Bengaluru: ಲಾಲ್​ಬಾಗ್​ನಲ್ಲಿ ಮಾವು-ಹಲಸಿನ ಮೇಳ; ವೆರೈಟಿ ಮ್ಯಾಂಗೋ ಕೊಳ್ಳಲು ಮುಗಿಬಿದ್ದ ಜನ

ರಾಜ್ಯದ ನಾನಾ ಕಡೆಯಿಂದ‌ ರೈತರು ತಾವು ಬೆಳದಿರೋ ಮಾವು ಹಲಸಿನ ಹಣ್ಣನ್ನು ಇಲ್ಲಿ ಮಾರಾಟ ಮಾಡಬಹುದಾಗಿದ್ದು,  ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಅಂತಾ ಹಣ್ಣಿನ ದರವನ್ನ ತೋಟಾಗಾರಿಕೆ ಇಲಾಖೆಯೇ ನಿಗದಿ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ 27): ಒಂದು  ಕಡೆ ಬಗೆ ಬಗೆಯ ಮಾವು. ಮತ್ತೊಂದು ಕಡೆ ಹಲಸಿನ ಹಣ್ಣು (Jack Fruits). ರೈತರಿಂದ (Farmer) ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಮಾವು ಹಲಸಿನ ಮೇಳಕ್ಕೆ ತೋಟಾಗಾರಿಕೆ ಇಲಾಖೆ (Horticulture Department) ಇಂದು ಚಾಲನೆ ನೀಡಿದೆ. ವೆರೈಟಿ ಮಾವಿನ ಹಣ್ಣು (Mango Fruits) ಹಾಗೂ ಹಲಸಿನ ಹಣ್ಣುಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ. ಇಂದಿನಿಂದ 18 ದಿನಗಳ ಕಾಲ ಈ ಮೇಳ ನಡೆಯಲಿದೆ.

ಲಾಲ್​ಬಾಗ್​ನಲ್ಲಿ ಮಾವು ಹಲಸಿನ ಮೇಳಕ್ಕೆ  ಚಾಲನೆ

ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಮೂರು ವರ್ಷದ ಬಳಿಕ‌ ಮತ್ತೆ ಮಾವು ಹಲಸಿನ ಮೇಳಕ್ಕೆ  ಚಾಲನೆ ಸಿಕ್ಕಿದೆ.‌ ಇಂದಿನಿಂದ ಮೇಳ ಶುರುವಾಗಿದ್ದು ಜೂನ್ 13ರ ವರೆಗೆ  ಮೇಳ ನಡೆಲಿದೆ. ಇಂದು ತೋಟಾಗಾರಿಕೆ ಸಚಿವರಾದ ಮುನಿರತ್ನ‌ ಅವ್ರು ಮಾವು ಮೇಳಕ್ಕೆ ಚಾಲನೆ ನೀಡಿದ್ದು  ರೈತರು ನೇರವಾಗಿ ಮಾರಾಟ ಮಾಡಲು 105 ಮಳಿಗೆಗಳನ್ನ ಮಾಡಲಾಗಿದೆ.

ರೈತರು ಬೆಳೆದ  ಬಗೆ ಬಗೆಯ ಮಾವು 

ರಾಜ್ಯದ ನಾನಾ ಕಡೆಯಿಂದ‌ ರೈತರು ತಾವು ಬೆಳದಿರೋ ಮಾವು ಹಲಸಿನ ಹಣ್ಣನ್ನು ಇಲ್ಲಿ ಮಾರಾಟ ಮಾಡಬಹುದಾಗಿದ್ದು,  ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಅಂತಾ ಹಣ್ಣಿನ ದರವನ್ನ ತೋಟಾಗಾರಿಕೆ ಇಲಾಖೆಯೇ ನಿಗದಿ ಮಾಡಿದೆ.

20ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣು

ಇನ್ನು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಇಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣು ಮೇಳದಲ್ಲಿ ಸಿಗಲಿದೆ. ರೈತರು ತಾವು ಬೆಳದ ಮಾವು ಮತ್ತು ಹಲಸಿನ ಹಣ್ಣಿಗೆ ತೋಟಾಗಾರಿಕೆ ಇಲಾಖೆ‌ ವೇದಿಕೆ ಸೃಷ್ಟಿ ಮಾಡಿದ್ದು ಲಾಲ್‌ಬಾಗ್ ನಲ್ಲಿ ಮುಂದಿನ 18 ದಿನ ಮಾವು ಹಲಸಿನ ಪರಿಮಳವೇ ಪ್ರವಾಸಿಗರನ್ನು ಹಾಗೂ ಸಿಲಿಕಾನ್‌ ಸಿಟಿ ಜನರನ್ನ ಸೆಳೆಯಲಿದೆ.

ಇದನ್ನೂ ಓದಿ: Bank Strike: 2 ದಿನ ಬ್ಯಾಂಕ್ ಮುಷ್ಕರದ ಬಿಸಿ ಅನುಭವಿಸೋಕೆ ಸಜ್ಜಾಗಿ! ಯಾವ ಬ್ಯಾಂಕ್ ಯಾವತ್ತು ಬಂದ್ ಆಗುತ್ತೆ?

ಮೇಳದಲ್ಲಿ ಮಾವಿನ ದರ  ಕೆಜಿಗೆ! 

ಇಮಾಮ್ ಪಸಂದ್ - 200
ಮಲ್ಲಿಕಾ - 100
ಬಾದಾಮಿ - 100
ಸಕ್ಕರೆ ಗುತ್ತಿ - 150
ಸಿಂಧೂರ - 50
ರಸ್ಪುರಿ - 80
ದೆಸೇರಿ - 100
ಕಲಾಪಡ- 120
ಮಲ್ಗೋವಾ - 120
ತೋತಾಪುರಿ - 30
ಅಮರಪಾಲಿ - 100

ಹಲಸಿನ ಹಣ್ಣನ್ನು ಖರೀದಿಸಲು ಮುಗಿಬಿದ್ದ ಜನ

ಬಗೆ ಬಗೆಯ ಮಾವಿನ ಹಣ್ಣು ಕೆಜಿಗೆ 32 ರಿಂದ ಶುರುವಾಗಿ 215 ರೂಪಾಯಿ ವರೆಗೆ ಇದೆ. ಹಲಸಿನ‌ ಹಣ್ಣು  ಕೆಜಿಗೆ 25 ರೂ ನಿಗದಿಯಾಗಿದೆ. ಎಲ್ಲೋ‌ ಕೆಮಿಕಲ್‌ ಮಿಕ್ಸ್ ಮಾಡಿ ಹಣ್ಣು ಮಾಡೋ ಹಣ್ಣುಗಳನ್ನ ತಿನ್ನೋ ಬದಲು ನೈಸರ್ಗಿಕವಾಗಿ ಹಣ್ಣಾಗಿರೋ ಮಾವು ಹಲಸನ್ನ ನೇರವಾಗಿ ರೈತರಿಂದಲೇ ಖರೀದಿಸಿ ತಿನ್ನಲು ಜನರು ಮುಗಿ ಬೀಳುತ್ತಿದ್ದಾರೆ. ಜನರ ಸ್ಪಂದನೆ ಹಾಗೂ ಬೇಡಿಕೆ ಹೆಚ್ಚಿದ್ದರೆ ಮೇಳ ಮತ್ತಷ್ಟು ದಿನಗಳ ಕಾಲ ಮುಂದುವರೆಯಲಿದೆ.

ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣನ್ನು ಇಷ್ಟ ಪಡದವರು ಯಾರಿದ್ದಾರೆ ಹೇಳಿ? ಅದರ ರುಚಿ ಚಪ್ಪರಿಸಿದವರೇ ಹೆಚ್ಚು. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸಿಗುವ ಅಂದರೆ ಬೇಸಿಗೆ ಕಾಲ ಬಂತೆಂದ್ರೆ ಅಂಗಡಿಗಳಿಗೆ ಮಾವಿನಹಣ್ಣು ಬರುತ್ತದೆ. ಹಿಂದೆ ಹಳ್ಳಿಗಳಲ್ಲಿ ದಾರಿ ಬದಿಯಲ್ಲಿ ಮಾವಿನ ಮರಗಳು ಅಲ್ಲಲ್ಲಿ ಇರುತ್ತಿತ್ತು. ದಾರಿಹೋಕರು ಕಲ್ಲು ಎಸೆದು ಕೆಳಗೆ ಬಿದ್ದ ಮಾವಿನ ಹಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೀಗ ಕೊಂಡು ತಿನ್ನೋದು ಅನಿವಾರ್ಯ. ಆರೋಗ್ಯಕ್ಕೆ ಒಳಿತೆಂಬ ಕಾರಣಕ್ಕೆ ತಿನ್ನಲೇ ಬೇಕು.

ಇದನ್ನೂ ಓದಿ: Tsunami Warning: ಹಿಂದೂ ಮಹಾಸಾಗರದಲ್ಲಿ ಸುನಾಮಿ ಏಳಲಿದೆಯೇ? ಬಂದಿದೆ ಎಚ್ಚರಿಕೆಯ ಸಂದೇಶ

ಕಾಲ ಬದಲಾದ ಹಾಗೆ ಅಂಗಡಿಗಳಿಗೆ ಹೋಗಿ ಒಂದು ಹಣ್ಣಿಗೆ ಎರಡರಷ್ಟು ಕೊಟ್ಟು ತಿನ್ನಬೇಕಾಗಿದೆ. ಎಷ್ಟೇ ಹಣವಾದರೂ ಮಾವಿನಹಣ್ಣನ್ನು ಕೊಂಡು ತಿನ್ನುತ್ತಾರೆ. ಯಾಕೆಂದರೆ ಬೇಸಿಗೆ ಕಾಲದಲ್ಲಿ ಸೂರ್ಯನ ಬಿಸಿಲಿಗೆ ಸುಟ್ಟು ಹೋಗುವ ಜನರಿಗೆ, ಈ ಸಮಯದಲ್ಲಿ ಇಷ್ಟವಾಗುವ ಒಂದೇ ಒಂದು ವಿಷಯ ಎಂದರೆ ಅದು ಮಾವಿನ ಹಣ್ಣು.
Published by:Pavana HS
First published: