• Home
  • »
  • News
  • »
  • state
  • »
  • Mangaluru Student Kissing: ವಿದ್ಯಾರ್ಥಿಗಳ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು

Mangaluru Student Kissing: ವಿದ್ಯಾರ್ಥಿಗಳ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಂಟು ವಿದ್ಯಾರ್ಥಿಗಳ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ (Pandeshwara Police Station) ಪ್ರಕರಣ ದಾಖಲಾಗಿದೆ. ಕೋಣೆಯೊಂದರಲ್ಲಿ ಕಿಸ್ ಮತ್ತು ದೈಹಿಕ ಸಂಪರ್ಕ ನಡೆಸಿರುವ ವಿಡಿಯೋಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.

  • Share this:

ಮಂಗಳೂರು ಖಾಸಗಿ ಕಾಲೇಜಿನ (Mangaluru Private Collage) ವಿದ್ಯಾರ್ಥಿಗಳು (Student) ಚುಂಬಿಸಿದ ವಿಡಿಯೋಗಳು ವೈರಲ್ (Viral Videos) ಆಗಿರುವ ಪ್ರಕರಣವನ್ನು ಪೊಲೀಸರು (Police) ಗಂಭೀರವಾಗಿ ಪರಿಗಣಿಸಿದ್ದಾರೆ. ಕಿಸ್ಸಿಂಗ್ ವಿಡಿಯೋ ಬೆನ್ನಲ್ಲೇ ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎನ್ನಲಾದ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸದ್ಯ ಮಂಗಳೂರು ನಗರ ಪೊಲೀಸರು ಪೋಕ್ಸೋ ಅಡಿ (POCSO) ಪ್ರಕರಣ ದಾಖಲಿಸಿಕೊಂಡು ತನಿಖೆ ನಡಸುತ್ತಿದ್ದಾರೆ. ಒಟ್ಟು ಎಂಟು ವಿದ್ಯಾರ್ಥಿಗಳ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ (Pandeshwara Police Station) ಪ್ರಕರಣ ದಾಖಲಾಗಿದೆ. ಕೋಣೆಯೊಂದರಲ್ಲಿ ಕಿಸ್ ಮತ್ತು ದೈಹಿಕ ಸಂಪರ್ಕ ನಡೆಸಿರುವ ವಿಡಿಯೋಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.


ಈ ತಂಡದ ಇಬ್ಬರು ವಿದ್ಯಾರ್ಥಿಗಳು ಬಾವುಟಗುಡ್ಡೆಯಲ್ಲಿರುವ ಅಪಾರ್ಟ್ಮೆಂಟ್​ನಲ್ಲಿ ರೂಂ ಪಡೆದಿದ್ದರು. ಅಲ್ಲಿ ಈ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ರೂಂನಲ್ಲಿ ವಿದ್ಯಾರ್ಥಿಗಳು ಮದ್ಯಪಾನ ಸೇರಿದಂತೆ ಮಾದಕ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಮಂಗಳೂರು ಪೊಲೀಸರು ಶಾಕಿಂಗ್ ವಿಚಾರ ಬಹಿರಂಗಪಡಿಸಿದ್ದಾರೆ.


ಏನಿದು ಟ್ರಥ್ Truth & Dare ಆಟ?


ಈ ವಿಚಾರ ರೂಂನ ಮಾಲೀಕರಿಗೆ ತಿಳಿದು ವಿದ್ಯಾರ್ಥಿಗಳನ್ನು ರೂಂನಿಂದ ಹೊರಗೆ ಹಾಕಿದ್ದರು. ಈ ವಿದ್ಯಾರ್ಥಿಗಳು Truth & Dare ಆಟ ಆಡಿದ್ದಾರೆ. Truth ಅಂದ್ರೆ ಸತ್ಯ ಹೇಳಬೇಕು, Dare ಅಂದ್ರೆ ಹೇಳಿದ್ದನ್ನು ಮಾಡಿ ತೋರಿಸಬೇಕು. ಈ ಸಂಧರ್ಭದಲ್ಲಿ Dare ಆಟದಂತೇ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ್ದಾರೆ.


ವಿದ್ಯಾರ್ಥಿಯಿಂದ ವಿಡಿಯೋ ರೆಕಾರ್ಡ್


ಈ ವಿಡಿಯೋವನ್ನು ರೆಕಾರ್ಡ್ ಮಾಡಿದ ವಿದ್ಯಾರ್ಥಿ ವಿಡಿಯೋ ವೈರಲ್ ಮಾಡಿದ್ದಾನೆ ಎಂದು  ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ:  Mangaluru Students Kissing: ಮಂಗಳೂರಿನ ವಿದ್ಯಾರ್ಥಿಗಳಿಂದ ಕಿಸ್ಸಿಂಗ್ ಸ್ಪರ್ಧೆ! ವಿಡಿಯೋ ವೈರಲ್


ಘಟನೆ ನಡೆದು 4 ತಿಂಗಳು


ಒಟ್ಟು ಎಂಟು ವಿದ್ಯಾರ್ಥಿಗಳು ಮತ್ತು ಮೂರು ವಿದ್ಯಾರ್ಥಿನಿಯರು ಈ ಪ್ರಕರಣದಲ್ಲಿ ಭಾಗವಹಿಸಿದ್ದಾರೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಪ್ರಸಿದ್ಧ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಈ ಘಟನೆ ನಡೆದು ನಾಲ್ಕು ತಿಂಗಳುಗಳು ಆಗಿದೆ. ವಿಡಿಯೋ ಮಾಡಿದ ವಿದ್ಯಾರ್ಥಿ ಇತ್ತೀಚಿಗೆ ತನ್ನ ತರಗತಿಯ ವಾಟ್ಸಪ್ ಗ್ರೂಪ್​ಗೆ ವಿಡಿಯೋ ಹಾಕಿದ್ದಾನೆ ಎಂದು ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.


ಪ್ರೇಯಸಿ ರುಂಡದ ಜೊತೆ ಠಾಣೆಗೆ ಬಂದ ಪ್ರಿಯಕರ; ಬೇರೆ ಮದ್ವೆಯಾದ್ರೂ ಯುವತಿ ಮೇಲೆ ಮೋಹ


ಕಳೆದ ಎರಡ್ಮೂರು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಆತ ಮನೆಯವರ ಒತ್ತಾಯದ ಮೇರೆಗೆ ಮೂರು ತಿಂಗಳ ಹಿಂದೆ ಮದುವೆಯಾಗಿದ್ದನು. ಯುವತಿ ಎಲ್ಲವನ್ನೂ ಮರೆತಯ ತನ್ನ ವಿದ್ಯಾಭ್ಯಾಸದತ್ತ ಗಮನ ನೀಡಿದ್ದಳು. ಇದೀಗ ಆ ಯುವತಿ ಪ್ರಿಯಕರನಿಂದಲೇ ಕೊಲೆಯಾಗಿದ್ದಾಳೆ.


23 ವರ್ಷದ ನಿರ್ಮಲಾ ಕೊಲೆಯಾದ ಯುವತಿ. ಭೋಜರಾಜ್ ಕೊಲೆ ಆರೋಪಿ. ಇಬ್ಬರು ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿಯ ನಿವಾಸಿಗಳು. ನಿರ್ಮಲಾ ಮತ್ತು ಭೋಜರಾಜ್ ಪ್ರೀತಿಸುತ್ತಿದ್ದರು. ಆದ್ರೆ ಬೋಜರಾಜ್ ಮನೆಯವರು ತೋರಿಸಿದ ಯುವತಿಯನ್ನು ಮದುವೆಯಾಗಿದ್ದರಿಂದ ನಿರ್ಮಲಾ ಮೌನವಾಗಿದ್ದರು.


ಪೊಲೀಸರ ಮುಂದೆ ಶರಣಾದ ಹಂತಕ


ಇದೇ ಕೋಪದಲ್ಲಿ ಗುರುವಾರ ಬೆಳಗ್ಗೆ ಮನೆಗೆ ನುಗ್ಗಿ ನಿರ್ಮಲಾ  ಕತ್ತು  ಕತ್ತರಿಸಿ, ಅದನ್ನು ಬೈಕ್ ನಲ್ಲಿರಿಸಿಕೊಂಡು ಕಾನಹೊಸಹಳ್ಳಿ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ.


ಇದನ್ನೂ ಓದಿ:  Breaking News: ಅಪಾರ್ಟ್‌ಮೆಂಟ್ ಕಾಂಪೌಂಡ್ ಕುಸಿದು ನಾಲ್ವರ ದುರ್ಮರಣ! ನಿದ್ದೆಯಿಂದ ಚಿರನಿದ್ರೆಗೆ ಜಾರಿದ ಕಾರ್ಮಿಕರು


ನಿರ್ಮಲಾ ಕೊಲೆಯ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು