ಬಾಲಕನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಮೇಯರ್ ಸಂಪತ್ ರಾಜ್

news18
Updated:August 30, 2018, 5:31 PM IST
ಬಾಲಕನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಮೇಯರ್ ಸಂಪತ್ ರಾಜ್
news18
Updated: August 30, 2018, 5:31 PM IST
ನ್ಯೂಸ್ 18 ಕನ್ನಡ 

ಬೆಂಗಳೂರು (ಆಗಸ್ಟ್ .30) : ಬೀದಿ ನಾಯಿಗಳ ದಾಳಿಯಿಂದ  ಆಸ್ಪತ್ರೆಗೆ ದಾಖಲಾಗಿರುವ ಬಾಲಕನನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸ್ತೀನಿ ಎಂದಿದ್ದ ಮೇಯರ್  ಭೇಟಿ  ನೀಡಿರಲಿಲ್ಲ. ಈ ಬಗ್ಗೆ ಎಲ್ಲೋಗ್ಬಿಟ್ರಿ ಮೇಯರ್ ಸಾಹೇಬ್ರೇ..! ಎಂದು ನ್ಯೂಸ್ 18 ಕನ್ನಡ  ವರದಿಯಿಂದ ಎಚ್ಚೆತ್ತ ಮೇಯರ್ ಸಂಪತ್ ರಾಜ್ ಆಸ್ಪತ್ರೆಗೆ ಹೋಗಿ ಬಾಲಕನ ಆರೋಗ್ಯ ವಿಚಾರಿಸಲು ಐಸಿಯುಗೆ ಭೇಟಿ ನೀಡಿದರು.

ವಿಭೂತಿ ನಗರದಲ್ಲಿ ನಿನ್ನೆ ಬಾಲಕ ಪ್ರವೀಣನಿಗೆ  ಬೀದಿ ನಾಯಿಗಳು ದಾಳಿ ನಡೆಸಿದ್ದವು. ಇದರಿಂದ ತೀವ್ರ ಗಾಯಗೊಂಡ ಬಾಲಕಕನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಾಲಕ ಆಸ್ಪತ್ರೆಗೆ ದಾಖಲಾಗಿ 24 ಗಂಟೆ ಕಳೆದರು ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ನ್ಯೂಸ್ 18 ಬೆಳಿಗ್ಗೆಯಿಂದ ಸುದ್ದಿಪ್ರಸಾರ ಮಾಡಿತ್ತು.

ಇದರಿಂದ ಮಣಿಪಾಲ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿರುವ ಬಾಲಕನನ್ನು ಮೇಯರ್ ಸಂಪತ್ ರಾಜ್ ಭೇಟಿ ನೀಡಿ ಬಾಲಕನ ಪರಿಸ್ಥಿಯ ಬಗ್ಗೆ ವೈದ್ಯರಲ್ಲಿ ಮಾಹಿತಿ ಪಡೆದರು. ಬಾಲಕನ ಪಾಲಕರಿಗೆ ಸಾತ್ವನ ಹೇಳಿದ್ದಾರೆ.  ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿ ಬರಿಸಲಿದೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರವೀಣ್ ತೀವ್ರ ನಿಗಾ ಘಟಕದಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿರೋದ್ರಿಂದ ಇನ್ನೂ 24 ಗಂಟೆಗಳ ಕಾಲ ಏನನ್ನೂ ಹೇಳಲಾಗೋದಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ.

ವಿಭೂತಿಪುರದಲ್ಲಿ ಬೀದಿ ನಾಯಿಗಳು ಹೆಚ್ಚಿರೋದ್ರಿಂದ ಈ‌ ಘಟನೆ ನಡೆದಿದ್ದು, ಇದನ್ನು ಸರಿಗಟ್ಟಲು ಈಗಾಗಲೇ ಅಧಿಕಾರಿಗಳೊಡನೆ ಸಭೆ ನಡೆಸಲಾಗಿದೆ ಎಂದು ಮೇಯರ್ ಹೇಳಿದರು.

 

 
Loading...

 

 

 

 
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ