ಇದು ಪರಾಕ್ರಮಿಗಳ ಭೂಮಿಯಲ್ಲ: ಕನ್ನಡ ನೆಲದಲ್ಲೇ ಕರ್ನಾಟಕ ತೆಗಳಿದ ಮರಾಠಿ ಸಾಹಿತಿ

ಮರಾಠಿ ಸಾಹಿತಿ ಶ್ರೀಪಾಲ್ ಸಬ್ನಿಸ್ ಅವರು ಕಠೋರ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ಧಾರೆ. ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ನಡೆಯನ್ನೂ ಅವರು ಕಟುವಾಗಿ ಟೀಕಿಸಿದ್ದರು.

news18
Updated:January 12, 2020, 4:51 PM IST
ಇದು ಪರಾಕ್ರಮಿಗಳ ಭೂಮಿಯಲ್ಲ: ಕನ್ನಡ ನೆಲದಲ್ಲೇ ಕರ್ನಾಟಕ ತೆಗಳಿದ ಮರಾಠಿ ಸಾಹಿತಿ
ಶ್ರೀಪಾಲ್ ಸಬ್ನೀಸ್
  • News18
  • Last Updated: January 12, 2020, 4:51 PM IST
  • Share this:
ಬೆಳಗಾವಿ(ಜ. 12): ಮಹಾರಾಷ್ಟ್ರದ ಮರಾಠಿಗರ ಕನ್ನಡ ಧ್ವೇಷ ಸಾಧನೆ ಮುಂದುವರಿದಿದೆ. ಕರ್ನಾಟಕದ ನೆಲದೊಳಗೇ ನಿಂತು ಈ ನಾಡನ್ನು ರಾಜಾರೋಷವಾಗಿ ಜರಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮರಾಠಿ ಭಾಷೆಯ ಖ್ಯಾತ ಸಾಹಿತಿ ಡಾ. ಶ್ರೀಪಾಲ್ ಸಬ್ನೀಸ್ ಅವರು ಕರ್ನಾಟಕವನ್ನು ಷಂಡರ ಭೂಮಿ ಎಂದು ತೆಗಳಿ ನಾಲಿಗೆ ಹರಿಯಬಿಟ್ಟಿದ್ಧಾರೆ. ಹಾಗೆಯೇ ಯಡಿಯೂರಪ್ಪ ಸರ್ಕಾರವನ್ನು ಹಲ್ಕಟ್ ಸರ್ಕಾರ ಎಂದು ಹರಿಹಾಯ್ದಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇದ್ದಲಗೊಂಡದಲ್ಲಿ ನಡೆಯುತ್ತಿರುವ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಶ್ರೀಪಾಲ್ ಸಬ್ನೀಸ್ ಅವರಿಗೆ ಪೊಲೀಸರು ಭದ್ರತೆಯ ಕಾರಣವೊಡ್ಡಿ ಪ್ರವೇಶ ನಿರಾಕರಿಸಿದ್ದರು. ಈ ನಿಟ್ಟಿನಲ್ಲಿ ಅಲ್ಲಿ ಕನ್ನಡ ಮಾಧ್ಯಮ ಬಿಟ್ಟು ಕೇವಲ ಮರಾಠಿ ಮಾಧ್ಯಮಗಳ ಪ್ರತಿನಿಧಿಗಳನ್ನು ಕರೆಸಿ ಶ್ರೀಪಾಲ್ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ತಮ್ಮ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ನಾನು ಹೈಸ್ಕೂಲ್ ಓದಬೇಕಾದ್ರೆ ತರಕಾರಿ, ನಿಂಬೆಹಣ್ಣು ಮಾರುತ್ತಿದ್ದೆ; ಸಿಎಂ ಯಡಿಯೂರಪ್ಪ

“ಕರ್ನಾಟಕದಲ್ಲಿ ಹಲ್ಕಟ್, ಹಿಟ್ಲರ್ ಸ್ವರೂಪದ ಭಯೋತ್ಪಾದನೆ ಇದೆ. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಹೊಸ ಹಿಟ್ಲರ್​ಶಾಹಿ ವ್ಯವಸ್ಥೆ ನಿರ್ಮಾಣವಾಗಿದೆ” ಎಂದು ಮರಾಠಿ ಸಾಹಿತಿ ಟೀಕಿಸಿದರು.

ಭಾಷೆಗಳ ಮೇಲೆ ಯಾಕೆ ದಬ್ಬಾಳಿಕೆ ಮಾಡುತ್ತೀರಾ? ಕರ್ನಾಟಕ ಸರ್ಕಾರ ಭಾಷೆಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಮರಾಠಿ ಭಾಷಿಕರು ಕನ್ನಡಿಗರನ್ನು ವಿರೋಧಿಸುವುದಿಲ್ಲ. ಈ ಕನ್ನಡ ಭಾಷೆಯು ಬಸವೇಶ್ವರರ ಭಾಷೆ ಅಲ್ಲ. ಇದು ಪರಾಕ್ರಮಿಗಳ ಭೂಮಿ ಅಲ್ಲ, ಇದು ಷಂಡರ ಭೂಮಿ ಎಂದು ಕರ್ನಾಟಕವನ್ನು ಅವರು ತುಚ್ಛವಾಗಿ ನಿಂದಿಸಿದರು.

ಆತ ಭೀಮಾಶಂಕರ್ ಪಾಟೀಲ್ ಏನೇನೋ ಬೊಬ್ಬೆ ಹೊಡೀತಾನೆ. ಇಂಥ ಮನುಷ್ಯ ಕರ್ನಾಟಕದ ಭೂಮಿ ಮತ್ತು ಸಂಸ್ಕೃತಿಗೆ ಯೋಗ್ಯನಲ್ಲ. ಈತನ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾವು ಕರ್ನಾಟಕ ಸರ್ಕಾರವನ್ನು ಕೇಳುತ್ತೇನೆ. ನಾಲಾಯಕ್ ಕರ್ನಾಟಕ ಸರ್ಕಾರದ ದಬ್ಬಾಳಿಕೆಯನ್ನು ನಾವು ಸಹಿಸಲ್ಲ ಎಂದು ಶ್ರೀಪಾಲ್ ಸಬನೀಸ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಕೊಚ್ಚಿ ಮಾದರಿಯಲ್ಲಿ ಆದೇಶ ಬಂದರೆ ಬೆಂಗಳೂರಿನಲ್ಲಿ ನೆಲಕ್ಕುರುಳುತ್ತವೆ ಸಾವಿರಾರು ಅಕ್ರಮ ಕಟ್ಟಡಗಳು!ಕನ್ನಡಪರ ಹೋರಾಟಗಾರ ಭೀಮಾಶಂಕರ್ ಪಾಟೀಲ್ ಅವರು ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಲು ಯತ್ನಿಸುತ್ತಿರುವ ಮರಾಠಿ ಹೋರಾಟಗಾರರ ವಿರುದ್ಧ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಾ ಬಂದಿದ್ಧಾರೆ. ಇತ್ತೀಚಿನ ಅಂಥದ್ದೊಂದು ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಮಹಾರಾಷ್ಟ್ರದ ಮರಾಠಿ ಭಾಷಾ ಮುಖಂಡರನ್ನು ರೊಚ್ಚಿಗೆಬ್ಬಿಸಿತ್ತು. ಶಿವಸೇನಾ ಸಂಘಟನೆಯ ಕಾರ್ಯಕರ್ತರು ಸೊಲ್ಹಾಪುರ ಮೊದಲಾದ ಕಡೆ ಉಗ್ರ ಪ್ರತಿಭಟನೆಗಳನ್ನು ಮಾಡಿದ್ದರು. ಯಡಿಯೂರಪ್ಪ ಅವರ ಪ್ರತಿಮೆಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು, ಕರ್ನಾಟಕ ವಿರುದ್ಧ ಗುಡುಗಿರುವ ಮರಾಠಿ ಸಾಹಿತಿ ಶ್ರೀಪಾಲ್ ಸಬ್ನಿಸ್ ಅವರು ಕಠೋರ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ಧಾರೆ. ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ನಡೆಯನ್ನೂ ಅವರು ಕಟುವಾಗಿ ಟೀಕಿಸಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ