Houses Damaged: ಮಳೆಯಿಂದ ಕುಸಿದ ಮನೆಗಳು, ಸರ್ಕಾರದ ಸಹಾಯಹಸ್ತದ ನಿರೀಕ್ಷೆಯಲ್ಲಿ ಜನ

ಬೀದರ್‌ ಜಿಲ್ಲೆಯಲ್ಲಿ ವರ್ಷದ ಮುಂಗಾರಿನ ನಿರಂತರ ಮಳೆಗೆ 1665ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ವರ್ಷದ ಮುಂಗಾರು ಮಳೆಯಿಂದಾಗಿ ನೂರಾರು ಮನೆಗಳು ಭಾಗಶಃ ಧರೆಗುರುಳಿವೆ. ಗಡಿನಾಡಿನಲ್ಲಿ ಸೂರು ಕಳೆದುಕೊಂಡು ಅಸ್ತವ್ಯಸ್ತವಾಗಿ ಜನ್ರು ತತ್ತರಿಸಿದ್ದು, ನಿರಂತರ ಮಳೆಯಿಂದ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರು ಪರದಾಡುತ್ತಿದ್ದಾರೆ.

ಮನೆ ಕಳೆದುಕೊಂಡು ವೃದ್ಧೆ ಪರದಾಟ

ಮನೆ ಕಳೆದುಕೊಂಡು ವೃದ್ಧೆ ಪರದಾಟ

 • Share this:
  ಬೀದರ್: ಎಡೆಬಿಡದೆ ಸುರಿದ ಮುಂಗಾರು ಮಳೆಯಿಂದಾಗಿ (Monsoon Rain) ಗಡಿ ಜಿಲ್ಲೆ ಬೀದರ್ ನಲ್ಲಿ (Bidar) ಅಪಾರ ಪ್ರಮಾಣದ ಹಾನಿ (Loss) ಸಂಭವಿಸಿದೆ. ನಿರಂತರ ಸುರಿದ ಮಳೆಯಿಂದಾಗಿ (Rain) ಹಲವು ಮನೆಗಳು ಜಖಂ (House Collapse) ಆಗಿವೆ. ಬೀದರ್‌ ಜಿಲ್ಲೆಯಲ್ಲಿ ವರ್ಷದ ಮುಂಗಾರಿನ ನಿರಂತರ ಮಳೆಗೆ 1665ಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. ವರ್ಷದ ಮುಂಗಾರು ಮಳೆಯಿಂದಾಗಿ ನೂರಾರು ಮನೆಗಳು ಭಾಗಶಃ ಧರೆಗುರುಳಿವೆ. ಗಡಿನಾಡಿನಲ್ಲಿ ಸೂರು ಕಳೆದುಕೊಂಡು ಅಸ್ತವ್ಯಸ್ತವಾಗಿ ಜನ್ರು ತತ್ತರಿಸಿದ್ದು, ನಿರಂತರ ಮಳೆಯಿಂದ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರು ಪರದಾಡುತ್ತಿದ್ದಾರೆ.

  ಮನೆ ಕಳೆದುಕೊಂಡು ಪರದಾಡುತ್ತಿರುವ ಜನರು

  ಹೌದು… ಕಲ್ಯಾಣ ಕರ್ನಾಟಕ ಬಾಗದಲ್ಲಿ ನಿರಂತವಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. 2022-23ನೇ ಸಾಲಿನ ಹಾಗೂ ಪ್ರಸಕ್ತ ವರ್ಷದಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿವೆ. ಆದರೆ, ಜನರ ಸಮಸ್ಯೆಗೆ ಧ್ವನಿ ಆಗಬೇಕಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಸಂತ್ರಸ್ತರನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ.  ಹೀಗಾಗಿ ಸರ್ಕಾರದ ಪರಿಹಾರ ಸಿಗದೇ ಜನ್ರು ಅವರಿವರ ಮನೆಗಳಲ್ಲಿ ಉಳಿದುಕೊಂಡು ಜೀವನ ಸಾಗಿಸುತ್ತಿದ್ದಾರೆ.

  ಮಳೆಗೆ ಹಾಳಾದ ಮನೆ


  ಒಟ್ಟು 1665ಕ್ಕೂ ಹೆಚ್ಚು ಮನೆಗಳಿಗೆ ಹಾನಿ

  ಬೀದರ್‌ ಜಿಲ್ಲೆಯ ಔರಾದ್ ತಾಲೂಕಿನಲ್ಲಿ484, ಬಸವ ಕಲ್ಯಾಣದಲ್ಲಿ 474, ಬಾಲ್ಕಿಯಲ್ಲಿ155, ಬೀದರ್‌ ನಲ್ಲಿ276, ಚಿಟಗುಪ್ಪಾ 55, ಹುಲಸೂರ 33, ಹುಮನಾಬಾದ 65, ಕಮಲನಗರ 122 ಮನೆಗಳು ಸೇರಿದಂತೆ ಒಟ್ಟು 1665 ಕ್ಕೂ ಹೆಚ್ಚು ಮನೆಗಳು  ಮುಂಗಾರು ಮಳೆ ಹೊಡೆತಕ್ಕೆ ಹಾಳಾಗಿವೆ. ಮನೆ ಬಿದ್ದು ಹೋಗಿದೆ, ಜೀವನ ಮಾಡಲು ಮನೆ ಇಲ್ಲ, ಅಧಿಕಾರಿಗಳು ಬಂದ್ರು ಹೋದ್ರು, ಆದ್ರೆ ಇಲ್ಲಿಯವರೆಗೆ ಪರಿಹಾರ ಬಂದಿಲ್ಲ. ಮುಂದಿನ ಬದುಕು ತಿಳಿಯುತ್ತಿಲ್ಲ ಅಂತ ಮನೆ ಕಳೆದುಕೊಂಡ ಸಂತ್ರಸ್ತೆ ಗೊಳಿಡುತ್ತಿದ್ದಾಳೆ.

  ಇದನ್ನೂ ಓದಿ: PSI Death: ಪಂಚಮಿ ಹಬ್ಬಕ್ಕೆ ಬರುತ್ತೀನಿ ಎಂದಿದ್ದ ಅಣ್ಣ ಬರಲೇ ಇಲ್ಲ! ಪಿಎಸ್ಐ ಅವಿನಾಶ್ ಮನೆಯಲ್ಲಿ ಆಕ್ರಂದನ

  ಸರ್ಕಾರದಿಂದ ಸಿಗದ ಸಹಾಯ

  ಇನ್ನು ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡಿದ್ದೇವೆ. ಸರ್ಕಾರದಿಂದ ಈವರೆಗೂ ಒಂದಿಷ್ಟು ಪರಿಹಾರ ಬಂದಿಲ್ಲ ಎಂದು ನೆರೆ ಸಂತ್ರಸ್ತರು ಆರೋಪಿಸಿದ್ದಾರೆ. ಅಲ್ಲದೆ, ಇನ್ನಾದರೂ ರಾಜ್ಯ ಸರ್ಕಾರ ನಮಗೆ ಪರಿಹಾರ ಕೊಡುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಅವರಿವರ ಮನೆಯಲ್ಲಿ ಒಂದು ಹೊತ್ತಿನ ಊಟ ಇಸಿದುಕೊಂಡು ಊಟ ಮಾಡುವಂತಹ ಪರಿಸ್ಥಿತಿ ನಂದು ನಿರಂತರ ಮಳೆಗೆ ಮನೆ ಬಿದ್ದು ಹೋಗಿದೆ ಬದುಕಿಗೆ ಮನೆ ಇಲ್ಲ ಎಲ್ಲಿಗೆ ಹೋಗಬೇಕು ತಿಳಿಯುತಿಲ್ಲ ಎನ್ನುವುದು ಸಂತ್ರಸ್ಥೆಯ ಗೋಳಾಟ.

  many houses have been damaged due to heavy rains in bidar
  ಭಾರೀ ಮಳೆಗೆ ಮನೆಗಳು ಜಖಂ


  ಪರಿಹಾರ ನೀಡಲಾಗಿದೆ ಅಂತಿದ್ದಾರೆ ಜಿಲ್ಲಾಧಿಕಾರಿ

  ಇನ್ನು ಈ ಬಗ್ಗೆ ಬೀದರ್‌ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಕೇಳಿದ್ರೆ ಈಗಾಗಲೇ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಿಗೆ ಪರಿಹಾರವನ್ನು ಸಂಪೂರ್ಣವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ…

  ಇದನ್ನೂ ಓದಿ: Miracle: ಅನಂತಶಯನನ ಪಾದದಡಿ ಉದ್ಭವಿಸುತ್ತಾಳೆ ಗಂಗೆ! ಲಕ್ಷ್ಮೀವೆಂಕಟೇಶ್ವರನ ಪವಾಡಕ್ಕೆ ಕೈಮುಗಿದ ಭಕ್ತರು

  ಸಹಾಯ ಹಸ್ತ ಚಾಚುವಂತೆ ಸರ್ಕಾರಕ್ಕೆ ಮನವಿ

  ಮುಂಗಾರು ಮಳೆಯಿಂದ ತುತ್ತಾಗಿ ಸಾಲದ ಸುಳಿಗೆ ಸಿಲುಕುವ ರೈತರು, ಸಂತ್ರಸ್ತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಪರಿಣಾಮ, ಇಡೀ ಕುಟುಂಬವೇ ಬೀದಿಪಾಲಾಗುತ್ತಿದೆ. ಹೀಗಾಗಿ, ಮುಂಗಾರು ಮಳೆಯಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಬೇಕು. ಮತ್ತು ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ಕೆಲವರಿಗೆ  ಕಾನೂನಾತ್ಮಕವಾಗಿ ಅವಕಾಶ ಇಲ್ಲದಿದ್ದರೂ ಮಾನವೀಯ ದೃಷ್ಟಿಯಿಂದ ಸಂತ್ರಸ್ತರ ಜೀವ, ಜೀವನ ಉಳಿಸುವ ಹೊಣೆಯನ್ನು ಸರ್ಕಾರ ಹೊರಬೇಕು ಎಂದು ಗಡಿನಾಡಿನ ಜನ್ರ ಕೂಗು ಬಲವಾಗಿ ಕೇಳಿ ಬರುತ್ತಿದೆ.

  (ವರದಿ: ಚಮನ್‌ ಹೊಸಮನಿ, ನ್ಯೂಸ್‌ 18 ಕನ್ನಡ, ಬೀದರ್)
  Published by:Annappa Achari
  First published: