Truth & Dare ಗೇಮ್​ಗಾಗಿ ವಿದ್ಯಾರ್ಥಿಗಳಿಂದ ಕಿಸ್ಸಿಂಗ್ ಪಂದ್ಯ! ಮಂಗಳೂರು ಪೊಲೀಸರಿಂದ ಶಾಕಿಂಗ್ ಮಾಹಿತಿ

ಈ ಘಟನೆ ನಡೆದು ನಾಲ್ಕು ತಿಂಗಳುಗಳು ಆಗಿದೆ. ವಿಡಿಯೋ ಮಾಡಿದ ವಿದ್ಯಾರ್ಥಿ ಇತ್ತೀಚಿಗೆ ತನ್ನ ತರಗತಿಯ ವಾಟ್ಸಪ್ ಗ್ರೂಪ್ ಗೆ ವಿಡಿಯೋ ಹಾಕಿದ್ದಾನೆ ಎಂದು ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಮಂಗಳೂರು: ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಕಿಸ್ಸಿಂಗ್ ಪಂದ್ಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಾಕಿಂಗ್ ಮಾಹಿತಿ (Shocking News) ಬಿಚ್ಚಿಟ್ಟಿದ್ದಾರೆ. ಕಿಸ್ಸಿಂಗ್ ಪಂದ್ಯದ ವಿಡಿಯೋ (Viral Video) ಮಾಡಿದ ವಿದ್ಯಾರ್ಥಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯರ ಹೆತ್ತವರು ಮತ್ತು ವಿದ್ಯಾರ್ಥಿನಿಯರನ್ನೂ ಠಾಣೆಗೆ ಕರೆಸಿದ್ದೇವೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಗಂಭೀರ ಪ್ರಕರಣ ಆಗಿರೋದರಿಂದ ತನಿಖೆ ನಡೆಸಿ ಪ್ರಕರಣ ದಾಖಲಿಸುತ್ತೇವೆ  ಎಂದು  ಮಂಗಳೂರು ನಗರ (Mangaluru Police) ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಘಟನೆಯ ಮೂಲಕ ಮಂಗಳೂರಿನಲ್ಲಿ(Mangaluru News)  ನಡೆದ ಶಾಕಿಂಗ್ ಘಟನೆಯೊಂದು ಬಹಿರಂಗಗೊಂಡಿದೆ. 

    ಈ ತಂಡದ ಇಬ್ಬರು ವಿದ್ಯಾರ್ಥಿಗಳು ಬಾವುಟಗುಡ್ಡೆಯಲ್ಲಿರುವ ಅಪಾರ್ಟ್ಮೆಂಟ್​ನಲ್ಲಿ ರೂಂ ಪಡೆದಿದ್ದರು. ಅಲ್ಲಿ ಈ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ರೂಂನಲ್ಲಿ ವಿದ್ಯಾರ್ಥಿಗಳು ಮದ್ಯಪಾನ ಸೇರಿದಂತೆ ಮಾದಕ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಮಂಗಳೂರು ಪೊಲೀಸರು ಶಾಕಿಂಗ್ ವಿಚಾರ ಬಹಿರಂಗಪಡಿಸಿದ್ದಾರೆ.

    ಏನಿದು ಟ್ರಥ್ Truth & Dare ಆಟ?
    ಈ ವಿಚಾರ ರೂಂನ ಮಾಲೀಕರಿಗೆ ತಿಳಿದು ವಿದ್ಯಾರ್ಥಿಗಳನ್ನು ರೂಂನಿಂದ ಹೊರಗೆ ಹಾಕಿದ್ದರು. ಈ ವಿದ್ಯಾರ್ಥಿಗಳು Truth & Dare ಆಟ ಆಡಿದ್ದಾರೆ. Truth ಅಂದ್ರೆ ಸತ್ಯ ಹೇಳಬೇಕು, Dare ಅಂದ್ರೆ ಹೇಳಿದ್ದನ್ನು ಮಾಡಿ ತೋರಿಸಬೇಕು. ಈ ಸಂಧರ್ಭದಲ್ಲಿ Dare ಆಟದಂತೇ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ್ದಾರೆ.

    ವಿದ್ಯಾರ್ಥಿಯಿಂದ ವಿಡಿಯೋ ರೆಕಾರ್ಡ್
    ಈ ವಿಡಿಯೋವನ್ನು ರೆಕಾರ್ಡ್ ಮಾಡಿದ ವಿದ್ಯಾರ್ಥಿ ವಿಡಿಯೋ ವೈರಲ್ ಮಾಡಿದ್ದಾನೆ ಎಂದು  ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ:Mangaluru Students Kissing: ಮಂಗಳೂರಿನ ವಿದ್ಯಾರ್ಥಿಗಳಿಂದ ಕಿಸ್ಸಿಂಗ್ ಸ್ಪರ್ಧೆ! ವಿಡಿಯೋ ವೈರಲ್

    ಘಟನೆ ನಡೆದು 4 ತಿಂಗಳು
    ಒಟ್ಟು ಎಂಟು ವಿದ್ಯಾರ್ಥಿಗಳು ಮತ್ತು ಮೂರು ವಿದ್ಯಾರ್ಥಿನಿಯರು ಈ ಪ್ರಕರಣದಲ್ಲಿ ಭಾಗವಹಿಸಿದ್ದಾರೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಪ್ರಸಿದ್ಧ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಈ ಘಟನೆ ನಡೆದು ನಾಲ್ಕು ತಿಂಗಳುಗಳು ಆಗಿದೆ. ವಿಡಿಯೋ ಮಾಡಿದ ವಿದ್ಯಾರ್ಥಿ ಇತ್ತೀಚಿಗೆ ತನ್ನ ತರಗತಿಯ ವಾಟ್ಸಪ್ ಗ್ರೂಪ್​ಗೆ ವಿಡಿಯೋ ಹಾಕಿದ್ದಾನೆ ಎಂದು ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: Dakshina Kannada: ಹಿಂದುಳಿದ ವರ್ಗದ ಅರ್ಹರಿಗೆ ಸಾಲ ಸೌಲಭ್ಯ; ಕೂಡಲೇ ಹೀಗೆ ಅರ್ಜಿ ಸಲ್ಲಿಸಿ

    ಶಿಕ್ಷಕರ ಗಮನಕ್ಕೆ ಬಂದಿತ್ತು
    ಅಲ್ಲದೇ ಈ ವಿಡಿಯೋ ಶಿಕ್ಷಕರ ಗಮನಕ್ಕೆ ಬಂದು ವಿಡಿಯೋ ರೆಕಾರ್ಡ್ ಮಾಡಿದ ವಿದ್ಯಾರ್ಥಿ ಮತ್ತು ಇತರ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋ ವೈರಲ್ ಆದ ಹಿನ್ನಲೆಯಲ್ಲಿ ಪ್ರಕರಣದ ಕುರಿತು ತನಿಖೆ ಮಾಡುತ್ತಿದ್ದೇವೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.

    ಎಲ್ಲಿ ಮಾಡಲಾದ ವಿಡಿಯೋ ಅದು?
    ಮನೆಯೊಂದರ ರೂಮ್ ಒಂದರಲ್ಲಿ ಈ ವಿಡಿಯೋ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ವಿಡಿಯೋ ಮಾಡಲಾದ ಮನೆ ಯಾವುದು? ಎಲ್ಲಿದೆ ಎಂಬ ಕುರಿತು ಈವರೆಗೂ ಯಾವುದೇ ಮೂಲದಿಂದಲೂ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಮಂಗಳೂರು ಪೊಲೀಸರು ಈ ವಿಡಿಯೋದ ಕುರಿತು ತನಿಖೆ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

    ಯೂನಿಫಾರ್ಮ್​ನಲ್ಲಿಯೇ ಚುಂಬಿಸಿಕೊಂಡ ವಿದ್ಯಾರ್ಥಿಗಳು
    ಅಷ್ಟೇ ಅಲ್ಲದೇ ವಿಡಿಯೋದಲ್ಲಿ ಕಾಣಿಸುವ ವಿದ್ಯಾರ್ಥಿನಿ ಯೂನಿಫಾರ್ಮ್​ನಲ್ಲಿಯೇ ಇದ್ದಾಳೆ. ಹೀಗಾಗಿ ಪೊಲೀಸರಿಗೆ ವಿದ್ಯಾರ್ಥಿಗಳು ಯಾವ ಕಾಲಜಿನವರು ಎಂಬ ಮಾಹಿತಿ ದೊರೆತಿದೆ ಎಂದು ಹೇಳಲಾಗಿದೆ. ಅಲ್ಲದೇ ವಿದ್ಯಾರ್ಥಿಗಳು ವಯಸ್ಕರೇ ಅಥವಾ 18 ವರ್ಷಕ್ಕಿಂತ ಕೆಳಗಿನವರೇ ಎಂಬ ಮಾಹಿತಿ ಸಹ ಖಚಿತವಾಗಿ ದೊರೆತಿಲ್ಲ.
    Published by:guruganesh bhat
    First published: