• Home
 • »
 • News
 • »
 • state
 • »
 • Mangaluru To Bengaluru: ವಿಮಾನದ ಮೂಲಕ ಪಾರ್ಸೆಲ್, ಮಂಗಳೂರು-ಬೆಂಗಳೂರು ರೂಟ್​ಗೆ ಭಾರೀ ಬೇಡಿಕೆ

Mangaluru To Bengaluru: ವಿಮಾನದ ಮೂಲಕ ಪಾರ್ಸೆಲ್, ಮಂಗಳೂರು-ಬೆಂಗಳೂರು ರೂಟ್​ಗೆ ಭಾರೀ ಬೇಡಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏರ್ ಕಾರ್ಗೋ ಎಂದರೆ ವಿಮಾನದಲ್ಲಿ ಸಾಗಿಸುವ ಯಾವುದೇ ಸರಕುಗಳು. ಸರಳವಾಗಿ ಹೇಳೋದಾದರೆ ಏರ್ ಕಾರ್ಗೋ ಎಂದರೆ ವಾಯು ಸರಕು ಸಾಗಣೆ. 

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು ಮತ್ತು ಮಂಗಳೂರು ರಾಜ್ಯದ ಪ್ರತಿಷ್ಠಿತ ಎರಡು ನಗರಗಳಾಗಿದ್ದು, ಒಂದಕ್ಕೊಂದು ಹಲವಾರು ವ್ಯವಹಾರಿಕ ನಂಟನ್ನು ಹೊಂದಿದೆ. ಸರಕು ಸಮಂಜಾಸುಗಳ ರಫ್ತು, ಆಮದಿನಿಂದ ಹಿಡಿದು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಪ್ರವಾಸವಾಗಿಯೂ ಜನ ಪ್ರಯಾಣಿಸುತ್ತಾರೆ. ಅಂತೆಯೇ ಅಂಚೆ ಸರಕುಗಳ ವಿಷಯದಲ್ಲಿ ಮಂಗಳೂರು-ಬೆಂಗಳೂರು (Mangaluru To Bengaluru) ವಲಯವು ಭಾರತದ ಅತ್ಯಂತ ಜನನಿಬಿಡ ಏಕಮುಖ ಮಾರ್ಗವೆಂದು ಗುರುತಿಸಲ್ಪಟ್ಟಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶೀಯ ಸರಕು ಸಾಗಣೆ ಪುನಃ ಆರಂಭಗೊಂಡ ನಂತರ ಮಂಗಳೂರು-ಬೆಂಗಳೂರು ದೇಶೀಯ ಕಾರ್ಗೋ ಏರ್ ಸೆಕ್ಟರ್ (Cargo Air Sector) ಅನ್ನು ದೇಶದ ಅತ್ಯಂತ ಜನನಿಬಿಡ ಏಕಮುಖ ಸರಕು ವಲಯ ಎಂದು ಗುರುತಿಸಲಾಗಿದೆ.


ಈ ವಲಯವು ಪ್ರತಿ ತಿಂಗಳು 250 MT ಅಂಚೆ ಸರಕುಗಳನ್ನು ನಿರ್ವಹಿಸುತ್ತದೆ ಮತ್ತು ಇದು ಇದು ದೇಶದಲ್ಲೇ ಅತ್ಯಧಿಕವಾಗಿದೆ ಎನ್ನಲಾಗಿದೆ.


ಏರ್ ಕಾರ್ಗೋ ಎಂದರೇನು?
ಏರ್ ಕಾರ್ಗೋ ಎಂದರೆ ವಿಮಾನದಲ್ಲಿ ಸಾಗಿಸುವ ಯಾವುದೇ ಸರಕುಗಳು. ಸರಳವಾಗಿ ಹೇಳೋದಾದರೆ ಏರ್ ಕಾರ್ಗೋ ಎಂದರೆ ವಾಯು ಸರಕು ಸಾಗಣೆ. ಇದು ಏರ್ ಕ್ಯಾರಿಯರ್ ಮೂಲಕ ಸರಕುಗಳ ಸಾಗಣೆಯಾಗಿದೆ. ಇದು ಏರ್ ಮೇಲ್, ಏರ್ ಫ್ರೈಟ್ ಮತ್ತು ಏರ್ ಎಕ್ಸ್‌ಪ್ರೆಸ್ ಅನ್ನು ಒಳಗೊಂಡಿರುತ್ತದೆ.


ಯಾವೆಲ್ಲಾ ಸರಕುಗಳನ್ನು ನಿರ್ವಹಿಸುತ್ತದೆ?
ಹೆಚ್ಚಿನ ಮೇಲ್ ಸರಕುಗಳು ಮಣಿಪಾಲದ ಭದ್ರತಾ ಮುದ್ರಣಾಲಯದಿಂದ ಬರುತ್ತಿದ್ದು, ಇನ್ನುಳಿದಂತೆ ಆಧಾರ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು, ಬ್ಯಾಂಕ್ ಚೆಕ್‌ಬುಕ್‌ಗಳು ಮತ್ತು ಸಂಬಂಧಿತ ಲೇಖನಗಳನ್ನು ಒಳಗೊಂಡಿದೆ.


ಮಂಗಳೂರಿಗೆ ಬರುವ ಈ ಎಲ್ಲಾ ಸರಕುಗಳನ್ನು ನಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ದೇಶದ ವಿವಿಧ ಭಾಗಗಳಿಗೆ ವಿಮಾನದಲ್ಲಿ ರವಾನಿಸಲಾಗುತ್ತದೆ.


ಮಣಿಪಾಲದ ಮುದ್ರಣಾಲಯದಿಂದ ಬರುತ್ತವೆ ಹೆಚ್ಚು ಸರಕು
MIA ಯಲ್ಲಿನ ದೇಶೀಯ ಸರಕು ಕಾರ್ಯಾಚರಣೆಗಳು ಕಳೆದ ವರ್ಷದ ಆಗಸ್ಟ್‌ನಲ್ಲಿ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದೆ. ಆರಂಭಿಕ ದಿನಗಳಲ್ಲಿ ದಿನಕ್ಕೆ ಸುಮಾರು ಐದು ಟನ್ ಸರಕುಗಳನ್ನು ಇದು ನಿರ್ವಹಿಸುತ್ತಿತ್ತು. ಇದೀಗ ದಿನಕ್ಕೆ 7 ರಿಂದ 9 ಟನ್‌ ಸರಕುಗಳನ್ನು ಬೆಂಗಳೂರಿಗೆ ಕಳಿಸಿಕೊಡುತ್ತದೆ. ಎಂಐಎಗೆ ಬರುವ 95% ಸರಕು ಮಣಿಪಾಲದ ಮುದ್ರಣಾಲಯದಿಂದ ಬರುತ್ತದೆ.


ಉಳಿದವುಗಳಲ್ಲಿ ಚಿನ್ನ, ಅಲಂಕಾರಿಕ ಮೀನುಗಳು, ಸುಧಾರಿತ ಪರೀಕ್ಷೆಗಳಿಗೆ ವೈದ್ಯಕೀಯ ಮಾದರಿಗಳು ಮತ್ತು ಸಾಮಾನ್ಯ ಕೊರಿಯರ್ ಸೇರಿವೆ ಎಂದು ಎಂಐಎ ಹಿರಿಯ ವ್ಯವಸ್ಥಾಪಕ (ಕಾರ್ಗೋ) ಶ್ರೀನಿವಾಸನ್ ಮಾಹಿತಿ ನೀಡಿದ್ದಾರೆ.


ಅತ್ಯಂತ ಜನನಿಬಿಡ ಏಕಮುಖ ಮಾರ್ಗ
ಅಂಚೆ ಸರಕುಗಳ ವಿಷಯದಲ್ಲಿ ಮಂಗಳೂರು-ಬೆಂಗಳೂರು ವಲಯವು ಭಾರತದ ಅತ್ಯಂತ ಜನನಿಬಿಡ ಏಕಮುಖ ಮಾರ್ಗವೆಂದು ಗುರುತಿಸಲ್ಪಟ್ಟಿದೆ. ಹಲವು ತಿಂಗಳಿಂದ ಇದೇ ಸ್ಥಿತಿ ಇದೆ. ಮೇಲ್ ಸರಕು ನಂತರ, ಅಲಂಕಾರಿಕ ಮೀನು ಮತ್ತು ಚಿನ್ನದ ಸರಕು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಲಂಕಾರಿಕ ಮೀನುಗಳನ್ನು ಸ್ಥಳೀಯ ತಳಿ ಸಂಸ್ಥೆಯಿಂದ ಪಶ್ಚಿಮ ಬಂಗಾಳಕ್ಕೆ ವಿಮಾನದಲ್ಲಿ ಸಾಗಿಸಲಾಗುತ್ತದೆ. ಆದರೆ ಇಲ್ಲಿ ಸಿದ್ಧವಾಗಿರುವ ಚಿನ್ನದ ವಸ್ತುಗಳನ್ನು ದೇಶಾದ್ಯಂತ ರವಾನಿಸಲಾಗುತ್ತದೆ.


ಇದನ್ನೂ ಓದಿ: Baby Elephant In Hassan: ಗ್ರಾಮಸ್ಥರೇ ತೋಡಿದ ಖೆಡ್ಡಾಕ್ಕೆ ಬಿದ್ದ ಮುದ್ದಿನ ಮರಿ ಕಾಡಾನೆ!


"ಆದರೂ ಸಾಮಾನ್ಯ ಸರಕು ದೀಪಾವಳಿ ಹಬ್ಬದ ನಂತರ ಕಡಿಮೆಯಾಗಿದೆ. ಕ್ರಿಸ್‌ಮಸ್ ಋತುವಿನಲ್ಲಿ ಹೆಚ್ಚಾಗಬಹುದು ಎಂದು ನಾವು ನೀರಿಕ್ಷಿಸಿದ್ದೆವು. ಅದರಂತೆ ಸ್ವಲ್ಪ ಸರಕುಗಳು ಹೆಚ್ಚಾಗಿದೆ" ಎಂದು ಶ್ರೀನಿವಾಸನ್ ಹೇಳಿದರು. ಸೆಪ್ಟೆಂಬರ್‌ನಲ್ಲಿ ಒಟ್ಟು ದೇಶೀಯ ಸರಕು ಟನ್ ಸುಮಾರು 168 MT ಆಗಿತ್ತು ಮತ್ತು ಅದು ಈಗ 250 MT ಆಗುವ ಮೂಲಕ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.


2022 ರ ಆಗಸ್ಟ್‌ನಲ್ಲಿ ಪುನಾರಾರಂಭ
MIA ಯಲ್ಲಿನ ದೇಶೀಯ ಸರಕು ಕಾರ್ಯಾಚರಣೆಗಳು ಕಳೆದ ವರ್ಷದ ಆಗಸ್ಟ್‌ನಲ್ಲಿ ಸಂಪೂರ್ಣವಾಗಿ ಕಾರ್ಯಾರಂಭ ಮಾಡುವ ಮುನ್ನ ಅಂಚೆ ಸರಕುಗಳನ್ನು MIA ದೇಶೀಯ ಕಾರ್ಗೋ ಟರ್ಮಿನಲ್‌ನಲ್ಲಿ ಪ್ರತ್ಯೇಕಿಸಲಾಗುತ್ತಿತ್ತು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಸ್ತೆಯ ಮೂಲಕ ಈ ಸರಕುಗಳನ್ನು ಸಾಗಿಸಿ ನಂತರ ಅದನ್ನು ದೇಶದ ವಿವಿಧ ಭಾಗಗಳಿಗೆ ವಿಮಾನದ ಮೂಲಕ ರವಾನಿಸಲಾಗುತ್ತಿತ್ತು. ಈ ವ್ಯವಸ್ಥೆಯು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರಿಂದ ವಿಳಂಬವಾಗುತ್ತಿತ್ತು.


ಇದನ್ನೂ ಓದಿ: Haveri: ಅದ್ಭುತ ಪರಿಮಳದ ಏಲಕ್ಕಿ ಹಾರ, ಪ್ರಧಾನಿ ಮೋದಿ ಕೊರಳಿಗೂ ಹಾವೇರಿ ಮಾಲೆ!


ಹಿಂದೆ, MIA ನಲ್ಲಿ ದೇಶೀಯ ಸರಕು ಸೇವೆಗಳನ್ನು ಖಾಸಗಿ ಸಂಸ್ಥೆಯು ನಿರ್ವಹಿಸುತ್ತಿತ್ತು. ಇದನ್ನು ಜೂನ್ 2020ರಲ್ಲಿ ಸ್ಥಗಿತಗೊಳಿಸಿ ಅದನ್ನು ಒಂದು ವರ್ಷದವರೆಗೆ ಅಂತರಾಷ್ಟ್ರೀಯ ಕಾರ್ಗೋ ಟರ್ಮಿನಲ್‌ಗೆ ಸ್ಥಳಾಂತರಿಸಲಾಯಿತು. ಕಸ್ಟಮ್ಸ್ ಇಲಾಖೆಯಿಂದ ಆಕ್ಷೇಪಣೆ ಬಂದ ನಂತರ ಅದನ್ನು ಮತ್ತೆ ನಿಲ್ಲಿಸಿ, 2022 ರ ಆಗಸ್ಟ್‌ನಲ್ಲಿ ಪುನರಾರಂಭ ಮಾಡಲಾಯಿತು.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು