ಬೆಳಗಾವಿ: ರಾಜ್ಯದಲ್ಲಿ ಈಗ ಗಡಿ ವಿವಾದ ಕಿಚ್ಚು ಹೊತ್ತಿಕೊಂಡಿದೆ. ಈ ವಿವಾದದ ನಡುವೆ ಇಲ್ಲೊಬ್ಬ ಕನ್ನಡದ ಕುವರ ಕನ್ನಡದ ಕಂಪು ಪಸರಿಸುವ ಕಾರ್ಯ ಮಾಡುತ್ತಿದ್ದಾನೆ. ನಾಡು, ನುಡಿ, ಜಲದ ರಕ್ಷಣೆಗಾಗಿ ಆಂಧ್ರದ ಗಡಿ ಭಾಗದಿಂದ ಮಹಾರಾಷ್ಟ್ರ ಗಡಿ ಭಾಗದವರೆಗೂ ಪಾದಯಾತ್ರೆ ಮೂಲಕ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಹೀಗೆ ಹಳದಿ ಕೆಂಪು ಬಣ್ಣದ ಕನ್ನಡ ಧ್ವಜ ಬಟ್ಟೆ ತೊಟ್ಟ ಯುವಕನ ಹೆಸರು ಮಂಜುನಾಥ ಭದ್ರಶೆಟ್ಟಿ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಮೊಗಳಿ ಗ್ರಾಮದವನು. ಪದವೀಧರ ಆಗಿರುವ ಮಂಜುನಾಥ ,ಚಿಕ್ಕಬಳ್ಳಾಪುರ ಕೆಎಂಎಫ್ ಡೈರಿಯಲ್ಲಿ ಕೆಲಸ ಮಾಡುತ್ತಾನೆ. ನಾಡು, ನುಡಿ, ಜಲ ಅಂದರೆ ಈತನಿಗೆ ಪಂಚ ಪ್ರಾಣ. ಹೀಗಾಗಿ ಅಖಂಡ ಕರ್ನಾಟಕದ ರಕ್ಷಣೆ ಆಗಬೇಕು. ಕನ್ನಡ ಭಾಷೆ ಬೆಳೆಯಬೇಕೆಂದು ಆಂಧ್ರಪ್ರದೇಶದ ಕಾಂಚನಪಲ್ಲಿ ಗಡಿಯಿಂದ ಮಹಾರಾಷ್ಟ್ರದ ಗಡಿ ಪ್ರದೇಶದ ವರೆಗೂ ಅಂದರೆ ನಿಪ್ಪಾಣಿ ವರೆಗೂ ಪಾದಯಾತ್ರೆ ಆರಂಭಿಸಿದ್ದಾನೆ. ಈಗ ಮಂಜುನಾಥನ ಪಾದಯಾತ್ರೆ ಕುಂದಾನಗರಿ ಬೆಳಗಾವಿ ತಲುಪಿದೆ.
ಮಂಜುನಾಥ ಪಾದಯಾತ್ರೆ ಬೆಳಗಾವಿ ಚನ್ನಮ್ಮ ವೃತ್ತ ತಲುಪುತ್ತಿದ್ದಂತೆ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಬರಮಾಡಿಕೊಂಡು. ಚೆನ್ನಮ್ಮ ತಾಯಿ ಮೂರ್ತಿಗೆ ನಮಸ್ಕರಿಸಿದ ಮಂಜುನಾಥ ನನ್ನ ಕರವೇ ಕಾರ್ಯಕರ್ತರು ಸನ್ಮಾನಿಸಿದ್ರು. ಯಾಕೆಂದರೆ ನಾಡು ನುಡಿ ಉಳಿವಿಗಾಗಿ ಮಂಜುನಾಥ ಕನ್ನಡ ಬಾವುಟದ ಬಣ್ಣದ ಉಡುಪು ಧರಿಸಿ, ಕನ್ನಡದಲ್ಲಿ ಬರೆದಿರುವ ನಾಮಫಲಕಗಳನ್ನ ಹಿಡಿದುಕೊಂಡು 500 ಕ್ಕೂ ಅಧಿಕ ಕೀಲೋ ಮೀಟರ್ ಪಾದಯಾತ್ರೆ ಪೂರೈಸಿದ್ದಾನೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮುಂದುವರೆದ ನಾಯಕರ ಟಾಕ್ವಾರ್; ಪ್ರಕಾಶ್ ಹುಕ್ಕೇರಿ ಮಾತಿಗೆ ತಿರುಗೇಟು ಕೊಟ್ಟ ಮಹಾಂತೇಶ್ ಕವಟಗಿಮಠ
ಕೈತುಂಬಾ ಸಂಪಾದನೆ ಇದ್ದರೂ ಮಂಜುನಾಥ ನಾಡು ನುಡಿಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾನೆ. ಅಪ್ಪಟ ಕನ್ನಡಾಭಿಮಾನಿ ಮಂಜುನಾಥ ಕನ್ನಡ ಪ್ರೇಮಕ್ಕೆ ಹ್ಯಾಡ್ಸ್ ಆಫ್ ಹೇಳಲೇಬೇಕು. ಕೆಲಸಕ್ಕೆ ರಜೆ ಹಾಕಿ ಪಾದಯಾತ್ರೆ ಮಾಡುತ್ತಿದ್ದು ಇದನ್ನು ತಿಳಿದ ಅಧಿಕಾರಿಗಳು ಸಹ ಬೆನ್ನು ತಟ್ಟಿದ್ದಾರೆ. ನವೆಂಬರ್ ತಿಂಗಳ ರಾಜ್ಯೋತ್ಸವ ಜತೆಗೆ ಅನೇಕ ಕನ್ನಡ ಕಾರ್ಯಕ್ರಮ ಇಡೀ ತಿಂಗಳ ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ಪಾದಯಾತ್ರೆ ಕೈಗೊಂಡ ಈತನಿಗೆ ಅಭಿನಂದನೆ ಸಲ್ಲಿಸಲೆಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ