ಒಂದು ಫೋನ್ ಕರೆಯಿಂದ ಚನ್ನಪಟ್ಟಣದಲ್ಲಿ ಮುರಿದುಬಿತ್ತು ಮದುವೆ; ಅದೇ ಮುಹೂರ್ತದಲ್ಲಿ ತಾಳಿ ಕಟ್ಟಿದ ಪಕ್ಕದೂರಿನ ಹುಡುಗ

ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಭಾಗ್ಯಶ್ರೀಗೆ 6 ತಿಂಗಳ ಹಿಂದೆ ಬಸವರಾಜು ಜೊತೆ ನಿಶ್ಚಿತಾರ್ಥವಾಗಿತ್ತು. ಇಂದು ಬೆಳಗ್ಗೆ ಇಬ್ಬರ  ಮದುವೆಯೂ ನಡೆಯಬೇಕಾಗಿತ್ತು. ಆದರೆ, ನಿನ್ನೆ ಅನಾಮಿಕರೊಬ್ಬರು ಫೋನ್ ಮಾಡಿ, ಬಸವರಾಜುಗೆ ಈಗಾಗಲೇ ಮದುವೆಯಾಗಿ ಮಕ್ಕಳೂ ಇವೆ ಎಂದು ಹೇಳಿದ್ದರು.

Sushma Chakre | news18-kannada
Updated:November 22, 2019, 11:11 AM IST
ಒಂದು ಫೋನ್ ಕರೆಯಿಂದ ಚನ್ನಪಟ್ಟಣದಲ್ಲಿ ಮುರಿದುಬಿತ್ತು ಮದುವೆ; ಅದೇ ಮುಹೂರ್ತದಲ್ಲಿ ತಾಳಿ ಕಟ್ಟಿದ ಪಕ್ಕದೂರಿನ ಹುಡುಗ
ಪ್ರಾತಿನಿಧಿಕ ಚಿತ್ರ
  • Share this:
ರಾಮನಗರ (ನ. 22): 6 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಇಂದು ಹಸೆಮಣೆ ಏರುವವರಿದ್ದರು. ಇಬ್ಬರೂ ಹೊಸಜೀವನ ಆರಂಭಿಸಲು ಸಾಕಷ್ಟು ಕನಸು ಕಂಡಿದ್ದರು. ಇಬ್ಬರ ಮನೆಯಲ್ಲೂ ಮದುವೆಯ ಸಂಭ್ರಮ ಮನೆಮಾಡಿತ್ತು. ಆದರೆ, ನಿನ್ನೆ ಸಂಜೆ ಬಂದ ಆ ಒಂದು ಫೋನ್​ ಕಾಲ್​ನಿಂದ ಮದುವೆಯೇ ಮುರಿದುಬಿದ್ದ ಘಟನೆ ರಾಮನಗರದಲ್ಲಿ ನಡೆದಿದೆ.

ಈ ರೀತಿಯ ಘಟನೆಯನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಿ. ಸಿನಿಮಾ, ಧಾರಾವಾಹಿಗಳಲ್ಲಿ ಮಂಟಪದಲ್ಲೇ ಮದುವೆಗಳು ಮುರಿದು ಬೀಳುವುದು, ನಂತರ ವಧುವಿಗೆ ಬೇರೆ ಇನ್ನಾರೋ ತಾಳಿ ಕಟ್ಟುವುದು ಎಲ್ಲವೂ ಸಾಮಾನ್ಯ. ಆದರೆ, ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು, ಮದುವೆ ಮುರಿದು ಬಿದ್ದ ನಂತರ ಪಕ್ಕದ ಊರಿನ ಯುವಕನೊಬ್ಬ ಆ ವಧುವನ್ನು ಮದುವೆಯಾಗಲು ಮುಂದೆ ಬಂದಿದ್ದಾನೆ!

ಆಗಿದ್ದಾದರೂ ಏನು?:

ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಭಾಗ್ಯಶ್ರೀ ಎಂಬ ಹುಡುಗಿಗೆ 6 ತಿಂಗಳ ಹಿಂದೆ ಬಸವರಾಜು ಎಂಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಇಂದು ಬೆಳಗ್ಗೆ ಇಬ್ಬರ  ಮದುವೆಯೂ ನಡೆಯಬೇಕಾಗಿತ್ತು. ಅದಕ್ಕಾಗಿ ಛತ್ರದಲ್ಲಿ ಎಲ್ಲ ಸಿದ್ಧತೆಗಳೂ ನಡೆದಿದ್ದವು. ಆದರೆ, ನಿನ್ನೆ ಇದ್ದಕ್ಕಿದ್ದಂತೆ ಅನಾಮಿಕರೊಬ್ಬರು ಫೋನ್ ಮಾಡಿ, ಬಸವರಾಜುಗೆ ಈಗಾಗಲೇ ಮದುವೆಯಾಗಿ ಮಕ್ಕಳೂ ಇವೆ ಎಂಬ ವಿಷಯವನ್ನು ಹೇಳಿದ್ದರು. ಈ ಸುದ್ದಿ ಇಡೀ ಮದುವೆ ಮನೆಯಲ್ಲಿ ಸಂಚಲನ ಮೂಡಿಸಿತ್ತು.

ರಸ್ತೆ ಅಪಘಾತದಲ್ಲಿ ಪತ್ರಕರ್ತ ಮಂಜುನಾಥ್ ನಿಧನ; ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಇಂದು ನಿಗದಿಯಾಗಿದ್ದ ಭಾಗ್ಯಶ್ರೀ- ಬಸವರಾಜು ಮದುವೆಯ ಆಮಂತ್ರಣ ಪತ್ರಿಕೆ


ಇದೆಲ್ಲ ಸುಳ್ಳು ಸುದ್ದಿ ಎಂದು ವರನ ಕಡೆಯವರು ಹೇಳಿದರೂ ನಂಬದ ವಧುವಿನ ಮನೆಯವರು ಈ ಬಗ್ಗೆ ಇತ್ಯರ್ಥ ಮಾಡಬೇಕೆಂದು ಪೊಲೀಸ್ ಠಾಣೆಗೆ ಹೋದರು. ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿಯವರೆಗೆ ಎರಡೂ ಕಡೆಯವರು ಕುಳಿತು ಚರ್ಚಿಸಿದ್ದಾರೆ. ಪೊಲೀಸರು ಸಂಧಾನ ಮಾಡಿಸಲು ನೋಡಿದರೂ ಮದುವೆಯಾಗಿರುವ ವ್ಯಕ್ತಿಗೆ ತಮ್ಮ ಮಗಳನ್ನು ಕೊಡುವುದಿಲ್ಲ ಎಂದು ಮದುಮಗಳ ಮನೆಯವರು ಹಠ ಹಿಡಿದಿದ್ದಾರೆ. ವರನ ಕಡೆಯವರು ಆ ಆರೋಪವನ್ನು ಸಾಬೀತುಪಡಿಸಿದ ನಂತರ ಮದುವೆ ರದ್ದು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೂ ಮದುವೆಗೆ ಒಪ್ಪದ ಹುಡುಗಿಯ ಮನೆಯವರು ಬಸವರಾಜು ಜೊತೆಗಿನ ಮದುವೆಯನ್ನು ರದ್ದು ಮಾಡಿದ್ದಾರೆ.ಟಿಕ್​ಟಾಕ್ ಆಂಟಿಯೊಂದಿಗೆ ಸಚಿವ ಮಾಧುಸ್ವಾಮಿ ಫೋಟೋ; ಅವಹೇಳನಕಾರಿ ಟ್ವೀಟ್ ಮಾಡಿದ ಜೆಡಿಎಸ್​ ವಿರುದ್ಧ ಬಿಜೆಪಿ ದೂರು

ಮದುವೆ ಮುರಿದುಬೀಳುತ್ತಿದ್ದಂತೆ ವಧು ಭಾಗ್ಯಶ್ರೀಯನ್ನು ತಾನು ಮದುವೆಯಾಗುತ್ತೇನೆ ಎಂದು ಎಲೆಗೇರಿ ಗ್ರಾಮದ ಆನಂದ್ ಮುಂದೆ ಬಂದಿದ್ದಾನೆ. ಆತನೊಂದಿಗೆ ಇಂದಿನ ಮುಹೂರ್ತದಲ್ಲಿ ಮದುವೆ ಮಾಡಿಕೊಡಲು ಭಾಗ್ಯಶ್ರೀ ಮನೆಯವರು ಒಪ್ಪಿದ್ದಾರೆ. ರಾಮನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫೋನ್ ಮಾಡಿ ಮದುವೆ ಕ್ಯಾನ್ಸಲ್ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಇಂದು ಬೆಳಗ್ಗೆ ಆನಂದ್​ ಜೊತೆಗೆ ಭಾಗ್ಯಶ್ರೀ ಮದುವೆ ನೆರವೇರಿದೆ.

(ವರದಿ: ಎ.ಟಿ. ವೆಂಕಟೇಶ್)
First published:November 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading