ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಹಿನ್ನೆಲೆ ರಾಯರ ಸನ್ನಿಧಾನಕ್ಕೆ ತೆರಳಿದ ದೇವೇಗೌಡರು

news18
Updated:August 28, 2018, 12:48 PM IST
ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಹಿನ್ನೆಲೆ ರಾಯರ ಸನ್ನಿಧಾನಕ್ಕೆ ತೆರಳಿದ ದೇವೇಗೌಡರು
news18
Updated: August 28, 2018, 12:48 PM IST
ನ್ಯೂಸ್​ 18 ಕನ್ನಡ

ಬಳ್ಳಾರಿ (ಆ. 28): ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿ 347ನೇ ಆರಾಧನೆ ನಡೆಯುತ್ತಿದ್ದು, ಈ ಮಹೋತ್ಸವಕ್ಕೆ ಭಕ್ತ ಸಾಗರ ಹರಿದು ಬಂದಿದೆ.

ಸೋಮವಾರದಿಂದ ಆರಂಭವಾದ ಮೂರುದಿನಗಳ ಈ ಆರಾಧನೆಯ ಎರಡನೇ ದಿನವಾದ ಇಂದು ಮಧ್ಯಾರಾಧನೆ ನಡೆಯುತ್ತಿದೆ. ರಾಯರು ಜೀವಂತ ಸಮಾಧಿಯಾದ ದಿನವೇ ಮಧ್ಯಾರಾಧನೆಯಾಗಿದ್ದು, ರಾಯರ ವೃಂದಾವನಕ್ಕೆ ವಿಶೇಷ ಅಭಿಷೇಕ ಕಾರ್ಯಗಳು ನಡೆಯುತ್ತಿದೆ.

ರಾಯರಿಗೆ ತಿರುಪತಿ ತಿರುಮಲದಿಂದ ವಿಶೇಷವಾದ ಶೇಷವಸ್ತ್ರ ಸಮರ್ಪಣೆಯಾಗಿದ್ದು, ಸುಭುದೇಂದ್ರ ತೀರ್ಥರು ವಸ್ತ್ರವನ್ನು ಬರಮಾಡಿಕೊಂಡರು.  ವೃಂದಾವಕ್ಕೆ ಹಾಲು, ಹಣ್ಣು , ಶ್ರೀಗಂಧ ಸೇರಿದಂತೆ ದ್ರವ್ಯಗಳಿಂದ ಅಭಿಷೇಕ ಕಾರ್ಯ ನಡೆಯುತ್ತಿದೆ.

ಪೀಠಾಧಿಪತಿಗಳಾದ ‌ಶ್ರೀಸುಭುದೇಂದ್ರ ತೀರ್ಥ ಸ್ವಾಮಿಗಳಿಂದ  ರಾಯರ ವೃಂದಾವನಕ್ಕೆ ವಿಶೇಷ ಪೂಜೆ ನಡೆಸಲಿದ್ದಾರೆ.  ಮಧ್ಯಾರಾಧನೆ ವೇಳೆಗೆ ದೇಶದ ವಿವಿಧ ಗಣ್ಯರು, ಚಿತ್ರನಟರು ಆಗಮಿಸಿದ್ದಾರೆ.

 

ಮಧ್ಯಾರಾಧನೆ ಕಾರ್ಯಕ್ರಮ ವೀಕ್ಷಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರು ಕೂಡ ಹೆಲಿಕ್ಯಾಪ್ಟರ್​ ಮೂಲಕ ಮಂತ್ರಾಲಯಕ್ಕೆ ತೆರಳಲಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ