• Home
  • »
  • News
  • »
  • state
  • »
  • Mangaluru Students Kissing: ಮಂಗಳೂರಿನ ವಿದ್ಯಾರ್ಥಿಗಳಿಂದ ಕಿಸ್ಸಿಂಗ್ ಸ್ಪರ್ಧೆ! ವಿಡಿಯೋ ವೈರಲ್

Mangaluru Students Kissing: ಮಂಗಳೂರಿನ ವಿದ್ಯಾರ್ಥಿಗಳಿಂದ ಕಿಸ್ಸಿಂಗ್ ಸ್ಪರ್ಧೆ! ವಿಡಿಯೋ ವೈರಲ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಮಂಗಳೂರು ಪೊಲೀಸರು ವಿಡಿಯೋದಲ್ಲಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ. 

  • Share this:

    ಮಂಗಳೂರು:  ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಕಿಸ್ಸಿಂಗ್ ಪಂದ್ಯ ಆಯೋಜಿಸಿದ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಮಂಗಳೂರಿನ (Mangaluru Colleges) ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಹುಚ್ಚಾಟದ ವಿಡಿಯೋ ವೈರಲ್ (Viral Video) ಆಗಿದೆ. ಪಂದ್ಯದ ನಿಯಮದಂತೇ ಎಲ್ಲರ ಎದುರೇ ಚುಂಬನ ಮಾಡಬೇಕು. ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಮನೆಯೊಂದರಲ್ಲಿ ನಡೆದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಕಿಸ್ಸಿಂಗ್ ಸ್ಪರ್ಧೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಆಕ್ರೋಶಕ್ಕೂ ಕಾರಣವಾಗಿದೆ.  ವಿಡಿಯೋದಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಇರುವುದನ್ನ ಸಹ ಕಾಣಬಹುದಾಗಿದೆ. ಅಲ್ಲದೇ ಓರ್ವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಪರಸ್ಪರ ಲಿಪ್ ಕಿಸ್ (Students Lip Kiss) ಮಾಡುತ್ತಿದ್ದು, ಇತರ ವಿದ್ಯಾರ್ಥಿಗಳು ಅವರನ್ನು ಹುರಿದುಂಬಿಸುತ್ತಿರುವುದು ಸಹ ರೆಕಾರ್ಡ್ ಆಗಿದೆ. 


    ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಸಹಪಾಠಿಗಳ ಎದುರೇ ಕಿಸ್ ಮಾಡುವ ಸ್ಪರ್ಧೆ ಆಯೋಜಿಸಿದ್ದು ಭಾರೀ ಸಂಚಲನ ಮೂಡಿಸಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಮಂಗಳೂರು ಪೊಲೀಸರು ವಿಡಿಯೋದಲ್ಲಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ.  ಅಲ್ಲದೇ ಈ ಚುಂಬನ ಸ್ಪರ್ಧೆಯ ವೇಳೆ ವಿದ್ಯಾರ್ಥಿಗಳು ಮಾದಕವಸ್ತು ಸೇವಿಸಿರುವ ಬಗ್ಗೆಯೂ ಪೊಲೀಸರ ತನಿಖೆ ನಡೆಸಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.


    ಎಲ್ಲಿ ಮಾಡಲಾದ ವಿಡಿಯೋ ಅದು?
    ಮನೆಯೊಂದರ ರೂಮ್ ಒಂದರಲ್ಲಿ ಈ ವಿಡಿಯೋ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ವಿಡಿಯೋ ಮಾಡಲಾದ ಮನೆ ಯಾವುದು? ಎಲ್ಲಿದೆ ಎಂಬ ಕುರಿತು ಈವರೆಗೂ ಯಾವುದೇ ಮೂಲದಿಂದಲೂ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಮಂಗಳೂರು ಪೊಲೀಸರು ಈ ವಿಡಿಯೋದ ಕುರಿತು ತನಿಖೆ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. 


    ಯೂನಿಫಾರ್ಮ್​ನಲ್ಲಿಯೇ ಚುಂಬಿಸಿಕೊಂಡ ವಿದ್ಯಾರ್ಥಿಗಳು
    ಅಷ್ಟೇ ಅಲ್ಲದೇ ವಿಡಿಯೋದಲ್ಲಿ ಕಾಣಿಸುವ ವಿದ್ಯಾರ್ಥಿನಿ ಯೂನಿಫಾರ್ಮ್​ನಲ್ಲಿಯೇ ಇದ್ದಾಳೆ. ಹೀಗಾಗಿ ಪೊಲೀಸರಿಗೆ ವಿದ್ಯಾರ್ಥಿಗಳು ಯಾವ ಕಾಲಜಿನವರು ಎಂಬ ಮಾಹಿತಿ ದೊರೆತಿದೆ ಎಂದು ಹೇಳಲಾಗಿದೆ. ಅಲ್ಲದೇ ವಿದ್ಯಾರ್ಥಿಗಳು ವಯಸ್ಕರೇ ಅಥವಾ 18 ವರ್ಷಕ್ಕಿಂತ ಕೆಳಗಿನವರೇ ಎಂಬ ಮಾಹಿತಿ ಸಹ ಖಚಿತವಾಗಿ ದೊರೆತಿಲ್ಲ.


    ಇದನ್ನೂ ಓದಿ: Breaking News: ಅಪಾರ್ಟ್‌ಮೆಂಟ್ ಕಾಂಪೌಂಡ್ ಕುಸಿದು ನಾಲ್ವರ ದುರ್ಮರಣ! ನಿದ್ದೆಯಿಂದ ಚಿರನಿದ್ರೆಗೆ ಜಾರಿದ ಕಾರ್ಮಿಕರು


    ಇನ್ನಿತರ ವಿದ್ಯಾರ್ಥಿಗಳಿಂದ ಪ್ರೋತ್ಸಾಹ!
    ಅಲ್ಲದೇ ಓರ್ವ ವಿದ್ಯಾರ್ಥಿ ಮತ್ತು ಓರ್ವ ವಿದ್ಯಾರ್ಥಿನಿ ಪರಸ್ಪರ ಚುಂಬನ ನಡೆಸುವುದನ್ನು ಸುತ್ತಲೂ ಕುಳಿತ ಇನ್ನಿತರ ವಿದ್ಯಾರ್ಥಿನಿಯರು ಹುರಿದುಂಬಿಸುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ. 


    ಇದನ್ನೂ ಓದಿ:Vijayapura: ಕೈಬೀಸಿ ಕರೆಯುವ ಪುಟ್ಟಪುಟ್ಟ ಜಲಪಾತಗಳು! ವೀಡಿಯೋ ನೋಡಿ


    ಈ ವಿಡಿಯೋ ಕುರಿತು ಮಂಗಳೂರು ಪೊಲೀಸರು ಮಾಹಿತಿ ಸಂಗ್ರಹಿಸಿದ್ದು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಮಂಗಳೂರಿನಲ್ಲಿ ನಡೆದ ಈ ಚುಂಬನ ಸ್ಪರ್ಧೆಯ ವೇಳೆ ವಿದ್ಯಾರ್ಥಿಗಳು ಮಾದಕವಸ್ತು ಸೇವಿಸಿರುವ ಬಗ್ಗೆಯೂ ಪೊಲೀಸರ ತನಿಖೆ ನಡೆಸಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.


    ಅಪಾರ್ಟ್‌ಮೆಂಟ್ ಕಾಂಪೌಂಡ್ ಕುಸಿದು ನಾಲ್ವರ ದುರ್ಮರಣ
    ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಕಾಂಪೌಂಡ್  ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಹೊರವಲಯದ ತಿರುಮಲಶೆಟ್ಟಿಹಳ್ಳಿಯಲ್ಲಿ  ಬೆಳ್ಳಂಬೆಳಗ್ಗೆ ಘಟನೆ‌ ನಡೆದಿದೆ. ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಹಳ್ಳಿ ಬಳಿ ಅಪಾರ್ಟ್‌ಮೆಂಟ್ ಕಾಂಪೌಂಡ್ ಕಾರ್ಮಿಕರ ಶೆಡ್ ಮೇಲೆ  ಕುಸಿದಿದೆ. ಪರಿಣಾಮ ನಿದ್ದೆ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಚಿರನಿದ್ರೆಗೆ ಜಾರಿದ್ದಾರೆ. ಘಟನೆ ವೇಳೆ ಶೆಡ್‌ನಲ್ಲಿ ಒಟ್ಟು 8 ಕಾರ್ಮಿಕರು ಮಲಗಿದ್ದರು ಎನ್ನಲಾಗಿದೆ. ಕಾಂಪೌಂಡ್ ಕುಸಿಯುತ್ತಿದ್ದಂತೆ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ದುರಾದೃಷ್ಟವಶಾತ್ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.

    Published by:guruganesh bhat
    First published: