• Home
  • »
  • News
  • »
  • state
  • »
  • Mango Parcel: ಅಂಚೆಯಣ್ಣ ಬಂದ, ಮಾವಿನ ಹಣ್ಣು ತಂದ! ಪೋಸ್ಟ್ ಆಫೀಸ್‌ನಿಂದ ಮನೆಗೇ ಬರುತ್ತೆ ಮ್ಯಾಂಗೋ

Mango Parcel: ಅಂಚೆಯಣ್ಣ ಬಂದ, ಮಾವಿನ ಹಣ್ಣು ತಂದ! ಪೋಸ್ಟ್ ಆಫೀಸ್‌ನಿಂದ ಮನೆಗೇ ಬರುತ್ತೆ ಮ್ಯಾಂಗೋ

ಮಾವಿನ ಹಣ್ಣಿನ ಸಂಗ್ರಹ ಚಿತ್ರ

ಮಾವಿನ ಹಣ್ಣಿನ ಸಂಗ್ರಹ ಚಿತ್ರ

ನೀವು ಮಾವಿನ ಹಣ್ಣಿನ ಪ್ರಿಯರೇ? ಈ ಸೀಸನ್‌ನಲ್ಲಿ ಮಾವಿನ ಹಣ್ಣು ತಿನ್ನೋಕೇ ಆಗಿಲ್ಲ ಅಂತ ಕೊರಗುತ್ತಾ ಇದ್ದೀರಾ? ಒಳ್ಳೆ ತಳಿಯ ಮಾವು ತಿನ್ನದೇ ಎಷ್ಟು ಕಾಲವಾಯ್ತು ಅಂತ ನೊಂದು ಕೊಂಡಿದ್ದೀರಾ? ಹಾಗಿದ್ರೆ ನಿಮಗೆ ಇಲ್ಲಿದೆ ಬಾಯಿ ಚಪ್ಪರಿಸುವ ಸುದ್ದಿ!

  • Share this:

ಬೆಂಗಳೂರು: ಹಿಂದೆಲ್ಲ ಪತ್ರಕಾರ ಅಥವಾ ಪೋಸ್ಟ್ ಮ್ಯಾನ್ (Post Man) ಅಂದರೆ ಜನರಿಗೆ ತುಂಬಾ ಪ್ರೀತಿ, ಗೌರವ ಇತ್ತು. ಪತ್ರಗಳ (Letters) ಮೂಲಕ ಸಂಬಂಧ ಬೆಸೆಯುವ ಆತನನ್ನು ‘ಅಂಚೆಯಣ್ಣ’ ಅಂತ ಕರೆದು ಗೌರವಿಸಲಾಗುತ್ತಿತ್ತು. ಕಾಲಾನಂತರ ಫೋನ್ (Phone) ಬಂದ ಬಳಿಕ ಪತ್ರ ವ್ಯವಹಾರ ಕಡಿಮೆಯಾಯ್ತು. ಅಂಚೆ ಕಚೇರಿಯ (Post Office) ಬಳಕೆ ಕಡಿಮೆ ಆಗುತ್ತಾ ಬಂತು. ಇದೀಗ ಮೊಬೈಲ್ (Mobile) ಬಂದ ಮೇಲೆ, ಅದರಲ್ಲೂ ಸ್ಮಾರ್ಟ್ ಫೋನ್ (Smart Phone) ಬಂದ ಮೇಲೆ ಅಂಚೆ ಕಚೇರಿ ಅಂದ್ರೆ ಏನು ಅಂತ ಈಗಿನ ಕಾಲದ ಜನ ಕೇಳ್ತಾರೆ. ಆದ್ರೀಗ ಅಂಚೆ ಕಚೇರಿಯಲ್ಲಿ ಮಾವಿನ ಹಣ್ಣು ಪಾರ್ಸೆಲ್ ಮಾಡುವ ಸರ್ವಿಸ್ ಕೂಡ ಶುರುವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…


ಮನೆಗೆ ಬರುತ್ತೆ ಮಾವಿನಹಣ್ಣು


ನೀವು ಮಾವಿನ ಹಣ್ಣಿನ ಪ್ರಿಯರೇ? ಈ ಸೀಸನ್‌ನಲ್ಲಿ ಮಾವಿನ ಹಣ್ಣು ತಿನ್ನೋಕೇ ಆಗಿಲ್ಲ ಅಂತ ಕೊರಗುತ್ತಾ ಇದ್ದೀರಾ? ಒಳ್ಳೆ ತಳಿಯ ಮಾವು ತಿನ್ನದೇ ಎಷ್ಟು ಕಾಲವಾಯ್ತು ಅಂತ ನೊಂದು ಕೊಂಡಿದ್ದೀರಾ? ಹಾಗಿದ್ರೆ ನಿಮಗೆ ಇಲ್ಲಿದೆ ಬಾಯಿ ಚಪ್ಪರಿಸುವ ಸುದ್ದಿ! ವಿಷ್ಯ ಏನಪ್ಪಾ ಅಂದ್ರೆ ನೀವು ಮನೆಯಲ್ಲಿ ಕುಳಿತೇ ಆರ್ಡರ್ ಮಾಡಿದ್ರೆ ಸಾಕು, ಅಂಚೆ ಕಚೇರಿಯಿಂದ ಪೋಸ್ಟ್ ಮ್ಯಾನ್ ನಿಮ್ಮಮನೆಗೆ ಮಾವಿನ ಹಣ್ಣುಗಳನ್ನು ತಂದು ಕೊಡ್ತಾನೆ.


ಪೋಸ್ಟ್ ಆಫೀಸ್‌ಗಳಿಂದ ಮಾವಿನಹಣ್ಣು ಪಾರ್ಸೆಲ್


ಕರ್ನಾಟಕ ಸರ್ಕಾರವು ನಿನ್ನೆಯಿಂದ ಆನ್‌ಲೈನ್‌ನಲ್ಲಿ ಮಾವಿನಹಣ್ಣುಗಳನ್ನು ಮಾರಾಟ ಮಾಡುತ್ತಿದೆ ಇದರಲ್ಲಿ ನೀವು ವಿವಿಧ ರೀತಿಯ ಮಾವಿನಹಣ್ಣುಗಳನ್ನು ಆನ್‌ಲೈನ್‌ನಲ್ಲಿ ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (KSMDMCL) ಭಾರತೀಯ ಅಂಚೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಮಾವುಗಳನ್ನು ತಲುಪಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೆಬ್‌ಸೈಟ್‌ನ್ನು ಬಳಸಿ ಆನ್‌ಲೈನ್‌ನಲ್ಲಿ ಮಾವು ಮಾರಾಟಕ್ಕಾಗಿ ಪ್ರಾರಂಭಿಸಲಾಗಿದ್ದು, ಇದರಲ್ಲಿ ವಿವಿಧ ರೀತಿಯ ಮಾವಿನಹಣ್ಣುಗಳನ್ನು ಖರೀದಿಸಬಹುದು.


ಇದನ್ನೂ ಓದಿ: Indian Street Food: ಈ ಮಹಿಳೆ ಮಾಡಿದ್ದು ಅಂತಿಂಥಾ ಮ್ಯಾಗಿ ಅಲ್ಲ, ಇದು ಮ್ಯಾಂಗೋ ಮ್ಯಾಗಿ!


ವಿವಿಧೆಡೆಯಿಂದ ಬರುತ್ತೆ ಮಾವಿನ ಹಣ್ಣು


ಕೆಎಸ್‌ಎಂಡಿಎಂಸಿಎಲ್ 2021ರಲ್ಲಿ ಇಂಡಿಯಾ ಪೋಸ್ಟ್ ಮೂಲಕ ಮಾವಿನಹಣ್ಣನ್ನು ತಲುಪಿಸುತ್ತಿದೆ. ಆದರೆ, ಈ ಬಾರಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾವು ಮಾರಾಟವಾಗಲಿದ್ದು ಈ ವರ್ಷವೂ ಇಲಾಖೆ ಉತ್ತಮ ಖರೀದಿ ನಿರೀಕ್ಷೆಯಲ್ಲಿದೆ. ಸದ್ಯ ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಂದ ಮಾವಿನ ಹಣ್ಣಿನ ಮಾರಾಟವನ್ನು ಪ್ರಾರಂಭಿಸಿದೆ.


ವೆಬ್‌ಸೈಟ್‌ನಲ್ಲಿದೆ ಖರೀದಿ ಬಗ್ಗೆ ಮಾಹಿತಿ


ಎಂಡಿಎಂಸಿಎಲ್  ವೆಬ್‌ಸೈಟ್‌ನಲ್ಲಿ ಮಾವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಇದೆ. ಆ ವೈಬ್‌ಸೈಟ್ ಭೇಟಿ ನೀಡಿ ಆನ್‌ಲೈನ್ ಮಾವು ಮಾರಾಟ ಪೋರ್ಟಲ್ ನಲ್ಲಿ ಮಾವು ಮಾರಾಟ ಮಾಡುವ ರೈತರ ಹೆಸರು, ಮಾವಿನ ತಳಿಗಳು ಮತ್ತು ಮಾವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಲಭ್ಯವಿರುತ್ತದೆ. ಇದರೊಂದಿಗೆ ಗ್ರಾಹಕರು ಆರ್ಡರ್ ಮಾಡಿದ ನಂತರ, ರೈತರಿಗೆ ಪಠ್ಯ ಸಂದೇಶವನ್ನು ಕಳುಹಿಸಲಾಗುತ್ತದೆ. ನಂತರ ರೈತರು ಹಣ್ಣುಗಳನ್ನು ಪ್ಯಾಕ್ ಮಾಡಿ ಅಂಚೆ ಕಚೇರಿ (ಜಿಪಿಒ) ಬೆಂಗಳೂರಿಗೆ ಕಳುಹಿಸುತ್ತಾರೆ. ಮಾವುಗಳನ್ನು GPOಯಿಂದ ಅವರ ಗಮ್ಯಸ್ಥಾನಕ್ಕೆ ರವಾನಿಸಲಾಗುತ್ತದೆ.


ಇದನ್ನೂ ಓದಿ: Mangoes: ರಾಸಾಯನಿಕಗಳಿಲ್ಲದ ರುಚಿಕರವಾದ ಮಾವಿನ ಹಣ್ಣುಗಳನ್ನು ಕಂಡುಹಿಡಿಯುವುದು ಹೇಗೆ? ಇಲ್ಲಿದೆ ಮಾಹಿತಿ


ಮಾವು ಖರೀದಿಗೆ ಗ್ರಾಹಕರ ಆಸಕ್ತಿ


2020ರಲ್ಲಿ ರಾಜ್ಯದಾದ್ಯಂತ ಒಟ್ಟು 35 ಸಾವಿರ ಗ್ರಾಹಕರಿಗೆ 100 ಟನ್ ಮಾವಿನ ಹಣ್ಣಗಳನ್ನು ಸರಬರಾಜು ಮಾಡಲಾಗಿದೆ. ಇನ್ನು ಕಳೆದ 2021ರಲ್ಲಿ ಮಾವಿನ ಇಳುವರಿ ಕಡಿಮೆಯಾದ ನಂತರವೂ 45 ಸಾವಿರ ಗ್ರಾಹಕರಿಗೆ 79 ಟನ್ ಮಾವು ಮಾರಾಟವಾಗಿದೆ. ಗ್ರಾಹಕರು ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಕೆಎಸ್‌ಎಂಡಿಎಂಸಿಎಲ್ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜು ಹೇಳಿದ್ದಾರೆ.

Published by:Annappa Achari
First published: