News18 India World Cup 2019

ಬಳ್ಳಾರಿ, ಚಿಕ್ಕೋಡಿ, ಚಾಮರಾಜನಗರದ ಹಲವೆಡೆ ಜನರಿಂದ ಮತದಾನ ಬಹಿಷ್ಕಾರ..!

ಜನರಿಗೆ ಅತ್ಯಗತ್ಯ ಇರುವುದು ಅನ್ನ, ನೀರು ಇತ್ಯಾದಿ ಮೂಲಸೌಕರ್ಯ. ದಶಕಗಳಿಂದ ಮೂಲಸೌಕರ್ಯ ಇಲ್ಲದೆ ತತ್ತರಿಸುವ ಜನರು ಮತದಾನ ಬಹಿಷ್ಕಾರದಂಥ ನಿರ್ಧಾರ ತಳೆಯುವುದು ಸಹಜವೇ...

news18
Updated:April 15, 2019, 6:14 PM IST
ಬಳ್ಳಾರಿ, ಚಿಕ್ಕೋಡಿ, ಚಾಮರಾಜನಗರದ ಹಲವೆಡೆ ಜನರಿಂದ ಮತದಾನ ಬಹಿಷ್ಕಾರ..!
ಸಾಂದರ್ಭಿಕ ಚಿತ್ರ
news18
Updated: April 15, 2019, 6:14 PM IST
ಬೆಂಗಳೂರು(ಏ. 15): ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ತಮ್ಮ ಕಷ್ಟಗಳಿಗೆ ಸ್ಪಂದಿಸದಿದ್ದರೆ ಜನರಿಗೆ ಆಕ್ರೋಶವಾಗುವುದು ಸಹಜ. ಬಹುತೇಕ ಜನರು ತಮ್ಮ ಅಸಮಾಧಾನವನ್ನು ನುಂಗಿಕೊಂಡು, ಮುಂಬರುವ ದಿನಗಳಲ್ಲಾದರೂ ನೂತನ ಜನಪ್ರತಿನಿಧಿ ಕೆಲಸ ಮಾಡಬಹುದೆಂಬ ಆಶಯದೊಂದಿಗೆ ಮತದಾನ ಮಾಡುತ್ತಾರೆ. ಕೆಲವರು ಮತದಾನ ಬಹಿಷ್ಕಾರ ಮಾಡಿ ತಮ್ಮ ಅಸಮಾಧಾನ ಹೊರಹಾಕುತ್ತಾರೆ. ಮೂಲಸೌಕರ್ಯ ಕೊರತೆ, ನೀರಿನ ಸಮಸ್ಯೆಗಳಿಂದ ಬೆಂದ ಜನರು ಈ ಬಾರಿ ಮತದಾನ ಬಹಿಷ್ಕರಿಸಲು ನಿರ್ಧರಿಸಿರುವ ಸುದ್ದಿ ಬಳ್ಳಾರಿ, ಚಿಕ್ಕೋಡಿ ಮತ್ತು ಚಾಮರಾಜನಗರದಿಂದ ವರದಿಯಾಗಿದೆ.

ಇದನ್ನೂ ಓದಿ: 'ಎಂಥಾ ಕಷ್ಟದಲ್ಲಿ ಸರ್ಕಾರ ನಡೆಸ್ತಿದ್ದೇನೆ ನಿಮಗೆ ಗೊತ್ತಿಲ್ಲ'; ಜಂಟಿ ಸಮಾವೇಶದಲ್ಲಿ ಕಣ್ಣೀರು ಹಾಕಿದ ಸಿಎಂ ಎಚ್​ಡಿಕೆ

ಬಳ್ಳಾರಿಯಲ್ಲಿ ಸೌಲಭ್ಯಕ್ಕೆ ಒತ್ತಾಯಿಸಿ ಮತದಾನ ಬಹಿಷ್ಕಾರ!:

ಬಳ್ಳಾರಿಯ ಸಿರುಗುಪ್ಪ ನಗರದ 16ನೇ ವಾರ್ಡ್​ನ ಡ್ರೈವರ್ ಕಾಲೋನಿಯ ಸುಮಾರು 2 ಸಾವಿರ ಜನರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ಧಾರೆ. ತಮಗೆ ಅತ್ಯಾಧುನಿಕ ಸೌಲಭ್ಯ ಬೇಡ, ಕನಿಷ್ಠ ಪಕ್ಷ ಮೂಲ ಸೌಕರ್ಯ ಕೊಡಿ ಎಂದು ಈ ಬಡವಾಣೆ ನಿವಾಸಿಗಳು ಹಲವಾರು ವರ್ಷದಿಂದ ಕೇಳುತ್ತಲೇ ಬಂದಿದ್ದರೂ ಯಾರೊಬ್ಬರು ಸ್ಪಂದಿಸುತ್ತಿಲ್ಲ. ತಾವು ಕಳೆದ 18 ವರ್ಷಗಳಿಂದ ವಾಸಿಸುತ್ತಿದ್ದು, ನಗರಸಭೆ ವತಿಯಿಂದ ನಿವೇಶನ ನೀಡಿದ್ದು, ಇಂದಿಗೂ ಹಕ್ಕುಪತ್ರ ವಿತರಿಸಿಲ್ಲ. ಸುಮಾರು 2 ಸಾವಿರ ಮತದಾರರಿರುವ ಈ ಕಾಲೊನಿಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡಿತ್ತಿದ್ದೀವಿ.  ಸರಿಯಾದ ರಸ್ತೆ, ಶೌಚಾಲಯ, ಕುಡಿಯುವ ನೀರು,  ಚರಂಡಿ ಹಾಗೂ ಬೀದಿ ದೀಪಗಳಿಲ್ಲ. ರಸ್ತೆ ಸರಿಯಿಲ್ಲದ ಕಾರಣ ಅನಾರೋಗ್ಯ ದಿಂದ ಸರಿಯಾದ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಲಾಗದೆ  ತೀರ್ವ ತೊಂದರೆಗೊಳಗಾದ ಉದಾಹರಣೆ ಸಾಕಷ್ಟಿವೆ. ಈಗಲೂ ಸಹ ಮಳೆ ಬಂದರೆ ದ್ವಿಚಕ್ರ ವಾಹನಗಳು ಸಹ ಬರಲ್ಲ. ಇದರಿಂದ ಬಹಳ ತೊಂದರೆಯಾಗುತ್ತಿದೆ, ಪ್ರತಿ ಚುನಾವಣೆಯಲ್ಲಿ ನಮಗೆ ಸುಳ್ಳು ಭರವಸೆ ನೀಡಿ ಮತ ಪಡೆದು ಚುನಾವಣೆ ಮುಗಿದ ನಂತರ ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡುವುದಿಲ್ಲ. ಇದರಿಂದ ತಾವು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುತ್ತೇನೆ. ಚುನಾವಣೆಯಲ್ಲಿ ಮತಕೇಳಲು ಬರುವ ಜನಪ್ರತಿನಿದಿಗಳಿಗೆ ಧಿಕ್ಕಾರ ಹಾಕುತ್ತೇವೆ ಎಂದು ಡ್ರೈವರ್ ಕಾಲೋನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯೋಗಿ ಆದಿತ್ಯನಾಥ್​ 72 ಗಂಟೆ, ಮಾಯಾವತಿ 48 ಗಂಟೆ ಪ್ರಚಾರದಲ್ಲಿ ಭಾಗಿಯಾಗದಂತೆ ನಿಷೇಧ ಹೇರಿದ ಚುನಾವಣಾ ಆಯೋಗ

ನೀರ ಬಂದಿಲ್ಲ ಸರ್, ನಾವ್ ಓಟ್ ಹಾಕಲ್ಲ:
Loading...

ಚಿಕ್ಕೋಡಿ: ಕೃಷಿಗೆ ಮತ್ತು ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಚಿಕ್ಕೋಡಿ ಮತಕ್ಷೇತ್ರದ ಐದಾರು ಗ್ರಾಮಗಳ ರೈತರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ಧಾರೆ. ಹುಕ್ಕೇರಿ ತಾಲೂಕಿನ ಹಂಚಿನಾಳ, ಉಳ್ಳಾಗಡ್ಡಿ, ಖಾನಾಪುರ, ಕುರಣಿ, ಚಿಕ್ಕಾಲಗುಡ್ಡ ಗ್ರಾಮಗಳ ಜನರು ನೀರಿನ ಬವಣೆಯಿಂದ ಬೆಂದು ನಲುಗಿಹೋಗಿ ಕೊನೆಗೆ ಮತದಾನ ಬಹಿಷ್ಕರಿಸುವ ಮಟ್ಟಕ್ಕೆ ಬಂದಿದ್ದಾರೆ.

ಈ ಗ್ರಾಮಗಳಿಗೆ ನೀರು ಹರಿಸುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆ ಹಿಡಕಲ್ ಜಲಾಶಯದಿಂದ ಕುರಣಿ ಏತನೀರವರಿ ಯೋಜನೆ‌ ನಿರ್ಮಾಣ ಮಾಡಲಾಗಿದೆ. ಈ ಗ್ರಾಮಗಳಿಂದ ಕುರಣಿ ಏತನೀರಾವರಿ ಯೋಜನೆಯ ನೀರೆತ್ತುವ ಜಾಗವಿರೋದು ಕೇವಲ 3 ಕಿಮೀ ಅಷ್ಟೇ. ಆದರೆ, ಅಲ್ಲಿಂದ ಇಲ್ಲಿಯವರೆಗೂ ಒಂದ ಬಾರಿ ಬಿಟ್ಟರೆ ಮತ್ಯಾವತ್ತೂ ಸಹ ನೀರು ಬಂದಿಲ್ಲ ಅನ್ನೋದು ಗ್ರಾಮಸ್ಥರ ಆರೋಪ. ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಸದ್ಯ ಎರಡು ಜಿಲ್ಲೆಗಳ ನೀರಿನ ಬವಣೆ ಹೋಗಲಾಡಿಸ್ತಿದೆ ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಹುಕ್ಕೇರಿ ತಾಲೂಕಿನ ಜನರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕೃಷಿಗೆ ಸಮರ್ಪಕ ನೀರಿನ ವ್ಯವಸ್ಥೆ ಸಿಕ್ಕಿಲ್ಲ. ಹೀಗಾಗಿ ಬರೀ ಆಶ್ವಾಸನೆ ನೀಡಿ ಕೈ ತೊಳೆದುಕೊಂಡು ಹೋಗುವ ನಾಯಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಈ ಬಾರಿ ಈ ನಾಲ್ಕು ಗ್ರಾಮದ ಜನರು ಮತದಾನ ಬಹಿಷ್ಕಾರದ ಹಾದಿ ಹಿಡಿದಿದ್ದಾರೆ..

ಇದನ್ನೂ ಓದಿ: ಸಂಸತ್​ನಲ್ಲಿ ಮೋದಿಯನ್ನು ಎದುರಿಸುವ ಕಿಚ್ಚು ಈ ಮಣ್ಣಿನ ಮಗನಿಗಿದೆ; ಬಿಜೆಪಿ ವಿರುದ್ಧ ಗುಡುಗಿದ ದೇವೇಗೌಡರು

ನೀರಿದ್ದರೂ ಕೊಡುತ್ತಿಲ್ಲವೆಂದು 2 ಸಾವಿರ ಜನರಿಂದ ಮತದಾನ ಬಹಿಷ್ಕಾರ:

ಚಾಮರಾಜನಗರ: ಇಲ್ಲಿ ಸುವರ್ಣಾವತಿ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಹಳೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸದೇ ಇರುವುದನ್ನು ವಿರೋಧಿಸಿ ಎರಡು ಸಾವಿರಕ್ಕೂ ಹೆಚ್ಚು ರೈತರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಚಾಮರಾಜನಗರ ತಾಲೂಕಿನ ಆಲೂರು, ಮಲ್ಲುಪುರ, ಹೊಮ್ಮ, ಕೋಟಂಬಳ್ಳಿ ಕರಿಯನಕಟ್ಟೆ ಸುತ್ತಮುತ್ತಲ ಹಳೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುವಂತೆ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗು ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಬೆಳೆಗಳು ಒಣಗುತ್ತಿವೆ. ಪ್ರತಿವರ್ಷ ಸುವರ್ಣಾವತಿ ಜಲಾಶಯದಿಂದ ಮೂರು ಬಾರಿ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಜಲಾಶಯದಲ್ಲಿ ನೀರಿದ್ದರೂ ಬಿಡದೇ ಇರುವುದರಿಂದ ಬೆಳೆಗಳು ಒಣಗಿ ಹೋಗುತ್ತಿದ್ದು ಆಕ್ರೋಶಗೊಂಡಿರುವ ಈ ಭಾಗದ ರೈತರು ಲೋಕಸಭಾ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ

ವರದಿ: ಶರಣು ಹಂಪಿ / ಲೋಹಿತ್ ಶಿರೋಳ್ / ಎಸ್.ಎಂ. ನಂದೀಶ
First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...