• Home
  • »
  • News
  • »
  • state
  • »
  • Surathkal Murder: ಜಲೀಲ್​​ ಕೊಲೆಗೆ ನೆರವು ನೀಡಿದ್ದ ಆರೋಪಿ ಸೇರಿ ಮೂವರು ಅರೆಸ್ಟ್​; ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ

Surathkal Murder: ಜಲೀಲ್​​ ಕೊಲೆಗೆ ನೆರವು ನೀಡಿದ್ದ ಆರೋಪಿ ಸೇರಿ ಮೂವರು ಅರೆಸ್ಟ್​; ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

ನೈತಂಗಡಿಯಲ್ಲಿ ಫ್ಯಾನ್ಸಿ ಅಂಗಡಿ ಹೊಂದಿದ್ದ ಅಬ್ದುಲ್​ ಜಲೀಲ್​​ ಅವರನ್ನು ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಸ್ಥಳೀಯರು ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿರುವ ಪ್ರಯತ್ನ ಮಾಡಿದರು ಜಲೀಲ್​ ಮೃತಪಟ್ಟಿದ್ದರು.

  • Share this:

ಮಂಗಳೂರು: ವ್ಯಾಪಾರಿ ಜಲೀಲ್​​ ಕೊಲೆ (Jaleel Murder case) ಪ್ರಕರಣದಲ್ಲಿ ಮೂರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಸುರತ್ಕಲ್ ​ಪೊಲೀಸ್​ ಠಾಣೆ ವ್ಯಾಪ್ತಿಯ  (Surathkal Police Station) ಕಾಟಿಪಳ್ಯ 4ನೇ ಬ್ಲಾಕ್​​​ನ ನೈತಂಗಡಿ ಬಳಿ ಶನಿವಾರ ನಡೆದಿದ್ದ ಕೊಲೆ ಪ್ರಕರಣ ಇದ್ದಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ 8 ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಅಲ್ಲದೇ ಮುನ್ನೆಚ್ಚರಿಕೆ ಕ್ರಮವಾಗಿ ಸುರತ್ಕಲ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್​ 144 (144 Section) ಜಾರಿ ಮಾಡಲಾಗಿತ್ತು. ಅಲ್ಲದೇ ಎರಡು ದಿನಗಳ ಕಾಲ ಸುರತ್ಕಲ್​ನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ನೈತಂಗಡಿಯಲ್ಲಿ ಫ್ಯಾನ್ಸಿ ಅಂಗಡಿ ಹೊಂದಿದ್ದ ಅಬ್ದುಲ್​ ಜಲೀಲ್​​ ಅವರನ್ನು ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಸ್ಥಳೀಯರು ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿರುವ ಪ್ರಯತ್ನ ಮಾಡಿದರು ಜಲೀಲ್​ ಮೃತಪಟ್ಟಿದ್ದರು.


ಪ್ರಕರಣದ ಕುರಿತಂತೆ ಮಾಧ್ಯಮಗಳಿಗೆ ಇಂದು ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಕಾಟಿಪಳ್ಳ ಜಲೀಲ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದು, ಸದ್ಯ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದೇವೆ. ಮುಂದಿನ 14 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇವರಲ್ಲಿ ಇಬ್ಬರು ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದು, ಓರ್ವ ಅವರನ್ನು ಬೈಕ್ ನಲ್ಲಿ ತಂದು ಬಿಟ್ಟಿದ್ದ.


Mangaluru Police Commissioner shashi kumar Said Three arrested in Surathkal Abdul Jaleel murder case sns
ಸುರತ್ಕಲ್


ಇದನ್ನೂ ಓದಿ: Crime News: ಸುರತ್ಕಲ್ ಬಳಿ ಚಾಕು ಇರಿದು ವ್ಯಕ್ತಿ ಕೊಲೆ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ


ಮೂವರನ್ನು ನಿನ್ನೆ ರಾತ್ರಿ ವಶಕ್ಕೆ ಪಡೆಯಲಾಗಿತ್ತು. ಕೋರ್ಟ್​ನಿಂದ ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ಮಾಡುತ್ತೇವೆ. ಕೊಲೆಗೆ ಕಾರಣ ಏನು ಅನ್ನೋದನ್ನ ಪೂರ್ಣ ತನಿಖೆ ಬಳಿಕ ತಿಳಿಸುತ್ತೇವೆ. ಮೂವರಲ್ಲಿ ಇಬ್ಬರು ಈ ಹಿಂದೆ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು. 2021ರಲ್ಲಿ ನಡೆದ ಕೊಲೆ ಯತ್ನ ಕೇಸ್ ಒಂದರಲ್ಲೂ ಆರೋಪಿಗಳು ಭಾಗಿಯಾಗಿದ್ದರು. ಇದುವರೆಗೂ ಜಲೀಲ್ ಕೊಲೆ ಪ್ರಕರಣದಲ್ಲಿ ಮಹಿಳೆಯರೂ ಸೇರಿ 10-12 ಜನರನ್ನ ವಶಕ್ಕೆ ಪಡೆದಿದ್ದೇವು. ಜಲೀಲ್ ಕುಟುಂಬಸ್ಥರು ಸೇರಿ ಕೆಲವರ ವಿಚಾರಣೆ ನಡೆದಿದೆ. ಆದರೆ ಸದ್ಯ ಒಟ್ಟು 3 ಜನರನ್ನ ಮಾತ್ರ ಬಂಧನ ಮಾಡಲಾಗಿದೆ ಎಂದು ತಿಳಿಸಿದರು.


ಸದನದಲ್ಲಿ ಜಲೀಲ್ ಹತ್ಯೆ ಕೇಸ್ ಸದ್ದು


ಇನ್ನು, ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಂಗಳೂರಿನ ಸುರತ್ಕಲ್​ ನಿವಾಸಿ ಜಲೀಲ್ ಹತ್ಯೆ ಪ್ರಕರಣವನ್ನು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರಸ್ತಾಪ ಮಾಡಿದರು. ಅನಾವಶ್ಯಕ ಗಲಾಟೆಗೆ ಸರ್ಕಾರ ಕ್ರಮ ತಗೊಂಡಿದ್ರೆ, ಅಲ್ಲಿ ಒಂದು ಕೊಲೆ ಆಗುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.


Mangaluru Police Commissioner shashi kumar Said Three arrested in Surathkal Abdul Jaleel murder case sns
ಪೊಲೀಸ್​ ಕಮಿಷನರ್ ಶಶಿಕುಮಾರ್


ಇದನ್ನೂ ಓದಿ: Moral Policing: ಮಂಗಳೂರು ಬಸ್​ನಲ್ಲಿ ನೈತಿಕ ಪೊಲೀಸ್​ಗಿರಿ; ಹಿಂದೂ ಯುವತಿ ಜೊತೆ ಕುಳಿತಿದ್ದಕ್ಕೆ ಹಲ್ಲೆ


ಅನೈತಿಕ ಗೂಂಡಾಗಿರಿ ಮಾಡುವರನ್ನು ಬೆಳಗ್ಗೆ ಬಂಧಿಸಿ, ಸಂಜೆ ಬಿಡುಗಡೆ ಮಾಡುತ್ತಾರೆ. ಕೊಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದರು. ಜಲೀಲ್ ಹತ್ಯೆ ಬಗ್ಗೆ ಉನ್ನತ ತನಿಖೆ ಆಗಬೇಕು. ಅಲ್ಲದೇ ಕೊಲೆಯಾದ ವ್ಯಕ್ತಿಯ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಸರ್ಕಾರವನ್ನು ಯು.ಟಿ.ಖಾದರ್ ಒತ್ತಾಯಿಸಿದ್ದರು.


ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಯತ್ನ


ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬೊಮ್ಮಾಯಿ ಅವರು, ಪೊಲೀಸರು ಸ್ವತಂತ್ರ್ಯವಾಗಿ ತನಿಖೆ ಮಾಡುತ್ತಾರೆ. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದು, ಕಾಂಗ್ರೆಸ್ ಇಂತಹ ಕೃತ್ಯದಿಂದ ರಾಜಕೀಯ ಲಾಭ ಪಡೆಯಲು ಯತ್ನಿಸ್ತಿದೆ. ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕ್ರಮಕೈಗೊಳ್ಳುತ್ತೆ ಅಂತ ಹೇಳಿದ್ದರು.

Published by:Sumanth SN
First published: