• Home
  • »
  • News
  • »
  • state
  • »
  • Snake Dance Video: ಹಾವು ಹಿಡಿಯಲು ಬಂದವರ ಮುಂದೆ ಮಹಿಳೆಯರ ನಾಗನೃತ್ಯ! ಇದು ದೇವಿ ಪವಾಡ ಎಂದ ಜನ!

Snake Dance Video: ಹಾವು ಹಿಡಿಯಲು ಬಂದವರ ಮುಂದೆ ಮಹಿಳೆಯರ ನಾಗನೃತ್ಯ! ಇದು ದೇವಿ ಪವಾಡ ಎಂದ ಜನ!

ಹಾವಿನಂತೆ ನರ್ತಿಸುತ್ತಿರುವ ಮಹಿಳೆಯರು

ಹಾವಿನಂತೆ ನರ್ತಿಸುತ್ತಿರುವ ಮಹಿಳೆಯರು

ಈ ಘಟನೆ ಭಯ ಹುಟ್ಟಿಸಿದ್ದು, ಇದನ್ನು ನೋಡಿದ ಜನ ಇದು ನಾಗದೇವತೆ (Naga Devate) ಪವಾಡ, ಮಾರಮ್ಮ ದೇವಿಯ (Maramma Devi) ಪವಾಡ ಅಂತಿದ್ದಾರೆ. ಅಷ್ಟಕ್ಕೂ ಅಲ್ಲಿ ಮಹಿಳೆಯರು ಹಾವಿನಂತೆ ನೃತ್ಯ (Snake Dance) ಮಾಡಿದ್ದಾರಂತೆ. ನಾಗರಹಾವು ಹಿಡಿಯಲು ಯುವಕರು ಬಂದಾಗ ಅವರ ಮುಂದೆ ಮಹಿಳೆಯರು ಹಾವಿನಂತೆ ನರ್ತಿಸಿದ್ದಾರಂತೆ!

ಮುಂದೆ ಓದಿ ...
  • Share this:

ಶಿವಮೊಗ್ಗ: ದೇವರು (God) ಮೈಮೇಲೆ ಬರುತ್ತಾನೆ ಅಂತ ಹಳ್ಳಿಗಳಲ್ಲಿ (Villages) ಹಿರಿಯರು ಹೇಳುತ್ತಾರೆ. ಅದು ಎಷ್ಟು ನಿಜವೋ, ಎಷ್ಟು ಸುಳ್ಳೋ ಎನ್ನುವುದು ತರ್ಕಕ್ಕೆ ನಿಲುಕದ ವಿಚಾರ. ಅದನ್ನು ನಂಬುವುದು, ಬಿಡುವುದು ಅವರವರಿಗೆ ಬಿಟ್ಟಿದ್ದು. ಆದರೆ ಇಲ್ಲೊಂದು ಘಟನೆ ಮಾತ್ರ ಜನರಲ್ಲಿ ಭಯ ಹುಟ್ಟಿಸಿದ್ದು, ಇದನ್ನು ನೋಡಿದ ಜನ ಇದು ನಾಗದೇವತೆ (Naga Devate) ಪವಾಡ, ಮಾರಮ್ಮ ದೇವಿಯ (Maramma Devi) ಪವಾಡ ಅಂತಿದ್ದಾರೆ. ಅಷ್ಟಕ್ಕೂ ಅಲ್ಲಿ ಮಹಿಳೆಯರು (Women) ಹಾವಿನಂತೆ ನೃತ್ಯ (Snake Dance) ಮಾಡಿದ್ದಾರಂತೆ. ನಾಗರಹಾವು ಹಿಡಿಯಲು ಯುವಕರು ಬಂದಾಗ ಅವರ ಮುಂದೆ ಮಹಿಳೆಯರು ಹಾವಿನಂತೆ ನರ್ತಿಸಿದ್ದಾರಂತೆ! ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ (Social Media) ವೈರಲ್ (Viral) ಆಗಿದ್ದು, ಇದನ್ನು ನೋಡಿದ ಜನ ತರಹೇವಾರಿ ಕಾಮೆಂಟ್ (Comments) ಮಾಡುತ್ತಿದ್ದಾರೆ.


ಮಹಿಳೆಯರ ಮೈಮೇಲೆ ಬಂತಾ ದೇವರು?


ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಪಕ್ಕದ ಚೌಡೇಶ್ವರಿ ಕಾಲೋನಿಯಲ್ಲಿರುವ ಶಂಕರ ರೇಂಜ್ ನರ್ಸರಿಯಲ್ಲಿ ಇಂದು ಆಶ್ಚರ್ಯಕರ ಘಟನೆಯೊಂದು ನಡೆದಿದೆ. ನಾಗರ ಹಾವು ಹಿಡಿಯಲು ಹೋದಾಗ ಇಬ್ಬರು ಮಹಿಳೆಯರ ಮೈಮೇಲೆ ದೇವರು ಬಂದಿದೆ ಎನ್ನಲಾದ ಘಟನೆ ನಡೆದಿದೆ.




ಹಾವು ಹಿಡಿಯಲು ಹೋಗಿದ್ದ ಸ್ನೇಕ್ ಕಿರಣ್


ಸ್ನೇಕ್ ಕಿರಣ್ ಎಂಬುವರು ನಾಗರ ಹಾವಿನ ಮರಿಗಳನ್ನು ಹಿಡಿಯುವ ಸಲುವಾಗಿ ಸ್ಥಳಕ್ಕೆ ಹೋಗಿದ್ದಾಗ ಮಹಿಳೆಯರು ಮೈ ಮೇಲೆ ದೇವರು ಬಂದವರಂತೆ ಆವೇಶದಿಂದ ಕುಣಿದಿದ್ದಾರೆ. ಒಂದು ಅಡಿ ನಾಗರ ಹಾವು ನರ್ಸರಿಯಲ್ಲಿ ಕಾಣಿಸಿಕೊಂಡಿದೆ ಎಂದು ನಾಗರಾಜ್ ಎಂಬುವವರು ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ನರ್ಸರಿಯಲ್ಲಿ ಹುಡುಕಿದಾಗ ಸುಮಾರು ಒಂದು ಅಡಿ ಉದ್ದದ ನಾಗರ ಹಾವು ಸಿಕ್ಕಿದೆ. ಸ್ನೇಕ್ ಕಿರಣ್ ಅವರು ಹಾವು ರಕ್ಷಣೆ ಮಾಡಿ, ಕಾಡಿಗೆ ಕೊಂಡೊಯ್ದು ಬಿಡಲು ಸನ್ನದ್ಧರಾಗಿದ್ದರು. ಆಗ ಮಹಿಳೆಯರು ವಿಚಿತ್ರವಾಗಿ ವರ್ತಿಸಿದ್ದಾರೆ.


ಇದನ್ನೂ ಓದಿ: Jail Life: ಜೈಲಲ್ಲಿ ಜೀವನ ಹೇಗಿರುತ್ತೆ ಅಂತ ನೋಡ್ಬೇಕಾ? ಜಸ್ಟ್ 500 ರೂಪಾಯಿ ಕೊಡಿ, ಒಂದು ದಿನ ಕಾರಾಗೃಹದಲ್ಲಿ ಇರಿ!


ಇಬ್ಬರು ಮಹಿಳೆಯರಿಂದ ವಿಚಿತ್ರ ವರ್ತನೆ


ಸ್ನೇಕ್ ಕಿರಣ್ ಅವರು ಹಾವು ರಕ್ಷಣೆ ಮಾಡುತ್ತಿದ್ದ ವೇಳೆ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸುತ್ತುವರಿದು ನೋಡುತ್ತಿದ್ದರು. ಆದರೆ ಮಹಿಳೆಯರ ಗುಂಪಿನಲ್ಲಿದ್ದ ವಾಸುಕಿ ಮತ್ತು ನೇತ್ರ ಎಂಬ ಮಹಿಳೆಯರ ವರ್ತನೆ ಬದಲಾಯಿತು. ಇಬ್ಬರು ಜೋರಾಗಿ ಕೂಗಿಕೊಂಡರು, ಹಾವಿನಂತೆ ವರ್ತನೆ ಮಾಡಲು ಶುರು ಮಾಡಿದರು. ನೆಲದಲ್ಲಿ ಬಿದ್ದು ಹೊರಳಾಡಿದರು.


ಹಾವಿಗೆ ಏನೂ ಮಾಡದಂತೆ ಮಹಿಳೆಯರ ತಾಕೀತು


ಹಾವು ಹಿಡಿಯೋದಕ್ಕೆ ಮಹಿಳೆಯರು ವಿರೋಧ ಮಾಡಿದ್ದಾರೆ. ಅದು ನಿಮಗೆ ಏನೂ ಮಾಡಲ್ಲ, ಅದನ್ನು ಬಿಟ್ಟು ಬಿಡಿ ಎಂದು ಜೋರಾಗಿ ಹೇಳಿದ್ದಾರೆ. ಅಲ್ಲದೇ ನಾವು ಹೇಳಿದ ಜಾಗದಲ್ಲೇ ಬಿಡಿ ಅಂತ ತಾಕೀತು ಮಾಡಿದ್ದಾರೆ. ಬಳಿಕ ಸ್ನೇಕ್ ಕಿರಣ್ ಬಾಟಲಿಯಲ್ಲಿ ಹಿಡಿದಿದ್ದ ಹಾವನ್ನು ನರ್ಸರಿ ಪಕ್ಕದಲ್ಲಿಯೇ ಬಿಟ್ಟು ಬಂದಿದ್ದಾರೆ.


ಮಹಿಳೆಯರಿಂದ ಸ್ನೇಕ್ ಕಿರಣ್‌ಗೆ ಆಶೀರ್ವಾದ


ಇನ್ನು ಹಾವು ಬಿಟ್ಟು ಬರುತ್ತಿದ್ದಂತೆ ಮಹಿಳೆಯರು ಸ್ನೇಕ್ ಕಿರಣ್‌ಗೆ ಆಶೀರ್ವಾದ ಮಾಡಿದ್ದಾರೆ. ಹಾವು ಬಿಟ್ಟು ಬಂದ ನಂತರ ಮೈ ಮೇಲೆ ದೇವರು ಬಂದ ಮಹಿಳೆಯು ನಿನಗೆ ನಾನು ಏನೂ ಮಾಡಲ್ಲ. ನಿನಗೆ ಮುಂದೆ ಎಲ್ಲ ಒಳ್ಳೆಯದಾಗುತ್ತದೆ. ನೀನು ಏನ್ ಅಂದುಕೊಳ್ಳುತ್ತಿಯಾ ಅದೆಲ್ಲಾ ಆಗುತ್ತದೆ ಎಂದು ಹೇಳಿ ಕರ್ಪೂರ ತಿಂದಿದ್ದಾರೆ. ಇದರಿಂದ ಗಲಿಬಿಲಿ ಗೊಂಡ ಸ್ನೇಕ್ ಕಿರಣ್ ಮಾರಿಕಾಂಬ ದೇವಿ ವನದ ಕಡೆ ಬಂದು ದೇವಿಗೆ ದೀರ್ಘದಂಡ ನಮಸ್ಕಾರ ಹಾಕಿ, ನಾನು ಹಾವಿನ ರಕ್ಷಣೆಗೆ ಇರೋದು, ನಾವೆಲ್ಲಾರು ಹಾವನ್ನು ರಕ್ಷಿಸೋಣ ಎಂದು ಕೇಳಿ ಕೊಂಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Frogs: ಕಪ್ಪೆಗಳ ಸಾವಿನಿಂದ ಮನುಷ್ಯನ ಜೀವಕ್ಕೂ ಕುತ್ತು ಬರುತ್ತಿದೆಯಂತೆ! ತಜ್ಞರು ಕೊಟ್ಟಿದ್ದಾರೆ ಶಾಕಿಂಗ್ ನ್ಯೂಸ್


ಪಕ್ಕದಲ್ಲೇ ಇದೆಯಂತೆ ಮಾರಿಕಾಂಬೆ ವನ


ಇನ್ನು ಹಾವನ್ನು ಹಿಡಿಯಬಾರದು ಎಂದೇ ನಾಗ ದೇವರು ಅಡ್ಡಗಟ್ಟಿದೆ ಎಂದು ಜನರು ಮಾತನಾಡಿಕೊಂಡಿದ್ದಾರೆ. ದೈವಿಕ ಮಹಿಮೆಯ ರೀತಿಯಲ್ಲಿ ನೋಡುವುದಾದರೆ, ಅದು ಶಕ್ತಿಸ್ಥಳವೂ ಆಗಿದೆ. ಏಕೆಂದರೆ ಕೋಟೆ ಮಾರಿಕಾಂಬಾ ದೇವಿಯ ವನ ಅಲ್ಲಿಯೇ ಇದ್ದು, ಇದು ದೇವಿ ಪವಾಡ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

Published by:Annappa Achari
First published: