Ambedkar Jayanti: ಅನೇಕರು ಅಂಬೇಡ್ಕರ್ ಹೆಸರೇಳಿ ಮೇಲೆ ಬಂದಿದ್ದಾರೆ; ಉತ್ತಮ ಸ್ಥಾನ ಪಡೆದು ಸಮಾಜವನ್ನೇ ಮರೆತಿದ್ದಾರೆ- CM ಬೊಮ್ಮಾಯಿ

ನಮ್ಮ ಸಂವಿಧಾನ ಇರೋದ್ರಿಂದಲ್ಲೇ ನಮ್ಮ‌ದೇಶ ಶಕ್ತಿಶಾಲಿಯಾಗಿ ಉಳಿದಿದೆ. ಮಾನವೀಯ ಮೌಲ್ಯಗಳು ಸಂವಿಧಾನದಲ್ಲಿ ತುಂಬಿದೆ. ಅಂಬೇಡ್ಕರ್ ಅವಮಾನಗಳು, ಅಪಮಾನವನ್ನ ಎದುರಿಸಿದ್ದಾರೆ. ಅದನ್ನ ಬದಲಾವಣೆ ರೂಪದಲ್ಲಿ ತರಲು ಸಂವಿಧಾನ ಮಾಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
    ಬೆಂಗಳೂರು (ಏ.14): ಇಂದು ಭಾರತ ಸಂವಿಧಾನ ಶಿಲ್ಪಿ ಅಂಬೇಡ್ಕರ್​ ಜಯಂತಿ (Ambedkar Jayanti), ಈ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಅಂಬೇಡ್ಕರ್​ ಪ್ರಶಸ್ತಿ ಪ್ರದಾನ (Awards awarded) ಕಾರ್ಯಕ್ರಮ ನಡೆಯಿತು. ಈ ವೇಳೆ ಸಭೆಯಲ್ಲಿ ಮಾತಾಡಿದ ಸಿಎಂ ಬಸವರಾಜ​ ಬೊಮ್ಮಾಯಿ (CM Basavaraj Bommai) ಅವರು,​ ಅಪಾರವಾದ ಜ್ಞಾನ ನಮ್ಮ ಸಂವಿಧಾನದಲ್ಲಿದೆ. ಸಮಾಜದಲ್ಲಿರೋ ಎಲ್ಲ ಸಮಸ್ಯೆಗೂ ಉತ್ತರ ಸಂವಿಧಾನದಲ್ಲಿದೆ. ಸೂರ್ಯ, ಚಂದ್ರ ಇರೋವರೆಗೂ ನಮ್ಮ ಸಂವಿಧಾನ (Constitution) ಹಾಗೂ ಅಂಬೇಡ್ಕರ್ ಹೆಸರೂ ಕೂಡ ಇರುತ್ತೆ ಎಂದು ಹೇಳಿದ್ರು. ಅನೇಕರು ಅಂಬೇಡ್ಕರ್​ ಹೆಸರಲ್ಲಿ ಉತ್ತಮ ಸ್ಥಾನ ಪಡೆದು ಮರೆತಿದ್ದಾರೆ ಬಹಳಷ್ಟು ಜನ ಅಂಬೇಡ್ಕರ್ ಹೆಸರಲ್ಲಿ ಮೇಲೆ ಮೇಲೆ ಹೋಗಿದ್ದಾರೆ. ಉತ್ತಮ ಸ್ಥಾನಗಳನ್ನು ಪಡೆದು ಸಮಾಜ ಮರೆತಿದ್ದಾರೆ ಇವರೆಲ್ಲಾ ಪಟ್ಟಭದ್ರ ಹಿತಾಸಕ್ತರು. ಈ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡ್ತಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಸಂವಿಧಾನದಿಂದಲೇ ನಮ್ಮ‌ದೇಶ ಶಕ್ತಿಶಾಲಿಯಾಗಿದೆ

    ನಮ್ಮ ಸಂವಿಧಾನ ಇರೋದ್ರಿಂದಲ್ಲೇ ನಮ್ಮ‌ದೇಶ ಶಕ್ತಿಶಾಲಿಯಾಗಿ ಉಳಿದಿದೆ. ಮಾನವೀಯ ಮೌಲ್ಯಗಳು ಸಂವಿಧಾನದಲ್ಲಿ ತುಂಬಿದೆ. ಅಂಬೇಡ್ಕರ್ ಅವಮಾನಗಳು, ಅಪಮಾನವನ್ನ ಎದುರಿಸಿದ್ದಾರೆ. ಅದನ್ನ ಬದಲಾವಣೆ ರೂಪದಲ್ಲಿ ತರಲು ಸಂವಿಧಾನ ಮಾಡಿದ್ದಾರೆ. ಇದು ಅಪರೂಪದ ಸಂವಿಧಾನ. ಸಾಮಾಜಿಕ, ಆರ್ಥಿಕದ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ. ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸಬೇಕು, ಆಗ ಮಾತ್ರ ದೇಶದ ಅಭಿವೃದ್ಧಿ ಆಗಲಿದೆ. ಸಾಮಾನ್ಯ ಜನರ ಆರ್ಥಿಕ ಚಟುವಟಿಕೆ ಭಾಗಿಯಾದ್ರೆ ಮಾತ್ರ, ದೇಶದ ಆರ್ಥಿಕ ಅಭಿವೃದ್ಧಿ ಆಗಲಿದೆ ಅಂತ ತಿಳಿಸಿದ್ರು. ಹಾಗಾಗಿ ಅವರು ದೊಡ್ಡ ಆರ್ಥಿಕ ವ್ಯವಸ್ಥೆ ತಜ್ಞರು ಕೂಡ ಸೆಂಟ್ರಲ್ ಬ್ಯಾಂಕ್, RBI ಸ್ಥಾಪನೆ ಆಗಲು ಅಂಬೇಡ್ಕರ್ ಕೊಡುಗೆ ಬಹಳ ಮುಖ್ಯ. ಅಂಬೇಡ್ಕರ್ ಗುಣ, ಧರ್ಮಗಳನ್ನು ಅಳವಡಿಸಿಕೊಂಡ್ರೆ ಉತ್ತಮ ಆಡಳಿತ ನೀಡಲು ಸಾಧ್ಯ.

    ಅಂಬೇಡ್ಕರ್​ ಹೆಸರಲ್ಲಿ ಉತ್ತಮ ಸ್ಥಾನ ಪಡೆದು ಮರೆತಿದ್ದಾರೆ

    ಅನೇಕರು ಅಂಬೇಡ್ಕರ್​ ಹೆಸರಲ್ಲಿ ಉತ್ತಮ ಸ್ಥಾನ ಪಡೆದು ಮರೆತಿದ್ದಾರೆ ಬಹಳಷ್ಟು ಜನ ಅಂಬೇಡ್ಕರ್ ಹೆಸರಲ್ಲಿ ಮೇಲೆ ಮೇಲೆ ಹೋಗಿದ್ದಾರೆ. ಉತ್ತಮ ಸ್ಥಾನಗಳನ್ನು ಪಡೆದು ಸಮಾಜ ಮರೆತಿದ್ದಾರೆ ಇವರೆಲ್ಲಾ ಪಟ್ಟಭದ್ರ ಹಿತಾಸಕ್ತರು. ಈ ಪಟ್ಟಭದ್ರ ಹಿತಾಸಕ್ತಿಗಳು ದೇಶ ಹಾಳು ಮಾಡ್ತಿವೆ ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ನನ್ನನ್ನು ನನ್ನ ಕೆಲಸದಿಂದ ಅಳೆಯಿರಿ, ಎಲ್ಲಾ ಎಸ್ಸಿ, ಎಸ್ಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಕೊಡ್ತಿದ್ದೇವೆ. 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡ್ತಿದ್ದೇವೆ. ಇದೂವರೆಗೆ ಈ ಕೆಲಸವನ್ನೂ ಯಾರೂ ಮಾಡಿರ್ಲಿಲ್ಲ ಎಂದು ತಿಳಿಸಿದ್ದಾರೆ.

    ಇದನ್ನು ಓದಿ: Santosh Patil ಆತ್ಮಹತ್ಯೆ ವಿಚಾರದಲ್ಲಿ ರಾಜಕೀಯ ಬಣ್ಣ; ಎಚ್​ಡಿಕೆ ಹೇಳಿಕೆ ಪುನರುಚ್ಚರಿಸಿದ ದೇವೇಗೌಡ 

    60 ಮನೆಗಳ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ

    ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯ ವಾರ್ಡ್ 45ರ ಪಟೇಲ್ ಭೈರಹನುಮಯ್ಯ ಕೊಳೆಗೇರಿಯ ಫಲಾನುಭವಿಗಳಿಗೆ ಬಹುಮಹಡಿಯಲ್ಲಿ ಕಟ್ಟಲಾಗಿರುವ 60 ಮನೆಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಚಾಲನೆ ನೀಡಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 131ನೇ ಜಯಂತ್ಯುತ್ಸವದ ಅಂಗವಾಗಿ ಬಿಬಿಎಂಪಿ ವತಿಯಿಂದ ಯಶವಂತಪುರದ ಸಂವಿಧಾನ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರೂ 5.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 60 ಮನೆಗಳಿರುವ ಬಹುಮಹಡಿ ಕಟ್ಟಡದ ಉದ್ಘಾಟನೆ ನೆರವೇರಿಸಿದರು.

    ಇದನ್ನೂ ಓದಿ: Santosh Patil Case: ಇನ್ನೆರಡು ದಿನದಲ್ಲಿ ರಾಜೀನಾಮೆ ನೀಡುವಂತೆ ಈಶ್ವರಪ್ಪಗೆ BJP ಹೈಕಮಾಂಡ್​ ಸೂಚನೆ ಸಾಧ್ಯತೆ

    ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕರೂ ಆದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ, ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನತೆ, ಬದುಕುವ ಅವಕಾಶಗಳು, ನಿಷ್ಪಕ್ಷಪಾತ ನ್ಯಾಯ ಸಿಗುವ ವ್ಯವಸ್ಥೆ ನಿರ್ಮಾಣವಾಗಬೇಕೆಂದು ಪ್ರತಿಪಾದಿಸಿದ ಅಗಾಧ ಜ್ಞಾನಿಯಾಗಿದ್ದರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಡೆದು ನಮ್ಮ ಸರ್ಕಾರವು ದುರ್ಬಲ ವರ್ಗದವರನ್ನು ಸಬಲೀಕರಿಸಲು ಒತ್ತು ಕೊಡುತ್ತಿದೆ ಎಂದರು.
    Published by:Pavana HS
    First published: