• Home
  • »
  • News
  • »
  • state
  • »
  • ನಿಕಟಪೂರ್ವ ಕಮಿಷನರ್ ಅನುಪಸ್ಥಿತಿಯಲ್ಲಿ ಬಿಬಿಎಂಪಿ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಅಧಿಕಾರ ಸ್ವೀಕಾರ

ನಿಕಟಪೂರ್ವ ಕಮಿಷನರ್ ಅನುಪಸ್ಥಿತಿಯಲ್ಲಿ ಬಿಬಿಎಂಪಿ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಅಧಿಕಾರ ಸ್ವೀಕಾರ

ಬಿಬಿಎಂಪಿ ನೂತನ ಆಯುಕ್ತ ಮಂಜುನಾಥ್ ಪ್ರಸಾದ್

ಬಿಬಿಎಂಪಿ ನೂತನ ಆಯುಕ್ತ ಮಂಜುನಾಥ್ ಪ್ರಸಾದ್

ಸಹಜ ಸಾವಿನ‌ ಸಂದರ್ಭದಲ್ಲಿ ಇನ್ಮೇಲೆ ಕೋವಿಡ್ ಟೆಸ್ಟ್ ಮಾಡುವ ಅವಶ್ಯಕತೆ ಇಲ್ಲ. ಈ‌ ಬಗ್ಗೆ ಇಂದು ಹೊಸ ನಿಯಮಗಳ ಪಟ್ಟಿ ಬಿಡುಗಡೆಯಾಗುತ್ತದೆ. ಬಿಬಿಎಂಪಿ ಪ್ರತಿ ಖರೀದಿ, ವೆಚ್ಚ ಎಲ್ಲ ಮಾಹಿತಿ ಇನ್ನು ಮುಂದೆ ಬಿಬಿಎಂಪಿ ವೆಬ್ ಸೈಟಿನಲ್ಲಿ ಲಭ್ಯವಾಗಲಿದೆ ಎಂದು ಹೇಳಿದರು.

  • Share this:

    ಬೆಂಗಳೂರು; ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಶನಿವಾರ ಅಧಿಕಾರ ಸ್ವೀಕಾರ ಮಾಡಿದರು. ಹಿಂದಿನ ಆಯುಕ್ತರಾಗಿದ್ದ ಅನಿಲ್ ಕುಮಾರ್ ಅವರು ಕಚೇರಿ ಬಂದು ಅಧಿಕಾರ ಹಸ್ತಾಂತರ ಮಾಡದ ಕಾರಣ ಖುದ್ದು ತಾವೇ ಬಂದು ಮಂಜುನಾಥ್ ಪ್ರಸಾದ್ ಚಾರ್ಜ್ ತೆಗೆದುಕೊಂಡರು.


    ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಮುಂದಿನ ಸವಾಲುಗಳು ಹಾಗೂ ಕೈಗೊಳ್ಳಲಿರುವ ಕ್ರಮಗಳ ಪಟ್ಟಿಯನ್ನು ಮಂಜುನಾಥ್ ಪ್ರಸಾದ್ ವಿವರಿಸಿದರು.


    • ಸಾವಿನ ಪ್ರಮಾಣ ಕಡಿಮೆ ಮಾಡುವುದು

    • ಟೆಸ್ಟ್ ರಿಪೋರ್ಟ್ ಬೇಗ ಸಿಗುವಂತೆ ಮಾಡುವುದು

    • ಕೋ ಮಾರ್ಬಿಡ್ ಕಂಡೀಶನ್ ಇರುವವರಿಗೆ ತಪ್ಪದೇ ಪರೀಕ್ಷೆ ಮಾಡುವುದು

    • ಏಸಿಂಪ್ಟಮ್ಯಾಟಿಕ್ ಇರುವವರಿಗೆ ಬಲವಂತವಾಗಿ ಆಸ್ಪತ್ರೆಗೆ ಕರೆತರುವುದನ್ನು ತಡೆಯುವುದು

    • ಸರ್ವೇಲೆನ್ಸ್ ಮತ್ತು ಕಾಂಟ್ಯಾಕ್ಟ್ ಟ್ರೇಸಿಂಗ್ ವೇಗ ಹೆಚ್ಚಿಸುವುದು

    • ಪ್ರತಿ ಜೋನ್​ನಲ್ಲಿ ಒಂದೊಂದು ಕೋವಿಡ್ ಕೇರ್ ಸೆಂಟರ್ ತೆರೆಯಲು ಪ್ರೋತ್ಸಾಹ


    ಇಂತಹ ಸಮಯದಲ್ಲಿ  ಬೆಂಗಳೂರಿನ ಜನರು, ಜನಪ್ರತಿನಿಧಿಗಳು, ಸಿಬ್ಬಂದಿ, ನಾಗರಿಕರ ಸಹಕಾರ ಅಗತ್ಯ ಎಂದು ಮನವಿ ಮಾಡಿದ ಮಂಜುನಾಥ್ ಪ್ರಸಾದ್, ನಾಳೆಯಿಂದಲೇ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಲಾಗುವುದು ಎಂದು ತಿಳಿಸಿದರು.


    ಡೀಸೆಂಟ್ರಲೈಸ್ಡ್ ಸೆಂಟರ್ ಇದ್ದರೆ ಜನರನ್ನು ನೋಡಿಕೊಳ್ಳುವುದು ಸುಲಭವಾಗಲಿದೆ. 35 ಸಾವಿರ ಸರ್ಕಾರಿ ಸಿಬ್ಬಂದಿಯನ್ನು ಗುರುತಿಸಲಾಗಿದೆ. ಇವರಲ್ಲಿ ಶೇ. 25 ಜನ ಕೋವಿಡ್ ಭಯದಿಂದ ಕೆಲಸಕ್ಕೆ ಹಾಜರಾಗಿಲ್ಲ. ಚುನಾವಣೆ ಸಮಯದಲ್ಲಿ ಮಾಡಿದಂತೆ ಪೊಲೀಸ್ ಸ್ಟೇಷನ್, ಬೂತ್ ಲೆಕ್ಕದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಒಂದು ವಾರ್ಡ್ ಗೆ 40 ಬೂತ್ ಅಂದರೆ ಅದೇ ಲೆಕ್ಕದಲ್ಲಿ ಕೆಲಸ ಮಾಡಬಹುದು. ಅವತ್ತಿನ ಸೋಂಕಿತರನ್ನು ಅವತ್ತೇ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇದರಿಂದ ಸೋಂಕು ಹರಡುವುದನ್ನು ತಡೆಯಬಹುದು, ಬ್ಯಾಕ್ ಲಾಗ್ ತಡೆಯಬಹುದು ಎಂದರು.


    ಇದನ್ನು ಓದಿ: BBMP Commissioner: ಬಿಬಿಎಂಪಿ ಕಮಿಷನರ್​ ಅನಿಲ್​ ಕುಮಾರ್​ ವರ್ಗಾವಣೆ; ಮಂಜುನಾಥ್ ಪ್ರಸಾದ್ ನೂತನ ಆಯುಕ್ತ


    700 ಹೊಸ ಆ್ಯಂಬುಲೆನ್ಸ್ ಪಡೆಯಲಾಗಿದೆ. ವಾರ್ಡ್​ಗೆ 2 ಆ್ಯಂಬುಲೆನ್ಸ್ ಸೇವೆ ನೀಡಲು ಅವಕಾಶವಿದೆ. ಹೆಚ್ಚು ಸ್ವಯಂಸೇವಕರನ್ನು ಬಳಸಲು ಬಿಬಿಎಂಪಿ ನಿರ್ಧಾರ ಮಾಡಿದೆ.  ಇದರಿಂದ ಈಗ ಇರುವ ಸಿಬ್ಬಂದಿ ಕೊರತೆ ತುರ್ತಾಗಿ ನಿವಾರಣೆಯಾಗುತ್ತದೆ. ಈಗಾಗಲೇ 20 ಸಾವಿರ ಆಂಟಿಜನ್ ಟೆಸ್ಟ್ ಬೆಂಗಳೂರಿನಲ್ಲಿ ಎಲ್ಲೆಡೆ ಕಳಿಸಲಾಗಿದೆ. ಸಹಜ ಸಾವಿನ‌ ಸಂದರ್ಭದಲ್ಲಿ ಇನ್ಮೇಲೆ ಕೋವಿಡ್ ಟೆಸ್ಟ್ ಮಾಡುವ ಅವಶ್ಯಕತೆ ಇಲ್ಲ. ಈ‌ ಬಗ್ಗೆ ಇಂದು ಹೊಸ ನಿಯಮಗಳ ಪಟ್ಟಿ ಬಿಡುಗಡೆಯಾಗುತ್ತದೆ. ಬಿಬಿಎಂಪಿ ಪ್ರತಿ ಖರೀದಿ, ವೆಚ್ಚ ಎಲ್ಲ ಮಾಹಿತಿ ಇನ್ನು ಮುಂದೆ ಬಿಬಿಎಂಪಿ ವೆಬ್ ಸೈಟಿನಲ್ಲಿ ಲಭ್ಯವಾಗಲಿದೆ ಎಂದು ಹೇಳಿದರು.

    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು