ವಿಪಕ್ಷಗಳನ್ನು ಮುಗಿಸುವ ಕೆಲಸ ಬಿಜೆಪಿ ಮಾಡುತ್ತಿದೆ: ಮಾರ್ಗರೇಟ್​​ ಆಳ್ವಾ

ಮಹದಾಯಿ ಯೋಜನೆಯ ಕಾಮಗಾರಿಗೆ ಅಡಿಗಲ್ಲು ಹಾಕದೇ ಹೋದರೂ ಬಿಜೆಪಿಯವರು ಕಲ್ಲು ಹಾಕಿದ್ದಾರೆ. ಮಹದಾಯಿ ಹೆಸರಲ್ಲಿ ಮತ ಯಾಚಿಸುತ್ತಿದ್ದಾರೆಂದು ಮಹದಾಯಿ ಹೋರಾಟಗಾರ ಶಂಕರ್ ಅಂಬ್ಲಿ ಟೀಕಿಸಿದ್ದಾರೆ.

G Hareeshkumar | news18
Updated:April 10, 2019, 6:22 PM IST
ವಿಪಕ್ಷಗಳನ್ನು ಮುಗಿಸುವ ಕೆಲಸ ಬಿಜೆಪಿ ಮಾಡುತ್ತಿದೆ: ಮಾರ್ಗರೇಟ್​​ ಆಳ್ವಾ
ಮಾರ್ಗರೇಟ್​​ ಆಳ್ವಾ
G Hareeshkumar | news18
Updated: April 10, 2019, 6:22 PM IST
ಹುಬ್ಬಳ್ಳಿ( ಏ. 10): ದೇಶದಲ್ಲಿ ವಿರೋಧ ಪಕ್ಷಗಳನ್ನು ಮುಗಿಸುವ ಕೆಲಸ ಬಿಜೆಪಿ ಮಾಡ್ತಾಯಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ದಬ್ಬಾಳಿಕೆಯಿಂದ ಹೆದರಿಸಿ ಬೆದರಿಸಿ ಚುನಾವಣೆ ಮಾಡುತ್ತಿದ್ದಾರೆ. ಆದರೂ ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತಿದೆ ಎಂದು ಮಾಜಿ ರಾಜ್ಯಾಪಾಲೆ ಮಾರ್ಗರೇಟ್​​ ಆಳ್ವಾ ಆರೋಪಿಸಿದ್ದಾರೆ.

ವಿರೋಧ ಪಕ್ಷಗಳು ಮಾತ್ರ ಚುನಾವಣೆಗೆ ಹಣ ಖರ್ಚು ಮಾಡುತ್ತಿವೆ. ವಿಪಕ್ಷದವರೆಲ್ಲರೂ ಭ್ರಷ್ಟರು. ಪ್ರಧಾನಿ ನರೇಂದ್ರ ಮೋದಿ ಒಬ್ಬರೇ  ಚೌಕಿದಾರ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ವಿಷಾದಿಸಿರುವ ಕಾಂಗ್ರೆಸ್ ನಾಯಕಿ,  ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹದಾಯಿ ಯೋಜನೆಗೆ ಬಿಜೆಪಿ ಅಡಿಗಲ್ಲಲ್ಲ, ಕಲ್ಲು ಹಾಕಿದೆ: ಶಂಕರ ಅಂಬ್ಲಿ ಟೀಕೆ

ಬಿಜೆಪಿಯವರು ಮಹದಾಯಿ ಯೋಜನೆಯ ಕಾಮಗಾರಿಗೆ ಯಾವ ಅಡಿಗಲ್ಲೂ ಹಾಕದೇ ಹೋದರೂ ಯೋಜನೆಗೆ ಕಲ್ಲು ಹಾಕಿದ್ದಾರೆ. ಮಹದಾಯಿ ಹೆಸರಲ್ಲಿ ಮತ ಪಡೆಯುತ್ತಿದ್ದಾರೆ ಎಂದು ಮಹದಾಯಿ ಹೋರಾಟಗಾರ  ಹಾಗೂ ರಾಜ್ಯ ರೈತ ಸೇನೆ ರಾಜ್ಯಾಧ್ಯಕ್ಷ ಶಂಕರ್ ಅಂಬ್ಲಿ ಟೀಕಿಸಿದ್ದಾರೆ. ಧಾರವಾಡದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಮೇಲೆ ಹರಿಹಾಯ್ದ ಶಂಕರ್ ಅಂಬ್ಲಿ, ಅವರು ಮೂರು ಬಾರಿ ಸಂಸದರಾದರೂ ಯಾವುದೇ ಪ್ರಯೋಜನ ಇಲ್ಲ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ವಾಜಪೇಯಿಗೆ ಬಂದ ಗತಿಯೇ ಮೋದಿಗೆ ಬರುತ್ತೆ; ಸಿದ್ದರಾಮಯ್ಯ ವಾಗ್ದಾಳಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರು ಬದಲಾವಣೆ ಬಯಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕಿದೆ. ಮಹದಾಯಿ ಯೋಜನೆ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಆದರೆ ಪ್ರಲ್ಹಾದ್ ಜೋಷಿ ಮೂರು ಬಾರಿ ಸಂಸದರಾಗಿ ಆಯ್ಕೆಯಾದರೂ ಪ್ರಯೋಜನವಾಗಿಲ್ಲ. ಮಹದಾಯಿ ಯೋಜನೆಗೆ ಅನುದಾನ ನೀಡಿಲ್ಲ. ಜನರು ಬದಲಾವಣೆ ಬಯಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕಿದೆ ಎಂದು ಶಂಕರ್ ಅಂಬ್ಲಿ ಕಿವಿಮಾತು  ಹೇಳಿದ್ಧಾರೆ.

First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...