ಕೋಲಾರದಲ್ಲಿ ದ್ವೇಷದ ಬೆಂಕಿಗೆ ಸುಟ್ಟು ಕರಕಲಾದ 25 ಮಾವಿನ ಮರಗಳು

ಆರು ಎಕರೆ ಜಮೀನಿನಲ್ಲಿ ಬೆಳೆದ 25ಕ್ಕೂ ಹೆಚ್ಚು ಮಾವಿನ ಮರಗಳು ಸುಟ್ಟು ಕರಕಲಾಗಿದೆ. ಇದರ ಜೊತೆಗೆ ತೋಟದಲ್ಲಿಟ್ಟಿದ್ದ ಪೈಪ್, ಟೊಮೆಟೊ ಕಡ್ಡಿಗಳು ಸುಟ್ಟು ಭಸ್ಮವಾಗಿದೆ.

Seema.R | news18-kannada
Updated:March 6, 2020, 4:36 PM IST
ಕೋಲಾರದಲ್ಲಿ ದ್ವೇಷದ ಬೆಂಕಿಗೆ ಸುಟ್ಟು ಕರಕಲಾದ 25 ಮಾವಿನ ಮರಗಳು
ಸುಟ್ಟು ಕರಕಲಾಗಿರುವ ಮರ
  • Share this:
ಕೋಲಾರ  (ಮಾ.06): ಮಾವಿನ ಹಣ್ಣಿನ ನಗರಿ ಎಂದು ಹೆಸರಾಗಿರುವ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ವೈಯಕ್ತಿಕ ದ್ವೇಷಕ್ಕೆ ಮಾವಿನ ಮರಗಳು ಸುಟ್ಟು ಕರಕಲಾಗಿದೆ.

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ವೇಂಪಲ್ಲಿ ಗ್ರಾಮದ ರಾಮಕೃಷ್ಣಾರೆಡ್ಡಿ ತೋಟದ ಮರಗಳು ಬೆಂಕಿಗೆ ಆಹುತಿಯಾಗಿದೆ. ಆರು ಎಕರೆ ಜಮೀನಿನಲ್ಲಿ ಬೆಳೆದ 25ಕ್ಕೂ ಹೆಚ್ಚು ಮಾವಿನ ಮರಗಳು ಸುಟ್ಟು ಕರಕಲಾಗಿದೆ. ಇದರ ಜೊತೆಗೆ ತೋಟದಲ್ಲಿಟ್ಟಿದ್ದ ಪೈಪ್, ಟೊಮೆಟೊ ಕಡ್ಡಿಗಳು ಸುಟ್ಟು ಭಸ್ಮವಾಗಿದೆ.ಇನ್ನು ಈ ಘಟನೆಗೆ ಗೋಪಾಲ್​ ರೆಡ್ಡಿ ಕಾರಣ. ವೈಯಕ್ತಿಕ ದ್ವೇಷದ ಹಿನ್ನೆಲೆ ಉದ್ದೇಶಪೂರ್ವಕವಾಗಿ  ಈ ಕೃತ್ಯ ಎಸಗಿದ್ದಾರೆ ಎಂದು ರಾಮಕೃಷ್ಣ ದೂರು ದಾಖಲಿಸಿದ್ದಾರೆ. ರಾಮಕೃಷ್ಣ ದೂರು ದಾಖಲಿಸುತ್ತಿದ್ದಂತೆ ಗೋಪಾಲ್​ ರೆಡ್ಡಿ ಸಂಬಂಧಿ ರಾಮಕೃಷ್ಣ ಮೇಲೆ ಮರು ದೂರು ದಾಖಲಿಸಿದ್ದು, ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಸೆಲ್ಫಿ ವಿತ್​ ಪಿಡಿಒ; ಸಾರ್ವಜನಿಕರ ಅಹವಾಲು ಸ್ವೀಕರಿಸಲು ಸಿಇಒ ಮಾಡಿದ ಈ ಐಡಿಯಾಗೆ ಜನರಿಂದ ಶಹಬ್ಬಾಸ್​ಗಿರಿ

ಇನ್ನು  ದೂರು ನೀಡಿದರೂ ಪೊಲೀಸರು ಸ್ಥಳಕ್ಕೆ ಆಗಮಿಸಿಲ್ಲ. ಈ ಸಂಬಂಧ ಜಿಲ್ಲಾ ಎಸ್​ಪಿಗೆ ದೂರು ನೀಡುತ್ತೇನೆ ಎಂದು ರಾಮಕೃಷ್ಣ ತಿಳಿಸಿದ್ದಾರೆ. ಇದೇ ವೇಳೆ  ಹೂಬಿಟ್ಟ ಮರಗಳು  ಬೆಂಕಿಗೆ ನಾಶವಾಗಿದ್ದು, ದಿಕ್ಕು ಕಾಣದಂತೆ ಆಗಿದೆ ಎಂದು ಅಲವತ್ತು ಕೊಂಡಿದ್ದಾರೆ.

(ವರದಿ: ರಘುರಾಜ್​)
First published: March 6, 2020, 4:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading