಸ್ಯೆಯನ್ನ ಯಾರು ಕೇಳ್ತಿಲ್ಲ. ನೀವು ಮದ್ವೆ ಮಾಡಿಕೊಳ್ಳಲು ನಾವೇನು ಅಡ್ಡಿ ಮಾಡಿಲ್ಲ, ಮದ್ವೆಗೆ ನಿರ್ಬಂಧ ವಿಧಿಸಿರೋದು ಸರ್ಕಾರ. ಹಾಗಾಗಿ ವಾಪಸ್ ಹಣ ಕೊಡೋ ಮಾತೇ ಇಲ್ಲ. ನೀವು ಬೇಕಾದ್ರೆ ಸ್ವಲ್ಪ ದಿನ ಬಿಟ್ಟು ಮದ್ವೆ ಮಾಡಿ ಅಂತಿದ್ದಾರೆ ಕನ್ವೆಷನ್ ಹಾಲ್ ಮಾಲೀಕರು.

ಮುಂದೆ ಓದಿ ...
  • Share this:

ಚಿಕ್ಕಮಗಳೂರು(ಏ.24): ಸರ್ಕಾರದ ಆದೇಶದ ಹಿನ್ನೆಲೆ ಮದುವೆಗೆ ದೊಡ್ಡ ದೊಡ್ಡ ಕನ್ವೆನ್ಷನ್ ಹಾಲ್ ಗಳನ್ನು ಬುಕ್ ಮಾಡಿದವ್ರಿಗೆ ತಲೆಬಿಸಿ ಎದುರಾಗಿದೆ. ಕನ್ವೆನ್ಷನ್​ ಹಾಲ್‍ಗಳಿಗೆ ಮುಂಗಡವಾಗಿ ಕಟ್ಟಿದ ಹಣವನ್ನ ಮಾತ್ರ ಕೇಳ್ಬೇಡಿ ಅಂತಾ ಕಲ್ಯಾಟ ಮಂಟಪ ಮಾಲೀಕರು ಹೇಳುತ್ತಿದ್ದಾರೆ. ಹೀಗಾಗಿ ಮದುವೆಗೆ ಮುಂಗಡ ಹಣ ಕಟ್ಟಿದ ವಧು ವರರ ಕಡೆಯವರು ಚಿಕ್ಕಮಗಳೂರಿನಲ್ಲಿ ಗೊಂದಲಕ್ಕೀಡಾಗಿದ್ದಾರೆ.


ಹೌದು, ರಾಜ್ಯಾದ್ಯಂತ ಕೊರೊನಾ ರಣಕೇಕೆ ಹೆಚ್ಚುತ್ತಿರೋದ್ರಿಂದ ಸದ್ಯಕ್ಕೆ ಮದುವೆ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಸಾವಿರಾರು ಜನರನ್ನ ಸೇರಿಸಿ ಮದುವೆ ಮಾಡ್ಬೇಕು ಅಂತ ಕನಸು ಕಂಡವರು ಇದೀಗ 50 ಮಂದಿ ಸಮ್ಮುಖದಲ್ಲಷ್ಟೆ ಮದುವೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ದೊಡ್ದ-ದೊಡ್ಡ ಹಾಲ್‍ಗಳನ್ನ ಬುಕ್ ಮಾಡಿದ ಮದುವೆಗಳೆಲ್ಲಾ ಮನೆಗಳಿಗೆ-ದೇವಸ್ಥಾನಗಳಿಗೆ ಶಿಫ್ಟ್ ಆಗ್ತಿವೆ. ಆದ್ರೆ, ಕನ್ಷೆಷನ್ ಹಾಲ್‍ಗಳಿಗೆ ಮುಂಗಡವಾಗಿ ಕಟ್ಟಿದ ಹಣವನ್ನ ಮಾತ್ರ ಕೇಳ್ಬೇಡಿ ಅಂತಿದ್ದಾರೆ ಕಲ್ಯಾಟ ಮಂಟಪ ಮಾಲೀಕರು.  ಈ ಮಧ್ಯೆ ಹಣ ಕಟ್ಟಿದವರು ಪ್ಲೀಸ್ ನಮ್ ದುಡ್ಡು ವಾಪಸ್ ಕೊಡಿ ಅಂತಾ ಮನವಿ ಮಾಡ್ತಿದ್ದಾರೆ.


CoronaVirus: ವೆಂಟಿಲೇಟರ್ ಲಭ್ಯತೆಯನ್ನು 10 ಪಟ್ಟು ಹೆಚ್ಚಿಸಲು ಕ್ರಮ: ಸಚಿವ ಸುಧಾಕರ್ ವಿಶ್ವಾಸ


ಸದ್ಯ ಕೋವಿಡ್ ಪರಿಸ್ಥಿತಿಯಲ್ಲಿ ಮದುವೆ ಆಗೋದು, ಮಾಡೋದು ಎರಡೂ ಸವಾಲಾಗಿದೆ. ತಿಂಗಳ ಹಿಂದೆಯೇ ಮದುವೆ ಹಾಲ್​ಗಳಿಗೆ ಹಣ ಕೊಟ್ಟು ಬುಕ್ ಮಾಡಿದವರೀಗ ಪೇಚಿಗೆ ಸಿಲುಕಿದ್ದಾರೆ. ಸಾವಿರಾರು ಜನರ ಸಮ್ಮುಖದಲ್ಲಿ ಮಕ್ಕಳನ್ನ ಮದ್ವೆ ಮಾಡ್ಬೇಕು ಅಂತ ಬಯಸಿ, ಮದ್ವೆ ಮಂಟಪಗಳಿಗೆ ಹಣ ಕೊಟ್ಟವರು ಇದೀಗ ತಲೆ ಕೆಡಿಸಿಕೊಳ್ಳುವಂತಾಗಿದೆ. ಕಾಫಿನಾಡಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ನೂರಾರು ಮದ್ವೆಗಳು ನಡೆಯುತ್ತಿವೆ. ಅನೇಕ ಮದ್ವೆಗಳಿಗೆ ಕಲ್ಯಾಣ ಮಂಟಪದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದ್ರೆ ಮದ್ವೆಗಳಿಗೆ 50 ಮಂದಿಯಷ್ಟೆ ಇರ್ಬೇಕು ಅನ್ನೋ ರೂಲ್ಸ್ ಜನರಿಗೆ ತಲೆನೋವು ತರಿಸಿದೆ. ಸರ್ಕಾರದ ನಿಯಮದಂತೆ ನಾವು ಮನೆಯಲ್ಲೋ, ದೇವಸ್ಥಾನದಲ್ಲೋ ಮದ್ವೆ ಮಾಡ್ತೀವಿ, ನಮ್ಮ ಮುಂಗಡ ಹಣವನ್ನ ಕೊಡಿ ಅಂತಾ ಬೇಡಿಕೊಳ್ಳೋ ಸ್ಥಿತಿ ಬಂದಿದೆ.


ಕಷ್ಟಪಟ್ಟು ಮದುವೆ ಮಂಟಪಗಳಿಗೆ ಹಣ ಕಟ್ಟಿದ್ದೇವೆ. ಆದ್ರೆ, ಇದೀಗ ಸಾವಿರಾರು ಜನರನ್ನ ಕರೆದು ಮದ್ವೆ ಮಾಡಲು ಸರ್ಕಾರ ಒಪ್ಪಿಗೆ ನೀಡ್ತಿಲ್ಲ. ಒಪ್ಪಿಗೆ ನೀಡ್ತಿಲ್ಲ ಅನ್ನೋದಕ್ಕಿಂತಲೂ ಕೊರೋನಾ ಜನರನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ಹಾಗಾಗಿ ಮನೆಯಲ್ಲಿ ಸಿಂಪಲ್ ಆಗಿ ಮದ್ವೆ ಮಾಡ್ತೀವಿ ಪ್ಲೀಸ್ ಹಾಲ್‍ಗಳಿಗೆ ಕಟ್ಟಿರೋ ನಮ್ಮ ಹಣವನ್ನ ನಮಗೆ ವಾಪಸ್ ಕೊಡಿ ಅಂತ ವಧು-ವರರ ಸಂಬಂಧಿಕರು ಬೇಡಿಕೊಳ್ತಿದ್ದಾರೆ. ಆದ್ರೆ, ಕಲ್ಯಾಣ ಮಂಟಪದ ಮಾಲೀಕರು ನಮ್ಮ ಸಮಸ್ಯೆಯನ್ನ ಯಾರು ಕೇಳ್ತಿಲ್ಲ. ನೀವು ಮದ್ವೆ ಮಾಡಿಕೊಳ್ಳಲು ನಾವೇನು ಅಡ್ಡಿ ಮಾಡಿಲ್ಲ, ಮದ್ವೆಗೆ ನಿರ್ಬಂಧ ವಿಧಿಸಿರೋದು ಸರ್ಕಾರ. ಹಾಗಾಗಿ ವಾಪಸ್ ಹಣ ಕೊಡೋ ಮಾತೇ ಇಲ್ಲ. ನೀವು ಬೇಕಾದ್ರೆ ಸ್ವಲ್ಪ ದಿನ ಬಿಟ್ಟು ಮದ್ವೆ ಮಾಡಿ ಅಂತಿದ್ದಾರೆ ಕನ್ವೆಷನ್ ಹಾಲ್ ಮಾಲೀಕರು.


ಒಟ್ಟಾರೆ, ಸದ್ಯ ಒಳ್ಳೆ ಮುಹೂರ್ತವಿದ್ದು ಜಿಲ್ಲೆಯಲ್ಲಿ ಹತ್ತಾರು ಮದ್ವೆಗಳು ಏಪ್ರಿಲ್-ಮೇನಲ್ಲಿ ಫಿಕ್ಸ್ ಆಗಿದ್ದವು. ಈ ಬಾರಿ ಕೊರೋನಾ ಕಾಟ ಇರೋದಿಲ್ಲ ಎಲ್ಲವೂ ಸರಿಯಾಗಿರುತ್ತೆ ಎಂದು ಎಲ್ಲರೂ ಭಾವಿಸಿದ್ದರು. ಆದ್ರೆ, ಕೊರೋನಾದ ಎರಡನೇ ಅಲೆ ಮದ್ವೆ ಕನಸು ಕಂಡವರ ಆಸೆಗೆ ತಣ್ಣೀರೆರಚಿದೆ. ಈ ಮಧ್ಯೆ ಹಾಲ್‍ಗಳಿಗೆ ಹಣ ಕಟ್ಟಿದವರು ಪ್ಲೀಸ್ ಹಣ ವಾಪಸ್ ಕೊಡಿ ಅಂತ ಬಾಯಿ ಬಡಿದುಕೊಳ್ಳೋ ಸ್ಥಿತಿ ಬಂದಿದೆ. ಜಿಲ್ಲಾಡಳಿತ ಅಥವ ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಮಧ್ಯೆ ಪ್ರವೇಶಿಸಿ ನೊಂದವರ ಸಮಸ್ಯೆಯನ್ನ ಬಗೆಹರಿಸಬೇಕಿದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು