ಮಾವು ಬೆಳೆಗಾರರಿಗೂ ತಟ್ಟಿದ ಕೊರೋನಾ ಬಿಸಿ; ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿ ರಾಮನಗರ ರೈತರು

ಏಕೆಂದರೇ, ಕೊರೋನಾಯಿಂದಾಗಿ ಇಡೀ ವಿಶ್ವವೇ ಲಾಕ್‌ಡೌನ್ ಆಗಿದೆ. ಎಲ್ಲಾ ವ್ಯಾಪಾರವಹಿವಾಟುಗಳು ಸಹ ಸಂಪೂರ್ಣ ನೆಲಕಚ್ಚಿದೆ. ಹಾಗಾಗಿ ಚನ್ನಪಟ್ಟಣದಲ್ಲಿದ್ದ ಅತಿದೊಡ್ಡ ಮ್ಯಾಂಗೋ ಮಾರ್ಕೆಟ್ ಸಹ ಬಂದ್ ಆಗಿದ್ದು, ಈ ಬಾರಿ ರೈತರು ಮಾವಿನ ಕಾಯಿಗಳನ್ನ ವ್ಯಾಪಾರ ಮಾಡಲು ಸಾಧ್ಯವಿಲ್ಲ ಎನ್ನಲಾಗ್ತಿದೆ. ಜಿಲ್ಲೆಯ ರೈತರು ಚನ್ನಪಟ್ಟಣದ ಮಾರುಕಟ್ಟೆಯಲ್ಲೇ ಪ್ರತಿವರ್ಷ ವ್ಯಾಪಾರ ಮಾಡ್ತಿದ್ದರು. ಆದರೆ ಈಗ ಅದೇ ಮಾರ್ಕೆಟ್ ಬಂದ್ ಆಗಿದೆ.

news18-kannada
Updated:April 2, 2020, 7:48 AM IST
ಮಾವು ಬೆಳೆಗಾರರಿಗೂ ತಟ್ಟಿದ ಕೊರೋನಾ ಬಿಸಿ; ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿ ರಾಮನಗರ ರೈತರು
ಮಾವು
  • Share this:
ರಾಮನಗರ(ಏ.02): ರೇಷ್ಮೆನಗರಿ ರಾಮನಗರ ಜಿಲ್ಲೆ ಮಾವು ಬೆಳೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿದೆ. ಈ ಬಾರಿ ಕೂಡ ಮಾವನ್ನ ಅತೀ ಹೆಚ್ಚಾಗಿ ಬೆಳೆದಿದ್ದಾರೆ ಇಲ್ಲಿನ ರೈತರು. ಆದರೆ ಇಡೀ ವಿಶ್ವದಲ್ಲಿಯೇ ಕೊರೋನಾ ಭೀತಿಗೆ ರೈತರ ಎಲ್ಲಾ ಬೆಳೆಗಳು ಮಣ್ಣಲ್ಲಿ ಮಣ್ಣಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ರೇಷ್ಮೆ ಬೆಳೆಗಾರರು ಸಂಪೂರ್ಣ ನೆಲೆಕಚ್ಚಿದ್ದಾರೆ. ಆದರೆ ಈಗ ಮಾವು ಬೆಳೆಗಾರರ ಸರದಿಯಾಗಿದೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾವು ಬೆಳೆಗಾರರ ಬಗ್ಗೆ ಸೂಕ್ತ ಕ್ರಮವಹಿಸಬೇಕೆಂದು ಮಾವು ಬೆಳೆಗಾರರು ನ್ಯೂಸ್-18 ಮೂಲಕ ಒತ್ತಾಯಿಸಿದ್ದಾರೆ.

ಹೌದು ರೇಷ್ಮೆನಗರಿ ಅಂತಾನೆ ಫೇಮಸ್ಸಾಗಿರೋ ರಾಮನಗರ ಜಿಲ್ಲೆಯಲ್ಲಿ ಮಾವು ಬೆಳೆಯುವುದರಲ್ಲೂ ಕೂಡ ಈ ಭಾಗದ ರೈತರು ಎಂದಿಗೂ ಮುಂದು. ಆದರೆ ಈ ಬಾರಿ ವಿಶ್ವದಲ್ಲಿಯೇ ಕೊರೋನಾ ಎಫೆಕ್ಟ್‌ನಿಂದಾಗಿ ಜಿಲ್ಲೆಯಲ್ಲಿ ಬೆಳೆದಿರುವ ಮಾವು ಬೆಳೆ ನೆಲಕಚ್ಚುವ ಸಾಧ್ಯತೆ ಎದ್ದುಕಾಣುತ್ತಿದೆ. ಜಿಲ್ಲೆಯಲ್ಲಿ ಒಟ್ಟು 32,651 ಹೆಕ್ಟೇರ್ ಪ್ರದೇಶದಲ್ಲಿ ಇಲ್ಲಿನ ರೈತರು ಮಾವನ್ನ ಬೆಳೆಯುತ್ತಾರೆ.

ಕಳೆದ ಬಾರಿ 1.30 ಲಕ್ಷ ಮೆಟ್ರಿಕ್ ಟನ್ ಮಾವು ಮಾರುಕಟ್ಟೆಗೆ ಬಂದಿತ್ತು, ಆದರೆ ಈ ಬಾರಿ 90 ಸಾವಿರ ಮೆಟ್ರಿಕ್ ಟನ್‌ಗೆ ಇಳಿಯುವ ಸಾಧ್ಯತೆ ಇದೇ ಎನ್ನಲಾಗಿದೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ತಾಲೂಕುಗಳಲ್ಲಿ ಮಾವು ಬೆಳೆಗಾರರು ಕಳೆದ ಬಾರಿ ಬೊಂಬಾಟ್ ಬೆಳೆ ಬೆಳೆದಿದ್ದರು. ಆದರೆ ಕಳೆದ ಬಾರಿ ಸೂಕ್ತ ಬೆಲೆಯಿಲ್ಲದೆ ಮಾವು ಬೆಳೆಗಾರರು ಫುಲ್ ಡಲ್ ಆಗಿದ್ದರು. ಈ ಬಾರಿ ಕೊರೊನಾಯಿಂದಾಗಿ ಅದಕ್ಕಿಂತಲೂ ಹೆಚ್ಚಿನ ದುಸ್ಥಿತಿಯನ್ನ ಎದುರಿಸಬೇಕಾದ ಪರಿಸ್ಥಿತಿ ಎದುರಾಗುವ ಸಂಭವವಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಮತ್ತೆ ಮೂವರಿಗೆ ಕೊರೋನಾ: ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆ

ಏಕೆಂದರೇ, ಕೊರೋನಾಯಿಂದಾಗಿ ಇಡೀ ವಿಶ್ವವೇ ಲಾಕ್‌ಡೌನ್ ಆಗಿದೆ. ಎಲ್ಲಾ ವ್ಯಾಪಾರವಹಿವಾಟುಗಳು ಸಹ ಸಂಪೂರ್ಣ ನೆಲಕಚ್ಚಿದೆ. ಹಾಗಾಗಿ ಚನ್ನಪಟ್ಟಣದಲ್ಲಿದ್ದ ಅತಿದೊಡ್ಡ ಮ್ಯಾಂಗೋ ಮಾರ್ಕೆಟ್ ಸಹ ಬಂದ್ ಆಗಿದ್ದು, ಈ ಬಾರಿ ರೈತರು ಮಾವಿನ ಕಾಯಿಗಳನ್ನ ವ್ಯಾಪಾರ ಮಾಡಲು ಸಾಧ್ಯವಿಲ್ಲ ಎನ್ನಲಾಗ್ತಿದೆ. ಜಿಲ್ಲೆಯ ರೈತರು ಚನ್ನಪಟ್ಟಣದ ಮಾರುಕಟ್ಟೆಯಲ್ಲೇ ಪ್ರತಿವರ್ಷ ವ್ಯಾಪಾರ ಮಾಡ್ತಿದ್ದರು. ಆದರೆ ಈಗ ಅದೇ ಮಾರ್ಕೆಟ್ ಬಂದ್ ಆಗಿದೆ. ಹಾಗಾಗಿ ಜಿಲ್ಲೆಯ ಮಾವು ಬೆಳೆಗಾರರು ಸಂಪೂರ್ಣ ಡಲ್ ಆಗಿದ್ದಾರೆ.

ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಪೀಹಳ್ಳಿದೊಡ್ಡಿ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳ ಸರಿಸುಮಾರು 50ಕ್ಕೂ ಹೆಚ್ಚು ಜನ ರೈತರು 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮಾವನ್ನ ಬೆಳೆದಿದ್ದಾರೆ. ಜೊತೆಗೆ ಈ ಭಾಗದ ರೈತರು ಈ ಬಾರಿ ಸುಮಾರು 3 ಕೋಟಿಗೂ ಹೆಚ್ಚು ಮಾವು ವ್ಯಾಪಾರದ ನಿರೀಕ್ಷೆಯಲ್ಲಿದ್ದರು. ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆದಿರುವ ಬೆಳೆ ಈ ಬಾರಿ ಸೊಗಸಾಗಿ ಬಂದಿದೆ. ಆದರೆ ಕೊರೋನಾ ಭೀತಿಯಿಂದಾಗಿ ಮ್ಯಾಂಗೋ ಮಾರ್ಕೆಟ್ ಬಂದ್ ಆಗಿರುವ ಕಾರಣ ಇಲ್ಲಿನ ಮಾವು ಬೆಳೆಗಾರರು ತಮ್ಮ ಆತ್ಮಸ್ಥೈರ್ಯವನ್ನೇ ಕಳೆದುಕೊಂಡಿದ್ದಾರೆ.

ಪ್ರತಿಬಾರಿ ಮಾವು ಬೆಳೆಗೆ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಬೆಳೆದ ಬೆಳೆಗೆ ಅಷ್ಟಾಗಿ ಲಾಭ ಸಿಗುತ್ತಿರಲಿಲ್ಲ. ಆದರೆ ಈ ಬಾರಿ ಫಸಲು ಬೊಂಬಾಟಾಗಿ ಬಂದಿದೆ. ಇನ್ನೊಂದು ವಾರದಲ್ಲಿ ಕಟಾವ್ ಮಾಡಿ ಮಾರುಕಟ್ಟೆಯಲ್ಲಿ ನಮ್ಮ ಬೆಳೆಯನ್ನ ವ್ಯಾಪಾರ ಮಾಡಬೇಕಿದೆ. ಆದರೆ ಕೊರೋನಾ ಗಾಳಿಗೆ ನಮ್ಮ ಆಸೆಯೆಲ್ಲಾ ಕೊಚ್ಚಿಹೋಗಿದೆ. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಕುರಿತಾಗಿ ಶೀಘ್ರವೇ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದ್ರೆ ಮಾವು ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಲಿದೆ ಎಂದು ನ್ಯೂಸ್ 18 ಜೊತೆಗೆ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ ಮಾವು ಬೆಳೆಗಾರರು.ಒಟ್ಟಾರೆ ರಾಜ್ಯಕ್ಕೆ ಮಾವು ಬೆಳೆಯುವುದರಲ್ಲಿ ಎರಡನೇ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯ ಮಾವು ಬೆಳೆಗಾರರಿಗೆ ಈ ಬಾರಿ ಕೊರೋನಾ ವೈರಸ್ ಭೀತಿಯಿಂದಾಗಿ ಉತ್ತಮವಾಗಿ ಬಂದಿರುವ ಫಸಲು ನಷ್ಟವಾಗುವ ಸಾಧ್ಯತೆ ಇದೇ. ಆದರೆ ಕೇಂದ್ರ ಹಾಗೂ ರಾಜ್ಯ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಸೂಕ್ತ ಕ್ರಮವಹಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ ಮಾವು ಬೆಳೆಗಾರರು.

(ವರದಿ: ಎ. ಟಿ ವೆಂಕಟೇಶ್)
First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading