Marriage: ಮಾವಿನ‌ಮರದ ನೆರಳಲ್ಲಿ ಮದುವೆ; ಕುವೆಂಪು ಮಂತ್ರ ಮಾಂಗಲ್ಯ‌ ಸಕಾರ ಗೊಳಿಸಿದ ವಧು ವರರು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಗಡಿ ಬೈಲಿನಲ್ಲಿ ನಡೆದ ಮದುವೆ ಎಲ್ಲರ ಗಮನಸೆಳೆದಿದೆ

ಮಾವಿನ‌ಮರದ ನೆರಳಲ್ಲಿ ಮದುವೆ

ಮಾವಿನ‌ಮರದ ನೆರಳಲ್ಲಿ ಮದುವೆ

  • Share this:
ಕಾರವಾರ (ಡಿ. 24): ಅಲ್ಲಿ ಚಪ್ಪರವಿಲ್ಲ, ಮದುವೆಯಲ್ಲಿ ಕಾಣುವ ಆಧುನಿಕತೆಯ ಅದ್ದೂರಿತನವಿಲ್ಲ,  ವಾದ್ಯ ಇಲ್ಲ, ಆಧುನಿಕ ಅಲಂಕಾರ ಇಲ್ಲ,  ನಿಸರ್ಗದ ಚಪ್ಪರದೊಳು, ಮಾಮರದ ನೆರಳಿನಲ್ಲಿ ಸತಿಪತಿಗಳಾದ ಸಂಭ್ರಮ ಮಾತ್ರ ಕಂಡು ಬಂತು. ಹವಾ ನಿಯಂತ್ರಿತ ಕೊಠಡಿಯ ಹೊರತಾದ ಶುಭ್ರಗಾಳಿ, ಹಸಿರು ಪರಿಸರದಲ್ಲಿ ಎರಡು ಜೋಡಿ ಒಂದಾಯಿತು..ಇದು  ಕುವೆಂಪು ಅವರ ಮಂತ್ರ ಮಾಂಗಲ್ಯದ (Kuvempu Mantra Mangalya) ನಿಜಾರ್ಥದಲ್ಲಿ ಸಾಕಾರಗೊಂಡ ಸಂದರ್ಭ. ಅಂಕೋಲಾ ತಾಲೂಕಿನ ಅಂಗಡಿಬೈಲ್‌ನಲ್ಲಿ ನಡೆದ ಸರಳ ಮದುವೆಯ (Simple Marriage) ಚೆಂದದ ನೋಟಕ್ಕೆ ಸಾಕ್ಷಿ ಆದರು ಸಾವಿರಾರು ಜನರು.

ಯಾರ ಮದುವೆ ಎಲ್ಲಿ ನಡೆಯಿತು ಮದುವೆ? ಹೇಗಿತ್ತು ಮದುವೆ ಸಂಭ್ರಮ?

ಮಂತ್ರ ಮಾಂಗಲ್ಯ ಎನ್ನುವುದು ಕುವೆಂಪುರವರ ಕಲ್ಪನೆಯ ಸರಳ ವಿವಾಹ. ಕುವೆಂಪು ಮತ್ತು ಅವರ ಮಗ ಪೂರ್ಣಚಂದ್ರ ತೇಜಸ್ವಿ ಇಂತಹ ವಿವಾಹವಾಗಿದ್ದರು ಎನ್ನುವುದನ್ನು ಕೇಳಿದ್ದೇವೆ. ಈಗ ಮೈಸೂರು ಕರ್ನಾಟಕದಲ್ಲಿ ಇಂಥ ಸರಳ ಮದುವೆ ಜರುಗುತ್ತಿದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿಯೂ ಇಂತಹುದೇ ವಿವಾಹ ನಡೆದಿದ್ದು ವಿಶೇಷ. ಅಂಕೋಲಾ ತಾಲೂಕಿನ ಡಾ ಸವಿತಾ ನಾಯಕ ಮತ್ತು ಉದಯ ನಾಯಕರ ಮಗ ಆತ್ಮೀಯ ಹಾಗೂ ಮಾಧವಿ ಎಂಬ ವಧು ವರರ ವಿವಾಹ ಅಂಗಡಿಬೈಲ್ ಗ್ರಾಮದ ಮಾವಿನ ಮರದ ಕೆಳಗೆ ಅತ್ಯಂತ ವಿಶೇಷವಾಗಿ ನಡೆಯಿತು.

ಮಾಮರದಿಂದ ಸಿದ್ದಗೊಂಡಿದ್ದ ವೇದಿಕೆ

ಇಲ್ಲಿ ವಿಶೇಷತೆ ಎಂದರೆ ಈ ಸರಳ ವೇದಿಕೆಯನ್ನು ಮನೆಯವರೇ ಸಿದ್ಧಪಡಿಸಿದ್ದು. ಮಾಮರ ಟೊಂಗೆಗಳಿಗೂ ಶೃಂಗರಿಸಿಕೊಂಡ ಸಮಯ. ವಾದ್ಯಗಳ ಅಬ್ಬರವಿರಲಿಲ್ಲ, ಸುಖಾಸೀನ ಪೀಠಗಳಿರಲಿಲ್ಲ. ಪುರೋಹಿತರ ಮಂತ್ರಘೋಷಗಳಂತೂ ಕೇಳಲೇ ಇಲ್ಲ. ದೂರದಲ್ಲೆಲ್ಲೋ ಪಕ್ಷಿಗಳ ನಿನಾದವೇ ಮಂಗಳವಾದ್ಯವಾಗಿತ್ತು. ಮಾಮರದ ಬುಡದ ಬಳಿ ವಧುವರರು ವಿರಾಜಿಸಿದರೆ ಅಲ್ಲೇ ಮಂತ್ರ ಮಾಂಗಲ್ಯದ ವಿಧಿ ವಿಧಾನಗಳು ನಡೆದವು.

ಇದನ್ನು ಓದಿ: ಅಂತರ್ಜಾತಿ ಮದುವೆಯಾದ ನವಜೋಡಿಗೆ ಪ್ರಾಣಭೀತಿ; ಪೊಲೀಸ್ ರಕ್ಷಣೆಗೆ ಮೊರೆ

ಪರಿಸರದ ನಡುವೆ ನಡೆದ ಮದುವೆ
ಸರಳ ವಿವಾಹವಾಗುವುದೇ ವಧುವರರ ಉದ್ದೇಶವಾಗಿತ್ತು. ಅದರಂತೆ  ಕುಟುಂಬ ವರ್ಗದವರಿಂದಲೇ ಮದುವೆಯ ಸಿದ್ಧತೆಗಳು ನಡೆದಿದ್ದವು. ಇಪ್ಪಿ ಹೂವಿನ ಮಾಲೆಯನ್ನು ಬದಲಾಯಿಸಿಕೊಂಡ ವರ, ವಧು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಪರಿಸರದ ಮಧ್ಯೆ   ವಿವಾಹದ ನಿರ್ಜ ಅರ್ಥ ಮಾಡಿಕೊಳ್ಳುವುದರ ಮೂಲಕ ಮದುವೆಗೆ ವಿಶೇಷ ಕಳೆ ಬಂದಿತ್ತು.ವಧುವರರು ಹಿರಿಯರ ಮುಂದೆ ವಿವಾಹ ಸಂಹಿತೆ ಒಪ್ಪಿಕೊಂಡು  ಸತಿ ಪತಿಗಳಾದರು. ವಿವಾಹ ಸಂಹಿತೆಯನ್ನು ಕನ್ನಡದಲ್ಲಿ ಅಕ್ಷತಾ ಕೃಷ್ಣಮೂರ್ತಿ, ಇಂಗ್ಲಿಷ್ ನಲ್ಲಿ ಶರಣ್ಯಾ, ಮರಾಠಿಯಲ್ಲಿ ಅಕ್ಷತಾ ರಾವ್ ಓದಿದರು. ಪ್ರತಿಯೊಂದು ಸಿದ್ಧತೆಗಳು ಪುರಾತನ ಪದ್ಧತಿಯನ್ನು ಮೆಲಕು ಹಾಕುವಂತಿದ್ದವು. ಆತ್ಮೀಯ ಮತ್ತು ಮಾಧವಿಯ ಕುಟುಂಬ ವರ್ಗದವರು ಈ ವಿವಾಹದಲ್ಲಿ ಪಾಲ್ಗೊಂಡಿದ್ದರು.

ಇದನ್ನು ಓದಿ: ಹತ್ತು ದಿನಗಳ ಅಧಿವೇಶನಕ್ಕೆ ತೆರೆ; ಮಂಡನೆಯಾಗದ ಮತಾಂತರ ಮಸೂದೆ

ಜಾನಪದದ ಸೊಗಡು

ಜಾನಪದ ವಸ್ತುಗಳು, ಕಾಡಿನ ವಿವಿಧ ಹೂಗಳು, ಎಲೆಗಳಳಿಂದ ಸಿದ್ದವಾದ ಮಂಟಪ ಶೋಭಿಸಿತ್ತು..ಹುರಿಯಕ್ಕಿ ಲಾಡು, ಕಬ್ಬಿನಹಾಲು, ಗ್ರಾಮೀಣ ಪ್ರದೇಶದ ಅಡುಗೆಯೇ ಈ ಮದುವೆಯ ವಿಶೇಷವಾಗಿತ್ತು. ಕುವೆಂಪುರವರ ಮಂತ್ರ ಮಾಂಗಲ್ಯ ವರ ಆತ್ಮೀಯ ಮತ್ತು ವಧು ಮಾಧವಿ ಮದುವೆಯಲ್ಲಿ ನಿಜಾರ್ಥದಲ್ಲಿ ಸಾಕಾರಗೊಂಡ  ಹಾಗಾಗಿತ್ತು...ಅದ್ಧೂರಿ ಮದುವೆ ಸಂಭ್ರಮ ದೂರ ಸರಿಸಿ ಕುವೆಂಪುತವರ ಮಂತ್ರ ಮಾಂಗಲ್ಯ ಈ‌ಜೋಡಿ ಸಕಾರಗೊಳಸಿ ಅಂಕೋಲಾ ತಾಲೂಕಿನಲ್ಲಿ ಇತಿಹಾಸ ಸೃಷ್ಟಿಸಿ ಮಾದರಿ ಆದರು.

ಓದಿದ ಶಿಕ್ಷಕರು ಅದ್ಧೂರಿತನದ ಆಡಂಬರದ ಮದುವೆಯಾಗುವ ಈ ಕಾಲದಲ್ಲಿ ಈ ರೀತಿ ಸರಳ ಮದುವೆಯಾಗುವ ಮೂಲಕ ಜಿಲ್ಲೆ ಅಲ್ಲದೇ ಅನೇಕ ಯುವ ಜನರ ಗಮನ ಸೆಳೆದಿದೆ ಈ ಜೋಡಿ ಎಂದರೆ ತಪ್ಪಾಗಲಾರದು.
Published by:Seema R
First published: