Belagavi: ಮರಾಠ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನ! ಸರ್ಕಾರದ ಮೇಲೆ ಒತ್ತಡ ತಂದ ಶ್ರೀಗಳು

ರಾಜ್ಯದಲ್ಲಿ ಯಾವುದೇ ಸರ್ಕಾರ (Govt) ರಚನೆ ಮಾಡುವಲ್ಲಿ ಬೆಳಗಾವಿ (Belagavi) ಪಾತ್ರ ಪ್ರಮುಖವಾಗಿದೆ. ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಹೆಚ್ಚಿನ ಸ್ಥಾನ ಪಡೆಯಲು ಕಾಂಗ್ರೆಸ್- ಬಿಜೆಪಿ ದೊಡ್ಡ ಪ್ರಮಾಣದಲ್ಲಿ ತಂತ್ರ, ಪ್ರತಿತಂತ್ರ ರೂಪಿಸುತ್ತಿವೆ.

ಮರಾಠಾ ಜಗದ್ಗುರು ವೇದಾಂತ ಮಂಜುನಾಥ ಭಾರತೀ ಸ್ವಾಮಿಜಿ

ಮರಾಠಾ ಜಗದ್ಗುರು ವೇದಾಂತ ಮಂಜುನಾಥ ಭಾರತೀ ಸ್ವಾಮಿಜಿ

  • Share this:
ಬೆಳಗಾವಿ(ಮೇ.22): ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಇನ್ನೂ ವರ್ಷ ಬಾಕಿ ಉಳಿದಿದೆ. ಆದರೇ ಈಗಿನಿಂದಲೇ ಭರ್ಜರಿ ತಯಾರಿಗಳು ಆರಂಭವಾಗಿವೆ. ರಾಜ್ಯದಲ್ಲಿ ಯಾವುದೇ ಸರ್ಕಾರ (Govt) ರಚನೆ ಮಾಡುವಲ್ಲಿ ಬೆಳಗಾವಿ (Belagavi) ಪಾತ್ರ ಪ್ರಮುಖವಾಗಿದೆ. ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಹೆಚ್ಚಿನ ಸ್ಥಾನ ಪಡೆಯಲು ಕಾಂಗ್ರೆಸ್- ಬಿಜೆಪಿ ದೊಡ್ಡ ಪ್ರಮಾಣದಲ್ಲಿ ತಂತ್ರ, ಪ್ರತಿತಂತ್ರ ರೂಪಿಸುತ್ತಿವೆ. ಈ ನಡುವೆ ಜಿಲ್ಲೆಯ 7-8 ಕ್ಷೇತ್ರದಲ್ಲಿ ನಿರ್ಣಾಯಕವಾಗಿರೋ ಮರಾಠ (Marata) ಸಮೂದಾಯ ಹೆಚ್ಚಿನ ಶಾಸಕರು ತಮ್ಮವರೇ ಆಯ್ಕೆಯಾಗಬೇಕು ಜತೆಗೆ ಬೊಮ್ಮಾಯಿ ಸಂಪುಟದಲ್ಲಿ ತಮಗು ಸಚಿವ ಸ್ಥಾನಬೇಕು ಎನ್ನುವ ಆಗ್ರಹವನ್ನು ಮಾಡಿದ್ದಾರೆ. ಜಿಲ್ಲೆಯಾದ್ಯಂತ ಶಕ್ತಿ ಪ್ರದರ್ಶನದ ಮೂಲಕ ಸರ್ಕಾರ ಸಂದೇಶ ನೀಡುತ್ತಿದ್ದಾರೆ. ಮರಾಠ ಸಮೂದಾಯದ ಒಗ್ಗಟ್ಟು ಹಾಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ (BJP MLA) ನಿದ್ದೆಗೆಡಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಶೇ18ರಷ್ಟು ಜನಸಂಖ್ಯೆಯನ್ನು ಮರಾಠ ಸಮೂದಾಯ ಹೊಂದಿದೆ. ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ನಿಪ್ಪಾಣಿ, ಕಾಗವಾಡ ಹಾಗೂ ಖಾನಪುರದಲ್ಲಿ ಸಮೂದಾಯದ ಮತರಾರರೇ ನಿರ್ಣಾಯಕರಾಗಿದ್ದಾರೆ. ಇಷ್ಟು ದಿನ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿಂದ ಹಿನ್ನಡೆಯಾಗಿದ್ದು, ಈಗ ಸಮಾಜದ ಮುಖಂಡರು ಎಚ್ಚೆತ್ತುಕೊಂಡಿದ್ದಾರೆ. ಸಕಲ ಮರಾಠ ಎಂಬ ಹೆಸರಿನಲ್ಲಿ ಒಂದುಗೂಡುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Hubballi Crime News: ಬನ್ರೋ ಹೋಗೋಣ ಅಂದ್ರು: ಹೋದ ಮೂವರು ಗೆಳೆಯರು ಜೈಲು ಪಾಲಾದ್ರು!

ಬೆಳಗಾವಿ ನಗರ, ಖಾನಾಪುರದಲ್ಲಿ ಈಗ ಸಮಾವೇಶಗಳು ಆರಂಭವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ರಚನೆಯಲ್ಲಿ ಪಾತ್ರ ವಹಿಸಿದ್ದ ಶ್ರೀಮಂತ ಪಾಟೀಲ್ ಅವರನ್ನು ಮೊದಲು ಮಂತ್ರಿ ಮಾಡಲಾಗಿತ್ತು. ಆದರೇ ಬೊಮ್ಮಾಯಿ ಸರ್ಕರದಲ್ಲಿ ಯಾವೊಬ್ಬ ಮರಾಠ ಸಮುದಾಯದ ನಾಯಕರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಇನ್ನೂ ನಿಗಮ ಮಂಡಳಿ ರಚನೆ ಮಾಡಿದ್ದ ಸರ್ಕಾರ ಇನ್ನೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎನ್ನುವ ಅಸಮಾಧಾನಿದೆ.

ಮರಾಠ ಎಂದರೇ ಎಂಇಎಸ್ ಎಂತಲೇ ಬಿಂಬಿತ

ಬೆಳಗಾವಿ ಜಿಲ್ಲೆಯಲ್ಲಿ ಮರಾಠ ಎಂದರೇ ಎಂಇಎಸ್ ಎಂತಲೇ ಬಿಂಬಿತವಾಗುತ್ತಿತ್ತು. ಆದರೇ ಈಗ ಎಂಇಎಸ್ ಸಂಘಟನೆಯನ್ನು ಹೊರಗಟ್ಟಿ ನಾಯಕರು ಒಂದೇ ಸೂರಿನಡಿ ಬಂದಿದ್ದಾರೆ. ಇನ್ನೂ ಮರಾಠ ಸಮೂದಾಯ ಹೆಚ್ಚು ಜನಸಂಖ್ಯೆ ಇರೇ ಕಡೆಗಳಲ್ಲಿ ಮುಂದಿನ ಚುನವಾಣೆಯಲ್ಲಿ ಟಿಕೆಟ್ ಕೇಳಲು ನಿರ್ಧಾರ ಮಾಡಲಾಗಿದೆ. ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿ ಟಿಕೆಟ್ ಬೇಡಿಕೆಗಳು ಆರಂಭವಾಗಲಿವೆ. ಇನ್ನೂ ಸಮಾಜದ ಬಹುದಿನಗಳ ಬೇಡಿಕೆಯಾಗಿರೋ 2ಎ ಮೀಸಲಾತಿ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ: Ramanagara: ತುಂಬಿ ಹರಿಯುತ್ತಿರುವ ಇಗ್ಗಲೂರಿನ HDD ಬ್ಯಾರೇಜ್, ಪ್ರವಾಸಿಗರ ಆಗಮನ

ಸಮಾಜದ ಬೇಡಿಕೆ ಬಗ್ಗೆ ಮರಾಠಾ ಜಗದ್ಗುರು ವೇದಾಂತ ಮಂಜುನಾಥ ಭಾರತೀ ಸ್ವಾಮಿಜಿ ಹೇಳಿಕೆ ನೀಡಿದ್ದಾರೆ. ಮರಾಠ ಸಮಾಜಕ್ಕೆ ಕೇಳದಿದ್ದರೂ ಅವರಾಗಿಯೇ ಸಚಿವ ಸ್ಥಾನ ಕೊಡಬೇಕು. ಬಿಜೆಪಿಯಲ್ಲಿ ಇಬ್ಬರು ಮರಾಠ ಶಾಸಕರಿದ್ದು ಯಾರಿಗಾದ್ರು ಅವಕಾಶ ಕೊಡಲಿ. ಮರಾಠ ಸಮಾಜದ ಅನೇಕ ವರ್ಷಗಳಿಂದ ಮೀಸಲಾಯಿ ಹೋರಾಟ ಮಾಡುತ್ತಿದೆ. ಇದನ್ನು ಸರ್ಕಾರ ಈಡೇರಿಸಬೇಕು. ಮರಾಠ ಸಮೂದಾಯ ಹೆಚ್ಚಿರುವ ಕಡೆಗಳಲ್ಲಿ ಟಿಕೆಟ್ ಸಹ ನೀಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದ್ದಾರೆ.
Published by:Divya D
First published: