HOME » NEWS » State » MANGALURU TULUNADU FAMOUS KORAGAJJA TEMPLE STORY IS HERE MANGALORE NEWS KKM SCT

Mangaluru: ಮುಸ್ಲಿಂ ಭಕ್ತನಿಗೆ ಒಲಿದ ತುಳುನಾಡಿನ ಆರಾಧ್ಯ ದೈವ ಕೊರಗಜ್ಜ

Koragajja Temple: ಮೂಲ್ಕಿಯ ಬಳ್ಕುಂಜೆ ಗ್ರಾಮದ ಕವತ್ತಾರು ಎಂಬಲ್ಲಿ ಸುಮಾರು 19 ವರ್ಷಗಳಿಂದ 65ರ ಹರೆಯದ ಪಿ.ಖಾಸಿಂ ಸಾಹೇಬ್‌ ಎಂಬವರು ಕೊರಗಜ್ಜ ಹಾಗೂ ಪರಿವಾರ ದೈವಗಳನ್ನು ಸದ್ದಿಲ್ಲದೆ ಪೂಜಿಸಿಕೊಂಡು ಬರುತ್ತಿದ್ದಾರೆ!

news18-kannada
Updated:April 8, 2021, 8:52 AM IST
Mangaluru: ಮುಸ್ಲಿಂ ಭಕ್ತನಿಗೆ ಒಲಿದ ತುಳುನಾಡಿನ ಆರಾಧ್ಯ ದೈವ ಕೊರಗಜ್ಜ
ಕೊರಗಜ್ಜ ದೇವಸ್ಥಾನ
  • Share this:
ಮಂಗಳೂರು (ಏ. 8): ಸ್ವಾಮಿ ಕೊರಗಜ್ಜ ತುಳುನಾಡಿನ ಆರಾಧ್ಯ ಹಾಗೂ ಕಾರಣಿಕ ದೈವವೆಂದೇ ಸುಪ್ರಸಿದ್ಧ. ಕೊರಗಜ್ಜನಿಗೂ ಮುಸ್ಲಿಂ ಧರ್ಮದ ಖಾಸಿಂಗೂ ಏನು ಸಂಬಂಧ ಅಂತ ಕರಾವಳಿಯಲ್ಲಿ ಜನರು ಕುತೂಹಲಕಾರಿಯಾಗಿ ತಮಗೆ ತಾವೇ ಪ್ರಶ್ನಿಸುತ್ತಿದ್ದಾರೆ. ಮೂಲ್ಕಿಯ ಬಳ್ಕುಂಜೆ ಗ್ರಾಮದ ಕವತ್ತಾರು ಎಂಬಲ್ಲಿ ಸುಮಾರು 19 ವರ್ಷಗಳಿಂದ 65ರ ಹರೆಯದ ಪಿ.ಖಾಸಿಂ ಸಾಹೇಬ್‌ ಎಂಬವರು ಕೊರಗಜ್ಜ ಹಾಗೂ ಪರಿವಾರ ದೈವಗಳನ್ನು ಸದ್ದಿಲ್ಲದೆ ಪೂಜಿಸಿಕೊಂಡು ಬರುತ್ತಿದ್ದಾರೆ!

ಕೇರಳದ ಪಾಲಕ್ಕಾಡ್‌ ಜಿಲ್ಲೆಯವರಾದ ಖಾಸಿಂ ತಮ್ಮ 30ರ ಹರೆಯದಲ್ಲಿ ಗರಗಸ ಹಿಡಿದು ಮರಗಳನ್ನು ಸೀಳುವ ಕೆಲಸಕ್ಕೆಂದು ಕರ್ನಾಟಕದ ಸುಳ್ಯ, ಬಳ್ಕುಂಜೆ ಬಳಿಕ ಕುಟುಂಬ ಸಹಿತ ಕವತ್ತಾರಿಗೆ ಬಂದು ನೆಲೆ ನಿಂತರು.

35 ವರ್ಷಗಳ ಹಿಂದೆ ಸರಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಪತ್ನಿ ಹಾಗೂ ಐವರು ಮಕ್ಕಳ ಜತೆ ಸಂಸಾರ ಆರಂಭಿಸಿದ್ದರು. ಸ್ವಲ್ಪ ಸಮಯದ ನಂತರ ಇವರ ಕುಟುಂಬದಲ್ಲಿ ಸಮಸ್ಯೆಗಳು ಎದುರಾದವು. ಮಗ ತೀವ್ರ ಅನಾರೋಗ್ಯಕ್ಕೊಳಗಾದ. ಹೆಣ್ಣುಮಕ್ಕಳಿಗೆ ನೆಂಟಸ್ತಿಕೆ ಬರಲಿಲ್ಲ. ಇವರ ಕಾಲು ಊನವಾಗಿ ನಡೆಯದ ಪರಿಸ್ಥಿತಿ ಬಂದಿತು. ಕೇರಳಕ್ಕೆ ಹೋಗಿ ಸಮಸ್ಯೆ ಹೇಳಿದಾಗ, ಜಾಗದಲ್ಲಿ ಸಮಸ್ಯೆ ಇದೆ ಎಂದು ಗೊತ್ತಾಯಿತು. ಇಲ್ಲಿಗೆ ಬಂದಾಗ, ಅದು ಕೊರಗಜ್ಜನ ನೆಲೆ. ಒಂದೋ ಕೊರಗಜ್ಜನನ್ನು ನಂಬಬೇಕು, ಇಲ್ಲವೇ ಜಾಗ ಖಾಲಿ ಮಾಡಬೇಕೆಂದು ದರ್ಶನ ಪಾತ್ರಿ ಹೇಳಿದ್ದರು. ಬೇರೆ ದಾರಿ ಇಲ್ಲದೆ ಕೊರಗಜ್ಜನನ್ನು ನಂಬಲು ಆರಂಭಿಸಿದೆ ಎಂದು ಖಾಸಿಂ ಹೇಳುತ್ತಾರೆ.

ಇದನ್ನೂ ಓದಿ: KSRTC BMTC Strike: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ನಿನ್ನೆ ಒಂದೇ ದಿನ 17 ಕೋಟಿ ರೂ. ನಷ್ಟ

ಖಾಸಿಂ ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜೆ ಮಾಡುತ್ತಾರೆ. ಸಮಸ್ಯೆ ಹೇಳಿಕೊಂಡು ಬರುವವರಿಗೆ ಕೊರಗಜ್ಜನ ಮಾರ್ಗದರ್ಶನದಂತೆ ಕರಿಗಂಧ ನೀಡುತ್ತಾರೆ. ಬಪ್ಪನಾಡು ಕ್ಷೇತ್ರದ ಉಳ್ಳಾಲ್ತಿ, ಕೊರತಿ, ಗುಳಿಗ ಹಾಗೂ ಕೊರಗಜ್ಜನನ್ನು ಆರಾಧಿಸಲಾಗುತ್ತದೆ. ನಿತ್ಯ ದೀಪ ಸೇವೆ, ಸಂಕ್ರಾಂತಿಯಂದು ಸಲ್ಲಿಸುವ ಪೂಜೆ, 2-3 ವರ್ಷಗಳಿಗೊಮ್ಮೆ ಅನುಕೂಲಕ್ಕೆ ತಕ್ಕ ಹಾಗೆ ಕೋಲ, ಹರಕೆ ರೂಪದ ಪೂಜೆ ಸಲ್ಲಿಸಲಾಗುತ್ತದೆ. ಯಾವುದೇ ಧರ್ಮ ಭೇದವಿಲ್ಲದೆ ಭಕ್ತರು ಆಗಮಿಸಿ ಹರಕೆ ಸಲ್ಲಿಸುತ್ತಾರೆ.

ಕೊರಗ ತನಿಯ ಕೊರಗಜ್ಜನಾದ ಕಥೆ:

ಪಣಂಬೂರಿನ ಓಡಿ ಮತ್ತು ಅಚ್ಚು ಮೈರೆದಿ ಎಂಬ ಕೊರಗ ದಂಪತಿಗಳಿಗೆ ಒಂದು ಗಂಡು ಮಗು ಹುಟ್ಟುತ್ತದೆ. ಅವನಿಗೆ ತನಿಯ ಎಂಬ ಹೆಸರನ್ನು ಇಟ್ಟಿದ್ದರು. ತನಿಯಯನಿಗೆ ಕೇವಲ 30ದಿವಸವಾಗುತ್ತಲೇ ಅವನ ತಂದೆ ಮತ್ತು ತಾಯಿ ವಿಧಿವಶವಾಗುತ್ತಾರೆ. ತನಿಯ ಅನಾಥನಾಗುತ್ತಾನೆ. ಅವನು ಅಳುತ್ತಿರುವಾಗ ಬೈದೆರೆ ಜಾತಿಗೆ ಸೇರಿದ ಮೈರಕ್ಕ ಬೈದೆದಿ ಮತ್ತು ಅವರ ಮಗ ಚೆನ್ನಯ್ಯನನ್ನು ತನಿಯ ನೋಡುತ್ತಾನೆ. ಮೈರಕ್ಕನ ಬಳಿ ಬಂದು ಅಮ್ಮಾ ನನಗೆ ಬಟ್ಟೆ ಕೊಡಿ ಎಂದು ಕೇಳುವಾಗ ಅವರು ತನ್ನ ತಲೆಯ ನೀರು ಹೀರಿಕೊಳ್ಳಲು ಕಟ್ಟಿದ ಬಟ್ಟೆಯನ್ನೇ ಆ ಮಗುವಿಗೆ ಕೊಟ್ಟು ಮಗುವನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾರೆ.ಮೈರಕ್ಕ ಶೇಂದಿ ಮಾರುವವರಾಗಿದ್ದರು. ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ತನಿಯ ಎಷ್ಟೇ ದೊಡ್ಡ ಕೆಲಸವಾದರೂ ಅದನ್ನು ಮಾಡಿ ಮುಗಿಸುತ್ತಿದ್ದ.ಹೀಗಿರುವಾಗ ಒಂದು ದಿನ ತನಿಯನ ಬಳಿ ತಂದ ಶೇಂದಿಯನ್ನು ಮಂಡೆಗೆ ತುಂಬಿಸಲು ಹೇಳುತ್ತಾರೆ. ಅವನು ತುಂಬಿಸುತ್ತಾನೆ. ಆದರೆ ಇಲ್ಲಿ ವಿಚಿತ್ರ ಏನೆಂದರೆ ಏಳು ರಾತ್ರಿ ಏಳು ಹಗಲು ಕಳೆದರೂ ಶೇಂದಿ ಖಾಲಿಯಾಗುವುದಿಲ್ಲ. ಕಡೆಗೆ ಆ ಶೇಂದಿಯನ್ನು ಕದ್ರಿಯ ಮಂಜುನಾಥ ದೇವರಿಗೆ ಶೇಂದಿ ಎಲ್ಲಾ ಖಾಲಿಯಾದರೆ ಕಂಚಿನ ಪೆÇಡಕೆಯನ್ನು ಅರ್ಪಿಸುತ್ತೇನೆಂದು ಹರಕೆ ಮಾಡುತ್ತಾನೆ. ಆಗ ಶೇಂದಿ ಎಲ್ಲಾ ಖಾಲಿಯಾಗುತ್ತದೆ. ಖಾಲಿಯಾದ ಖುಷಿಯಲ್ಲಿ ತನಿಯನಿಗೆ ಅಡಿಕೆ ಮರದ ಎಲೆಯಿಂದ ಪೆÇಣಲಿಯನ್ನು ಮಾಡಿಕೊಡುತ್ತಾರೆ. ಹೀಗೆ ಕಾಲ ಕಳೆದಂತೆ ತನಿಯ ದೊಡ್ಡವನಾಗುತ್ತಾನೆ. ಕದ್ರಿಗೆ ಹೇಳಿದ ಹರಕೆಯ ಪ್ರಕಾರ ಮೈರಕ್ಕ ಬೈದಿದಿ ಕಂಚಿನ ಪೆÇಡಕೆಯನ್ನು ಮಾಡಿಸುತ್ತಾಳೆ. ಅದನ್ನು ಎತ್ತಲು ಏಳು ಜನರ ಸಹಾಯ ಬೇಕಿತ್ತು.

ಏಳು ಮಂದಿಯ ಊಟ, ಶೇಂದಿ, ಎಲೆ ಅಡಿಕೆಯನ್ನು ತಿಂದು ಏಳು ಜನ ಎತ್ತಿ ಹರಕೆ ತೀರಿಸುವ ಬದಲು ಅವನೊಬ್ಬನೇ ಅದನ್ನೆತ್ತಿಕೊಂಡು ಹೋಗಿ ಕದ್ರಿಯ ದೇವಾಸ್ಥಾನ ಹರಕೆಯನ್ನು ತೀರಿಸುತ್ತಾನೆ. ಅದನ್ನು ನೋಡಿದ ಜನರಿಗೆ ಆಶ್ಚರ್ಯವೆನಿಸುತ್ತದೆ. ತನಿಯ ಒಬ್ಬ ಅಸಾಮಾನ್ಯ ವ್ಯಕ್ತಿ ಎಂದು ಎಲ್ಲರೂ ತಿಳಿಯುತ್ತಾರೆ. ದೈವಸ್ಥಾನದ ಹೊರಗೆ ಮಾಪಾಲ ಹುಳಿಯನ್ನು ತನ್ನ ಹೆಂಡತಿ ಕೊಯ್ಯಲು ಹೋಗುವಾಗ ಮಾಯವಾಗಿ ಮಾಯಾ ಕಲ್ಲಾಗಿ ಅಲ್ಲಿ ನೆಲೆಯಾಗಿ ತುಳುನಾಡಿನ ಶಕ್ತಿಯಾಗಿ ಮೆರೆಯುತ್ತಾನೆ ಎಂದು ಪಾಡ್ದನ ಹೇಳಿದರೆ ಇನ್ನೊಂದು ಪಾಡ್ದನದ ಪ್ರಕಾರ ಮಾಪಲ ಹುಳಿಯನ್ನು ಕೊಯ್ಯಲು ಹೋಗುವಾಗ ಬ್ರಾಹ್ಮಣರು ಅವರನ್ನು ಕಡಿದು ಕೊಲ್ಲಲಾಗಿದೆ. ಅ ಮೇಲೆ ಅವರಿಗೆ ದೋಷ ಕಂಡು ಬರುವಾಗ ಕೊರಗಜ್ಜ ಎಂಬ ಹೆಸರಿನಲ್ಲಿ ನಂಬಿದರು ಎಂಬ ಪ್ರತೀತಿ ಇದೆ. ಇವೆಲ್ಲವೂ ಪಾಡ್ಹನ ಮೂಲಕ ಹೇಳಲಾಗುವ ಕಥೆಗಳಾಗಿದ್ದು ತುಳುನಾಡಿನ ಪ್ರತಿಯೊಂದು ದೈವಗಳ ಇತಿಹಾಸವು ಅಲಿಖಿತವಾಗಿದೆ.
Published by: Sushma Chakre
First published: April 8, 2021, 8:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories