ಮುಂಗಾರು ಮಳೆಯಲಿ; ವಿಶ್ವವಿಖ್ಯಾತ ಹಂಪಿ ಕ್ಯಾಮೆರಾ ಕಣ್ಣಿನಲಿ

news18
Updated:June 13, 2018, 12:20 PM IST
ಮುಂಗಾರು ಮಳೆಯಲಿ; ವಿಶ್ವವಿಖ್ಯಾತ ಹಂಪಿ ಕ್ಯಾಮೆರಾ ಕಣ್ಣಿನಲಿ
news18
Updated: June 13, 2018, 12:20 PM IST
-  ಶರಣು ಹಂಪಿ, ನ್ಯೂಸ್18 ಕನ್ನಡ

ಬಳ್ಳಾರಿ  ( ಜೂನ್ 13) :  ವಿಶ್ವಪ್ರಸಿದ್ಧ ಹಂಪಿ ಕಣ್ತುಂಬಿಕೊಳ್ಳಲು ಎಲ್ಲೆಲ್ಲಿಂದಲೂ ಬರುತ್ತಾರೆ. ಹೆಚ್ಚಾಗಿ ಸಾಗರದಾಚೆಯಿಂದ ಬಂದು ನಮ್ಮ ವಿಜಯನಗರ ಸಾಮ್ರಾಜ್ಯದ ತಾಣವನ್ನು ನೋಡಿ ಕಣ್ಣರಳಿಸಿ, ಬೆರಗುಗೊಂಡು ಅಚ್ಚರಿಯೊಂದಿಗೆ ತಮ್ಮೂರಿಗೆ ತೆರಳುತ್ತಾರೆ.

ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಹಂಪಿ ಪ್ರವಾಸಕ್ಕೆ ಬರುವವರಿಗೆ ವಿಶ್ವಪರಂಪರಾ ಪಟ್ಟಿಯಲ್ಲಿರುವ ತಾಣಗಳನ್ನು ನೋಡಬೇಕೆಂದೆನಿಸುತ್ತೆ. ಕಷ್ಟಪಟ್ಟು ಬಿರುಬೇಸಿಗೆಯಲ್ಲಿಯೂ  ಕಡಲ-ಸಾಸಿವೆ ಕಾಳು ಗಣೇಶ, ರಾಮಲಕ್ಷ್ಮಣ ದೇವಸ್ಥಾನ, ಜೈನ ಬಸದಿ, ವಿಜಯವಿಠ್ಠಲ ದೇವಸ್ಥಾನದಲ್ಲಿರುವ ಹಂಪಿ ಐಕಾನ್ ಕಲ್ಲಿನರಥ, ಹಜಾರರಾಮ ದೇವಸ್ಥಾನ, ಕಮಲ ಮಹಲ್, ಆನೆ-ಒಂಟೆ ಸಾಲು, ರಾಣಿ ಸ್ನಾಹ ಗೃಹ, ಮಹಾನವಮ ದಿಬ್ಬ ನೋಡುವಷ್ಟರೊಳಗೆ ಸಾಕು ಸಾಕಾಗಿಹೋಗುತ್ತದೆ. ಇನ್ನಷ್ಟು ನೋಡಬೇಕು ಎಂದುಕೊಂಡರೂ ಕೆಂಡದಂಥ ಬಿಸಿಲು ದೇಹವನ್ನು ಮೆತ್ತಗೆ ಮಾಡಿಬಿಡುತ್ತೆ.

ಚಿತ್ರ - ರಾಚಯ್ಯ ಹಂಪಿ


ಬೆಳಗ್ಗೆ ಮಾಲ್ಯವಂತ ದೇವಸ್ಥಾನ ಹಾಗೂ ಮಾತಂಗ ಪ್ರದೇಶದಲ್ಲಿ ಸೂರ್ಯೋದಯ, ಸಂಜೆ ಸ್ಮಾರಕಗಳ ಸಮೂಹ ಹೇಮಕೂಟದಲ್ಲಿ ಸೂರ್ಯಾಸ್ತ, ನೋಡಿ ತುಸು ಮನಸು ತಂಪು ಮಾಡಿಕೊಂಡು ಒಂದೆರಡು ದಿನದಲ್ಲಿ ಹೊರಟೇ ಬಿಡ್ತಾರೆ. ಸಾಧ್ಯವಾದರೆ ಬೆಳಗ್ಗೆ ಅಂಜನಾದ್ರಿ ಬೆಟ್ಟವನ್ನೋ, ಮಾಲ್ಯವಂತ ದೇವಸ್ಥಾನವನ್ನು ನೋಡಿದರೆ ಇಡೀ ಹಂಪಿಯನ್ನು ನೋಡಿದಂತೆಯೇ ಎಂದುಕೊಂಡು ಬಿಡುತ್ತಾರೆ.

ಚಿತ್ರ - ರಾಚಯ್ಯ ಹಂಪಿ


ಆದರೆ ವಿಶ್ವಪ್ರಸಿದ್ಧ ಹಂಪಿಯನ್ನು ಮಳೆಗಾಲದಲ್ಲಿ ನೋಡಿದ್ದೀರಾ? ತುಂತುರು ಜಿನಿಜಿನಿ ಮಳೆಯಲಿ, ಬಿರುಗಾಳಿಯಂಥ ಗಾಳಿ ಮಧ್ಯೆ ಆಕಾಶದಲ್ಲಿ ಬಾನಂಗಗಳದಲ್ಲಿ ಕಡುನೀಲಿ ಆಕಾಶ ಜೆಟ್ ಸ್ಪೀಡಿನಲ್ಲಿ ಹೋಗುತ್ತಿದ್ದರೆ ಕೆಳಗಡೆ ಕೆಂಡದಂತೆ ಕಾದ ಸ್ಮಾರಕಗಳು ತಂಪಾಗಿ ನಮ್ಮ ಕಣ್ಮನ ಸೆಳೆಯುತ್ತವೆ. ಅದರಲ್ಲೂ ಹಂಪಿಯ ವಿಜಯವಿಠ್ಠಲ ದೇವಸ್ಥಾನ ಹಾಗೂ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದ ಸಾಲು ಮಂಟಪ, ಬಲ ಮೇಲ್ಭಾಗದಲ್ಲಿ ಜೈನಬಸದಿ ಸ್ಥಳದಲ್ಲಿ ಮಳೆಯಾಗುತ್ತಿರುವ ವೇಳೆ ಸಿಗುವ ಅನುಭವವೇ ಬೇರೆ.
Loading...

ಚಿತ್ರ - ರಾಚಯ್ಯ ಹಂಪಿ


ಮುಂಗಾರು ಮಳೆಯಲ್ಲಿ ಹಂಪಿ

ಜಿನಿ ಜಿನಿ ಮಳೆಯಲ್ಲಿ ವಿಶ್ವಪ್ರಸಿದ್ಧ ಸ್ಮಾರಕಗಳು ನೋಡುವ ನೋಟವೇ ಬೇರೆಯಾಗಿರುತ್ತದೆ. ಸದಾ ನಿಗಿನಿಗಿ ಕೆಂಡದಂಥ ವಾತಾವರಣದ ಬದಲು ತಂಪನೆಯ ಹವಾಮಾನದಲ್ಲಿ ಸ್ಮಾರಕಗಳು ತುಂಬ ಕೂಲಾಗಿ ಕಾಣಿಸುತ್ತವೆ. ಕೆಲ ಸ್ಮಾರಕಗಳು ಬಾನಂಗಳಕ್ಕೆ ತೆರೆದುಕೊಂಡಿವೆ.

ಚಿತ್ರ - ರಾಚಯ್ಯ ಹಂಪಿ


 

ಹಂಪಿಯ ಉಗ್ರ ನರಸಿಂಹ ಮಳೆ ನೀರಿಗೆ ತೊಯ್ದು ತೊಪ್ಪೆಯಾಗುವುದನ್ನು ನೋಡೋವುದೇ ಚೆಂದ. ಇನ್ನು ವಿಜಯವಿಠ್ಠಲ ದೇವಸ್ಥಾನದ ಕಲ್ಲಿನ ರಥವನ್ನು ತುಸು ದೂರದಲ್ಲಿ ಮಳೆಯಲ್ಲಿ ನೆನೆಯುವುದು ನೋಡುವುದು, ಮೋಡಗಳ ಚಲನೆ, ಅದರ ಹಿನ್ನೆಲೆ ಬದಲಾಗೋ ವಾತಾವರಣ ಕಡುಕಪ್ಪು, ಕಡು ನೀಲಿ, ಬಿಸಿಲಿನ ಮಧ್ಯೆ ಮಳೆ ನೀರಿನ ಹನಿ ಇವೆಲ್ಲವುಗಳ ಮಿಶ್ರಣದ ಮಧ್ಯೆ ಹಂಪಿಯ ಸ್ಮಾರಕ ನೋಡುಬಾರಾ ಎಂಬಂತೆ ಸ್ವಾಗತ ಕೋರಿದಂತಿರುತ್ತದೆ.

ಚಿತ್ರ - ರಾಚಯ್ಯ ಹಂಪಿ


ಹುಷಾರ್...!

ಮುಂಗಾರು ಮಳೆಯಲ್ಲಿ ಹಂಪಿ ನೋಡೋದೇನೋ ಚೆನ್ನ. ಆದರೆ ಈ ಅನುಭೂತಿ ಪಡೆಯುವವರು ಕೆಲ ಪೂರ್ವತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಛತ್ರಿ, ಹೆಚ್ಚಿನ ಸಾಮಾನು ಸರಂಜಾಮು ತರದೇ ನೋಡಲು ಬರಬೇಕು. ಬೆಳಗ್ಗೆಯಿಂದ ಸಂಜೆಯವರೆಗೆ ನಿರ್ಬಂಧಿತ ಪ್ರದೇಶಗಳಿಗೆ ಭೇಟಿ ನೀಡದೇ ಅನುಕೂಲವಿರುವ ಸ್ಥಳಗಳಲ್ಲಿ ವೀಕ್ಷಣೆ ಮಾಡಿ ರಾತ್ರಿ ವೇಳೆಯಲ್ಲಿ ಅಪ್ಪಿತಪ್ಪಿ ಗುಡ್ಡದಲ್ಲಿ ವಾಸ ಮಾಡಬಾರದು. ಫೋಟೋ ಟ್ರೈಪಾಡ್ ತರಲೇಬೇಡಿ. ವಾಣಿಜ್ಯ ಬಳಕೆಗೆ ಫೋಟೋ ತೆಗೆಯುವುದಾದರೆ ಭಾರತೀಯ ಪುರಾತತ್ವ ಇಲಾಖೆಯಿಂದ ಪರವಾನಿಗೆ ಪಡೆಯಲೇಬೇಕು.

ಚಿತ್ರ - ರಾಚಯ್ಯ ಹಂಪಿ


ಫೋಟೋಗ್ರಾಫರ್ ದಂಡು...!

ಮುಂಗಾರು ಮಳೆಯಲ್ಲಿ ಹಂಪಿ ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲು ಸ್ಥಳೀಯ ಹವ್ಯಾಸಿ ಛಾಯಾಗ್ರಾಹಕರು ಮಾತ್ರವಲ್ಲ ದೂರದೂರದಿಂದಲೂ ಇಲ್ಲಿಗೆ ಫೋಟೋಗ್ರಫಿ ಮಾಡಲು ಬರುತ್ತಾರೆ. ಇತ್ತೀಚೆಗೆ ಛಾಯಾಗ್ರಾಹಕ ರಾಚಯ್ಯ ಹಂಪಿ ತೆಗೆದ ಮುಂಗಾರು ಮಳೆಯ ಹಂಪಿ ಸ್ಮಾರಕ ಫೋಟೋ ಗಳು ಸಾಕಷ್ಟು ವೈರಲ್ ಆಗಿದ್ದು, ಮೆಚ್ಚುಗೆಗಳಿಸಿವೆ. ಶಿವಶಂಕರ್ ಬಣಗಾರ್, ವಿಕ್ರಾಂತ್ ನೆಕ್ಕಂಟಿ, ಮಾರುತಿ ಪೂಜಾರ್, ಕುಶಾಲ್ ಜಿಂಗಾಡಿ, ಬಾವಿಕಟ್ಟೆ ರಾಘವೇಂದ್ರ ಸೇರಿದಂತೆ ಹಲವು ಸ್ಥಳೀಯ ಹವ್ಯಾಸಿ ಛಾಯಾಗ್ರಾಹಕರ ಪಡೆಯೇ ಇದೆ. ಹಂಪಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವಿಶ್ವಪ್ರಸಿದ್ಧಿಯಾದವರೂ ಇದ್ದಾರೆ.

ಚಿತ್ರ - ರಾಚಯ್ಯ ಹಂಪಿ


ವಿದೇಶಿಗರು ಕೇವಲ ಸಂಜೆ, ಬೆಳಗ್ಗೆ ಹೊತ್ತಿನಲ್ಲಿ ಸ್ಮಾರಕಗಳ ಫೊಟೋಗ್ರಫಿ ಮಾತ್ರವಲ್ಲದೇ ಮಳೆಯಲ್ಲಿ ಹಂಪಿ ಸ್ಮಾರಕಗಳ ಜೊತೆಯಲ್ಲಿ ಫೋಟೋಗಾಗಿಯೇ ದೇಶವಿದೇಶಗಳಿಂದಲೂ ಇಲ್ಲಿಗೆ ಬರುತ್ತಿದ್ದಾರೆ. ಆದರೆ ಲಕ್ಷಾಂತರ ಮೌಲ್ಯದ ಕ್ಯಾಮರಾ, ಜೂಮ್ ಲೆನ್ಸ್ ಗಳನ್ನು ಮಳೆ ನೀರು ತಾಗಿಸದೇ ಸುರಕ್ಷಿತ ಸ್ಥಳದಲ್ಲಿದ್ದು ಮಳೆಯಲ್ಲಿ ಹಂಪಿ ಜೊತೆಯಲ್ಲಿ ಸ್ಮಾರಕಗಳ ಫೋಟೋ ತೆಗೆಯುವುದು ಕಷ್ಟದ ಕೆಲಸವೇ ಸರಿ. ಆದರೂ ಅವರಿಗೆ ಹಂಪಿ ಫೋಟೋಗ್ರಫಿ ಮನಸಿಗೆ ಮುದ  ಕೊಡುತ್ತೆ

 
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ