ಮತ್ತೆ ಗಡಿ ಕ್ಯಾತೆ ತೆಗೆದ ಠಾಕ್ರೆ; ಕರ್ನಾಟಕ ಗಡಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಎಂದ ಮಹಾ ಸಿಎಂ

ಬೆಳಗಾವಿ ಕೆಲ ಪ್ರದೇಶ, ಕಾರವಾರ, ನಿಪ್ಪಾಣಿ ಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ಮರಾಠಿ ಮಾತನಾಡುವವರು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಉದ್ದವ್ ಠಾಕ್ರೆ.

ಉದ್ದವ್ ಠಾಕ್ರೆ.

 • Share this:
  ಮುಂಬೈ (ಜ. 27): ಕರ್ನಾಟಕ ಗಡಿ ವಿಚಾರದಲ್ಲಿ ವಿವಾದಿತ ಹೇಳಿಕೆ ನೀಡುವ ಮೂಲಕ ಪದೇ ಪದೇ ಕನ್ನಡಿಗರ ಆಕ್ರೋಶ ಕೆಣಕುವ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಇದೀಗ ಮತ್ತೊಮ್ಮೆ ಖ್ಯಾತೆ ತೆಗೆದಿದ್ದಾರೆ. ಮರಾಠಿ ಮಾತನಾಡುವ ಕರ್ನಾಟಕದ ಗಡಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿದೆ. ಈ ತೀರ್ಪು ಬರುವವರೆಗೂ ಮರಾಠಿ ಪ್ರಾಬಲ್ಯ ಹೊಂದಿರುವ ಕರ್ನಾಟಕದ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಎರಡೂ ರಾಜ್ಯಗಳ ಗಡಿ ವಿವಾದ ಕುರಿತಾದ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ಮರಾಠಿ ಮಾತನಾಡುವ ಜನರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

  ಬೆಳಗಾವಿ ಕೆಲ ಪ್ರದೇಶ, ಕಾರವಾರ, ನಿಪ್ಪಾಣಿ ಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ಮರಾಠಿ ಮಾತನಾಡುವವರು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು.

  ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ರಾಜ್ಯಗಳ ನಡುವಿನ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆ. ಇದರ ವಿಚಾರಣೆ ನಡೆಸುತ್ತಿರುವ ಸಮಯದಲ್ಲಿಯೇ ಕರ್ನಾಟಕ ಸರ್ಕಾರ ಬೆಳಗಾಂನ ಹೆಸರನ್ನು ಬೆಳಗಾವಿ ಎಂದು ಮರುನಾಮಕರಣ ಮಾಡಿದೆ. ಅಲ್ಲದೇ ಎರಡನೇ ರಾಜಧಾನಿಯಾಗಿ ಘೋಷಿಸಿದೆ. ಜೊತೆಗೆ ವಿಧಾನಸೌಧ ಕಟ್ಟಡವನ್ನು ನಿರ್ಮಿಸಿ ಅಧಿವೇಶನ ನಡೆಸುತ್ತಿದೆ. ಇದು ನ್ಯಾಯಾಂಗ ನಿಂದನೆಯಲ್ಲವೇ ಎಂದು ಪ್ರಶ್ನಿಸಿದರು.
  ಕಳೆದ ಕೆಲವು ಘಟನೆಗಳ ಅನುಭವದಿಂದ ಗೆಲುವಿಗಾಗಿ ಹೋರಾಡಲು ಕಲಿತಿದ್ದೇವೆ, ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕು. ಕರ್ನಾಟಕ ಮುಖ್ಉ ಮಂತ್ರಿಗಳು ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ವಿಭಜಿಸಿ, ದುರ್ಬಲಗೊಳಿಸಿ ಮರಾಠಿಯನ್ನು ತಮ್ಮ ಸ್ವಾರ್ಥದ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

  ಈ ಮುಂಚೆ ಎಂಇಎಸ್​ನ ಆರಕ್ಕಿಂತ ಹೆಚ್ಚಿನ ಜನರು ಶಾಸಕರಾಗಿ ಆಯ್ಕೆಯಾಗುತ್ತಿದ್ದರು. ಅಲ್ಲದೇ ಬೆಳಗಾಂ ಮೇಯರ್​ ಕೂಡ ಮರಾಠಿ ಮಾತನಾಡುವವರೇ ಆಗುತ್ತಿದ್ದರು. ಎಂಇಎಸ್ ದುರ್ಬಲಗೊಳ್ಳಬಾರದು ಎಂದು ಬೆಳಗಾವಿಯ ಈ ರಾಜಕಾರಣಕ್ಕೆ ಶಿವಸೇನೆ ಎಂದು ಪ್ರವೇಶ ಮಾಡಲಿಲ್ಲ ಎಂದರು.

  ಇದನ್ನು ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ಡಿಂಡಿಮ; ಉದ್ಧಟತನ ಮೆರೆದ ಉದ್ಧವ ಠಾಕ್ರೆಗೆ ಪಾಠ

  ಕಾಂಗ್ರೆಸ್​, ಎನ್​ಸಿಪಿ ಜೊತೆ ಶಿವಸೇನೆ ಮಹಾ ವಿಕಾಸ ಅಗಡಿ (ಎಂವಿಎ) ಸರ್ಕಾರ ರಚಿಸಿದಾಗ ಈ ಕಾನೂನಿನ ಹೋರಾಟದಲ್ಲಿ ಗೆದ್ದು, ಮರಾಠಿ ಮಾತನಾಡುವ ಕರ್ನಾಟದ ಪ್ರದೇಶಗಳನ್ನು ಒಗ್ಗಟ್ಟಿನಿಂದ ಇರಲು ಕ್ರಿಯಾ ಯೋಜನೆ ರೂಪಿಸಿದ್ದೇವು. ಈ ವಿಚಾರದಲ್ಲಿ ನಾವು ಗೆಲ್ಲುವವರೆಗೂ ವಿಶ್ರಾಂತಿ ಪಡೆಯುವುದು ಬೇಡ ಎಂದು ಪ್ರತಿಜ್ಞೆ ತೆಗೆದುಕೊಳ್ಳೊಣ. ಎಂವಿಎ ಅಧಿಕಾರವಾಧಿಯಲ್ಲಿ ಬಗೆಹರಿಯದ ಈ ಸಮಸ್ಯೆ ಎಂದಿಗೂ ಬಗೆಹರಿಯದು. ಅದನ್ನು ಗೆಲ್ಲಲು ನಾವು ಹೋರಾಡಬೇಕಿದೆ ಎಂದರು.

  ಕರ್ನಾಟಕದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಮರಾಠಿ ಜನರು ಮತ್ತು ಭಾಷೆ ವಿರುದ್ಧ ದೌರ್ಜನ್ಯ ಅವರಿಗೆ ಒಂದು ಪ್ರಮುಖ ಅಸ್ತ್ರವಾಗಿದೆ ಎಂದು ಕಿಡಿಕಾರಿದರು.

  ಇತ್ತೀಚೆಗೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು, ಬೆಳಗಾವಿಯನ್ನು ಪಡೆದೇ ಪಡೆಯುತ್ತೇವೆ. ಬೆಳಗಾವಿ ಮಹಾರಾಷ್ಟ್ರದ ಆಕ್ರಮಿತ ಪ್ರದೇಶ ಎಂದು ಹೇಳಿಕೆ ನೀಡಿ ಉದ್ಧವ್​​ ಠಾಕ್ರೆ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು.
  Published by:Seema R
  First published: