Maratha Community: ಮರಾಠ ಸಮುದಾಯದಿಂದ ಸರ್ಕಾರಕ್ಕೆ ಮತ್ತೊಂದು ಬೇಡಿಕೆ; ಏನ್ ಮಾಡ್ತಾರೆ ಸಿಎಂ ಬೊಮ್ಮಾಯಿ?

ಈಗಾಗಲೇ ಇದರ ಬಗ್ಗೆ ಹಿಂದುಳಿದ ವರ್ಗಗಳ ಅಧ್ಯಕ್ಷರ ಜೊತೆ ಮಾತಾಡಿದ್ದೇನೆ. ಆದಷ್ಟು ಬೇಗ ವರದಿ ಕೊಡಲು ಸೂಚನೆ ನೀಡಿದ್ದೇನೆ. ಹೀಗಾಗಿ ಯಾವುದೇ ಬೇರೆ ಸಮುದಾಯಕ್ಕೆ ಸಮಸ್ಯೆ ಆಗದ ರೀತಿ ನಾನು ಸೂಕ್ತ ನಿರ್ಣಯ ಮಾಡುತ್ತೇನೆ ಎಂದು ಸಿಎಂ ಅಭಯ ನೀಡಿದರು.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ಬೆಂಗಳೂರಿನ ಅರಮನೆಯ ತ್ರಿಪುರ ವಾಸಿನಿಯಲ್ಲಿ ನಡೆಯುತ್ತಿರುವ ಮರಾಠ ಸಮುದಾಯದ (Maratha Community) ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಈ ವೇಳೆ ಮರಾಠ ಸಮುದಾಯದ ನಾಯಕರು ತಮ್ಮ ಸಮಾಜವನ್ನು 3ಬಿ ಯಿಂದ 2ಎಗೆ (3B To 2A) ಸೇರಿಸುವಂತೆ ಮನವಿ ಮಾಡಿಕೊಂಡರು. ಈಗಾಗಲೇ 2ಎ ಮೀಸಲಾತಿಗೆ ಲಿಂಗಾಯತ ಪಂಚಮಸಾಲಿ ಸಮುದಾಯ (Lingayat Panchamasali) ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಾ ಬಂದಿದೆ. ವಾಲ್ಮೀಕಿ ಸಮುದಾಯ (Valmiki Community) ಮೀಸಲಾತಿ ಹೆಚ್ಚಿಸುವ ಕುರಿತು ಬೇಡಿಕೆಯನ್ನ ಸರ್ಕಾರದ ಮುಂದಿರಿಸಿದೆ. ಇತ್ತ ಕುರುಬ ಸಮುದಾಯವರು (Kuruba Community) ತಮ್ಮ ST ಮೀಸಲಾತಿ ಸೇರಿಸಬೇಕು ಎಂದು ಆಗ್ರಹಿಸುತ್ತಿವೆ.

ಇನ್ನೂ ಒಂದು ತಿಂಗಳಲ್ಲಿ ಬೇಡಿಕೆ ಈಡೇರಿಸದೆ ಇದ್ದರೆ ಹೋರಾಟದ ಎಚ್ಚರಿಕೆಯನ್ನು ಮರಾಠ ಸಮುದಾಯದ ನಾಯಕರು ಸಿಎಂ ಬೊಮ್ಮಾಯಿ ಅವರಿಗೆ ನೀಡಿದ್ದಾರೆ.

ಮರಾಠ ಸಮುದಾಯಕ್ಕೆ ಯಡಿಯೂರಪ್ಪ ಅಭಯ

ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್.ಯಡಿಯೂರಪ್ಪ, ನಾನು ಹಿಂದೆ ಮುಖ್ಯಮಂತ್ರಿ ಆಗಿದ್ರೆ, ಬೊಮ್ಮಾಯಿ ಇವಾಗ ಸಿಎಂ ಆಗಿದ್ರೆ ಅದಕ್ಕೆ ಕಾರಣ ಮರಾಠ ಸಮುದಾಯ. ಇದನ್ನು ನಾನು ಅತ್ಯಂತ ಹೆಮ್ಮೆಯಿಂದ ಹೇಳೋಕೆ ಬಯಸುತ್ತೇನೆ ಎಂದರು.

ಬಹಳ ಮುಖ್ಯವಾಗಿ ಮರಾಠ ಸಮುದಾಯದ ಅಭಿವೃದ್ಧಿ ನಿಗಮ ಯಾವ ರೀತಿ ಮಾಡಿದ್ದೇವೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ರೀತಿ ಬರುವಂತ ದಿನಗಳಲ್ಲಿ ಹಿಂದುಳಿದ ವರ್ಗಗಳಿಂದ ಶಿಫಾರಸು ತಗೊಂಡು, ಮೀಸಲಾತಿ ಕೊಡುವ ಬಗ್ಗೆ ಸಿಎಂ ತೀರ್ಮಾನ ಮಾಡ್ತಾರೆ ಎಂದು ಆಶ್ವಾಸನೆ ನೀಡಿದರು.

ಇದನ್ನೂ ಓದಿ:  Tungabhadra Dam: ತುಂಬುತ್ತಿದೆಯಾ ತುಂಗಭದ್ರಾ ಜಲಾಶಯ? ನೀರಿನ ಸಂಗ್ರಹದ ಬಗ್ಗೆ ನೀಡಲಾಗ್ತಿದ್ಯಾ ತಪ್ಪುಲೆಕ್ಕ?

ಆದಷ್ಟೂ ಬೇಗ ಬೇಡಿಕೆ ಈಡೇರಿಕೆಯ ಭರವಸೆ

ಛತ್ರಪತಿ ಶಿವಾಜಿ ಮಹಾರಾಜರ ಹೆಸರಲ್ಲಿ ಏನೇನು ಆಗಬೇಕು ಅದನ್ನೆಲ್ಲ ಮಾಡುವ ಕರ್ತವ್ಯ ಸರ್ಕಾರದ್ದು. ನಿಮ್ಮ ಮನವಿಯನ್ನು ಕಾರ್ಯರೂಪಕ್ಕೆ ತರಲು ಸಿಎಂ ಸೇರಿ, ಸಂಪುಟ ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡ್ತಾರೆ. 3ಬಿ ಯಿಂದ 2ಎ ಸೇರಿಸುವ ನಿಮ್ಮ ಹೋರಾಟಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಆದಷ್ಟು ಬೇಗ ಹಿಂದುಳಿದ ವರ್ಗಗಳಿಂದ ವರದಿ ತರಿಸಿಕೊಂಡು ಮೀಸಲಾತಿ ಬಗ್ಗೆ ರೂಪರೇಷೆ ಮಾಡಿ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದರು.

ಆ ಕಾಲದಲ್ಲಿ ನಮಗೆ ಠೇವಣಿ ಕಳೆದುಕೊಂಡಗಲೂ ನಿಮ್ಮ ಸಹಕಾರ ಇತ್ತು. ಇವಾಗ ನಿಮ್ಮ ಸಹಕಾರದಿಂದಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ. ಹೀಗಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ವಹಿಸುತ್ತೇವೆ ಎಂದು ಮರಾಠ ಸಮುದಾಯಕ್ಕೆ ಯಡಿಯೂರಪ್ಪ ಅಭಯ ನೀಡಿದರು.

ಯಾವುದೇ ಸಮುದಾಯಕ್ಕೆ ಸಮಸ್ಯೆ ಅಗದಂತೆ ನಿರ್ಣಯ: ಸಿಎಂ ಬೊಮ್ಮಾಯಿ

ನಮ್ಮ ನಾಯಕರಾದ ಯಡಿಯೂರಪ್ಪ ಅವರು ಸಮುದಾಯದ ನಿಗಮ ಮಾಡಿದ್ದಾರೆ. ಅವರ ಈ ಕಾರ್ಯದಿಂದ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಯಾವ ದೇಶಕ್ಕೆ ಉತ್ತಮವಾದ ಚರಿತ್ರೆ ಇರುತ್ತೋ ಆ ದೇಶಕ್ಕೆ ಉತ್ತಮ ಭವಿಷ್ಯ ಇರುತ್ತದೆ. ಈ ದೇಶದಲ್ಲಿ ಹಲವು ಆಡಳಿತಗಳು ಬಂದು ಹೋಗಿವೆ. ಇಂತಹ ಇತಿಹಾಸದಲ್ಲಿ ಕೆಲವೇ ಕೆಲವು ಮಿನುಗುವ ನಕ್ಷತ್ರಗಳಿವೆ. ದೇಶಕ್ಕೆ, ಸ್ವಾತಂತ್ರ್ಯಕ್ಮೆ ಯಾರು ಹೋರಾಟ ಮಾಡಿದ್ದಾರೋ ಅವರೇ ಮಿನುಗುವ ನಕ್ಷತ್ರಗಳು.  ಅದರಂತೆ ಛತ್ರಪತಿ ಶಿವಾಜಿ ಮಹರಾಜದ ಮಿನುಗುವ ನಕ್ಷತ್ರ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಮುದಾಯವನ್ನು ಹಾಡಿ ಹೊಗಳಿದರು.

ನಿಮ್ಮ ಋಣ ಎನಿದೆ ಅದನ್ನ ಮಾಜಿ ಸಿಎಂ ಅಭಿವೃದ್ಧಿ ನಿಗಮ ಮಾಡಿ ತೀರಿಸಿದ್ದಾರೆ. 3ಬಿ ಯಿಂದ 2ಎ ಬಗ್ಗೆ ಬೇಡಿಕೆ ಇಟ್ಟಿದ್ದೀರಿ. ಆದರೆ ಯಾವ ಸರ್ಕಾರ ಏನು ಮಾಡಿದೆ, ಏನು ಮಾಡಿಲ್ಲ ಅಂತಾ ನಾನು ಹೇಳುವುದಿಲ್ಲ. ಈಗಾಗಲೇ ಇದರ ಬಗ್ಗೆ ಹಿಂದುಳಿದ ವರ್ಗಗಳ ಅಧ್ಯಕ್ಷರ ಜೊತೆ ಮಾತಾಡಿದ್ದೇನೆ. ಆದಷ್ಟು ಬೇಗ ವರದಿ ಕೊಡಲು ಸೂಚನೆ ನೀಡಿದ್ದೇನೆ. ಹೀಗಾಗಿ ಯಾವುದೇ ಬೇರೆ ಸಮುದಾಯಕ್ಕೆ ಸಮಸ್ಯೆ ಆಗದ ರೀತಿ ನಾನು ಸೂಕ್ತ ನಿರ್ಣಯ ಮಾಡುತ್ತೇನೆ ಎಂದು ಅಭಯ ನೀಡಿದರು.

ಇದನ್ನೂ ಓದಿ:  Emission Test: ವಾಹನಗಳ ವಾಯು ಮಾಲಿನ್ಯ ತಪಾಸಣೆ ದರ ಹೆಚ್ಚಳ; ಏರಿಕೆಯಾಗಿದೆಷ್ಟು? ಇಲ್ಲಿದೆ ಮಾಹಿತಿ

ಮರಾಠ ಸಮುದಾಯದ ಸಹಕಾರ ಕೇಳಿದ ಸವದಿ

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮರಾಠ ಸಮುದಾಯದ ಋಣ ಬಿಜೆಪಿ ಮೇಲೆ ಇದೆ.  ಬಿಜೆಪಿ ಶಾಸಕರು ಹೆಚ್ಚು ಗೆಲ್ಲಲು ಸಮುದಾಯದ ಶಕ್ತಿಯೇ ಕಾರಣ. ಯಡಿಯೂರಪ್ಪರ, ಬೊಮ್ಮಾಯಿ ಯಾವಾಗಲೂ ನಿಮ್ಮ ಪರ ನಿಲ್ಲುತ್ತಾರೆ.  ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಅವರು ಪ್ರಾಮಾಣಿಕ ಪ್ರಯತ್ನ ಆರಂಭ ಮಾಡಿದ್ದಾರೆ. ಬೊಮ್ಮಾಯಿ ಮೇಲೆ ನಿಮ್ಮ ಆಶೀರ್ವಾದ, ವಿಶ್ವಾಸ ಸದಾ ಇರಲಿ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಗೆ ಮರಾಠ ಸಮುದಾಯದ ಸಹಕಾರ ಕೇಳಿದರು.
Published by:Mahmadrafik K
First published: