HOME » NEWS » State » MANGALURU POLICE COMMISSIONER ALLOT WORK FROM HOME OPTION TO WOMAN POLICE EMPLOYEES IN MANGALORE SCT KKM

Mangalore: ಮಂಗಳೂರು ಪೊಲೀಸ್ ಕಮಿಷನರ್ ಮಾದರಿ ಕಾರ್ಯ; ಮಹಿಳಾ ಪೊಲೀಸರಿಗೆ ವರ್ಕ್ ಫ್ರಮ್ ಹೋಂ ಅವಕಾಶ

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಮಿಷನರೇಟ್ ವ್ಯಾಪ್ತಿಯ 35 ಮಹಿಳಾ ಪೊಲೀಸ್ ಸಿಬ್ಬಂದಿಗೆ ಏ.30ರವರೆಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

news18-kannada
Updated:April 21, 2021, 2:01 PM IST
Mangalore: ಮಂಗಳೂರು ಪೊಲೀಸ್ ಕಮಿಷನರ್ ಮಾದರಿ ಕಾರ್ಯ; ಮಹಿಳಾ ಪೊಲೀಸರಿಗೆ ವರ್ಕ್ ಫ್ರಮ್ ಹೋಂ ಅವಕಾಶ
ಮಂಗಳೂರು ಪೊಲೀಸ್ ಠಾಣೆ
  • Share this:
ಮಂಗಳೂರು (ಏ. 21): ಕಡಲ ನಗರಿ ಮಂಗಳೂರಿನಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಹೀಗಾಗಿ ಮಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಮಿಷನರ್ ಸೂಚನೆ ನೀಡಿದ್ದು ಮಾಡೆಲ್ ಕೋವಿಡ್ ಸ್ಟೇಷನ್ ಸಹ ರೆಡಿ ಮಾಡಲಾಗಿದೆ. ಈ ನಡುವೆ 35 ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಲಾಗಿದೆ.

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಎಲ್ಲಾ 21 ಪೊಲೀಸ್ ಠಾಣೆಗಳಲ್ಲಿಯೂ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪೊಲೀಸ್ ಕಮೀಷನರ್ ಶಶಿಕುಮಾರ್ ಸೂಚನೆ ನೀಡಿದ್ದಾರೆ. ನಗರದ ಉರ್ವಾ ಠಾಣೆಯನ್ನು ಮಾಡೆಲ್ ಕೋವಿಡ್ ಪೊಲೀಸ್ ಸ್ಟೇಷನ್ ರೀತಿ ಪರಿವರ್ತಿಸಲಾಗಿದೆ.

ಸ್ಟೇಷನ್ ಹೊರಭಾಗದಲ್ಲಿ ಮೇಜು ಇರಿಸಿ, ಸಾರ್ವಜನಿಕರ ದೂರು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಂದ ಬರುವ ದೂರು ಅರ್ಜಿಯನ್ನು ಸೋಂಕು ನಿರೋಧಕವಾಗಿಸಲು ಯುವಿ ಡಿಸ್ ಇನ್ ಫೆಕ್ಷನ್ ಬಾಕ್ಸ್ ಇಡಲಾಗಿದೆ. ದೂರು ಅರ್ಜಿಗಳನ್ನು ಈ ಬಾಕ್ಸ್‌ಗೆ ಹಾಕಿ ಹತ್ತು ನಿಮಿಷ ಇಡಲಾಗುತ್ತೆ. ಇನ್ನ ಠಾಣೆಗೆ ಬಂದವರಿಗೆ ಥರ್ಮಲ್ ಸ್ಕ್ಯಾನರ್‌ ಮೂಲಕ ಟೆಂಪರೇಚರ್ ಟೆಸ್ಟ್ ಸೇರಿದಂತೆ ಪಲ್ಸ್ ರೇಟ್ ಕೂಡ ಚೆಕ್ ಮಾಡಲು ಕ್ರಮ ಕೈ ಗೊಳ್ಳಲಾಗಿದೆ. ಇದಲ್ಲದೇ ಪೊಲೀಸ್ ಸಿಬ್ಬಂದಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ದಿನಕ್ಕೆ ಮೂರು ಬಾರಿ ಕಷಾಯ ತಯಾರಿಸಿ ಕುಡಿಯುವ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: 14 ದಿನ ಮಾರ್ಗಸೂಚಿ ಪಾಲನೆಯಿಂದ ಕೊರೋನಾ ಚೈನ್ ಲಿಂಕ್ ಮುರಿಯಲು ಸಾಧ್ಯ: ಸಚಿವ ಸುಧಾಕರ್

ಇನ್ನು ಕಮಿಷನರೇಟ್ ವ್ಯಾಪ್ತಿಯ 35 ಮಹಿಳಾ ಪೊಲೀಸ್ ಸಿಬ್ಬಂದಿಗೆ ಏ.30ರವರೆಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಗರ್ಭಿಣಿ ಮಹಿಳೆಯರು ಹಾಗೂ ಎರಡು ವರ್ಷದೊಳಗಿನ ಮಕ್ಕಳಿರುವ ತಾಯಂದಿರಿಗೆ ಮನೆಯಿಂದಲೇ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಮೂಲಕ‌ ಕರ್ತವ್ಯ ನಿರ್ವಹಿಸುದಕ್ಕೆ ವಿನಾಯಿತಿ ನೀಡಲಾಗಿದೆ. ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕಾಗಿದ್ದು, ತುರ್ತು ಸಂದರ್ಭದಲ್ಲಿ ಅವಶ್ಯಕತೆ ಇದ್ರೆ ಮಾತ್ರ ಕರ್ತವ್ಯಕ್ಕೆ ಕರೆಸಿಕೊಳ್ಳಲಾಗುತ್ತದೆ.

ಒಂದನೇ ಕೋವಿಡ್ ಅಲೆಯ ಸಂದರ್ಭದಲ್ಲಿ ಮಂಗಳೂರಿನ 300ಕ್ಕೂ ಅಧಿಕ ‌ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಈ ಬಾರಿ ಕೊರೊನಾ ಅಲೆ ದಾಂಗುಡಿ ಇಟ್ಟಿರುವಾಗಲೇ ಮುಂಜಾಗ್ರತೆಗಾಗಿ ಕಮಿಷನರ್ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ‌ ತನ್ನ ಸಿಬ್ಬಂದಿ ವರ್ಗದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಕಮೀಷನರ್ ಅವರ ಈ ಕ್ರಮಗಳ ಬಗ್ಗೆಯೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ. ಕಮೀಷನರ್ ಈ ಹಿಂದೆ ಯೋಗ ಶಿಬಿರಗಳನ್ನು ನಡೆಸಿದ್ದರು.ಬಳಿಕ ಪೊಲೀಸರು ತೂಕ ಇಳಿಸಿಕೊಳ್ಳು ವಿಶೇಣ ಕಾರ್ಯಗಾರವನ್ನೂ ಶಶಿಕುಮಾರ್ ಹಮ್ಮಿಕೊಂಡಿದ್ದರು..ಇದೀಗ ಕೊವೀಡ್ ಹಿನ್ನಲೆ ವರ್ಕ್ ಫ್ರಮ್‌ಹೋಮ್ ಗೆ ಅವಕಾಶ ನೀಡಿದ್ದಾರೆ
Published by: Sushma Chakre
First published: April 21, 2021, 2:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories