• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress: ಟಿಕೆಟ್‌ಗಾಗಿ ಜನಾರ್ದನ ಪೂಜಾರಿ ಮೂಲಕ ಡಿಕೆಶಿಗೆ ಒತ್ತಡ ಹಾಕಿಸಿದ ಮಂಗಳೂರಿನ ಯುವ ಕಾಂಗ್ರೆಸ್‌ ನಾಯಕ

Congress: ಟಿಕೆಟ್‌ಗಾಗಿ ಜನಾರ್ದನ ಪೂಜಾರಿ ಮೂಲಕ ಡಿಕೆಶಿಗೆ ಒತ್ತಡ ಹಾಕಿಸಿದ ಮಂಗಳೂರಿನ ಯುವ ಕಾಂಗ್ರೆಸ್‌ ನಾಯಕ

ಕಾಂಗ್ರೆಸ್ ಮುಖಂಡರು

ಕಾಂಗ್ರೆಸ್ ಮುಖಂಡರು

ಈ ಬಾರಿ ಚುನಾವಣೆಗೆ ನಿಲ್ಲಲೇ ಬೇಕೆಂದು ಪಣ ತೊಟ್ಟಿರುವ ಆಶಿತ್ ಪಿರೇರಾ ರಾಜ್ಯ ನಾಯಕರ ಗಮನ ಸೆಳೆಯಲು ಪ್ರಯತ್ನ ಪಟ್ಟಿದ್ದು, ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಬಿ ಜನಾರ್ದನ ಪೂಜಾರಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಒತ್ತಡ ಹಾಕಲು ಪ್ರಯತ್ನಿಸಿದ್ದಾರೆ.

ಮುಂದೆ ಓದಿ ...
  • Share this:

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಘೋಷಣೆಗೆ ಮುಂಚಿತವಾಗಿ ಈಗಿಂದಲೇ ರಾಜ್ಯದ ಮೂಲೆ ಮೂಲೆಯಲ್ಲಿ ರಾಜಕಾರಣಿಗಳು ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಅಭ್ಯರ್ಥಿ ಘೋಷಣೆ ಆಗದಿದ್ದರೂ ಕೂಡ ತಾವೇ ಅಭ್ಯರ್ಥಿ ಅನ್ನೋ ಹಾಗೆ ಬಿಂಬಿಸಿಕೊಳ್ಳುತ್ತಿದ್ಧಾರೆ. ಇದು ಮಂಗಳೂರಿಗೆ (Mangaluru) ಕೂಡ ಹೊರತೇನಲ್ಲ. ಮಂಗಳೂರಿನಲ್ಲಿ ಕಾಂಗ್ರೆಸ್‌ (Congress) ಟಿಕೆಟ್‌ಗಾಗಿ ಯುವ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಯೊಬ್ಬರು ಈಗಲೇ ಸೀಟ್ ಮೇಲೆ ಟವೆಲ್ ಹಾಕಿದ್ದಾರೆ.


ಹೌದು.. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಭಾರೀ ಪೈಪೋಟಿ ನಡೆಯುತ್ತಿದ್ದು, ಈ ಕ್ಷೇತ್ರವನ್ನು ಕಾಂಗ್ರೆಸ್‌ ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಗಳಿಗೆ ಮೀಸಲಿಟ್ಟಿದೆ. 2013ರಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜೆಆರ್‌ ಲೋಬೋ ಅವರು ಭರ್ಜರಿ ಮತಗಳಿಂದ ಗೆದ್ದಿದ್ದರು. ಬಳಿಕ 2018ರ ಚುನಾವಣೆಯಲ್ಲಿ ಬಿಜೆಪಿಯ ವೇದವ್ಯಾಸ್ ಕಾಮತ್ ವಿರುದ್ಧ ಸೋಲನುಭವಿಸಿದ್ದರು. ಇದೀಗ ಈ ಬಾರಿಯ ಚುನಾವಣೆಯಲ್ಲಿ ಕೂಡ ಸ್ಪರ್ಧಿಸುವ ಅಚಲ ವಿಶ್ವಾಸದಲ್ಲಿ ಜೆ ಆರ್ ಲೋಬೋ ಅವರು ಇದ್ದಾರೆ. ಇದಕ್ಕಾಗಿ ಟಿಕೆಟ್ ಪಡೆಯಲು ಎಲ್ಲಾ ಕಸರತ್ತುಗಳನ್ನು ಮಾಡುತ್ತಿದ್ದಾರೆ.


ಇದನ್ನೂ ಓದಿ: ಮಂಗಳೂರು, ಪುತ್ತೂರಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ 78,000 ಸಂಬಳ


ಜನಾರ್ದನ ಪೂಜಾರಿ ಮೂಲಕ ಟಿಕೆಟ್ ಗಿಟ್ಟಿಸಲು ಯತ್ನ


ಈ ಮಧ್ಯೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಆಶಿತ್ ಪಿರೇರಾ ಕಸರತ್ತು ನಡೆಸಿದ್ದು, ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆಯಲು ಇನ್ನಿಲ್ಲದ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಹೇಗಾದರೂ ಮಾಡಿ ಈ ಬಾರಿ ಚುನಾವಣೆಗೆ ನಿಲ್ಲಲೇ ಬೇಕೆಂದು ಪಣ ತೊಟ್ಟಿರುವ ಆಶಿತ್ ಪಿರೇರಾ ರಾಜ್ಯ ನಾಯಕರ ಗಮನ ಸೆಳೆಯಲು ಪ್ರಯತ್ನ ಪಟ್ಟಿದ್ದು, ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಬಿ ಜನಾರ್ದನ ಪೂಜಾರಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಒತ್ತಡ ಹಾಕಲು ಪ್ರಯತ್ನಿಸಿದ್ದಾರೆ.


ಡಿಕೆಶಿಗೆ ಕರೆ ಮಾಡಿದ ಪೂಜಾರಿ


ಹಿರಿಯ ಕಾಂಗ್ರೆಸ್ ನಾಯಕ ಬಿ ಜನಾರ್ದನ ಪೂಜಾರಿ ಅವರ ಮನೆಗೆ ಆಶೀರ್ವಾದ ಪಡೆಯುವ ಹೆಸರಲ್ಲಿ ಬಂದಿದ್ದ ಆಶಿತ್ ಪಿರೇರಾ ಅವರು ಜನಾರ್ದನ ಪೂಜಾರಿ ಅವರ ಯೋಗ ಕ್ಷೇಮ ವಿಚಾರಿಸಿದ್ದು, ಬಳಿಕ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹಿರಿಯ ಕಾಂಗ್ರೆಸ್ ನಾಯಕ ಬಿ ಜನಾರ್ದನ ಪೂಜಾರಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿಸಿದ್ದು, ಆಗ ಜನಾರ್ದನ ಪೂಜಾರಿ ಅವರು ಜೆ.ಆರ್.ಲೋಬೋ ಬದಲು ಆಶಿತ್ ಪಿರೇರಾಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: Mangaluru Cooker Bomb Blast: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರೀಕ್ ಬೆಂಗಳೂರಿಗೆ ಶಿಫ್ಟ್


'ಸಹಾಯ ಮಾಡಲು ಸಾಧ್ಯ ಉಂಟಾ?'


ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆ ಫೋನ್‌ನಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಬಿ ಜನಾರ್ದನ ಪೂಜಾರಿ, 'ನನ್ನಲ್ಲಿಗೆ ಯೂತ್ ಕಾಂಗ್ರೆಸ್ ಲೀಡರ್ ಆಶಿತ್ ಪಿರೇರಾ ಬಂದಿದಾರೆ. ಅವರಿಗೆ ಮಂಗಳೂರು ದಕ್ಷಿಣಕ್ಕೆ ಏನಾದ್ರೂ‌ ಸಹಾಯ ಮಾಡಲು ಸಾಧ್ಯ ಉಂಟಾ? ನೀವೇ ಸುಧಾರಿಸಿ.. ಜೆ.ಆರ್.ಲೋಬೋ ಸ್ಥಾನಕ್ಕೆ ಆಶಿತ್ ಪಿರೇರಾ ಹಾಕಬಹುದು. ಅವರು ಕೂಡ ಕ್ರಿಶ್ಚಿಯನ್ ಸಮುದಾಯದವರು’ ಎಂದು ಹೇಳಿದ್ದಾರೆ. ಜನಾರ್ದನ ಪೂಜಾರಿ ಅವರ ಮಾತು ಕೇಳಿಸಿಕೊಂಡ ಡಿಕೆ ಶಿವಕುಮಾರ್ ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ‌ ಜೆ.ಆರ್.ಲೋಬೋ ಅವರ ಜೊತೆಗೆ ಮತ್ತೋರ್ವ ಕಾಂಗ್ರೆಸ್‌ ಮುಖಂಡ ಐವನ್ ಡಿಸೋಜಾ ಅವರು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.

Published by:Avinash K
First published: