10 Crore Hospital Bill: ಹೊಟ್ಟೆ ನೋವು ಅಂತ ಬಂದವಳಿಗೆ 10 ಕೋಟಿ ಬಿಲ್! ಆದರೂ ಬದುಕಲಿಲ್ಲ ಮಹಿಳೆ, ಆಸ್ಪತ್ರೆ ವಿರುದ್ಧ ಪತಿ ಹೋರಾಟ

ಹೊಟ್ಟೆ ನೋವು ಅಂತ ಬಂದಿದ್ದ ಮಹಿಳೆಗೆ 7 ವರ್ಷಗಳ ಕಾಲ ಟ್ರೀಟ್ಮೆಂಟ್ ಕೊಟ್ಟರೂ ಆಕೆ ಬದುಕಲಿಲ್ಲ. ಇದೀಗ ಆಕೆಯ ಚಿಕಿತ್ಸೆ ವೆಚ್ಚ ಅಂತ ಬರೋಬ್ಬರಿ 10 ಕೋಟಿ ಬಿಲ್ ಆಗಿದ್ದಾಗಿ ಆಸ್ಪತ್ರೆಯವರು ಹೇಳುತ್ತಿದ್ದಾರೆ! ಹೀಗಾಗಿ ಆಸ್ಪತ್ರೆಯಿಂದ ದೌರ್ಜನ್ಯ ಆಗಿದೆ ಅಂತ ಆರೋಪಿಸಿರುವ ಆಕೆಯ ಪತಿ, ಕಾನೂನು ಸಮರ ಸಾರಿದ್ದಾರೆ. ಹಾಗಾದ್ರೆ ಆ ಖಾಸಗಿ ಆಸ್ಪತ್ರೆ ಯಾವುದು? ನಿಜಕ್ಕೂ ಮಹಿಳೆಗೆ ಏನಾಗಿತ್ತು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಪೂನಂ ರಾಣಾ: ಚಿಕಿತ್ಸೆಗೆ ಮೊದಲು, ಚಿಕಿತ್ಸೆ ನಂತರ

ಪೂನಂ ರಾಣಾ: ಚಿಕಿತ್ಸೆಗೆ ಮೊದಲು, ಚಿಕಿತ್ಸೆ ನಂತರ

  • Share this:
ಬೆಂಗಳೂರು: “ವೈದ್ಯೋ ನಾರಾಯಣೋ ಹರಿಃ” ಅಂತಾರೆ. ಅಂದರೆ “ಚಿಕಿತ್ಸೆ (Treatment) ನೀಡುವ ವೈದ್ಯರು (Doctors) ಜೀವ (Life) ನೀಡುವ ದೇವರಿಗೆ (God) ಸಮ” ಅಂತ ಹಿರಿಯರು ಗೌರವಿಸಿದ್ದಾರೆ. ಅನಾರೋಗ್ಯದಿಂದ (Illness) ಆಸ್ಪತ್ರೆ (Hospital) ಸೇರುವ ರೋಗಿಗೆ (Patient) ಭರವಸೆ ತುಂಬಿ ಆತನ ಜೀವ ಉಳಿಸಲು ಪ್ರಯತ್ನ ಮಾಡಬೇಕಾಗಿರೋದು ವೈದ್ಯರ ಕರ್ತವ್ಯ. ಆದರೆ ಹಣದಾಸೆಗೆ ಬೀಳುವ ಕೆಲ ಖಾಸಗಿ ಆಸ್ಪತ್ರೆಗಳು (Private Hospitals) ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತವೆ. ಇದಕ್ಕೆ ಉದಾಹರಣೆ ಎನ್ನುವಂತೆ ಬೆಂಗಳೂರಲ್ಲಿ (Bengaluru) ಘಟನೆಯೊಂದು ನಡೆದಿದೆ. ಹೊಟ್ಟೆ ನೋವು (Stomach pain) ಅಂತ ಆಸ್ಪತ್ರೆಗೆ ಬಂದ ಕೇರಳ (Kerala) ಮೂಲದ ಮಹಿಳೆಗೆ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೆ 7 ವರ್ಷಗಳ ಕಾಲ ಟ್ರೀಟ್‌ಮೆಂಟ್ ಕೊಟ್ಟರೂ ಆಕೆ ಬದುಕಲಿಲ್ಲ. ಇದೀಗ ಆಕೆಯ ಚಿಕಿತ್ಸೆ ವೆಚ್ಚ ಅಂತ ಆಸ್ಪತ್ರೆ ಹೇಳಿದ್ದು ಬರೋಬ್ಬರಿ 10 ಕೋಟಿ (10 Crore) ಬಿಲ್! ಆಸ್ಪತ್ರೆ ದೌರ್ಜನ್ಯದ ವಿರುದ್ಧ ಸಿಡಿದೆದ್ದಿರುವ ಆಕೆಯ ಪತಿ, ಸಮರ ಸಾರಿದ್ದಾರೆ. ಹಾಗಾದ್ರೆ ಆ ಖಾಸಗಿ ಆಸ್ಪತ್ರೆ ಯಾವುದು? ನಿಜಕ್ಕೂ ಮಹಿಳೆಗೆ ಏನಾಗಿತ್ತು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಹೊಟ್ಟೆ ನೋವು ಅಂತ ಮಣಿಪಾಲ್ ಆಸ್ಪತ್ರೆ ಸೇರಿದ ಮಹಿಳೆ

ಈ ಪ್ರಕರಣದ ಸಂತ್ರಸ್ಥೆ ಹೆಸರು ಪೂನಂ ರಾಣಾ. 28 ವರ್ಷದ ಇವರು ಕೇರಳ ಮೂಲದವರು. ಪತಿ ರೇಜಿಶ್ ನಾಯರ್ ಜೊತೆ ಚೆಂದದ ಸಂಸಾರ ನಡೆಸುತ್ತಾ ಇದ್ರು. 2015ರ ಅಕ್ಟೋಬರ್ 3ರಂದು ನಸುಕಿನ ವೇಳೆ ಹೊಟ್ಟೆ ನೋವಿನಿಂದಾಗಿ ಪೂನಂ ರಾಣಾಳನ್ನು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಷ್ಟು ವರ್ಷಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲೇ ಆಕೆಗೆ ಚಿಕಿತ್ಸೆ ನೀಡಲಾಗಿತ್ತಂತೆ.

ಚಿಕಿತ್ಸೆ ಫಲಿಸದೇ ಸತ್ತಿದ್ದಾಗಿ ವೈದ್ಯರ ಘೋಷಣೆ

2015ರಿಂದಲೂ ಪೂನಂ ರಾಣಾಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಇದೀಗ ಪೂನಂ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾಗಿ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Instagram Love: ಯಾರೋ ಬಂದ್ರು ಮಗು ಕೊಟ್ರು ಅಂತ ಹೇಳಿದ್ದ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಬಯಲಾಯ್ತು ಅಕ್ರಮ ಸಂಬಂಧ

10 ಕೋಟಿ ಬಿಲ್ ಕೊಡಬೇಕು ಎನ್ನುತ್ತಿರುವ ಆಸ್ಪತ್ರೆ

ಇನ್ನು ಪೂನಂ ಪತಿ ರೇಜಿಶ್ ನಾಯರ್ ಅವರಿಗೆ ಆಸ್ಪತ್ರೆ ಸಿಬ್ಬಂದಿ 10 ಕೋಟಿ ರೂಪಾಯಿ ಬಿಲ್ ಆಗಿದ್ದಾಗಿ ಹೇಳುತ್ತಿದೆ. ಇದನ್ನು ನೋಡಿ ಅವರು ಹೌಹಾರಿದ್ದಾರೆ. ಸಾಮಾನ್ಯ ಕುಟುಂಬಕ್ಕೆ ಸೇರಿದ ರೇಜಿಶ್, ಈಗಾಗಲೇ ಪತ್ನಿ ಚಿಕಿತ್ಸೆಗೆ ಅಂತ ಸಾಲ ಸೋಲ ಮಾಡಿ ಹಣ ಹೊಂದಿಸುತ್ತಾ ಇದ್ದರು. ಈಗಾಗಲೇ ಊರಿನಲ್ಲಿರುವ ಜಮೀನು ಮಾರಿ 2 ಕೋಟಿಯಷ್ಟು ವೆಚ್ಚ ಮಾಡಿದ್ದಾರೆ. ಇದೀಗ ಬಿಲ್ 10 ಕೋಟಿ ಆಗಿದೆ ಅಂತ ಆಸ್ಪತ್ರೆ ಹೇಳುತ್ತಿದೆ.

ಆಸ್ಪತ್ರೆ ವಿರುದ್ಧ ಪೂನಂ ಪತಿ ಆಕ್ರೋಶ

ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ತನ್ನ ಪತ್ನಿ ಸಾವನ್ನಪ್ಪಿದ್ದಾಳೆ ಅಂತ ರೇಜಿಶ್ ನಾಯರ್ ಆರೋಪಿಸಿದ್ದಾರೆ. ಆಕೆಯ ದೇಹಕ್ಕೆ ನಿರಂತರವಾಗಿ ರಾಸಾಯನಿಕ ವಿಷ ಸೇರಿಸಲಾಗುತ್ತಿತ್ತು ಎನ್ನುವ ಬಗ್ಗೆಯೂ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಬಹು ಅಂಗಾಂಗ ವೈಫಲ್ಯ

“ಕಿಬ್ಬೊಟ್ಟೆಯ ನೋವಿನಿಂದಾಗಿ, ಸಣ್ಣ ಕರುಳಿನಲ್ಲಿ ರಂಧ್ರವಿದೆ ಎಂದು ವೈದ್ಯರು ಹೇಳಿದ್ದರಿಂದ ಪೂನಂ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಅವಳು ಕೊಂಚ ಸುಧಾರಿಸಿಕೊಂಡು, ನನ್ನೊಂದಿಗೆ ಮಾತನಾಡಿದ್ದಳು. ಆದರೆ ಎರಡು ದಿನಗಳ ನಂತರ ವೈದ್ಯರು ಆಕೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು. ಆಕೆಯನ್ನು ಮನೆಗೆ ಕೊಂಡೊಯ್ಯುವಂತೆ ನನಗೆ ಹೇಳಿದರು. ಇದಕ್ಕೆ ಒಪ್ಪದಿದ್ದಾಗ ಆಕೆಯ ಆರೋಗ್ಯ ಸುಧಾರಣೆಗಾಗಿ ಕೊಡಬೇಕಿದ್ದ ಔಷಧಿ ಕೊಡದೇ ನಿಲ್ಲಿಸಿದರು” ಅಂತ ರೇಜಿಶ್ ನಾಯರ್ ಆರೋಪಿಸಿದ್ದಾರೆ.

ಈ ಬಗ್ಗೆ ಆಸ್ಪತ್ರೆ ಹೇಳಿದ್ದೇನು?

20ಕ್ಕಿಂತ ಹೆಚ್ಚು ವೈದ್ಯರು ಪೂನಂ ರಾಣಾ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾಗಿ ಆಸ್ಪತ್ರೆ ಹೇಳುತ್ತಿದೆ. ಅವರ ಕುಟುಂಬದಿಂದ ನಿರಂತರ ಅಸಹಕಾರದ ಹೊರತಾಗಿಯೂ ವೈದ್ಯಕೀಯ ತಂಡವು ಆಕೆಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ನೀಡಿದೆ ಎಂದು ಆಸ್ಪತ್ರೆ ಹೇಳಿದೆ.

ಇದನ್ನೂ ಓದಿ: Bengaluru: ಎಟಿಎಂಗೆ ಕನ್ನ ಹಾಕೋಕೆ ಬಂದು 19 ಲಕ್ಷ ಹಣ ಸುಟ್ಟ ಕಳ್ಳರು

ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ

ಆಸ್ಪತ್ರೆಯಿಂದ ದೌರ್ಜನ್ಯವಾಗಿದೆ ಅಂತ ಆರೋಪಿಸಿ ಮೃತ ಪೂನಂ ರಾಣಾ ಪತಿ ರೇಜಿಶ್ ನಾಯರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಜೀವನ್ ಭಿಮಾನಗರ ಪೊಲೀಸ್ ಠಾಣೆಗೆ ಮಣಿಪಾಲ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾಗಿ ನ್ಯೂಸ್‌ 18ಗೆ ಸ್ಪಷ್ಟಪಡಿಸಿದ್ದಾರೆ.
Published by:Annappa Achari
First published: