ಜೆಡಿಎಸ್​ಗೆ ಒಲಿದ ಮನ್ಮುಲ್ ಅಧ್ಯಕ್ಷ​ ಪಟ್ಟ; ಬಿಜೆಪಿಗೆ ಭಾರೀ ಮುಖಭಂಗ

ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಾಮಚಂದ್ರು, ಉಪಾಧ್ಯಕ್ಷರಾಗಿ ಜೆಡಿಎಸ್​ನ  ರಘುನಂದನ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿಗೆ ತೀವ್ರ ಹಿನ್ನೆಡೆ ಸಾಧಿಸಿದೆ

Seema.R | news18-kannada
Updated:October 3, 2019, 12:24 PM IST
ಜೆಡಿಎಸ್​ಗೆ ಒಲಿದ  ಮನ್ಮುಲ್ ಅಧ್ಯಕ್ಷ​ ಪಟ್ಟ; ಬಿಜೆಪಿಗೆ ಭಾರೀ ಮುಖಭಂಗ
ಜೆಡಿಎಸ್​ ಪಕ್ಷದ ಚಿಹ್ನೆ
  • Share this:
ಮಂಡ್ಯ (ಅ.03): ಮಂಡ್ಯ ಹಾಲು  ಉತ್ಪಾದನಾ ಒಕ್ಕೂಟದ ಅಧಿಕಾರ ಚುಕ್ಕಾಣಿ ಜೆಡಿಎಸ್​ಗೆ ಒಲಿದಿದ್ದು, ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ. 

ಸೆ. 23ರಂದು ನಡೆದಿದ್ದ ಮನ್ಮಲು ಅಧ್ಯಕ್ಷಗಾದಿಗಾಗಿ ನಡೆದಿದ್ದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ತಲಾ 8 ಮತಗಳನ್ನು ಜೆಡಿಎಸ್​-ಬಿಜೆಪಿ ಸಂಪಾದಿಸುವ ಮೂಲಕ ಸಮಬಲ ಹೋರಾಟ ನಡೆಸಿತು. ಸಮಬಲದ ಮತ ಬಂದ ಹಿನ್ನೆಲೆ ಲಾಟರಿ ಮೂಲಕ ಅಧ್ಯಕ್ಷನ ಆಯ್ಕೆಗ ಮಾಡಲಾಗಿದ್ದು, ಜೆಡಿಎಸ್​ಗೆ ಈ ಸ್ಥಾನ ಒಲಿದಿದೆ.

ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಾಮಚಂದ್ರು, ಉಪಾಧ್ಯಕ್ಷರಾಗಿ ಜೆಡಿಎಸ್​ನ  ರಘುನಂದನ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿಗೆ ತೀವ್ರ ಹಿನ್ನೆಡೆ ಸಾಧಿಸಿದೆ

ಚುನಾವಣೆಯಲ್ಲಿ 16 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ  12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 8, ಕಾಂಗ್ರೆಸ್ ಬೆಂಬಲಿತ 3 ಹಾಗೂ ಬಿಜೆಪಿ ಬೆಂಬಲಿತ ಒಬ್ಬರು ಆಯ್ಕೆಯಾಗಿದ್ದರು. ಆದರೆ, ಒಬ್ಬ ಸದಸ್ಯನ ಅನರ್ಹತೆ ಹಾಗೂ ಎಸ್ ಪಿ ಸ್ವಾಮಿ ಬಿಜೆಪಿ ಸೇರ್ಪಡೆಯಿಂದ ಜೆಡಿಎಸ್ ಬಳಿ ಕೇವಲ 6 ಮತಗಳಿದ್ದವು. ಈ ಹಿನ್ನೆಲೆ ಬಿಜೆಪಿ ತಮಗೆ ಅಧಿಕಾರ ಸಿಗಲಿದೆ ಎಂಬ ಉಮೇದಿನಲ್ಲಿತ್ತು.

ಬಿಜೆಪಿ ಚುನಾವಣಾ ಲೆಕ್ಕಾಚಾರದ ಪ್ರಕಾರ ಜೆಡಿಎಸ್​ 7 ಮತ ಪಡೆಯುವ ನಿರೀಕ್ಷೆ ಇತ್ತು. ಇನ್ನು ಬಿಜೆಪಿ ಎಸ್​ಪಿ ಸ್ವಾಮಿ ಸೇರೊಇ 9 ನಿರ್ದೇಶಕರಿರುವುದರಿಂ ಅಧಿಕಾರ ಗಾದಿ ಬಿಜೆಪಿಗೆ ಒಲಿಯುವ ಸಾಧ್ಯತೆ ಇತ್ತು. ಆದರೆ ಕೊನೆಕ್ಷಣದಲ್ಲಿ ಎರಡು ಪಕ್ಷಗಳು ಸಮ ಬಲ ಸಾಧಿಸಿದ್ದು ಬಿಜೆಪಿಗೆ ಅಚ್ಚರಿ ಮೂಡಿಸಿತು.

ಇದನ್ನು ಓದಿ: ಶೀಘ್ರದಲ್ಲಿಯೇ ಕೇಂದ್ರದಿಂದ ಪರಿಹಾರ ಹಣ ಬಿಡುಗಡೆ, ಕಾಂಗ್ರೆಸ್​-ಜೆಡಿಎಸ್​ ಮೊದಲು ಟೀಕೆ ಮಾಡುವುದನ್ನು ನಿಲ್ಲಿಸಲಿ; ಬಿಎಸ್​ ವೈ

ಮದ್ದೂರಿನ ಗೆಜ್ಜಲಗೆರೆ ಮನ್ಮುಲ್ ಅಧ್ಯಕ್ಷಗಾದಿಗೆ ಸೆ.23ರಂದು ಚುನಾವಣೆ ನಡೆದಿದ್ದು, ಅಂದೇ ಫಲಿತಾಂಶ ಕೂಡ ಹೊರ ಬೀಳಬೇಕಿತ್ತು. ಆದರೆ, ತಾಂತ್ರಿಕ ದೋಷದ ಹಿನ್ನೆಲೆ ಮತ ಏಣಿಕೆ ಕಾರ್ಯಕ್ಕೆ ಹೈ ಕೋರ್ಟ್​ ತಡೆಯಾಜ್ಞೆ ನೀಡಿತು.
First published: October 3, 2019, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading