• Home
  • »
  • News
  • »
  • state
  • »
  • Satish Jarkiholi: ಮರಾಠ ಸಮುದಾಯದಿಂದ ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿ

Satish Jarkiholi: ಮರಾಠ ಸಮುದಾಯದಿಂದ ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿ

ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿ

ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿ

ಹಿಂದೂ ಪದ ಹಾಗೂ ಸಂಭಾಜಿ ಮಹಾರಾಜರ ಕುರಿತು ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆಂದು ಸತೀಶ್ ಜಾರಕಿಹೊಳಿಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

  • Share this:

ಬೆಳಗಾವಿ: ಬೆಳಗಾವಿಯಲ್ಲಿ ಮೀಸಲಾತಿಗಾಗಿ ಕ್ಷತ್ರಿಯ ಮರಾಠಾ ಸಮಾಜದಿಂದ (Kshatirya Maratha Community) ಹೋರಾಟ ನಡೆಯುತ್ತಿದೆ. 2ಎ ಮೀಸಲಾತಿಗಾಗಿ (2A Reservation) ಸುವರ್ಣಸೌಧದ ಎದುರು ಕೊಂಡಸಕೊಪ್ಪದಲ್ಲಿ ಮರಾಠರು ಧರಣಿ ನಡೆಸುತ್ತಿದ್ದಾರೆ.‌ ಕಳೆದ ಹತ್ತು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಜಗದೀಶ್ ಶೆಟ್ಟರ್ (Jagadish Shettar) ಮುಖ್ಯಮಂತ್ರಿ ಆಗಿದ್ದಾಗ ಮೀಸಲಾತಿ ನೀಡುವಂತೆ ಶಂಕ್ರಪ್ಪ ಆಯೋಗ (Shankrappa Committee) ಶಿಫಾರಸು ಮಾಡಿದೆ. ಹತ್ತು ವರ್ಷಗಳ ಹಿಂದೆಯೇ 2ಎ ಮೀಸಲಾತಿ ಘೋಷಣೆ ಮಾಡಬೇಕಾಗಿತ್ತು. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ 2ಎ ಮೀಸಲಾತಿ ಘೋಷಣೆ ಮಾಡುತ್ತೇವೆ ಎಂದು ಯಡಿಯೂರಪ್ಪನವರು (BS Yediyurappa) ಹೇಳಿದ್ದರು. ಬೊಮ್ಮಾಯಿ ಸಿಎಂ (CM Bsavaraj Bommai) ಆದಮೇಲೆ ಕೂಡ 2A ಮೀಸಲಾತಿ ನೀಡುತ್ತೇವೆಂದು ಹೇಳಿದ್ದರು. ಆದರೆ ಬೇಡಿಕೆ ಈಡೇರಿಸಲಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.


ಡಿಸೆಂಬರ್ 30ರೊಳಗೆ ಮರಾಠಾ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ರೆ ಮುಂಬರುವ ಚುನಾವಣೆಯಲ್ಲಿ 50 ಕ್ಷೇತ್ರಗಳಲ್ಲಿ ಮರಾಠಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ನಮ್ಮ ಶಕ್ತಿ ಏನೆಂದು ರಾಜಕೀಯ ಪಕ್ಷಗಳಿಗೆ ತೋರಿಸುತ್ತೇವೆ ಎಂದು ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟದ ಅಧ್ಯಕ್ಷ ಶಾಮಸುಂದರ ಗಾಯಕ್ವಾಡ್ ಎಚ್ಚರಿಕೆ ನೀಡಿದ್ದಾರೆ.


ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಭೇಟಿ


ಪ್ರತಿಭಟನಾ ಸ್ಥಳಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (MLA Laxmi Hebbalkar) , ಶಾಸಕ ಸತೀಶ್ ಜಾರಕಿಹೊಳಿ (Former Minister Satish Jarkiholi) ಭೇಟಿ ನೀಡಿದರು. ಮರಾಠಾ ಸಮಾಜದ ಮೀಸಲಾತಿ ಹೋರಾಟಕ್ಕೆ ಸಾಥ್ ನೀಡಿದ್ರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಮರಾಠಾ ಸಮಾಜ ಸ್ವಾಭಿಮಾನಿ ಸಮಾಜ. ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಕೇಳುತ್ತಿದ್ದೀರಿ. ರಾಜಕಾರಣದಲ್ಲಿ ನನಗೆ ಪುನರ್ಜನ್ಮ ಕೊಟ್ಟಿದ್ದು ಮರಾಠಾ ಸಮಾಜ ಎಂದರು.


ನಿಮ್ಮ ಸಮಾಜದ ಬೆಂಬಲಕ್ಕೆ ನಿಲ್ಲುತ್ತೇನೆ‌ ಸದನದಲ್ಲಿ ಮಾತಾಡಲಿಕ್ಕೆ ಅವಕಾಶ ಕೇಳಿದ್ದೇನೆ. ಮೀಸಲಾತಿಗಾಗಿ ಸಿಎಂಗೆ ಆಗ್ರಹಿಸುತ್ತೇನೆ. ನಮ್ಮ ಪಕ್ಷದ ಮುಖಂಡರ ಜೊತೆಗೂ ಮಾತಾಡುತ್ತೇನೆ ಎಂದು ಕನ್ನಡ ಹಾಗೂ ಮರಾಠಿಯಲ್ಲಿ ಭಾಷಣ ಮಾಡಿದರು.


ಸತೀಶ್ ಜಾರಕಿಹೊಳಿ ಮಾತಿಗೆ ಅಡ್ಡಿ


ಈ ವೇಳೆ ಭಾಷಣ ಮಾಡಲು ಮುಂದಾಗಿದ್ದ, ಸತೀಶ್​ ಜಾರಕಿಹೊಳಿ ಅವರಿಗೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಮರಾಠರು ಅಡ್ಡಿ ಪಡಿಸಿದರು. ಜೈ ಭವಾನಿ, ಜೈ ಶಿವಾಜಿ ಎಂದು ಘೋಷಣೆ ಕೂಗಿದ್ರು.


ಹಿಂದೂ ಪದ ಹಾಗೂ ಸಂಭಾಜಿ ಮಹಾರಾಜರ ಕುರಿತು ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆಂದು ಸತೀಶ್ ಜಾರಕಿಹೊಳಿಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.


ಜಾರಕಿಹೊಳಿ ಪ್ರತಿಕ್ರಿಯೆ


ಇಲ್ಲಿ ಧರ್ಮದ ವಿಚಾರ ಬೇಡ. ಮರಾಠರ ಮೀಸಲಾತಿಗೆ ನಮ್ಮ ಪಕ್ಷ ಬದ್ಧವಿದೆ ಎಂದಷ್ಟೆ ಹೇಳಿದ ಸತೀಶ್ ಜಾರಕಿಹೊಳಿ ಮಾತು ಮುಗಿಸಿದ್ರು. ನನ್ನ ಕ್ಷೇತ್ರದಲ್ಲಿನ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ನಾನು ಮಾತಾಡಿರುವುದು ಆನ್ ರೆಕಾರ್ಡ್ ಇದೆ. ರಾಜಕೀಯ ಅಂದ ಮೇಲೆ ಪರ ವಿರೋಧ ಎರಡೂ ಇರುತ್ತೆ ಎಂದು ಮಾಧ್ಯಮಗಳಿಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.


ಇದನ್ನೂ ಓದಿ: Satish Jarkiholi: ಸಂಭಾಜಿಗೆ ಸತೀಶ್ ಜಾರಕಿಹೊಳಿ ಅವಮಾನ; ಮತ್ತೆ ವಿವಾದದ ಸುಳಿಯಲ್ಲಿ ಕೈ ನಾಯಕ!


ಬಿಗಿ ಭದ್ರತೆಯಲ್ಲಿ ಸತೀಶ್ ಜಾರಕಿಹೊಳಿ


ಮರಾಠಾ ಸಮಾಜದ (Maratha Community) ಆಕ್ರೋಶದ ಕಾರಣ ಸತೀಶ್ ಜಾರಕಿಹೊಳಿಯವರು ಮುಜುಗುರ ಎದುರಿಸಬೇಕಾಯಿತು. ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿಯಲ್ಲಿ ಸತೀಶ್ ಜಾರಕಿಹೊಳಿಯವರನ್ನು ಕರೆದೊಯ್ದರು. ಪ್ರತಿಭಟನಾ ಸ್ಥಳದಿಂದ ಬಿಗಿ ಭದ್ರತೆಯಲ್ಲಿ ಕಳುಹಿಸಲಾಯಿತು.

Published by:Mahmadrafik K
First published: