Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:March 23, 2019, 11:29 AM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
Seema.R | news18
Updated: March 23, 2019, 11:29 AM IST
1.ಸಚಿವ ಸಿಎಸ್​ ಶಿವಳ್ಳಿ ಇನ್ನಿಲ್ಲ

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ ಸ್ನೇಹಿತರೊಂದಿಗೆ ಮಾತನಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ನಗರದ ಲೈಫ್​ಲೈನ್​ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ನಿಧನರಾದರು. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಕಾಂಗ್ರೆಸ್​ನ ಧಾರವಾಡದ ಕುಂದಗೋಳ ಶಾಸಕ ಸಿ.ಎಸ್ ಶಿವಳ್ಳಿ ಬಡ ಕುಟುಂಬದಿಂದ ಬಂದವರು. ಯರಗುಪ್ಪಿಯಲ್ಲಿ ಜನಿಸಿದ ಶಿವಳ್ಳಿ ಅವರಿಗೆ ನಾಲ್ವರು ಸಹೋದರರು, ಮೂರು ಮಂದಿ ಸಹೋದರಿಯರು ಇದ್ದಾರೆ. ಮೂರು ದಶಕಗಳಿಂದ ರಾಜಕೀಯದಲ್ಲಿದ್ದ ಶಿವಳ್ಳಿ, ಆರು ಬಾರಿ ಸ್ಪರ್ಧೆ ಮಾಡಿ, ಮೂರು ಬಾರಿ ಗೆಲುವು ಸಾಧಿಸಿದ್ದರು.

2.ಬೆಂಗಳೂರು ಕೇಂದ್ರದಿಂದ ನಾಮಪತ್ರ ಸಲ್ಲಿಸಿದ ಪ್ರಕಾಶ್​ ರಾಜ್​

ಬೆಂಗಳೂರು ಸೆಂಟ್ರಲ್​ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬಹುಭಾಷಾ ನಟ ಪ್ರಕಾಶ್​ ರಾಜ್​ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ್ದಾರೆ. ಅವರೊಂದಿಗೆ ಹೆಂಡತಿ ಪೋನಿ ವರ್ಮಾ, ನಟಿ ಸಂಯುಕ್ತಾ ಹೊರನಾಡು ಸೇರಿ ನೂರಾರು ಬೆಂಬಲಿಗರು ಸಾಥ್​ ನೀಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಕಾಶ್​ ರಾಜ್​, ನಾನು ನನ್ನ ಮನೆಗೆ ವಾಪಸ್ ಬಂದಿದ್ದೇನೆ. ಜನರ ಮುಂದೆ ರಿಪೋರ್ಟ್ ಕಾರ್ಡ್ ಇದೆ. ಇಲ್ಲಿಯವರೆಗೆ ಸಮಸ್ಯೆಗಳನ್ನು ಬಗೆಹರಿಸುವತ್ತ ಯಾರೂ ಗಮನ ಹರಿಸಿಲ್ಲ. ಪ್ರತಿ ವರ್ಷ ಜನರ ಎದುರು ರಿಪೋರ್ಟ್ ಕಾರ್ಡ್ ಇಡಬೇಕು.  ನನ್ನ ಜನ ನನ್ನನ್ನು ಖಂಡಿತಾ ಗೆಲ್ಲಿಸುತ್ತಾರೆ. ಬೇರೆಯವರ ಥರ ಒಬ್ಬರಿಗೆ 300 ರೂಪಾಯಿ ಕೊಟ್ಟು ಜನರನ್ನು ಕರೆಸುವ ಅವಶ್ಯಕತೆ ನನಗಿಲ್ಲ. ತಾವಾಗೇ ಬಂದಿರುವ ಜನ ಇವರು. ನಾನು ಮಾಡಿರುವ ಸಮಾಜಮುಖಿ ಕೆಲಸ ಜನರಿಗೆ ಗೊತ್ತಿದೆ. ಹಾಗಾಗಿ ನನ್ನನ್ನು ಆಯ್ಕೆ ಮಾಡ್ತಾರೆ ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

3.ಪ್ರಜ್ವಲ್​ ನಾಮಪತ್ರ ಸಲ್ಲಿಕೆ

ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಪ್ರಜ್ವಲ್​ ರೇವಣ್ಣ ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯಲ್ಲಿ ವೇಳೆ ಸಚಿವ ರೇವಣ್ಣ, ಭವಾನಿ ರೇವಣ್ಣ ಹಾಗೂ ಮುಖ್ಯಮಂತ್ರಿ ಎಚ್​​.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್​ ವಿಧಾನಪರಿಷತ್ ಸದಸ್ಯ ಗೋಪಾಲ​ಸ್ವಾಮಿ ಉಪಸ್ಥಿತರಿದ್ದರು. ಇನ್ನು, ಪ್ರಜ್ವಲ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರೇವಣ್ಣ ಅವರು ಇಂದು ಬೆಳಗ್ಗೆ  ಹೊಳೆನರಸೀಪುರದ ತಮ್ಮ ಮನೆಯಲ್ಲಿ ವಿಶೇಷ ಪೂಜೆ ನಡೆಸಿದರು. ಪೂಜೆ ನಂತರ ಹೊಳೆನರಸೀಪುರದ ನರಸಿಂಹ ದೇವಾಲಯಕ್ಕೆ ಪ್ರಜ್ವಲ್ ರೇವಣ್ಣ, ರೇವಣ್ಣ ಹಾಗೂ ಅವರ ಪತ್ನಿ ಭವಾನಿ ತೆರಳಿದರು. ಲಕ್ಷ್ಮಿ ನರಸಿಂಹ ದೇವಾಲಯ, ರಾಘವೇಂದ್ರ ಸ್ವಾಮಿ ಹಾಗೂ ಆಂಜನೇಯ ದೇವಸ್ಥಾನದಲ್ಲಿ ರೇವಣ್ಣ ಕುಟುಂಬ ಪೂಜೆ ನೆರವೇರಿಸಿತು.
Loading...

4.ಕೇಂದ್ರದಿಂದ ಯಡಿಯೂರಪ್ಪ ಅವರಿಗೆ ಕಪ್ಪಕಾಣಿಕೆ

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಕಪ್ಪಕಾಣಿಕೆ ನೀಡಿರುವ ಕುರಿತು ನಮ್ಮ ಬಳಿ ದಾಖಲೆ ಇದೆ ಎಂದು ಕಾಂಗ್ರೆಸ್​ ವಕ್ತಾರ ರಂದೀಪ್​ ಸುರ್ಜೆವಾಲಾ ಹೊಸ ಬಾಂಬ್​ ಸಿಡಿಸಿದ್ದಾರೆ. ಯಡಿಯೂರಪ್ಪ ಭಷ್ಟ್ರಾಚಾರ ಮಾಡಿದ್ದಾರೆ. ಅವರು ಕಳ್ಳತನ ಮಾಡಿ ನಮ್ಮ ಬಳಿ ಸಿಕ್ಕಿ ಬಿದ್ದಿದ್ದಾರೆ. ಈ ಕುರಿತು ನಮ್ಮ ಬಳಿ ದಾಖಲೆ ಇದೆ. ಹಣ ವರ್ಗಾವಣೆ ಕುರಿತು ಡೈರಿಯಲ್ಲಿ ದಾಖಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡೈರಿ ಪ್ರದರ್ಶಿಸಿದರು. ಈ ಡೈರಿ ಮೂಲಕ ಐದು ಸತ್ಯಾಂಶಗಳು ಹೊರಗೆ ಬಂದಿವೆ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬಿಜೆಪಿ 2690 ಕೋಟಿ ಕೇಳಿತು. ಅದರಲ್ಲಿ, 1800 ಕೋಟಿಯನ್ನು ರಾಷ್ಟ್ರೀಯ ನಾಯಕರಿಗೆ ನೀಡಲಾಗಿದೆ. ಪ್ರತಿ ಪುಟದಲ್ಲಿ ಅವರ ಸಹಿ ಇದೆ. ಈ ಹಣವನ್ನು ಕೇಂದ್ರ ತಂಡಕ್ಕೆ ನೀಡಲಾಗಿದೆ ಎಂದು ಸುರ್ಜೇವಾಲ ಆರೋಪಿಸಿದ್ದಾರೆ.

5.ಬಿಜೆಪಿ ಸೇರಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್

ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಶುಕ್ರವಾರ ಬಿಜೆಪಿ ಸೇರ್ಪಡೆಗೊಂಡರು. ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ ಗಂಭಿರ್ ಅವರನ್ನು ಬಿಜೆಪಿಗೆ ಬರ ಮಾಡಿಕೊಂಡರು. ದೇಶದ ರಾಜಧಾನಿ ದೆಹಲಿಯಿಂದ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.

6.ನಾಮಪತ್ರ ಸಲ್ಲಿಕೆ ಬಳಿಕ ಕಾಂಗ್ರೆಸ್ಸಿಗರ ವಿರುದ್ಧ ಶೋಭಾ ವಾಗ್ದಾಳಿ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜ್ಯೋತಿಷಿಗಳ ಸಲಹೆ ಪಡೆದು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ತೆರಳಿ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಶುಭ ಶುಕ್ರವಾರ ಅಂತ ಇಂದು ನಾಮಪತ್ರ ಸಲ್ಲಿಸಿದ್ದೇನೆ. ಶುಕ್ರವಾರ ಮಹಾಕಾಳಿ ದುರ್ಗೆಯ ದಿನ. ಸಾರ್ವಜನಿಕವಾಗಿ 26 ಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಮಂಗಳವಾರ ಕೂಡ ದೇವಿಯ ಪವಿತ್ರ ದಿನ ಎಂದರು. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾ.26 ರಂದು ಉಡುಪಿಗೆ ಆಗಮಿಸಿ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಬಳಿಕ ನಿರ್ಮಲಾ ಕೃಷ್ಣಮಠದ ಭೇಟಿಯಾಗಿ ಪರ್ಯಾಯ ಶ್ರೀಗಳ ಜೊತೆ ಮಾತುಕತೆ ಮಾಡುತ್ತಾರೆ. ಉಡುಪಿಯಲ್ಲಿ ಸಮಾವೇಶ ಮಾಡಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾ. 26ಕ್ಕೆ 12 ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ. ಮೀನುಗಾರರ ಜೊತೆ ನಿರ್ಮಲಾ ಚರ್ಚೆ ನಡೆಸುತ್ತಾರೆ ಎಂದು ಹೇಳಿದರು.

7.ಜನಸೇವೆಗಾಗಿ ನಿಖಿಲ್​,ಪ್ರಜ್ವಲ್​ ರಾಜಕೀಯಕ್ಕೆ

1996ರಲ್ಲಿ ಲೋಕಸಭೆ ಚುನಾವಣೆಗೆ ನಾನು ನಿಂತಾಗಲೂ ಇದೇ ಪರಿಸ್ಥಿತಿ ಇತ್ತು. ಅವತ್ತಿನಿಂದ ಇಲ್ಲಿಯವರೆಗೂ ಯಾವ ರೀತಿಯಲ್ಲಿ ಬೆಳೆದಿದ್ದೇವೆ. ಅದೇ ರೀತಿ ಯುವಕರಾದ ನಿಖಿಲ್, ಪ್ರಜ್ವಲ್ ಬೆಳೆಯುತ್ತಾರೆ. ಕುಟುಂಬದಿಂದ ಇಬ್ಬರು ಯುವಶಕ್ತಿ ಚುನಾವಣೆಗೆ ಬಂದಿದ್ದಾರೆ. ಶೋಕಿಗಾಗಿ ಇವರು ರಾಜಕೀಯಕ್ಕೆ ಬಂದಿಲ್ಲ, ಜನಸೇವೆಗೆ ಚುನಾವಣೆಗೆ ಬಂದಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಹಾಸನದಲ್ಲಿ ಪ್ರಜ್ವಲ್​ ರೇವಣ್ಣ ನಾಮಪತ್ರ ಸಲ್ಲಿಸಿದ ಬಳಿಕ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದಿನಿಂದ ರಾಜ್ಯದಲ್ಲಿ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದೇವೆ. ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್​ ಎರಡು ಪಕ್ಷದ ನಾಯಕರ ಸಹಭಾಗಿತ್ವದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಾವು, ಕಾಂಗ್ರೆಸ್​ ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.

8.ಓಲಾ ಕ್ಯಾಬ್​ ಲೈಸೆನ್ಸ್​ ರದ್ದು

ಓಲಾ ಕ್ಯಾಬ್ ಸಂಸ್ಥೆಗೆ ನೀಡಿದ್ದ ಪರವಾನಿಗೆಯನ್ನು ರಾಜ್ಯ ಸರಕಾರ ರದ್ದು ಮಾಡಿದೆ. ಸಾರಿಗೆ ಇಲಾಖೆ ನೀಡಿದ ಪರವಾನಿಗೆಯನ್ನು ದುರ್ಬಳಕೆ ಮಾಡಿದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಓಲಾ ಲೈಸೆನ್ಸನ್ನು ಅಮಾನತು ಮಾಡಲಾಗಿದೆ. ಸಾರಿಗೆ ಅಧಿಕಾರಿಗಳು ನ್ಯೂಸ್18 ಕನ್ನಡಕ್ಕೆ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಓಲಾಗೆ ಪರವಾನಿಗೆ ನೀಡುವ ವೇಳೆ ವಿಧಿಸಲಾಗಿದ್ದ ನಿಯಮಗಳ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

9.ನಿಶಾ ಯೋಗೇಶ್ವರ್​ ಸ್ಪರ್ಧೆಗೆ ಬಿಜೆಪಿ ಕಾರ್ಯಕರ್ತರ ವಿರೋಧ

ತಮ್ಮ ಮಗಳನ್ನು ರಾಜಕೀಯ ಕಣಕ್ಕೆ ಇಳಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಮುಂದಾಗಿರುವ ಬಿಜೆಪಿ ಮುಖಂಡ ಸಿಪಿ ಯೋಗೇಶ್ವರ್​ ನಡೆಗೆ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿದ್ದಾರೆ. ಯೋಗೇಶ್ವರ್​ ಅವರಿಗೆ ಮಾತ್ರ ನಮ್ಮ ಬೆಂಬಲ ಅವರ ಮಗಳಿಗೆ ಅಲ್ಲ ಎಂದು ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್ ಬಹಿರಂಗವಾಗಿ  ತಿಳಿಸಿದ್ದಾರೆ. ಗುರುವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ ಯಾರು ಅಭ್ಯರ್ಥಿ ಎಂಬ ಬಗ್ಗೆ ತಿಳಿಸಿಲ್ಲ. ಕಾರಣ ಕ್ಷೇತ್ರದಲ್ಲಿ ಯೋಗೇಶ್ವರ್​ಗೆ ಟಿಕೆಟ್​ ನೀಡಬೇಕೋ ಅಥವಾ ಅವರ ಮಗಳು ನಿಶಾಗೆ ನೀಡಬೇಕೋ ಎಂಬ ಗೊಂದಲದಿಂದ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟಾಗಿದೆ.

10.ಐಪಿಎಲ್ 12ನೇ ಆವೃತ್ತಿಗೆ ಕ್ಷಣಗಣನೆ

ಐಪಿಎಲ್ 12ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯದ ವೀಕ್ಷಣೆಗೆ ಇಡೀ ದೇಶವೆ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಚೆನ್ನೈ ಮೂರು ಬಾರಿ ಚಾಂಪಿಯನ್ ಆಗಿದ್ದರೆ, ಒಮ್ಮೆಯೂ ಕಪ್ ಗೆಲ್ಲದ ಕೊಹ್ಲಿ ಬಳಗಕ್ಕೆ ಪ್ರತಿಯೊಂದು ಪಂದ್ಯ ಮುಖ್ಯವಾಗಿದೆ
First published:March 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626