• Home
  • »
  • News
  • »
  • state
  • »
  • ಗಾಂಜಾ ಸಿಗಲಿಲ್ಲ ಎಂದು ಮನೆಯ ಟೆರೇಸ್ ಮೇಲೆ ಹೂ ಕುಂಡಗಳಲ್ಲಿ ಗಾಂಜಾ ಬೆಳೆದ ಭೂಪ!

ಗಾಂಜಾ ಸಿಗಲಿಲ್ಲ ಎಂದು ಮನೆಯ ಟೆರೇಸ್ ಮೇಲೆ ಹೂ ಕುಂಡಗಳಲ್ಲಿ ಗಾಂಜಾ ಬೆಳೆದ ಭೂಪ!

ಮನೆಯ ಟೆರೆಸ್ ಮೇಲೆ ಬೆಳೆದಿರುವ ಗಾಂಜಾ.

ಮನೆಯ ಟೆರೆಸ್ ಮೇಲೆ ಬೆಳೆದಿರುವ ಗಾಂಜಾ.

ಈತನ ಹೇಳಿಕೆ ಪಡೆದ ಪೊಲೀಸರು ಹೂವಿನ ಕುಂಡಗಳಲ್ಲಿ ಇದ್ದ ಗಾಂಜಾ ಗಿಡಗಳನ್ನೆಲ್ಲ ವಶಕ್ಕೆ ಪಡೆದು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ಇನ್ನು ಈ ಕಿರೀಟ್ ಚಕ್ರವರ್ತಿ ರೇಸ್ ಕೋರ್ಸ್ ನಲ್ಲಿ ಕೆಲಸ ಮಾಡ್ತಾ ಇದ್ದ ಅನ್ನೋ ಮಾಹಿತಿ ಸಹ ಪೊಲೀಸರಿಗರ ಸಿಕ್ಕಿದೆ. 

  • Share this:

ಬೆಂಗಳೂರು; ಪೊಲೀಸರು ಹಾಸಿಗೆ ಕೆಳಗೆ ತೂರಿದರೆ ಆರೋಪಿಗಳು ರಂಗೋಲಿ ಕೆಳಗೆ ನುಗ್ಗುತ್ತಾರೆ ಎಂದು ಈತನನ್ನು ನೋಡಿಯೇ ಹೇಳಿರಬೇಕು. ಈತ ಮಾಡಿದ ಕೆಲಸವೂ ಹಾಗೇ ಇದೆ. ಗಾಂಜಾ ವ್ಯಸನಿಯಾಗಿದ್ದ ಕಿರೀಟ್ ಚಕ್ರವರ್ತಿ ಎಂಬಾತ ಲಾಕ್ ಡೌನ್ ಟೈಂನಲ್ಲಿ ಎಲ್ಲಿಯೂ ಗಾಂಜಾ ಸಿಕ್ಕಿಲ್ಲ ಅಂತೇಳಿ ತನ್ನದೇ ಮನೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲು ಶುರು ಮಾಡಿದ್ದ. ಹೆಬ್ಬಾಳದ ಫ್ಲೈಓವರ್ ಪಕ್ಕದಲ್ಲಿಯೇ ಮನೆ ಮಾಡಿಕೊಂಡಿದ್ದ ಚಕ್ರವರ್ತಿ ಸುಮಾರು 200ಕ್ಕೂ ಹೆಚ್ಚು ಹೂವಿನ ಕುಂಡಗಳನ್ನು  ಗಾಂಜಾ ಬೆಳೆದಿದ್ದ.


ಸುಮಾರು 6 ತಿಂಗಳಿನಿಂದಲೂ ಹೀಗೆ ಮಾಡ್ತಾ ಇದ್ರೂ ಯಾರೋಬ್ಬರಿಗೂ ಅನುಮಾನ ಬಂದಿರಲಿಲ್ಲ. ಕೊನೆಗೆ ತನ್ನ ಅಣ್ಣನ ‌ಮಗ ಮನೆಯ ಬಳಿ ಬಂದು ನೋಡಿದಾಗ ಗಾಂಜಾ ಗಿಡ ಇರೋದು ಪತ್ತೆಯಾಗಿದೆ. ಈ ವೇಳೆ ಪ್ರಶ್ನೆ ಮಾಡಿದಾಗ ನಿನಗೂ ಬೇಕು ಅಂದ್ರೆ ಕೊಡ್ತೀನಿ ಸುಮ್ಮನಿರು ಅಂದಿದ್ದಾನೆ. ಆದ್ರೆ ಈತನ ವರ್ತನೆಯನ್ನು ಗಮನಿಸಿದ ಯುವಕ ನೇರವಾಗಿ ಹೋಗಿ ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಸಿಕ್ಕಿದ್ದೇ ಸ್ಥಳಕ್ಕೆ ಬಂದ ಪೊಲೀಸರು ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಚಕ್ರವರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೌಟುಂಬಿಕ ಸಮಸ್ಯೆಯಿಂದ ಹೆಂಡತಿ ಹಾಗೂ ಮಕ್ಕಳಿಂದ ದೂರವಾಗಿದ್ದ. ಈ ವೇಳೆ ಅತಿಯಾಗಿ ಕುಡಿಯೋಕೆ ಶುರು ಮಾಡಿದ್ದನಂತೆ. ಆದ್ರೆ ಕುಡಿತಕ್ಕೆ ಹೆಚ್ಚು ದುಡ್ಡು ಖರ್ಚಾಗುತ್ತಿದ್ದ ಕಾರಣದಿಂದ ಗಾಂಜಾ ಸೇದೋಕೆ ಶುರು ಮಾಡಿಕೊಂಡಿದ್ದಾನೆ. ಲಾಕ್ ಡೌನ್ ಆಗೋಕು ಮುನ್ನ ಗಾಂಜಾ ಸಿಗ್ತಾ ಇದ್ದು ಪಾಕೆಟ್ ಗೆ 200-300 ಕೊಟ್ಡು ತಗೊಂಡು ಬಂದು ಸೇದುತ್ತಾ ಇದ್ದ.


ಇದನ್ನು ಓದಿ: ಹತ್ರಾಸ್ ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆ; ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್​ಶೀಟ್


ಆದ್ರೆ ಲಾಕ್ ಟೌನ್ ಬಳಿಕ ಎಲ್ಲಿಯೂ ಗಾಂಜಾ ಸಿಗಲಿಲ್ಲ. ಇದ್ರಿಂದ ತೀರಾ ಖಿನ್ನತೆಗೊಳಗಾಗಿದ್ದ ಚಕ್ರವರ್ತಿ ತಾನೇ ಗಾಂಜಾ ಬೆಳೆದ್ರೆ ಹೇಗೆ ಅಂತ ಫ್ಲಾನ್ ಮಾಡಿದ್ದಾನೆ. ಅದ್ರಂತೆ ಹೆಚ್ಚು ಹೆಚ್ಚು ಹೂವಿನ ಕುಂಡಗಳನ್ನು ತಂದು ಅದ್ರಲ್ಲಿ ಯಾವುದಾದ್ರೂ ಒಂದು ಸಸಿಯನ್ನು ಇಟ್ಟು ಅದ್ರ ಒಳಗಡೆಯೇ ಗಾಂಜಾ ಬೀಜಗಳನ್ನು ಹಾಕಿದ್ದ. ಮೊದಲಿಗೆ ಯಾರಿಗೂ ಈ ವಿಚಾರ ಗೊತ್ತಾಗದೇ ಇದ್ದಾಗ ಬೆಳೆದ ಗಿಡಗಳನ್ನೇ ಒಣಗಿಸಿ ಪುಡಿ ಮಾಡಿ ಗಾಂಜಾ ಸೇದುತ್ತಿದ್ದ. ಹಾಗಾಗಿ ಇದೇ ಫ್ಲಾನ್ ಚೆನ್ನಾಗಿದೆ ಅಂತೇಳಿ ಖುದ್ದಾಗಿ ಗಾಂಜಾ ಬೀಜಗಳನ್ನು ತಂದು ಗಿಡಗಳನ್ನು ಹಾಕಿದೆ ಅಂತೇಳಿದ್ದಾನೆ.


ಇನ್ನು ಈತನ ಹೇಳಿಕೆ ಪಡೆದ ಪೊಲೀಸರು ಹೂವಿನ ಕುಂಡಗಳಲ್ಲಿ ಇದ್ದ ಗಾಂಜಾ ಗಿಡಗಳನ್ನೆಲ್ಲ ವಶಕ್ಕೆ ಪಡೆದು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ಇನ್ನು ಈ ಕಿರೀಟ್ ಚಕ್ರವರ್ತಿ ರೇಸ್ ಕೋರ್ಸ್ ನಲ್ಲಿ ಕೆಲಸ ಮಾಡ್ತಾ ಇದ್ದ ಅನ್ನೋ ಮಾಹಿತಿ ಸಹ ಪೊಲೀಸರಿಗರ ಸಿಕ್ಕಿದೆ.

Published by:HR Ramesh
First published: