Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:March 16, 2019, 5:59 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
Seema.R | news18
Updated: March 16, 2019, 5:59 PM IST
1.ಸಾಲುಮರದ ತಿಮ್ಮಕ್ಕ ಸೇರಿದಂತೆ ಅನೇಕರಿಗೆ ಪದ್ಮ ಪ್ರಶಸ್ತಿ ಪ್ರಧಾನ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಇಂದು ರಾಷ್ಟ್ರಪತಿ ರಾಮನಾಥ್​​ ಕೋವಿಂದ್​​ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಸಾಲುಮರದ ತಿಮ್ಮಕ್ಕ ಸೇರಿದಂತೆ ಅನೇಕ ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಣರಾಜ್ಯೋತ್ಸವ ಸಮಾರಂಭದ ದಿನ 112 ಮಂದಿಗೆ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಘೋಷಣೆಯಾದ 112 ಮಂದಿಯಲ್ಲಿ 47 ಗಣ್ಯರಿಗೆ ಮಾರ್ಚ್​​ 11 ರಂದು ಪದ್ಮ ಪ್ರಶಸ್ತಿ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿತ್ತು. ಇನ್ನುಳಿದ ಗಣ್ಯರಿಗೆ ಇಂದು ನಡೆದ ಸಮಾರಂಭದಲ್ಲಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2.ಬಿಎಸ್​ಪಿಯಿಂದ ದ್ಯಾನಿಶ್​ ಅಲಿ ಸ್ಪರ್ಧೆ

ಉತ್ತರ ಪ್ರದೇಶದಲ್ಲಿ ಈಗಾಗಲೇ ಅಖಿಲೇಶ್​ ಯಾದವ್​ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ದಾನಿಶ್​​ ಅಲಿ ಉತ್ತರ ಪ್ರದೇಶದ ಹಾಪುರ್ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಮೂಲದ ಪ್ರಕಾರ ದೇವೇಗೌಡರ ಸಮ್ಮತಿಯ ಮೇರೆಗೆ ದಾನಿಶ್​​ ಅಲಿ ಬಿಎಸ್​ಪಿ ಸೇರ್ಪಡೆಯಾಗಿದ್ದಾರೆ. ಬಿಎಸ್​ಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರೆ ದಾನಿಶ್​​ ಅಲಿ ಗೆಲುವು ಸಾಧಿಸಬಹುದು. ಅದರ ಜತೆಗೆ ಬಿಎಸ್​ಪಿ ಮತ್ತು ಜೆಡಿಎಸ್​ ಪಕ್ಷಗಳ ನಡುವಿನ ಬಾಂಧವ್ಯವೂ ಬೆಳೆಯಲಿದೆ ಎಂಬ ಲೆಕ್ಕಾಚಾರವಿದೆ ಎನ್ನಲಾಗಿದೆ.

3. ವಾರಣಾಸಿಯಿಂದ ಮೋದಿ; ಲಕ್ನೋದಿಂದ ನನ್ನ ಸ್ಪರ್ಧೆ; ರಾಜನಾಥ್​ ಸಿಂಗ್​ಲೋಕಸಭಾ ಚುನಾವಣೆ ಕಣದಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರ ಬದಲಾವಣೆ ಬಯಸಿದ್ದಾರೆ. ಅವರು ವಾರಣಾಸಿ ಬಿಟ್ಟು ಬೇರೆ ಕ್ಷೇತ್ರದತ್ತ ಮುಖ ಮಾಡಲಿದ್ದಾರೆ ಎಂಬ ಅನೇಕ ಊಹಾಪೋಹಾಗಳು ಹರಿದಾಡುತ್ತಿದ್ದವು. ಈ ಗಾಳಿ ಸುದ್ದಿಗೆ ರಾಜನಾಥ್​ ಸಿಂಗ್​ ತೆರೆ ಎಳೆದಿದ್ದಾರೆ. ಈ ಬಾರಿ ಕೂಡ ವಾರಣಾಸಿ ಕ್ಷೇತ್ರದಿಂದಲೇ ಪ್ರಧಾನಿ ಮೋದಿ ಮತ್ತೊಮ್ಮೆ ಲೋಕಸಭಾ ಚುನಾವಣೆಗೆ  ಸ್ಪರ್ಧೆ ಬಯಸಿದ್ದು , ನಾನು ಲಕ್ನೋ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದೇನೆ ಎಂದು ಗೃಹ ಸಚಿವ ರಾಜನಾಥ್​ ಸಿಂಗ್​ ಸ್ಪಷ್ಟಪಡಿಸಿದ್ದಾರೆ.

4. ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ ವಿಶ್ವನಾಥ್​ಗೆ ಲಘು ಹೃದಯಾಘಾತ

ಕಾರ್ಯನಿಮಿತ್ತ ಹೈದರಾಬಾದ್​ಗೆ ತೆರಳಿದ್ದ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​ ಅವರಿಗೆ ಲಘು ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು  ಚಿಕಿತ್ಸೆಗಾಗಿ ಹೈದರಾಬಾದ್​ನ ಓಜೋನ್​ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದ್ದು, ಈಗ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆ್ಯಂಬುಲೆನ್ಸ್ ಮೂಲಕ  ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆತರಲು ಸಿದ್ಧತೆ ನಡೆಸಲಾಗಿದೆ. ಜಯದೇವ ಸಂಸ್ಥೆಯ ಮುಖ್ಯಸ್ಥ ಡಾ. ಮಂಜುನಾಥ್ ಅವರು ಬೆಂಗಳೂರಿನಿಂದ ಹೈದರಾಬಾದ್​ಗೆ ತೆರಳಿ, ಚಿಕಿತ್ಸೆಯ ಮೇಲುಸ್ತುವಾರಿ ನೋಡಿಕೊಂಡಿದ್ದಾರೆ.

5. ಎ.ಮಂಜು ಮನವೊಲಿಕೆಗೆ ಕಾಂಗ್ರೆಸ್​ ಯತ್ನ

ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಟೆನ್ಷನ್​ ಶುರುವಾಗಿದೆ. ಹೀಗಾಗಿ ಕಾಂಗ್ರೆಸ್​​ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್​ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಎ.ಮಂಜುಗೆ ಕರೆ ಮಾಡಿ ಪಕ್ಷ ತೊರೆಯದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್​ ನಾಯಕರ ಮಾತಿಗೆ ಸೊಪ್ಪು ಹಾಕದ ಎ.ಮಂಜು ಪಕ್ಷ ತೊರೆದು ಬಿಜೆಪಿ ಸೇರುವ ದಿಟ್ಟ ನಿರ್ಧಾರವನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಪಕ್ಷ ತೊರೆಯಬೇಡಿ. ಲೋಕಸಭಾ ಚುನಾವಣೆ ಮುಗಿದ ಬಳಿಕ ಎಲ್ಲವನ್ನೂ ಸರಿಪಡಿಸುತ್ತೇವೆ. ಸದ್ಯ ಮೈತ್ರಿ ಅನಿವಾರ್ಯತೆ ಇದೆ. ಹಾಸನ ಜಿಲ್ಲೆಯ ಕಾಂಗ್ರೆಸ್​​​ ಕಾರ್ಯಕರ್ತರಿಗೆ ಆಗಿರುವ ಅವಮಾನವನ್ನು ಸರಿಪಡಿಸುತ್ತೇವೆ. ಬಿಜೆಪಿಯಿಂದ ಸ್ಪರ್ಧಿಸಿ ಪಕ್ಷಕ್ಕೆ ಮುಜುಗರ ಮಾಡಬೇಡಿ. ಪಕ್ಷ ನಿಮಗೆ ಎಲ್ಲವನ್ನೂ ಕೊಟ್ಟಿದೆ. ನಿಮ್ಮನ್ನು ಮಂತ್ರಿ ಕೂಡ ಮಾಡಿತ್ತು. ದಯವಿಟ್ಟು ಪಕ್ಷ ತೊರೆದು ಹೋಗಬೇಡಿ ಎಂದು ಕಾಂಗ್ರೆಸ್​​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಕೇಳಿಕೊಂಡಿದ್ದಾರೆ.

6. ಲಿಂಗದಲ್ಲಿ ಲೀನರಾದ ಮಾತೆ ಮಹಾದೇವಿ

ಬಹುಅಂಗಾಗ ವೈಫಲ್ಯದಿಂದ ಗುರುವಾರ ನಿಧನರಾದ ಬಸವಪೀಠದ ಧರ್ಮಾಧ್ಯಕ್ಷೆ ಮಾತೆ ಮಹಾದೇವಿ ಅಂತಿಮ ಸಂಸ್ಕಾರ ಇಂದು ಕೂಡಲ ಸಂಗಮದಲ್ಲಿ ನಡೆಯಿತು. ಲಿಂಗಾಯತ ಧರ್ಮ ವಿಧಿವಿಧಾನ, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಅಂತ್ಯಕ್ರಿಯೆ ನಡೆಸಲಾಯಿತು. ಶರಣಲೋಕದ ಕ್ರಿಯಾ ಸಮಾಧಿಯಲ್ಲಿ ಗೋಲಾಕಾರದ ಲಿಂಗದಲ್ಲಿ ಅವರು ಲೀನರಾದರು.

7.ಲಾಭದತ್ತ ಕೆಎಂಎಫ್​​

ರಾಜ್ಯಾದ್ಯಂತ ಬೇಸಿಗೆ ಬೇಗೆ ತಡೆಯಲಾಗದೇ ತಂಪು ಪಾನೀಯ, ಮಜ್ಜಿಗೆ ಮೊರೆಯತ್ತ ಹೋಗುತ್ತಿದ್ದಾರೆ. ಅದರಲ್ಲಿಯೂ ಆರೋಗ್ಯಕರ ಮಜ್ಜಿಗೆ, ಮೊಸರು ಸೇವನೆಗೆ ಪ್ರಾಶಸ್ತ್ಯ ನೀಡುತ್ತಿದ್ದು.  ಈ ಹಿನ್ನೆಲೆಯಲ್ಲಿ ಕೆಎಂಎಫ್​​ಗೆ ಹೆಚ್ಚು ಲಾಭವಾಗುತ್ತಿದೆ. ಬೇಸಿಗೆಗಿಂತ ಮೊದಲು ಪ್ರತಿದಿನ ನಾಲ್ಕೂವರೆ ಲಕ್ಷ ಕೆಜಿ ಮಾರಾಟವಾಗುತ್ತಿದ್ದ ಮೊಸರು ಈಗ ದಿನಕ್ಕೆ ಆರೂವರೆ ಲಕ್ಷ ಕೆಜಿ ಮಾರಾಟವಾಗುತ್ತಿದೆ. ಇದೇ ರೀತಿಯಲ್ಲಿ ಮೊದಲು ದಿನಕ್ಕೆ ಎರಡು ಲಕ್ಷ ಐವತ್ತು ಸಾವಿರ ಪ್ಯಾಕೆಟ್ ಮಾರಾಟವಾಗುತ್ತಿದ್ದ ಮಜ್ಜಿಗೆ ದಿನನಿತ್ಯ ಐದು ಲಕ್ಷ ಪ್ಯಾಕೆಟ್ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ನೂತನವಾಗಿ ಟೆಟ್ರಾಪ್ಯಾಕ್‌ನಲ್ಲಿ ಹತ್ತು ರೂಪಾಯಿಗೆ ಮಜ್ಜಿಗೆ ಮಾರಾಟವಾಗುತ್ತಿದೆ. ಇದಕ್ಕೆ ಭಾರೀ ಬೇಡಿಕೆ ಇದ್ದು ವ್ಯಾಪಾರ ಹೆಚ್ಚಾಗುತ್ತಿದೆ ಎನ್ನಲಾಗಿದೆ.

8. ಆಪರೇಷನ್​ ಕೆ,ಎಚ್​ ಮುನಿಯಪ್ಪ ಫೇಲ್​

 ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ವಿರುದ್ಧ ನೆನ್ನೆ ಸ್ಪೀಕರ್​ ರಮೇಶ್​ಕುಮಾರ್​ ನೇತೃತ್ವದ ನಿಯೋಗ ನೀಡಿದ ದೂರಿಗೆ ಕಾಂಗ್ರೆಸ್​ ಕೈಕಮಾಂಡ್​ ಮಣೆ ಹಾಕಲಿಲ್ಲ. ಹೀಗಾಗಿ ಕೋಲಾರದಿಂದ ದೆಹಲಿಗೆ ತೆರಳಿದ್ದ ರಮೇಶ್​ಕುಮಾರ್ ನಿಯೋಗ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಇಂದು ಕೋಲಾರಕ್ಕೆ ವಾಪಸ್ಸಾಗಲಿದೆ. ಕೆ.ಎಚ್. ಮುನಿಯಪ್ಪ ವಿರೋಧಿಗಳ ಮನವಿಗೆ ಸೊಪ್ಪು ಹಾಕದ ಕಾಂಗ್ರೆಸ್​ ನ ಕೆ.ಸಿ.ವೇಣುಗೋಪಾಲ್, 7 ಬಾರಿ ಗೆದ್ದಿರುವ ಮುನಿಯಪ್ಪ ಅವರನ್ನು ಬೆಂಬಲಿಸಿ, ಪಕ್ಷ ಬಲಪಡಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಂದು ಸಂಜೆ ವಿರೋಧಿಗಳ ಸಭೆ ನಡೆಸಿ ರಮೇಶ್ ಕುಮಾರ್ ಟೀಂ ಕೋಲಾರಕ್ಕೆ ವಾಪಸ್ಸಾಗಲಿದೆ

9. ಬಿಜೆಪಿಗೆ ಗುಡ್​ಬೈ ಹೇಳಿದ ಕೆಬಿ ಶಾಣಪ್ಪ

ಬಿಜೆಪಿ ಹಿರಿಯ ಮುಖಂಡ, ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ.ಶಾಣಪ್ಪ ಸ್ವಪಕ್ಷ ನಾಯಕರ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಆ ಮೂಲಕ ಪಕ್ಷ ತೊರೆಯುವ ಸುಳಿವನ್ನು ಸಹ ನೀಡಿದ್ಧಾರೆ. ಇಂದು ನ್ಯೂಸ್​​ 18 ಕನ್ನಡದ ಜೊತೆ ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಯಡಿಯೂರಪ್ಪಗೆ ಪಕ್ಷ ಮುನ್ನಡೆಸುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

10. ವಿಶ್ವಕಪ್ ಗೆಲ್ಲುವ ತಂಡಗಳಲ್ಲಿ ಭಾರತ ಫೇವರಿಟ್ ಡಿವಿಲಿಯರ್ಸ್

ವಿಶ್ವಕಪ್ ಮಹಾಸಮರಕ್ಕೆ ಇನ್ನೇನು ಕೆಲವೇ ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಹೀಗಿರುವಾಗ ದ. ಆಫ್ರಿಕಾ ತಂಡದ ಮಾಜಿ ನಾಯಕ ಈಬಾರಿ ವಿಶ್ವಕಪ್ನಲ್ಲಿ ಗೆಲ್ಲುವ ತಂಡಗಳ ಪೈಕಿ ಭಾರತ ಪೇವರಿಟ್ ತಂಡ ಎಂದಿದ್ದಾರೆ. ಸೆಮಿ ಫೈನಲ್ಗೆ ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಭಾರತ ತಂಡಗಳು ಲಗ್ಗೆ ಇಡಲಿವೆ. ಫೈನಲ್ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡ ಮೂಖಾಮುಖಿ ಆಗಬಹುದು. ಎರಡೂ ತಂಡಗಳು ಬಲಿಷ್ಠವಾಗಿದ್ದು, ಉಭಯ ತಂಡಗಳಿಗೆ ಪ್ರಶಸ್ತಿ ಮುಡಿಗೇರಿಸುವ ಅವಕಾಶವಿದೆ ಎಂದಿದ್ದಾರೆ
First published:March 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ