• Home
  • »
  • News
  • »
  • state
  • »
  • Mangaluru: ಕಿಸ್ ಆಂಡ್ ಹಗ್​ನಲ್ಲಿ ಭಾಗಿಯಾದ ಜೋಡಿ ಕಾಲೇಜಿನಿಂದ ಡಿಬಾರ್; ಮುಸ್ಲಿಂ ಯುವಕನಿಂದ ಹಿಂದೂ ಯುವತಿಗೆ ಮುತ್ತು!

Mangaluru: ಕಿಸ್ ಆಂಡ್ ಹಗ್​ನಲ್ಲಿ ಭಾಗಿಯಾದ ಜೋಡಿ ಕಾಲೇಜಿನಿಂದ ಡಿಬಾರ್; ಮುಸ್ಲಿಂ ಯುವಕನಿಂದ ಹಿಂದೂ ಯುವತಿಗೆ ಮುತ್ತು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಘಟನೆ ಬಳಿಕ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಯುವತಿ ಬೇರೆ ಊರಿನ ನಿವಾಸಿಯಾಗಿದ್ದು, ಆಕೆಯನ್ನು ಪೋಷಕರು ಮನೆಗೆ ಕರೆದು ಹೋಗಿದ್ದಾರೆ ಎನ್ನಲಾಗಿದೆ. ಯುವಕ ಸ್ಥಳೀಯ ನಿವಾಸಿ ಎಂದು ತಿಳಿದು ಬಂದಿದೆ.

  • Share this:

ದಕ್ಷಿಣ ಕನ್ನಡ: ಕಳೆದ ಕೆಲವು ತಿಂಗಳಿನಿಂದ ಕರಾವಳಿ (Coastal Karnataka) ಭಾಗದಲ್ಲಿ ನೈತಿಕ ಪೊಲೀಸ್​ಗಿರಿ (Moral Policing) ಪ್ರಕರಣಗಳು ವರದಿ ಆಗುತ್ತಲಿವೆ. ಹಿಂದೂ ಯುವತಿ (Hindu Girl) ಮತ್ತು ಮುಸ್ಲಿಂ ಯುವಕ (Muslim Youth) ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಹಿಂದೂ ಸಂಘಟನೆಗಳು (Hindu Organization) ಪ್ರತ್ಯಕ್ಷವಾಗಿ ವಿಚಾರಣೆ ನಡೆಸುತ್ತಾರೆ. ಕೆಲವು ಪ್ರಕರಣಗಳಲ್ಲಿ ಜೋಡಿಯ ಮೇಲೆ ಹಲ್ಲೆ ಸಹ ನಡೆದಿವೆ. ಮಂಗಳೂರಿನ ಉರ್ವ (Urva) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಈ ತಿಂಗಳು ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಕದ್ರಿ (Kadri) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಸ್ ತಡೆದ ಹಿಂದೂ ಸಂಘಟನೆಗಳು ಜೊತೆಯಾಗಿ ಪ್ರಯಾಣಿಸುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಕೆಳಗೆ ಇಳಿಸಿತ್ತು. ನಂತರ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು. ದೂರು ದಾಖಲಿಸಲು ಒಪ್ಪದ ಜೋಡಿ ಹಿಂದಿರುಗಿತ್ತು. ಇದೀಗ ಬೆಳ್ತಂಗಡಿಯಲ್ಲಿ ಕಿಸ್ ​ಆಂಡ್ ಹಗ್​ನಲ್ಲಿ (Kiss And Hug) ಭಾಗಿಯಾಗಿದ್ದ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.


ಬೆಳ್ತಂಗಡಿ ಮಾಜಿ ಶಾಸಕ ವಸಂತ್ ಬಂಗೇರ ನೇತೃತ್ವದ ಕಾಲೇಜನಲ್ಲಿ ಈ ಘಟನೆ ನಡೆದಿದೆ. ಕಿಸ್ ಆಂಡ್ ಹಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಬಗ್ಗೆ ವಿದ್ಯಾರ್ಥಿಗಳ ವಾಯ್ಸ್ ನೋಟ್​ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಷಯ ತಿಳಿಯುತ್ತಲೇ ಹಿಂದೂ ಸಂಘಟನೆಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿವೆ.


ಕಿಸ್​ ಆಂಡ್ ಹಗ್ ಮಾಡಿ ಸಿಕ್ಕಿಬಿದ್ದ ಜೋಡಿ


ಡಿಸೆಂಬರ್ 17 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಅನ್ಯಕೋಮಿನ ಜೋಡಿ ಕಿಸ್​ ಆಂಡ್ ಹಗ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಜೋಡಿ ಅಪ್ಪಿಕೊಂಡು ಮುತ್ತು ನೀಡಿರೋದನ್ನು ಕಾಲೇಜಿನ ಕೆಲವು ವಿದ್ಯಾರ್ಥಿಗಳು ನೋಡಿದ್ದಾರೆ ಎನ್ನಲಾಗಿದೆ.


ಘಟನೆ ಬಳಿಕ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಯುವತಿ ಬೇರೆ ಊರಿನ ನಿವಾಸಿಯಾಗಿದ್ದು, ಆಕೆಯನ್ನು ಪೋಷಕರು ಮನೆಗೆ ಕರೆದು ಹೋಗಿದ್ದಾರೆ ಎನ್ನಲಾಗಿದೆ. ಯುವಕ ಸ್ಥಳೀಯ ನಿವಾಸಿ ಎಂದು ತಿಳಿದು ಬಂದಿದೆ.


ಯುವಕನ ವಿರುದ್ಧ ಆರೋಪ


ಮುಸ್ಲಿಂ ಯುವಕ ಈ ಮೊದಲು ಸಹ ಹಿಂದೂ ಯುವತಿಗೆ ಮೆಸೇಜ್ ಮಾಡಿ ಕಿರುಕುಳ ನೀಡಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ಈ ಪ್ರಕರಣ ಮಾಜಿ ಸಚಿವ ವಸಂತ್ ಬಂಗೇರ್ ಅವರವರೆಗೂ ಹೋಗಿತ್ತು ಎಂದು ವರದಿಯಾಗಿದೆ.


ಇದನ್ನೂ ಓದಿ: Moral Policing: ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪ್ರಯಾಣ; ಬಸ್ ತಡೆದು ನೈತಿಕ ಪೊಲೀಸ್​ಗಿರಿ


ಕಾಲೇಜಿನಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಿದ್ದರೂ ಆಡಳಿತ ಮಂಡಳಿ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಶೀಘ್ರದಲ್ಲಿಯೇ ಕಾಲೇಜ್ ಈ ಸಂಬಂಧ ಕಠಿಣ ನಿಯಮಗಳನ್ನು ರೂಪಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.


ಇಬ್ಬರು ಪಿಯುಸಿ ವಿದ್ಯಾರ್ಥಿಗಳು


ಪ್ರಕರಣ ಬೆಳಕಿಗೆ ಬರುತ್ತಲೇ ಮೊದಲು ಯುವತಿಯನ್ನು ಮಾತ್ರ ಅಮಾನತು ಮಾಡಲಾಗಿತ್ತು ಎನ್ನಲಾಗಿದೆ. ನಂತರ ಹಿಂದೂ ಸಂಘಟನೆಗಳ ಎಚ್ಚರಿಕೆ ಬೆನ್ನಲ್ಲೇ ಯುವಕನನ್ನು ಸಹ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಕಿಸ್​ ಆಂಡ್ ಹಗ್ ಮಾಡಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ.


ಬಸ್​ನಲ್ಲಿ ನೈತಿಕ ಪೊಲೀಸ್​ಗಿರಿ; ಹಿಂದೂ ಯುವತಿ ಜೊತೆ ಕುಳಿತಿದ್ದಕ್ಕೆ ಹಲ್ಲೆ


ಬಸ್​ನಲ್ಲಿ ಹಿಂದೂ ಯುವತಿ ಜೊತೆ ಕುಳಿತಿದ್ದಕ್ಕೆ 20 ವರ್ಷದ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಸೈಯ್ಯದ್ ರಾಶಿಮ್ ಉಮ್ಮರ್ ಹಲ್ಲೆಗೊಳಗಾದ ವಿದ್ಯಾರ್ಥಿ.


ಇದನ್ನೂ ಓದಿ: Moral Policing: ಹೆಣ್ಣು-ಗಂಡು ಜೊತೆಗೆ ಕೂರೋ ಹಾಗೂ ಇಲ್ವಾ? ನೈತಿಕ ಪೊಲೀಸ್​ಗಿರಿಗೆ ತಕ್ಕಪಾಠ ಕಲಿಸಿದ ಕೇರಳ ವಿದ್ಯಾರ್ಥಿಗಳು


ಸೈಯದ್ ರಾಶಿಮ್ ಕಾರ್ಕಳದ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ನವೆಂಬರ್ 24ರಂದು ಪ್ರಯಾಣದ ವೇಳೆ ಹಿಂದೂ ಯುವತಿ ಪಕ್ಕ ಕುಳಿತಿದ್ದ ಎನ್ನಲಾಗಿದೆ.

Published by:Mahmadrafik K
First published: