ಬೀದರ್ ಘಟನೆ; ಕರ್ನಾಟಕ ಪ್ರಜಾಪ್ರಭುತ್ವವೋ? ಅಥವಾ ಪೊಲೀಸ್ ರಾಜ್ಯವೋ?; ಸಿಎಂಗೆ ಮಾರ್ಗರೇಟ್ ಆಳ್ವಾ ಪ್ರಶ್ನೆ

ನಾಗರಿಕರ ಹಕ್ಕುಗಳನ್ನು ರಕ್ಷಣೆ ಮಾಡುವ ಜಬಾಬ್ದಾರಿಯನ್ನು ನೀವು ತೆಗೆದುಕೊಳ್ಳದಿದ್ದರೆ ಅದು ನಿಮ್ಮ ಪ್ರಖರ ನಾಯಕತ್ವ ಗುಣವನ್ನು ಮುಳುಗಿಸಿದಂತೆ. ಈ ಮಟ್ಟದ ಭಯ ಮತ್ತು ದೌರ್ಜನ್ಯ ನಮ್ಮ ರಾಜ್ಯದಲ್ಲಿ ಉದ್ಬವವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಎಂದು ಮಾರ್ಗರೇಟ್ ಆಳ್ವಾ ಅವರು ವಿಷಾದ ವ್ಯಕ್ತಪಡಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

news18-kannada
Updated:February 6, 2020, 7:11 AM IST
ಬೀದರ್ ಘಟನೆ; ಕರ್ನಾಟಕ ಪ್ರಜಾಪ್ರಭುತ್ವವೋ? ಅಥವಾ ಪೊಲೀಸ್ ರಾಜ್ಯವೋ?; ಸಿಎಂಗೆ ಮಾರ್ಗರೇಟ್ ಆಳ್ವಾ ಪ್ರಶ್ನೆ
ಮಾರ್ಗರೇಟ್ ಆಳ್ವಾ.
  • Share this:
ಬೆಂಗಳೂರು: ಸಿಎಎ ಟೀಕಿಸಿ ಬೀದರ್​ ಶಾಲೆಯಲ್ಲಿ ಮಾಡಲಾದ ನಾಟಕ ಸಂಬಂಧ ಬೀದರ್ ಪೊಲೀಸರು ಶಾಲೆಯ ಮಕ್ಕಳು ಮತ್ತು ಸಿಬ್ಬಂದಿಯನ್ನು ವಿಚಾರಣೆ ಮಾಡಿರುವ ಘಟನೆಗೆ ಮಾಜಿ ರಾಜ್ಯಪಾಲೆ ಮತ್ತು ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದಿದ್ದಾರೆ.

"ಬೀದರ್​ ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ನಿಮ್ಮ ಮೌನ ಕಂಡು ಅಚ್ಚರಿ ಮತ್ತು ನೋವುಂಟಾಗಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರವೋ? ಅಥವಾ ಪೊಲೀಸ್ ರಾಜ್ಯವೋ? ಯಾರ ಸೂಚನೆಯ ಮೇರೆಗೆ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಲಾಗಿದೆ? ಇದರ ಬಗ್ಗೆ ನಿಮಗೆ ಅರಿವಿದೆಯೇ ಅಥವಾ ಈ ಬೆಳವಣಿಗೆ ಬಗ್ಗೆ ಅಸಡ್ಡೆಯೋ? ಕೇಂದ್ರ ಸರ್ಕಾರ ಅಂಗೀಕರಿಸಿರುವ ಭಯಂಕರವಾದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ನಾಟಕವನ್ನು ದೇಶದ್ರೋಹಿ ಎಂದು ಪೊಲೀಸರು ಹೇಗೆ ಕರೆಯುತ್ತಾರೆ? ನಾಗರಿಕರ ಹಕ್ಕುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳದಿದ್ದರೆ ಅದು ನಿಮ್ಮ ಪ್ರಖರ ನಾಯಕತ್ವ ಗುಣವನ್ನು ಮುಳುಗಿಸಿದಂತೆ. ಈ ಮಟ್ಟದ ಭಯ ಮತ್ತು ದೌರ್ಜನ್ಯ ನಮ್ಮ ರಾಜ್ಯದಲ್ಲಿ ಉದ್ಬವವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಎಂದು ಮಾರ್ಗರೇಟ್ ಆಳ್ವಾ ಅವರು ವಿಷಾದ ವ್ಯಕ್ತಪಡಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
 ಇದನ್ನು ಓದಿ: ಸಿಎಎ ವಿರೋಧಿಸಿ ನಾಟಕ; ಬೀದರ್​ ಶಾಲೆ ವಿರುದ್ಧ ದೇಶದ್ರೋಹ ಪ್ರಕರಣ, 80 ವಿದ್ಯಾರ್ಥಿಗಳ ವಿಚಾರಣೆ!
First published: February 6, 2020, 7:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading