School Reopening- ಶಾಲೆ ಓಪನ್ ಮಾಡಿಸಿ ಎಂದು ಪೀಡಿಸುತ್ತಿದ್ದ ಬಹುತೇಕ ಖಾಸಗಿ ಶಾಲೆಗಳೇ ಬಂದ್

ಶಾಲೆಗಳನ್ನ ತೆರೆಯಲು ಅನುಮತಿಕೊಡಬೇಕು ಎಂದು ಖಾಸಗಿ ಶಾಲಾ ಒಕ್ಕೂಟಗಳು ನಿರಂತರವಾಗಿ ಒತ್ತಾಯ ಮಾಡುತ್ತಾ ಬಂದಿದ್ದವು. ಈ ಅನುಮತಿ ಸಿಕ್ಕರೂ ಬಹುತೇಕ ಖಾಸಗಿ ಶಾಲೆಗಳು ಬಾಗಿಲು ತೆರೆಯುವ ಗೋಜಿಗೆ ಹೋಗಿಲ್ಲ.

ಬೆಂಗಳೂರಿನ ಒಂದು ಶಾಲೆ

ಬೆಂಗಳೂರಿನ ಒಂದು ಶಾಲೆ

  • Share this:
ಬೆಂಗಳೂರು: ಹದಿನೆಂಟು ತಿಂಗಳ ಬಳಿಕ ರಾಜ್ಯ ಸರ್ಕಾರ ಅತ್ಯಂತ ಉತ್ಸಾಹದಿಂದ ಶಾಲಾ ಕಾಲೇಜು ತೆರೆದಿದೆ. ಆದರೆ ಆಶ್ಚರ್ಯ ಎಂದರೆ, ಶಾಲೆ ಆರಂಭಿಸಬೇಕೆಂದು ಒತ್ತಾಯ ಮಾಡುತ್ತಾ ಬಂದಿದ್ದ ಅನೇಕ ಖಾಸಗಿ ಶಾಲೆಗಳು ರಾಜ್ಯದಲ್ಲಿ ಬಾಗಿಲು ತೆರೆದಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ಶೇ. 70ರಷ್ಟು ಖಾಸಗಿ ಶಾಲೆಗಳು ತೆರೆಯಲೇ ಇಲ್ಲ. ಮೊದಲ ದಿನ ಸರ್ಕಾರಿ ಶಾಲಾ ಕಾಲೇಜಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಾದಿಯಾಗಿ ಎಲ್ಲರೂ ಭೇಟಿ ನೀಡಿ ಮಕ್ಕಳ ಮಾತಾಡಿಸಿ ಶಾಲೆಗೆ ಬರುವಂತೆ ಪ್ರೋತ್ಸಾಹದ ಮಾತಾಡಿದರು. ಆದರೆ ಸರ್ಕಾರಿ ಶಾಲೆಯಲ್ಲಿ ಸೆಂಟ್ ಪರ್ಸೆಂಟ್ ಇಲ್ಲದೇ ಹೋದ್ರೂ ಶೇ. 50ರಷ್ಟಾದ್ರೂ ಮಕ್ಕಳ ಹಾಜರಾತಿ ಇತ್ತು. ಆದರೆ ಶಾಲೆಗಳಲ್ಲಿ ಹಾಜರಾಗಲು ವಿದ್ಯಾರ್ಥಿಗಳ ನಿರಾಸಕ್ತಿ ಕಾಣುತ್ತಿದೆ. ಸರ್ಕಾರಕ್ಕಿರುವ ಉತ್ಸಾಹ ಪೋಷಕರಿಗೆ ಇಲ್ಲದಂತಾಗಿದೆ. ಸರ್ಕಾರಕ್ಕೆ ಒತ್ತಾಯ ಮಾಡಿದ ಖಾಸಗಿ ಸಂಸ್ಥೆಗಳೇ ಶಾಲೆ ತೆರೆದಿಲ್ಲ.‌ ಬೆಂಗಳೂರಿನ ಪ್ರತಿಷ್ಠಿತ ಸೇರಿದಂತೆ ಹಲವು ಖಾಸಗಿ ಶಾಲೆಗಳು ತೆರೆದಿಲ್ಲ. ಸರ್ಕಾರ ಶಾಲೆ ತೆರೆಯಲು ಅನುಮತಿ ನೀಡಿದ್ರೂ ಓಪನ್ ಮಾಡಿಲ್ಲ. ಮೊದಲ ದಿನ ತೆರೆಯದೇ ಸುಮ್ಮನಾದ ಖಾಸಗಿ ಶಾಲಾ ಸಂಸ್ಥೆಗಳು ಬೆಂಗಳೂರಿನಲ್ಲಿ ಶೇ.60-70ರಷ್ಟು ಖಾಸಗಿ ಶಾಲೆಗಳು ಮೊದಲೆರಡು ದಿನ ಬಂದ್ ಆಗಿವೆ.

ರಾಜ್ಯದಾದ್ಯಂತ ಶೇ. 45ರಷ್ಟು ಖಾಸಗಿ ಶಾಲೆಗಳು ತೆರೆದೇ ಇಲ್ಲ. ಇದಕ್ಕೆ ಪ್ರಮುಖ ಕಾರಣ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ನಿರಾಸಕ್ತಿ. ಬೆಂಗಳೂರಿನ ಅಪಾರ್ಟ್‌ಮೆಂಟ್, ಹೈ ಫೈ ವರ್ಗದ ಬಹುತೇಕರು ಅನುಮತಿ ಪತ್ರ ನೀಡಲು ನಿರಾಕರಿಸಿದ್ದಾರೆ. ಮಧ್ಯಮವರ್ಗದ ಪೋಷಕರು ಸಹ ಕಾದು ನೋಡುವ ತಂತ್ರ ಮೊರೆ ಹೋಗಿದ್ದಾರೆ. ಕಳೆದೊಂದು ವಾರದಿಂದ ಎಷ್ಟೇ ಮನವೊಲಿಸಿದ್ರೂ ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಲು ಒಪ್ಪಲಿಲ್ಲ. ಪೋಷಕರು ಅನುಮತಿ ಪತ್ರ ನೀಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರ ಇಲ್ಲವೇ ಬರುವ ಸೆಪ್ಟೆಂಬರ್ ನಲ್ಲಿ ಶಾಲೆಗಳನ್ನ ತೆರೆಯಲು ಖಾಸಗಿ ಶಾಲೆಗಳವರು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ಬುದ್ಧಿಭ್ರಮಣೆ ಆಗಿರುವ ಬಿಜೆಪಿ ನಾಯಕರಿಗೆ ಮೆಂಟಲ್ ಕೌನ್ಸಿಲಿಂಗ್ ಮಾಡಿಸಿ: ಶ್ರೀನಿವಾಸ್ ಬಿವಿ ಮನವಿ

ಪೋಷಕರನ್ನು ಹೇಗಾದ್ರೂ ಮಾಡಿ ಒಪ್ಪಿಸಿ ಮಕ್ಕಳನ್ನು ಶಾಲೆಗೆ ಕರೆತರಲು ಹರಸಾಹಸ ಪಡುತ್ತಿದ್ದಾರೆ. ಪೋಷಕರು ಮಕ್ಕಳನ್ನ ಕಳುಹಿಸಲು ಇನ್ನೂ ತಯಾರಿಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದಿನ ತಿಂಗಳು ಪೂರ್ಣ ಪ್ರಮಾಣದಲ್ಲಿ ಖಾಸಗಿ ಶಾಲೆ ತೆರೆಯಲು ಚಿಂತನೆ ನಡೆದಿದೆ ಎಂದು ರುಪ್ಸಾ ಖಾಸಗಿ ಶಾಲಾ ಒಕ್ಕೂಟ ಸ್ಪಷ್ಟನೆ ತಿಳಿಸಿದೆ.

ಇನ್ನು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಹಾಜರಾತಿಯಲ್ಲೂ ಭಾರೀ ಇಳಿಮಖವಾಗಿರುವುದು ತಿಳಿದುಬಂದಿದೆ. ಮೊದಲ‌ ದಿನ ಶೇ.25ರಷ್ಟು ಸಹ ಹಾಜರಾತಿ ಇಲ್ಲ. ಇನ್ನು 9ನೇ ತರಗತಿ ಶೇ.19.56, 10ನೇ ತರಗತಿ ಶೇ. 21.08ರಷ್ಟು ಇದ್ರೆ, ಹತ್ತನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಕೇವಲ ಶೇ.21.08ರಷ್ಟು ಇದೆ. ಒಟ್ಟಿನಲ್ಲಿ ಸರ್ಕಾರ ಶಾಲಾ ಕಾಲೇಜು ತೆರೆಯಲು ಆದೇಶಿಸಿದ್ರೂ ಎಲ್ಲ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಇನ್ನೊಂದಷ್ಟು ದಿನ ಕಾಯಬೇಕಾಗ ಬಹುದು.

ಇದನ್ನೂ ಓದಿ: Mysore Mayor- ಕಾಂಗ್ರೆಸ್​ಗೆ ಶಾಕ್; ಬಿಜೆಪಿಯ ಸುನಂದಾ ಪಾಲನೇತ್ರಾ ಮೈಸೂರ್ ಮೇಯರ್

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಶರಣು ಹಂಪಿ
Published by:Vijayasarthy SN
First published: