ಯಮಕನಮರಡಿ ಕ್ಷೇತ್ರ ಉಳಿಸಿಕೊಳ್ಳಲು ಜಾರಿಕಿಹೊಳಿ ಸಹೋದರ ಪ್ಲ್ಯಾನ್: ಮಾರತಿ ಅಷ್ಟಗಿ ಆರೋಪ

precilla.dias
Updated:March 15, 2018, 5:52 PM IST
ಯಮಕನಮರಡಿ ಕ್ಷೇತ್ರ ಉಳಿಸಿಕೊಳ್ಳಲು ಜಾರಿಕಿಹೊಳಿ ಸಹೋದರ ಪ್ಲ್ಯಾನ್: ಮಾರತಿ ಅಷ್ಟಗಿ ಆರೋಪ
precilla.dias
Updated: March 15, 2018, 5:52 PM IST
ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ(ಮಾ.15): ಲಖನ ಜಾರಕಿಹೊಳಿ ಬಿಜೆಪಿ ಸೇರ್ಪಡೆಗೊಂಡು ಸಹೋದರ ಸತೀಶ ವಿರುದ್ಧ ಯಮಕಮನರಡಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಯತ್ನ ನಡೆಸಿದ್ದಾರೆ. ಯಮಕನರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಲಖನ ಜಾರಕಿಹೊಳಿ ಪ್ರಯತ್ನಪಟ್ಟಿದ್ದರು. ಆದರೆ ಇದು ವಿಫಲವಾಗ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಪಕ್ಷದ ಸೇರ್ಪಡೆಯ ಮನಸ್ಸು ಮಾಡಿದ್ದಾರೆ. ಈಗಾಗಲೆ ಮಾತುಕತೆ ನಡೆಸಿದ್ದು ಪಕ್ಷ ಸೇರ್ಪಡೆದ ದಿನಾಂಕ ನಿಗದಿಯೊಂದೆ ಬಾಕಿ ಉಳಿದಿದೆ.

ಕಳೆದ ಹಲವು ದಿನಗಳಿಂದ ಸತೀಶ್ ಜಾರಕಿಹೊಳಿ ಮತ್ತು ಲಖನ ಜಾರಕಿಹೊಳಿ ನಡುವೆ ಮಾತಿನ ಚಕಮಕಿಗಳು ನಡೆಯುತ್ತಿದ್ದವು. ಇನ್ನೂ ಕಳೆದ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೋತಿದ್ದ ಮಾರುತಿ ಅಷ್ಟಗಿ ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದು. ಈಗಾಗಲೇ ಪರಿವರ್ತನಾ ರ್‍ಯಾಲಿ ಸಂಧರ್ಭದಲ್ಲಿ ಬಿಎಸ್ ವೈ ನನಗೆ ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ. ಸತೀಶ ಜಾರಕಿಹೊಳಿ ಸೋಲಿನ ಭಯದಿಂದ ಈ ರೀತಿಯ ಸಹೋದರರು ನಾಟಕವಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಸತೀಶ್ ಜಾರಕಿಹೊಳಿ ಪರ ಲಖನ ಕೆಲಸ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಜಾರಕಿಹೊಳಿ ಕುಟುಂಬದಲ್ಲಿ 3 ಜನ ಸಹೋದರರು ಇದೀಗ ಶಾಸಕರಿದ್ದಾರೆ. ಇದೀಗ ನಾಲ್ಕನೆ ಸಹೋದರ ಸಹ ರಾಜಕೀಯ ಪ್ರವೇಶಕ್ಕೆ ಭರದ ಸಿದ್ಧತೆಯನ್ನು ಮಾಡಿದ್ದಾರೆ. ಸ್ವತಃ ಅಣ್ಣನೇ ವಿರುದ್ಧ ಸ್ಪರ್ಧಿಸಿ ಗೆಲುವು ಹುಮ್ಮಸ್ಸಿನಲ್ಲಿ ಇದ್ದಾರೆ. ಆದರೇ ಬಿಜೆಪಿ ಲಖನ ಜಾರಕಿಹೊಳಿಗೆ ಯಾವ ರೀತಿ ಮಣೆ ಹಾಕಲಿದೆ ಎಂಬುದು ಕುತೂಹಲ ಮೂಡಿಸಿದೆ.
First published:March 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...