• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Cabinet Expansion: ಶಿವಲಿಂಗೇಗೌಡರಿಗೆ ಬೇಸರ, ದೇಶಪಾಂಡೆಗೆ ನಿರಾಸೆ! ಹಿರಿಯರಿಗೆ 'ಕೈ'ಕೊಟ್ಟ ಹೈಕಮಾಂಡ್!

Cabinet Expansion: ಶಿವಲಿಂಗೇಗೌಡರಿಗೆ ಬೇಸರ, ದೇಶಪಾಂಡೆಗೆ ನಿರಾಸೆ! ಹಿರಿಯರಿಗೆ 'ಕೈ'ಕೊಟ್ಟ ಹೈಕಮಾಂಡ್!

ಹಿರಿಯ ಶಾಸಕರು

ಹಿರಿಯ ಶಾಸಕರು

ಅಧಿಕೃತ ಪಟ್ಟಿ ರಾಜಭವನಕ್ಕೆ ರವಾನೆಯಾಗುತ್ತಿದ್ದಂತೆ ಕೆಲ ಹಿರಿಯ ಶಾಸಕರು, ಸಚಿವ ಸ್ಥಾನದ ಆಕಾಂಕ್ಷಿಗಳು ಬೇಸರ ಹೊರಹಾಕಿದ್ದಾರೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ಬೆಂಗಳೂರು: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ (Siddaramaiah-DK Shivakumar) ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ (Cabinet Expansion) ಕೌಂಟ್‌ ಡೌನ್ ಶುರುವಾಗಿದೆ. ಕಾಂಗ್ರೆಸ್ ಹೈಕಮಾಂಡ್ (Congress high command) ಅಳೆದು ತೂಗಿ ಅಂತಿಮವಾಗಿ 24 ಶಾಸಕರಿಗೆ ಮಂತ್ರಿ ಭಾಗ್ಯ ನೀಡಿದೆ. ಈ ಪೈಕಿ ಹಳೆಯ ಶಾಸಕರು (MLA) ಹಾಗೂ ನೂತನ ಶಾಸಕರು ಸೇರಿದ್ದಾರೆ. ಅಧಿಕೃತ ಪಟ್ಟಿ ರಾಜಭವನಕ್ಕೆ (Raj Bhavan) ರವಾನೆಯಾಗುತ್ತಿದ್ದಂತೆ ಕೆಲ ಹಿರಿಯ ಶಾಸಕರು, ಸಚಿವ ಸ್ಥಾನದ ಆಕಾಂಕ್ಷಿಗಳು ಬೇಸರ ಹೊರಹಾಕಿದ್ದಾರೆ.  


ಸಚಿವ ಸ್ಥಾನ ವಂಚಿತರು ಯಾರ್ಯಾರು?


ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಸಕರಾದ ಆರ್‌.ವಿ. ದೇಶಪಾಂಡೆ, ಲಕ್ಷ್ಮಣ ಸವದಿ, ಎಂ. ಕೃಷ್ಣಪ್ಪ, ರುದ್ರಪ್ಪ ಲಮಾಣಿ, ಎನ್.ಎ. ಹ್ಯಾರಿಸ್, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ಬಸವರಾಜ ರಾಯರೆಡ್ಡಿ, ಪಿ.ಎಂ. ನರೇಂದ್ರಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಅಜಯ್ ಸಿಂಗ್, ಇ. ತುಕರಾಂ, ತನ್ವೀರ್ ಸೇಠ್, ಟಿ.ಬಿ. ಜಯಚಂದ್ರ ಸೇರಿದಂತೆ ಹಲವು ಶಾಸಕರು ಈ ಬಾರಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ ಯಾರಿಗೂ ಈ ಬಾರಿ ಮಂತ್ರಿಭಾಗ್ಯ ಸಿಕ್ಕಿಲ್ಲ.


ದೇಶಪಾಂಡೆ ಕನಸು ಭಗ್ನ!


ರಾಜ್ಯದ ಹಿರಿಯ ಶಾಸಕರುಗಳಲ್ಲಿ ಒಬ್ಬರಾದ ಆರ್‌ವಿ ದೇಶಪಾಂಡೆ ಈ ಬಾರಿಯೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಇದೇ ತಮ್ಮ ಕೊನೆ ಚುನಾವಣೆ ಎಂದಿದ್ದ ದೇಶಪಾಂಡೆ, ಮಂತ್ರಿ ಆಗಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ದೇಶಪಾಂಡೆ ಹಿರಿತನಕ್ಕೆ ಹೈಕಮಾಂಡ್ ಸ್ಪೀಕರ್ ಹುದ್ದೆ ನೀಡಲು ಬಯಸಿತ್ತು. ಆದ್ರೆ ಮಂತ್ರಿಯೇ ಆಗಬೇಕೆಂದು ಹಠ ಹಿಡಿದು ಸ್ಪೀಕರ್ ಹುದ್ದೆಯನ್ನೂ ನಿರಾಕರಿಸಿದ್ರು. ಆದರೆ ಕೊನೆ ಘಳಿಗೆಯಲ್ಲಿ ಬ್ರಾಹ್ಮಣ ಕೋಟಾದಲ್ಲಿ ರೇಸ್ ನಲ್ಲಿ ಇದ್ದ ದೇಶಪಾಂಡೆಯನ್ನು ಹಿಂದಿಕ್ಕಿ, ದಿನೇಶ್ ಗುಂಡೂರಾವ್ ಸಚಿವ ಸ್ಥಾನ ಪಡೆದಿದ್ದಾರೆ.


ಇದನ್ನೂ ಓದಿ: Karnataka Cabinet Expanstion: 24 ಶಾಸಕರಿಗೆ ಒಲಿದು ಬಂದ 'ಮಂತ್ರಿ ಭಾಗ್ಯ'! 'ಕೈ' ಲಿಸ್ಟ್‌ನಲ್ಲಿ ಯಾರ ಯಾರ ಹೆಸರಿದೆ?


ಸ್ಪೀಕರೂ ಹೋಯ್ತು... ಮಂತ್ರಿಗಿರಿನೂ ಹೋಯ್ತು...!


ಹೀಗಂತ ಆಪ್ತರ ಜೊತೆ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಚರ್ಚೆ ನಡೆಸುತ್ತಿದ್ದಾರಂತೆ. ಹೀಗೆ ಅಂತ ಅಂದಿದ್ದರೆ ಅವತ್ತು ನಾನು ಸ್ಪೀಕರ್ ಹುದ್ದೆಯನ್ನಾದರೂ ಪಡೆಯುತ್ತಿದ್ದೆ. ನಾನು ಅವತ್ತು ಸಿರಾಗೆ ಹೋಗಬಾರದಿತ್ತು ಕೈ ಕೈ ಹಿಸಿಕಿಕೊಂಡು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರಂತೆ. ಟಿಬಿಜೆ ತಮ್ಮ ಹಿರಿತನ, ಕುಂಚಿಟಿಗ ಕೋಟಾದಡಿ ಮಂತ್ರಿ ಸ್ಥಾನ ಪಡೆಯುವ ಭರವಸೆಯಲ್ಲಿದ್ದರು. ಆದರೆ ತುಮಕೂರು ಭಾಗದಲ್ಲಿ ಅಂತಿಮವಾಗಿ ತನ್ನ ಆಪ್ತ ಕೆ.ಎನ್.ರಾಜಣ್ಣಗೆ  ಸಿದ್ದರಾಮಯ್ಯ ಮಂತ್ರಿ ಸ್ಥಾನ ಕೊಡಿಸಿದ್ದಾರೆ.


ಶಿವಲಿಂಗೇಗೌಡ ಅಸಮಾಧಾನ


ಇನ್ನು ಮಂತ್ರಿಸ್ಥಾನದ ನಿರೀಕ್ಷೆಯಲ್ಲಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ನಿರಾಸೆ ವ್ಯಕ್ತಪಡಿಸಿದ್ದಾರೆ. ಸಚಿವರ ಲಿಸ್ಟ್ ರಿಲೀಸ್ ಆಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಮನೆಗೆ ಬಂದ ಶಿವಲಿಂಗೇಗೌಡ, ಚರ್ಚೆ ನಡೆಸಿದ್ದಾರೆ. ಬಳಿಕ ಸಿಎಂ ಮನೆಯಿಂದ ಬೇಸರದಿಂದಲೇ ಹೊರಬಂದಿದ್ದಾರೆ.  ಹೊರಗಡೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಬೇಸರ ಇದೆ, ಏನ್ ಮಾತಾಡ್ಲಿ ನಾನು ಅಂತ ಸಿಎಂ ಸಿದ್ದು ಮನೆ ಮುಂದೆ ಅಸಮಧಾನ ಹೊರ ಹಾಕಿದ್ದಾರೆ.




ಯಾರಿಗೆ ಸಿಕ್ತು ಮಂತ್ರಿಭಾಗ್ಯ?


ಸಿಎಂ ಸಿದ್ದರಾಮಯ್ಯ ಬಣದಿಂದ 14 ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದ್ದು, ಭೈರತಿ ಸುರೇಶ್ (ಸಣ್ಣ ಕೈಗಾರಿಕೆ/ ಪೌರಾಡಳಿತ), ಕೆ.ವೆಂಕಟೇಶ್ (ಅರಣ್ಯ), ಕೃಷ್ಣ ಬೈರೇಗೌಡ (ಕೃಷಿ), ಡಾ.ಎಚ್.ಸಿ ಮಹದೇವಪ್ಪ (ಆರೋಗ್ಯ), ಶಿವರಾಜ ತಂಗಡಗಿ (ಯುವ ಸಬಲೀಕರಣ), ನಾಗೇಂದ್ರ (ಎಸ್​​ಟಿ ವಾಲ್ಮೀಕಿ),  ಕೆ.ಎನ್. ರಾಜಣ್ಣ (ಸಹಕಾರ), ಮಂಕಾಳ ವೈದ್ಯ (ಮೀನುಗಾರಿಕೆ), ಎಂ.ಬಿ ಪಾಟೀಲ್, ಜಮೀರ್ ಅಹ್ಮದ್ ಖಾನ್ (ವಕ್ಫ್), ಕೆ.ಜೆ ಜಾರ್ಜ್ (ಮೊದಲ ಲಿಸ್ಟ್), ಸತೀಶ್ ಜಾರಕಿಹೊಳಿ (ಮೊದಲ ಲಿಸ್ಟ್).


ಇದನ್ನೂ ಓದಿ: UT Khader: ಮಂತ್ರಿ ಬದಲು ಸ್ಪೀಕರ್ ಆಗಿದ್ದೇಕೆ ಖಾದರ್? ಸಚಿವಗಿರಿ ತಪ್ಪಿಸಿದ 'ಕೈ'ಗೆ ಕರಾವಳಿಯಲ್ಲಿ ಹಿನ್ನಡೆಯಾಗುತ್ತಾ?


ಡಿಸಿಎಂ ಡಿ.ಕೆ. ಶಿವಕುಮಾರ್ ಬಣದಿಂದ ಯಾರ್ಯಾರು?


ಲಕ್ಷ್ಮಿ ಹೆಬ್ಬಾಳ್ಕರ್ (ಮಹಿಳೆ), ಶಿವಾನಂದ ಪಾಟೀಲ್ (ಕನ್ನಡ ಸಂಸ್ಕೃತಿ), ಚಲುವರಾಯಸ್ವಾಮಿ (ಆಹಾರ), ಡಾ.ಎಂ.ಸಿ ಸುಧಾಕರ್, ಪಿ.ನರೇಂದ್ರಸ್ವಾಮಿ, ಎಚ್.ಕೆ. ಪಾಟೀಲ್ (ಗ್ರಾಮೀಣಾಭಿವೃದ್ಧಿ), ಮಧು ಬಂಗಾರಪ್ಪ, ಡಿ.ಸುಧಾಕರ್, ಭೋಸರಾಜು ಅವರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ.

top videos
    First published: