ಮಂಗಳೂರು: ರೈಲಿನಲ್ಲಿ (Train) ನಾಪತ್ತೆಯಾಗಿದ್ದ (Missing) ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ರೈಲ್ವೆ ಸಿಬ್ಬಂದಿಯ ( Railway personnel) ಉದಾಸೀನ ಧೋರಣೆ ಬೆಳಕಿಗೆ ಬಂದಿದೆ. ನಾಪತ್ತೆಯಾಗಿದ್ದ ವ್ಯಕ್ತಿ 24 ಗಂಟೆಗಳ ನಂತರ ಕೋಚ್‌ನ ಶೌಚಾಯಲಯಲ್ಲಿ (Toilet) ಶವವಾಗಿ ಪತ್ತೆಯಾಗಿದ್ದಾರೆ. ಮುಂಬೈ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಬಿ3 ಕೋಚ್‌ನ ಶೌಚಾಲಯದಲ್ಲಿ ಏಪ್ರಿಲ್ 18 ರಂದು ಮುಂಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಮೋಹನ್ ಎಸ್.ಬಂಗೇರ ಎಂಬುವವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಸಮಯಕ್ಕೆ ಸರಿಯಾಗಿ ರೈಲ್ವೆ ಸಿಬ್ಬಂದಿ ಬಗೇರರನ್ನು ಹುಡುಕಲು ನೆರವಾಗಿದ್ದರೆ, ಅವರ ಜೀವವನ್ನು ಉಳಿಸಬಹುದಿತ್ತು ಎಂದು ಮೃತರ ಸಹೋದರ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ಮೂಲದ ವ್ಯಕ್ತಿ
ಮುಂಬೈನಲ್ಲಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ ಮಂಗಳೂರು ಸಮೀಪದ ಕಟೀಲು ಮೂಲದ ಮೋಹನ್ ಬಂಗೇರ (56) ಎಂಬುವವರು ಮೃತಪಟ್ಟಿದ್ದಾರೆ. ಅವರು ಎಪ್ರಿಲ್ 18ರ ರೈಲು ಹತ್ತಿದ್ದರು. ಆದರೆ ಮರುದಿನ ಬೆಳಗ್ಗೆ ಆತ ಕಾಣೆಯಾಗಿದ್ದರು. ಇದನ್ನು ತಿಳಿದು ಸಹ ಪ್ರಯಾಣಿಕರೊಬ್ಬರ ಮೂಲಕ ರೈಲ್ವೆ ಅಧಿಕಾರಿಗಳು ಆತನ ಸಂಬಂಧಿಕರಿಗೆ ಸಂದೇಶ ರವಾನಿಸಿದ್ದಾರೆ. ಕುಟುಂಬಸ್ಥರು ಶೌಚಾಲಯಗಳನ್ನು ಪರಿಶೀಲಿಸಿದ್ದೀರಾ ಎಂದು ಟಿಟಿಇಗಳನ್ನು ವಿಚಾರಿಸಿದಾಗ, ಪರಿಶೀಲನೆ ಮಾಡಿರುವುದಾಗಿ ಕುಟುಂಬಕ್ಕೆ ತಿಳಿಸಿದರು.
ರೈಲಿನಲ್ಲಿ ಕಾಣಿಸಲಿಲ್ಲ ಎಂದು ಸಬೂಬು
ಅಣ್ಣನನ್ನು ಹುಡುಕಿಕೊಂಡು ರಾಮ ಬಂಗೇರ ಅವರು ಏಪ್ರಿಲ್ 19ರಂದು ಸುರತ್ಕಲ್ ರೈಲು ನಿಲ್ದಾಣಕ್ಕೆ ಹೋಗಿದ್ದಾರೆ. ಆದರೆ ಅವರಿಗೆ ಅಧಿಕಾರಿಗಳು ಬಂಗೇರ ಮಾರ್ಗ ಮಧ್ಯೆ ಬೇರೆ ನಿಲ್ದಾಣದಲ್ಲಿ ಇಳಿದಿರಬಹುದು ಎಂದು ತಿಳಿಸಿದ, ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಹೇಳಿದ್ದಾರೆ.
ಏತನ್ಮಧ್ಯೆ, ಮಧ್ಯಾಹ್ನ 1.05 ರ ಸುಮಾರಿಗೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿದ ರೈಲು ಛತ್ರಪತಿ ಶಿವಾಜಿ ಟರ್ಮಿನಲ್ಗೆ ಹೊರಡುವ ಮೊದಲು ನೀರು ತುಂಬುವುದು, ಶೌಚಾಲಯ ಹಾಗೂ ಬೋಗಿಯನ್ನು ಸ್ವಚ್ಛಗೊಳಿಸಿದೆ. ಕೋಚ್‌ನ ಎಲ್ಲಾ ನಾಲ್ಕು ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾಗಿ ಕ್ಲೀನಿಂಗ್ ಏಜೆನ್ಸಿ ವರದಿ ಮಾಡಿದೆ. ಹಾಗೇಯೇ ಬಂಗೇರ ಅವರ ವಸ್ತುಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಸಹ ಪ್ರಯಾಣಿಕ ಎಚ್ಚರಿಸಿದರೂ ಗಂಭೀರವಾಗಿ ತೆಗೆದುಕೊಳ್ಳದ ಸಿಬ್ಬಂದಿ
ರೈಲಿನ B3 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹ-ಪ್ರಯಾಣಿಕರೊಬ್ಬರು ಬರ್ತ್ 39 (ಮೋಹನ್ ಎಸ್ ಬಂಗೇರಾ) ಪ್ರಯಾಣಿಕರು ಬೆಳಿಗ್ಗೆ 5 ಗಂಟೆಯಿಂದ ಕಾಣಿಸುತ್ತಿಲ್ಲ ಎಂದು ಟಿಕೆಟ್ ಪರೀಕ್ಷಕರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಸಂದೇಶವನ್ನು ಅವರ ಸಂಬಂಧಿಕರಿಗೆ ಅವರ ಪತ್ನಿ ಲಲಿತಾ ಮತ್ತು ಹಿರಿಯ ಸಹೋದರ ರಾಮ ಎಸ್ ಬಂಗೇರ ಅವರ ಗಮನಕ್ಕೂ ತರಲಾಗಿದೆ.
ಮಂಗಳೂರು ಸಮೀಪದ ಕಟೀಲು ಮೂಲದವರಾದ ಮೋಹನ್ ಬಂಗೇರ (56) ಅವರು ಮುಂಬೈನ ಮಾಹಿಮ್-ಧಾರವಿಯಲ್ಲಿ ತಮ್ಮ ತಂದೆಯ ಹಾಲಿನ ಪಾರ್ಲರ್ ನಡೆಸುತ್ತಿದ್ದರು, ಅವರು ಮಂಗಳವಾರ ಕಟೀಲಿನಲ್ಲಿ ಕುಟುಂಬದ 50 ನೇ ವರ್ಷದ ಯಕ್ಷಗಾನ ಸೇವೆಯಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ಆಗಮಿಸಿದ್ದರು.
ಟಾಯ್ಲೆಟ್ನಲ್ಲೇ ಪತ್ತೆಯಾಯ್ತು ಶವ
ರಾಮ ಅವರು ತಮ್ಮ ಸಹೋದರ ನಾಪತ್ತೆಯಾಗಿರುವ ಕುರಿತು ಮಂಗಳೂರು ಸೆಂಟ್ರಲ್‌ನಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ರಾಮ ಅವರು ಮಡಗಾಂವ್ (ಗೋವಾ) ಗೆ ಧಾವಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಆದರೆ ಯಾವುದೇ ಮಾಹಿತಿ ಸಿಗಲಿಲ್ಲ. ಆದರೆ ಮರುದಿನ ಮೋಹನ್ ಶವ ರೈಲಿನ ಬಿ3 ಕೋಚ್‌ನ ಟಾಯ್ಲೆಟ್‌ನಲ್ಲಿ ಪತ್ತೆಯಾಗಿದೆ ಎಂದು ಮುಂಬೈನಿಂದ ಮಾಹಿತಿ ಬಂದಿದೆ. ಮೃತದೇಹವನ್ನು ಇದೇ ರೈಲಿನಲ್ಲಿ ಏಪ್ರಿಲ್ 21 ರಂದು ಮಂಗಳೂರಿಗೆ ಕಳುಹಿಸಲಾಗಿದೆ.
ಶವದ ಪ್ಯಾಕಿಂಗ್ ಸರಿಯಾಗಿ ಮಾಡದ ಸಿಬ್ಬಂದಿ
ನನ್ನ ಸಹೋದರ ಜೀವಂತವಾಗಿದ್ದಾನೆ, ಮಾರ್ಗಮಧ್ಯೆ ಇಳಿದಿರಬಹುದು ಎಂದು ಸಿಬ್ಬಂದಿ ತಿಳಿಸಿದ್ದರಿಂದ ನಾನು ಶೌಚಾಲಯಗಳನ್ನು ಪರಿಶೀಲಿಸಲಿಲ್ಲ. ಆದರೆ ರೈಲ್ವೇ ಸಿಬ್ಬಂದಿ ಹಾಗೂ ಆರ್‌ಪಿಎಫ್ ಅಧಿಕಾರಿಗಳು ಶೌಚಾಲಯಗಳನ್ನು ಪರಿಶೀಲಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಇನ್ನು ನಾನು ಶವದ ಪ್ಯಾಕಿಂಗ್ ಶುಲ್ಕವಾಗಿ 10,500 ರೂಪಾಯಿ ಪಾವತಿಸಿದ್ದರೂ, ಮಂಗಳೂರಿಗೆ ಆಗಮಿಸಿದಾಗ ನನ್ನ ಸಹೋದರನ ದೇಹವನ್ನು ದುರ್ವಾಸನೆ ಬರುತ್ತಿತ್ತು. ಅವೈಜ್ಞಾನಿಕ ಪ್ಯಾಕ್ ಮಾಡಿ ಮೃತ ದೇಹಕ್ಕೆ ಘೋರ ಅವಮಾನ ಮಾಡಿದ್ದಾರೆ. ಪ್ರಯಾಣಿಕರ ಸುರಕ್ಷತೆಯ ಬಗ್ಗೆ ರೈಲ್ವೆಯ ಹೊಣೆಗಾರಿಕೆಯನ್ನು ಪ್ರಶ್ನಿಸಿರುವ ರಾಮ ಅವರಿ, ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ