HOME » NEWS » State » MANGALURU POLICE WAS ARRESTED WHO CHEATED A PROFESSOR RHHSN KKM

ಸಂಘಟನೆಯೇ ಜೀವ ಎಂದವ ಡೀಲ್ ಕೇಸ್ ನಲ್ಲಿ ಲಾಕ್ ಆಗಿದ್ದು ಹೇಗೆ?

ಮಂಗಳೂರು ಉತ್ತರ, ಪೂರ್ವ ಠಾಣೆಗಳಲ್ಲಿ ಈತನ ವಿರುದ್ದ ಹಲವು ಪ್ರಕರಣ ದಾಖಲಾಗಿದೆ. ಸದ್ಯ ಕಂಕನಾಡಿ ಠಾಣೆಯಲ್ಲಿ ಪ್ರಸಾದ್ ವಿರುದ್ದ ರೌಡಿಶೀಟ್ ಓಪನ್ ಇದೇ. ಈ ರೀತಿ ಹಲವು ಜನರಿಗೆ ಮೋಸ ಮಾಡಿರುವ ಸಂಶಯವಿದ್ದು, ವಂಚನೆಯಾದವರೂ ದೂರು ನೀಡಿದರೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.

news18-kannada
Updated:April 1, 2021, 8:50 PM IST
ಸಂಘಟನೆಯೇ ಜೀವ ಎಂದವ ಡೀಲ್ ಕೇಸ್ ನಲ್ಲಿ ಲಾಕ್ ಆಗಿದ್ದು ಹೇಗೆ?
ಪ್ರಸಾದ್ ಅತ್ತಾವರ
  • Share this:
ಆತ ಸಮಾಜದಲ್ಲಿ ತನ್ನನ್ನು ತಾನೇ ಗಣ್ಯ ವ್ಯಕ್ತಿ ಎಂದು ಬಿಂಬಿಸಿಕೊಂಡಿದ್ದ ಅಸಾಮಿ. ಈತನ ನಕಲಿ ಗೆಟಪ್‌ಗೆ ಪ್ರೊಫೆಸರ್ ಒಬ್ರು ಮೋಸ ಹೋಗಿದ್ದಾರೆ. ವಿ.ವಿ ಕುಲಪತಿ ಹುದ್ದೆ ತೆಗೆಸಿಕೊಡುವುದಾಗಿ ಮೂರು ನಾಮ ಹಾಕಿದ ಆ ಮುಖಂಡ ಇದೀಗ ಜೈಲು ಸೇರಿದ್ದಾನೆ. ಹೌದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಫೋಟೋಗೆ ಫೋಸ್, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ,ಯಡಿಯೂರಪ್ಪ ಪುತ್ರ ಬಿ ಎಸ್ ವಿಜಯೇಂದ್ರ ಜೊತೆಗೊಂದು ಪೋಸ್. ಈ ರೀತಿ ವಿವಿಧ ಗಣ್ಯರು, ಧಾರ್ಮಿಕ ಮುಖಂಡರ ಜೊತೆ ಫೋಟೋಗೆ ಪೋಸ್ ಕೊಟ್ಟಿರುವ ಈತನನ್ನು ನೀವು ಯಾರೋ ದೊಡ್ಡ ವಿ.ವಿ.ಐ.ಪಿ ಅಂತಾ ಅಂದ್ಕೊಂಡ್ರೆ ಆ ನಿಮ್ಮ ಊಹೆ ತಪ್ಪು. ಯಾಕಂದ್ರೆ ಈತ ನಕಲಿ ಮುಖಂಡ ಮಂಗಳೂರಿನ ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ. ಅಸಲಿ ಕಥೆ ಏನು ಅನ್ನೋದು ತಿಳ್ಕೊಳ್ಳುವ ಮೊದಲು ಈ ಪ್ರಸಾದ್ ಅತ್ತಾವರನ ಬ್ಯಾಕ್ರೌಂಡ್ ಹಿಸ್ಟರಿ ಯೊಮ್ಮೆ ಓದಿ.

ಪ್ರಸಾದ್ ಅತ್ತಾವರ ಮಂಗಳೂರು ನಗರದ ಮರೋಳಿ ನಿವಾಸಿ. ಹಿಂದುತ್ವದ ಭಧ್ರಕೋಟೆ ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳಿಗೆ ಭೀಮ ಬಲ ತಂದುಕೊಡುವ ಕೆಲವೇ ಕೆಲವು ನಾಯಕರ ಪೈಕಿ ಪ್ರಸಾದ್ ಅತ್ತಾವರನ ಹೆಸರೂ ಬಲವಾಗಿ ಕೇಳಿ ಬಂದಿತ್ತು. ಯಾಕೆಂದರೆ ಆರಂಭದಲ್ಲಿ ಸಂಘಟನೆಯ‌ನ್ನೇ ಉಸಿರನ್ನಾಗಿಸಿಕೊಂಡು ಬೆಳೆದವನು ಪ್ರಸಾದ್ ಅತ್ತಾವರ. ಆದರೆ ದಿನ ಕಳೆದಂತೆ ಪ್ರಸಾದ್ ಅತ್ತಾವರನಿಗೆ ಹಣದ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆಯೇ ಸಣ್ಣ ಪುಟ್ಟ ಡೀಲ್ ಗೆ ಕೈ ಹಾಕಿದ್ದ. ಇದು ಸಂಘದ ಪ್ರಮುಖರಿಗೆ ತಿಳಿಯುತ್ತಿದ್ದಂತೆಯೇ ಪರಿವಾರದಿಂದ ಹೊರ ತಬ್ಬಿದ್ದರು.

ಇದಾಗ ಕೆಲವೇ ತಿಂಗಳೊಳಗೆ ಪ್ರಮೋದ್ ಮುತಾಲಿಕ್ ಶ್ರೀರಾಮಸೇನೆ ಎಂಬ ನೂತನ ಸಂಘಟನೆ ಆರಂಭಿಸಿದ್ದರು. ಶ್ರೀರಾಮಸೇನೆಗೆ ಪ್ರಸಾದ್ ಅತ್ತಾವರನನ್ನು ರಾಜ್ಯ ಸಂಚಾಲಕನಾಗಿ ಮಾಡಿದರು. ಆದರೆ ಅಲ್ಲೂ ಕಿತಾಪತಿ ಮಾಡಿ ಹೊರಬಂದು ತನ್ನದೇ ಆದ ರಾಮ ಸೇನಾ ಸಂಘಟನೆ ಕಟ್ಟಿದ್ದ. ಇದೀಗ ಈ ಪ್ರಸಾದ್ ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ ಜೈ ಶಂಕರ್ ಎಂಬವರಿಗೆ ರಾಯಚೂರು ವಿವಿಯ ಕುಲಪತಿ ಹುದ್ದೆ ತೆಗೆಸಿಕೊಡುವುದಾಗಿ ವಂಚನೆ ಮಾಡಿ ಜೈಲು ಸೇರಿದ್ದಾನೆ.

ಇದನ್ನು ಓದಿ: ಕಾರವಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ವಿಚಾರವಾಗಿ ಮುಂದುವರಿದ ಹಾಲಿ, ಮಾಜಿ ಶಾಸಕರ ಜಟಾಪಟಿ!

ಜೈ ಶಂಕರ್ ಅವರಿಗೆ ವಿವೇಕ್ ಆಚಾರ್ಯ ಎಂಬವರ ಮೂಲಕ ಪ್ರಸಾದ್ ಪರಿಚಯವಾಗಿತ್ತು. ಪ್ರಸಾದ್ ತನಗೆ ದೇಶದ, ರಾಜ್ಯದ ಗಣ್ಯ ವ್ಯಕ್ತಿಗಳ ಪರಿಚಯವಿದೆ. ಅವರ ಮೂಲಕ ಬೇಕಾದ ಕೆಲಸ ಮಾಡಿಸಿಕೊಳ್ಳಬಲ್ಲೆ ಎಂದು ಬಿಂಬಿಸಿಕೊಂಡಿದ್ದಾನೆ. ನಿಮಗೆ ರಾಯಚೂರು ವಿ.ವಿಯ ಕುಲಪತಿ ಸ್ಥಾನ ಕೊಡಿಸುತ್ತೇನೆ. ಅದಕ್ಕಾಗಿ 30 ಲಕ್ಷ ಹಣ ಕೊಡಬೇಕು ಎಂದು ಹೇಳಿ ಹದಿನೇಳೂವರೆ ಲಕ್ಷ ಹಣ ಪಡೆದು, ಉಳಿದ ಹಣಕ್ಕೆ ಮೂರು ಖಾಲಿ ಚೆಕ್ ಪಡೆದುಕೊಂಡಿದ್ದಾನೆ. ಕೊನೆಗೆ ಹುದ್ದೆ ಸಿಗದೇ ಇದ್ದಾಗ ಮೋಸ ಹೋಗಿರುವ ವಿಚಾರ ಜೈಶಂಕರ್ ಅವರಿಗೆ ಅಂದಾಜು ಆಗಿದೆ. ಹೀಗಾಗಿ ಕಂಕನಾಡಿ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರು ಉತ್ತರ, ಪೂರ್ವ ಠಾಣೆಗಳಲ್ಲಿ ಈತನ ವಿರುದ್ದ ಹಲವು ಪ್ರಕರಣ ದಾಖಲಾಗಿದೆ. ಸದ್ಯ ಕಂಕನಾಡಿ ಠಾಣೆಯಲ್ಲಿ ಪ್ರಸಾದ್ ವಿರುದ್ದ ರೌಡಿಶೀಟ್ ಓಪನ್ ಇದೇ. ಈ ರೀತಿ ಹಲವು ಜನರಿಗೆ ಮೋಸ ಮಾಡಿರುವ ಸಂಶಯವಿದ್ದು, ವಂಚನೆಯಾದವರೂ ದೂರು ನೀಡಿದರೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ಸದ್ಯ ಪೊಲೀಸರು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಗೆ ಮನವಿ ಸಲ್ಲಿಸಿದ್ದು ಪ್ರಸಾದ್ ಅತ್ತಾವರನ ಜೊತೆ ಯಾರ್ಯಾರು ಇದ್ದಾರೆ ಅನ್ನೋದು ಗೊತ್ತಾಗಲಿದೆ
Published by: HR Ramesh
First published: April 1, 2021, 8:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories