• Home
  • »
  • News
  • »
  • state
  • »
  • Earthquake: ಕೊಡಗು, ಸುಳ್ಯ ಭಾಗದಲ್ಲಿ ಭೂಕಂಪನದ ಅನುಭವ! ಭಾರೀ ಮಳೆಯಿಂದಾಗಿ ಹೈರಾಣಾದ ಜನ

Earthquake: ಕೊಡಗು, ಸುಳ್ಯ ಭಾಗದಲ್ಲಿ ಭೂಕಂಪನದ ಅನುಭವ! ಭಾರೀ ಮಳೆಯಿಂದಾಗಿ ಹೈರಾಣಾದ ಜನ

ಕೊಡಗಿನಲ್ಲಿ ಭಾರೀ ಮಳೆ

ಕೊಡಗಿನಲ್ಲಿ ಭಾರೀ ಮಳೆ

ಕೊಡಗಿನಲ್ಲಿ ಒಂದೆಡೆ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ವಿಪರೀತ ಮಳೆ ಅಬ್ಬರಕ್ಕೆ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ. ಇವು ಸಾಲದು ಎಂಬಂತೆ ಜಿಲ್ಲೆಯ ಹಲವೆಡೆ ಭೂಕಂಪನದ ಅನುಭವ ಆಗುತ್ತಿದೆ.

  • Share this:

ಕೊಡಗು: ಕಾವೇರಿಯ (Cauvery) ತವರೂರು ಕೊಡಗಿನ (Kodagu) ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಒಂದೆಡೆ ಭಾರೀ ಮಳೆಯಿಂದಾಗಿ (Heavy Rain) ಪ್ರವಾಹದ (Flood) ಪರಿಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ವಿಪರೀತ ಮಳೆ ಅಬ್ಬರಕ್ಕೆ ಅಲ್ಲಲ್ಲಿ ಭೂಕುಸಿತ (Land Slides) ಉಂಟಾಗುತ್ತಿದೆ. ಇವು ಸಾಲದು ಎಂಬಂತೆ ಜಿಲ್ಲೆಯ ಹಲವೆಡೆ ಭೂಕಂಪನದ (Earth quake) ಅನುಭವ ಆಗುತ್ತಿದೆ. ಇಂದೂ ಕೂಡ ಕೊಡಗು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವ ಜನರ ಗಮನಕ್ಕೆ ಬಂದಿದೆ. ಕೊಡಗಿನ ಗಡಿ ಗ್ರಾಮ‌ ಚೆಂಬು ಸುತ್ತ-ಮುತ್ತ ನಿನ್ನೆ ರಾತ್ರಿ ಭೂಮಿಯಿಂದ ಜೋರಾದ ಶಬ್ದ (Sound) ಕೇಳಿಬಂದಿತ್ತು. ಇದೀಗ ಇಂದು ಮುಂಜಾನೆ 6:24ರ ಸಮಯದಲ್ಲಿ ಭೂಮಿ ಕಂಪನದ ಅನುಭವವಾಗಿದೆ. ಮತ್ತೊಂದೆಡೆ ದಕ್ಷಿಣ ಕನ್ನಡ (Dakhsina Kannada) ಜಿಲ್ಲೆಯ ಸುಳ್ಯ (Sullya) ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಅಂತ ವರದಿಯಾಗಿದೆ.


ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ


ಮಳೆಗಾಲ ಆರಂಭವಾದಾಗಿನಿಂದ ಕೊಡಗು ಜಿಲ್ಲೆಯ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಇಂದು ಮುಂಜಾನೆ ಮತ್ತೆ ಭೂಮಿ ಕಂಪಿಸಿದ ಅನುಭವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ಭೂಮಿ ಒಳಗಿದಂದ ಜೋರಾದ ಶಬ್ದ ಕೇಳಿ ಬಂದಿತ್ತಂತೆ. ಅದರ ಬೆನ್ನಲ್ಲೇ ಇಂದು ಮುಂಜಾನೆ 6:24ರ ಸಮಯದಲ್ಲಿ ಭೂಮಿ ಕಂಪನದ ಅನುಭವವಾಗಿದೆ.


ಎಲ್ಲೆಲ್ಲಿ ಭೂ ಕಂಪನದ ಅನುಭವ?


ಕೊಡಗಿನ ಗಡಿ ಗ್ರಾಮ‌ ಚೆಂಬು ಸುತ್ತ ಮುತ್ತ ಮತ್ತೆ ಭೂ ಕಂಪನದ ಅನುಭವವಾಗಿದೆ. ನಿನ್ನೆ ರಾತ್ರಿ ಭೂಮಿಯಿಂದ ಜೋರಾದ ಶಬ್ದ ಕೇಳಿಬಂದಿತ್ತು. ಇಂದು ಮುಂಜಾನೆ ಮತ್ತೆ ಭಾರೀ ಶಬ್ದದೊಂದಿಗೆ ಭೂಕಂಪನದ ಅನುಭವ ಆಗಿದೆ. ಅತ್ತ ಗೂನಡ್ಕ, ಕೊಯಿನಾಡು ಗ್ರಾಮಗಳಲ್ಲೂ ಭೂಕಂಪನದ ಅನುಭವವಾಗಿದೆ. ಹೀಗಾಗಿ ಸರಣಿ ಭೂಕಂಪವಾಗಿದ್ದ ಗ್ರಾಮಗಳಲ್ಲಿ ಮತ್ತೆ ಆತಂಕ ಶುರುವಾಗಿದೆ. ಒಂದೆಡೆ ವ್ಯಾಪಕ ಮಳೆ ಸುರಿಯುತ್ತಿದೆ. ಇದರ ನಡುವೆ ಅಲ್ಲಲ್ಲಿ ಭೂಕಂಪಿಸುತ್ತಿದೆ. ಹೀಗಾಗಿ ಇಡೀ ಕೊಡಗಿನ ಜನರು ಭಯ, ಆತಂಕಕ್ಕೆ ಒಳಗಾಗಿದ್ದಾರೆ.


ಇದನ್ನೂ ಓದಿ: Earthquake: ವಿಜಯಪುರದಲ್ಲಿ 2 ಬಾರಿ ಕಂಪಿಸಿದ ಭೂಮಿ, ಭಾರೀ ಸದ್ದು ಕೇಳಿ ಜನರಲ್ಲಿ ಆತಂಕ!


ದಕ್ಷಿಣ ಕನ್ನಡ ಭಾಗದಲ್ಲೂ ಭೂಕಂಪನದ ಅನುಭವ


ಇತ್ತ ದಕ್ಷಿಣಕನ್ನಡ ಜಿಲ್ಲೆಯ ಕೆಲವೆಡೆ ಭೂ ಕಂಪನದ ಅನುಭವವಾಗಿದೆ ಎನ್ನಲಾಗಿದೆ. ಸುಳ್ಯ ತಾಲೂಕಿನ ಸುಳ್ಯ, ಸಂಪಾಜೆ, ಕಲ್ಲುಗುಂಡಿ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಭಾರೀ ಮಳೆಯ ಮಧ್ಯೆ ಭೂಕಂಪನದ ಅನುಭವವಾಗಿದ್ದು, ಗ್ರಾಮಸ್ಥರೆಲ್ಲ ಆತಂಕಕ್ಕೆ ಒಳಗಾಗಿದ್ದಾರೆ.


ಕೊಡಗಿನಲ್ಲಿ ನಿಲ್ಲದ ಮಳೆ ಅಬ್ಬರ


ಕೊಡಗು ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಎರಡು ದಿನಗಳಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ.


ಹಲವೆಡೆ ರಸ್ತೆ ಸಂಪರ್ಕ ಕಡಿತ


ಇನ್ನು ನಿರಂತರ ಮಳೆಯಿಂದಾಗಿ ಭಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ರಸ್ತೆ ಮೇಲೆ ನಾಲ್ಕಡಿ ಎತ್ತರದ ವೀರು ಹರಿಯುತ್ತಿದೆ. ಅತ್ತ ಭಾಗಮಂಡಲ ಮಡಿಕೇರಿ ರಸ್ತೆ ಮೇಲೆಯೂ ನೀರು ಹರಿಯುತ್ತಿದೆ. ಮಳೆ ತೀವ್ರಗೊಂಡಲ್ಲಿ ಭಾಗಮಂಡಲ ಮಡಿಕೇರಿ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಇನ್ನು ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕಾವೇರಿ ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.


ಇದನ್ನೂ ಓದಿ: Earthquake: ಇತ್ತ ಪ್ರವಾಹದ ಭೀತಿ, ಅತ್ತ ಭೂಕಂಪನ ಅನುಭವ! ವಿಜಯಪುರ, ಬಾಗಲಕೋಟೆಯಲ್ಲಿ ಆತಂಕ


ಮನೆಗಳಿಗೆ ನುಗ್ಗಿದ ನೀರು


ಮಡಿಕೇರಿ ತಾಲ್ಲೂಕಿನ ಸಂಪಾಜೆ ಬಳಿಯ ಕೊಯಿನಾಡಿನಲ್ಲಿ ಕಿಂಡಿ ಅಣೆಕಟ್ಟಿನಿಂದ ಮನೆಗಳಿಗೆ ನೀರು ನುಗ್ಗಿ, ನಾಲ್ಕು ಮನೆಗಳು ಜಲಾವೃತವಾಗಿದೆ. ಕೊಯಿನಾಡು ಬಳಿ ಕಿಂಡಿ ಅಣೆಕಟ್ಟಿಗೆ ಅಡ್ಡಲಾಗಿ ಮರದ ದಿಮ್ಮಿಗಳು ನಿಂತಿರುವ ಹಿನ್ನೆಲೆಯಲ್ಲಿ ಅಣೆಕಟ್ಟಿನ ನೀರು ಮನೆಗಳಿಗೆ ನುಗ್ಗಿದೆ. ಮತ್ತೊಂದೆಡೆ ಹೆದ್ದಾರಿ ಸಮೀಪದಲ್ಲೇ ಹರಿಯುತ್ತಿರುವ ಪ್ರವಾಹದ ನೀರಿನಿಂದಾಗಿ ಮಡಿಕೇರಿ - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮುಳುಗಡೆ ಭೀತಿ ಎದುರಾಗಿದೆ.

Published by:Annappa Achari
First published: