ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ (Mangalore University College) ಹಿಜಾಬ್ ವಿವಾದ (Hijab Row) ತಾರಕಕ್ಕೇರಿದೆ. ಹಿಜಾಬ್ ಗಲಾಟೆ ವಿಚಾರವಾಗಿ ಕಾಲೇಜು ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಬಿವಿಪಿ (ABVP) ಒತ್ತಾಯಕ್ಕೆ ಮಣಿದಿದ್ದಾರೆ. ಇನ್ನೊಂದೆಡೆ ಎಲ್ಲಾ ಆರೋಪಗಳಿಗೆ ಕಾಲೇಜು ಪ್ರಾಂಶುಪಾಲೆ ಸುಧೀರ್ಘ ಉತ್ತರ ನೀಡಿದ್ದು ಕೆಲ ಶಾಸಕರ ಬಗ್ಗೆ ಆರೋಪವನ್ನೂ ಮಾಡಿದ್ದಾರೆ. ಕಾಲೇಜು ಕ್ಯಾಂಪಸ್ ನಲ್ಲಿ (College Campus) ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಮಂಗಳೂರಿನ ಪ್ರಭಾವಿ ಶಾಸಕರು (MLAs) ಕರೆ ಮಾಡಿ ಜೋರು ಮಾಡಿದ್ದಾರೆ ಅಂತಾ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ರೈ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅನುಸೂಯ ರೈ, ನನಗೆ ಎಲ್ಲಾ ಶಾಸಕರು ಫೋನ್ ಮಾಡಿ ಜೋರು ಮಾಡುತ್ತಾರೆ. ನೀವು ಯಾಕೆ ಮಾಡಿದ್ರಿ ಅಂತಾ ಜೋರು ಮಾಡುತ್ತಾರೆ. ಯಾರು ಪ್ರಭಾವಿ ಶಾಸಕ ಅಂತಾ ಹೇಳುತ್ತಾರೋ ಅವರು ಜೋರು ಮಾಡುತ್ತಿದ್ದಾರೆ..ಯಾರ ಮಾತು ಕೇಳಿ ಕ್ಯಾಂಪಸ್ ನಲ್ಲಿ ತೆಗೆಸುತ್ತಿದ್ದಿರಾ ಅಂತಾ ಹೇಳಿದ್ದಾರೆ.
ಪ್ರಭಾವಿ ಶಾಸಕರು ಯಾರು? ಅವರ ಬಗ್ಗೆ ದಾಖಲೆಗಳು ಇದ್ದರೆ ತೋರಿಸಿ
ನಮ್ಮ ಲೋಕಲ್ ಎಂಎಲ್ ಎ ಕೂಡಾ ಕೇಳುತ್ತಿದ್ದಾರೆ. ಯಾಕೆ ಕೋರ್ಟ್ ನಿಯಮ ಪಾಲಿಸಿಲ್ಲ ಅಂತಾ ಜೋರು ಮಾಡುತ್ತಾರೆ. ಎಲ್ಲರ ಮಾತು ಎಲ್ಲಾ ಸಹೋದ್ಯೋಗಿಗಳ ಮಾತು ಗಣನೆಗೆ ತೆಗೆದುಕೊಂಡು ಆದೇಶ ಮಾಡಿದ್ದೇನೆ. ನಾನು ಮಕ್ಕಳ ಹೇಳಿಕೆಗಳಿಗೆ ದಾಖಲೆ ಕೇಳಬಹುದು. ಆದರೆ ಅವರ ಲೆವೆಲ್ ಗೆ ನಾನು ಹೋಗೋದಿಲ್ಲ. ಪರಿಸ್ಥಿತಿ ಕೂಲ್ ಆಗಲು ಸುಮ್ಮನಿದ್ದೇನೆ. ಪ್ರಭಾವಿ ಶಾಸಕರು ಯಾರು? ಅವರ ಬಗ್ಗೆ ದಾಖಲೆಗಳು ಇದ್ದರೆ ತೋರಿಸಿ. ಮಾಧ್ಯಮಗಳಿಗೆ ವಿದ್ಯಾರ್ಥಿ ನಾಯಕರು ಹೇಳಿಕೆ ಕೊಡುತ್ತಿಲ್ಲ.. ವಿದ್ಯಾರ್ಥಿಗಳು ಹೇಳಿಕೆ ಕೊಡುತ್ತಿದ್ದಾರೆ ಅಂತಾ ಅನೂಸೂಯ ರೈ ಹೇಳಿದ್ದಾರೆ.
ಇದನ್ನೂ ಓದಿ: Love Jihad: ಆರೋಪಿಗೆ ಬಲೆ ಬೀಸಿದ ಪೊಲೀಸರು; ಕಾಸರಗೋಡಿನಲ್ಲಿ ಅಜೀಜ್ & ಸಲ್ಮಾಗಾಗಿ ಹುಡುಕಾಟ
ಮೇ12 ರಿಂದ 16ರವರೆಗೆ ಆನ್ಲೈನ್ ತರಗತಿ ಆರಂಭವಾಗಿವೆ..ಕಾಲೇಜ್ ನಲ್ಲಿ ದುಪ್ಪಟ್ಟು ಧರಿಸಲು ಅನುಮತಿ ನೀಡಲಾಗಿತ್ತು. ಶಾಲಿನ ಕಲರ್ ನಲ್ಲಿ ಶಿರವಸ್ತ್ರ ಧಾರಣಗೆ ಅನುಮತಿ ನೀಡಲಾಗಿದೆ. ಈ ಬಗ್ಗೆ 2015 ರಲ್ಲಿ ಪ್ರಿಂಟ್ ಆದ ಕೈಪಿಡಿಯಲ್ಲಿ ತಿಳಿಸಲಾಗಿದೆ. ಅದರಂತೆ ಈ ವರ್ಷ ಕೂಡ ಶಿರವಸ್ತ್ರ ಧರಿಸಲು ಅನುಮತಿ ನೀಡಲಾಗಿದೆ.
ವಿಶ್ವವಿದ್ಯಾಲಯ ನೀಡುವ ಗೈಡ್ ಲೈನ್ಸ್ ಪಾಲನೆ
ಆದರೆ ಹೈಕೋರ್ಟ್ ಆದೇಶ ಜಾರಿಯಾಗಿದ್ದು ವರ್ಷದ ನಡುವಿನಲ್ಲಿ. ಅದರಂತೆ 44 ಮಕ್ಕಳು ಕಾಲೇಜ್ ಗೆ ಪ್ರವೇಶ ಪಡೆದು ಬಂದಿದ್ದಾರೆ. ಸಮವಸ್ತ್ರದ ಒಂದು ಭಾಗವಾಗಿ ಶಿರವಸ್ತ್ರ ಧರಿಸಿ ಬರುತ್ತಿದ್ದರು. ಯೂನಿವರ್ಸಿಟಿ ಕಾಲೇಜ್ ವಿಶ್ವವಿದ್ಯಾಲಯ ಅಡಿಯಲ್ಲಿ ಬರುತ್ತದೆ. ವಿಶ್ವವಿದ್ಯಾಲಯ ನೀಡುವ ಗೈಡ್ ಲೈನ್ಸ್ ನಾವು ಪಾಲನೆ ಮಾಡುತ್ತಾ ಬಂದಿದ್ದೇವೆ.
ವಾಟ್ಸಪ್ ಸಂದೇಶ
ಮೇ 17 ರಲ್ಲಿ ವಾಟ್ಸಪ್ ಮೂಲಕ ಸಂದೇಶ ರವಾನೆ ಮಾಡಲಾಗಿದೆ. ಎಲ್ಲರಿಗೂ ಸಮವಸ್ತ್ರ ಕಡ್ಡಾಯ. ಶಿರವಸ್ತ್ರದಾರಣೆಗೆ ಅವಕಾಶ ಇಲ್ಲ ಎಂದು ಸಂದೇಶ ರವಾನೆ ಮಾಡಿದ್ದೆ. ಅ ಬಳಿಕ ಕೆಲ ಮಕ್ಕಳು ಕ್ಯಾಂಪಸ್ ನಲ್ಲಿ ಹಿಜಾಬ್ ಧರಿಸಲು ಅನುಮತಿ ಕೊಡಬಾರದು ಎಂದು ಬೇಡಿಕೆ ಇಟ್ಟರು. ಈ ಬಗ್ಗೆ ರಿಜಿಸ್ಟರ್ ಮತ್ತು ವಿಸಿಯವರ ಗಮನಕ್ಕೆ ತಂದಿದ್ದೇವೆ ಅಂತಾ ಹೇಳಿದ್ದಾರೆ.
ಇಡೀ ಕಾಲೇಜಿನಲ್ಲಿ 44 ಮುಸ್ಲಿಂ ಮಕ್ಕಳಿದ್ದು, ವಿವಾದ ಒಂದು ತಂಡದಿಂದಷ್ಟೇ ಆಗಿದೆ.ಒಂದು 15 ಮಂದಿ ವಿದ್ಯಾರ್ಥಿಗಳಷ್ಟೇ ಹಿಜಾಬ್ ಕುರಿತು ಮಾತನಾಡ್ತಿದಾರೆ. ನಿನ್ನೆ ಅವರು ಬಂದಾಗ ನಾವೇ ಅವರನ್ನು ಹಿಜಾಬ್ ತೆಗೆದು ಬನ್ನಿ ಅಂತ ಕಳಿಸಿದ್ದೇವೆ. ಹಾಗಾಗಿ ಅವರು ನಿನ್ನೆ ಡಿಸಿ ಕಚೇರಿಗೆ ಹೋಗಿದ್ದರು. ಆ 15 ಮಂದಿ ಇವತ್ತು ತರಗತಿಗೆ ಬಂದಿಲ್ಲ. ಅವರನ್ನ ಬಿಟ್ಟು ಉಳಿದ ಕೆಲ ಮಕ್ಕಳು ಹಿಜಾಬ್ ತೆಗೆದು ಕಾಲೇಜಿಗೆ ಬಂದಿದ್ದಾರೆ. ಕೆಲ ವಿದ್ಯಾರ್ಥಿಗಳು ಹೈ ಕೋರ್ಟ್ ತೀರ್ಪಿನ ಬಳಿಕ ಕಾಲೇಜಿಗೆ ಬರ್ತಿಲ್ಲ. ಒಂದು ಮೂರ್ನಾಲ್ಕು ವಿದ್ಯಾರ್ಥಿಗಳು ಟಿಸಿ ತೆಗೆದುಕೊಂಡು ಹೋಗಿದ್ದಾರೆ..ಆದರೆ ಇದು ಎಲ್ಲಾ ವಿದ್ಯಾರ್ಥಿಗಳ ಸಮಸ್ಯೆ ಅಲ್ಲ, ಕೆಲ 15 ವಿದ್ಯಾರ್ಥಿಗಳ ಸಮಸ್ಯೆ ಅಂತಾ ಸ್ಪಷ್ಟಪಡಿಸಿದ್ದಾರೆ.
ಶಿರವಸ್ತ್ರವನ್ನ ಕಾಲೇಜು ನಿಯಮದಿಂದ ತೆಗೆಯಲಾಗಿದೆ.
ಆ 15 ವಿದ್ಯಾರ್ಥಿಗಳು ಈ ವರ್ಷದಿಂದ ಆದೇಶ ಯಾಕೆ ಜಾರಿ ಮಾಡ್ತಿದೀರಿ ಅಂತಿದಾರೆ. ಕೋರ್ಟ್ ತೀರ್ಪಿನ ಮೊದಲು ನಮ್ಮ ಕಾಲೇಜಲ್ಲಿ ಶಿರವಸ್ತ್ರ ಹಾಕಲು ಅವಕಾಶ ಇತ್ತು. ಆದರೆ ತೀರ್ಪು ಬಂದ ಬಳಿಕ ಆನ್ ಲೈನ್ ತರಗತಿ ಇತ್ತು. ಆಫ್ ಲೈನ್ ಆದ ನಂತ್ರ ಕೆಲ ವಿದ್ಯಾರ್ಥಿಗಳು ಹಿಜಾಬ್ ಗೆ ವಿರೋಧ ಮಾಡಿದ್ರು. ಹೀಗಾಗಿ ವಿವಿ ಸಿಂಡಿಕೇಟ್ ಸಭೆ ನಡೆಸಿ ಶಿರವಸ್ತ್ರವನ್ನ ಕಾಲೇಜು ನಿಯಮದಿಂದ ತೆಗೆಯಲಾಗಿದೆ.
ಹಿಜಾಬ್ ಗೆ ಅವಕಾಶ ಇಲ್ಲ ಅಂತ ನೋಟೀಸ್ ಮಾಡಿದ್ರು ನಿನ್ನೆ ಕೆಲವರು ಬಂದಿದ್ರು. ಹೀಗಾಗಿ ನಾನೇ ಅವರನ್ನು ವಾಪಾಸ್ ಕಳುಹಿಸಿ ಕೊಟ್ಟಿದ್ದೇವೆ. ನಿನ್ನೆ ಕೆಲ ಮಕ್ಕಳು ಕ್ಯಾಂಪಸ್ ಗೂ ಹಿಜಾಬ್ ಬಿಡಬಾರದು ಅಂತ ಹೇಳಿದ್ರು .ಕೊನೆಗೆ ಒತ್ತಾಯಕ್ಕೆ ಮಣಿದು ನಿನ್ನೆ ಕ್ಯಾಂಪಸ್ ನಲ್ಲೂ ನಿಷೇಧ ಮಾಡಲಾಗಿದೆ ಅಂತಾ ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲೆ ಡಾ.ಅನುಸೂಯ ರೈ ಹೇಳಿದ್ದಾರೆ.
ಇದನ್ನೂ ಓದಿ: Text Book Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧ; ಮೇ 31ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರವೇ ಸಜ್ಜು
ರಾಜೀನಾಮೆ ನೀಡಿದ್ಯಾಕೆ ವಿದ್ಯಾರ್ಥಿ ನಾಯಕ?
ಮಂಗಳೂರು ಯೂನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ಗಲಾಟೆಗೆ ಕಾಲೇಜು ಯೂನಿವರ್ಸಿಟಿ ಪ್ರೆಸಿಡೆಂಟ್ ರಾಜೀನಾಮೆ ನೀಡಿದ್ದಾರೆ..ಗಲಾಟೆ ವಿಚಾರವಾಗಿ ರಾಜೀನಾಮೆ ಗೆ ಕಾಲೇಜು ಯೂನಿಯನ್ ಪ್ರೆಸಿಡೆಂಟ್ ವಿನ್ಯಾಸ್ ನಿರ್ಧಾರ ಮಾಡಿದ್ದಾರೆ. ಹಿಜಾಬ್ ಧಾರಿ ವಿದ್ಯಾರ್ಥಿನಿಯರ ಬಗ್ಗೆ ಮೃದು ಧೋರಣೆ ತೋರಿದ ಆರೋಪವನ್ನು ಎಬಿವಿಪಿಯವರು ಮಾಡಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ವಿದ್ಯಾರ್ಥಿಗಳ ಒತ್ತಾಯ ಕೇಳಿಬಂದಿದೆ.ಎ.ಬಿ.ವಿ.ಪಿ ಬೆಂಬಲಿತ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದೆ. ಆದರೆ ನಾನು ಯಾರ ಪರವಾಗಿಯೂ ಇಲ್ಲ.
ವಿದ್ಯಾರ್ಥಿ ನಾಯಕನಾಗಿರುವ ಕಾರಣ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಅಸಾಧ್ಯ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಏಕಾಏಕಿ ಹಿಜಾಬ್ ತೆಗೆಯುವಂತೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಇದರಿಂದ ಕೆಲ ಸ್ಟೂಡೆಂಟ್ ರೆಪ್ರೆಸೆಂಟೇಟಿವ್ಸ್ ಗೆ ಬೇಜಾರು ಆಗಿದೆ. ಹೀಗಾಗಿ ನಾನು ರಾಜೀನಾಮೆ ಕೊಡ್ತೇನೆ ಅಂತಾ ಕಾಲೇಜು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವಿನ್ಯಾಸ್ ಹೇಳಿದ್ದಾರೆ.
ದಾಖಲೆ ಬಿಡುಗಡೆಗೊಳಿಸಿದ ವಿದ್ಯಾರ್ಥಿನಿಯರು
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಕುರಿತಾಗಿ, ಎಬಿವಿಪಿ ವಿರುದ್ಧ ಹಿಜಾಬ್ ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ..ವಾಟ್ಸಪ್ ಮೆಸೇಜ್ ನಲ್ಲಿ ಹಿಜಾಬ್ ಧಾರಿ ವಿದ್ಯಾರ್ಥಿನಿಯರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ..ಇವತ್ತು ಸಣ್ಣ ಟೀಸರ್ ಮುಂದೆ ದೊಡ್ಡ ಮಟ್ಟದಲ್ಲಿ ಏಳುತ್ತೇವೆ.ಎಲ್ಲರೂ ಕೇಸರಿ ಶಾಲು ಜೊತೆಗೆ ತರಬೇಕು ಅಂತಾಎಬಿವಿಪಿ ವಿದ್ಯಾರ್ಥಿಗಳು ಮಾಡಿದ ಮೆಸೇಜ್ ನ್ನು ಹಿಜಾಬ್ ವಿದ್ಯಾರ್ಥಿನಿಯರು ದಾಖಲೆ ಬಿಡುಗಡೆ ಮಾಡಿದ್ದಾರೆ.
ಕಾಲೇಜಿನ ನಿಯಮದಲ್ಲೂ ಸಮವಸ್ತ್ರ ದ ಶಾಲನ್ನು ದುಪ್ಪಟ್ಟಾಗಿ ಬಳಸಲು ಅವಕಾಶ ಇದೆ ಎಂಬ ನಿಯಮ ಇದೆ. ಇಷ್ಟು ದಿನ ಇಲ್ಲದ ಹಿಜಾಬ್ ವಿವಾದ ಈಗ ಏಕಾಏಕಿ ಬಂದದ್ದೇಕೆ ? ಇದು ಎಬಿವಿಪಿ ಸಂಘಟನೆಯ ಷಡ್ಯಂತ್ರ .ಕಾಲೇಜಿಗೆ ಸಂಬಂಧಿಸಿದ ಪ್ರಮುಖ ನಿಯಮ ಪುಸ್ತಕದಲ್ಲಿ ಹಿಜಾಬ್ ಗೆ ಅವಕಾಶ ನೀಡಲಾಗಿದೆ. ಸಮವಸ್ತ್ರ ಜೊತೆಗೆ ಶಿರವಸ್ತ್ರ ಧರಿಸಲು ಇಚ್ಛಿಸುವ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಶವವಸ್ತ್ರದ ಮೇಲು ಹೊದಿಕೆ (ಶಾಲು) ಶಿರವಸ್ತ್ರವನ್ನು ಧರಿಸಲು ಅನುಮತಿ ಇರುತ್ತದೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ .
ನ್ಯಾಯ ದೊರಕುವ ಭರವಸೆ
ಆದರೂ ಈಗ ಹಿಜಾಬನ್ನು ನಿಷೇಧಿಸಿರುವುದು ಸರಿಯಲ್ಲ. ನಾವೆಲ್ಲ ವಿದ್ಯಾರ್ಥಿನಿಯರು ನ್ಯಾಯಕ್ಕಾಗಿ ಹೋರಾಡುತ್ತೇವೆ. ಈ ವಿವಾದ ಸರಿಪಡಿಸಲು ಜಿಲ್ಲಾಧಿಕಾರಿಯವರು ಸೋಮವಾರದವರೆಗೆ ಕಾಲಾವಕಾಶ ಕೇಳಿದ್ದಾರೆ ನಮಗೆ ನ್ಯಾಯ ದೊರಕುವ ಭರವಸೆ ಇದೆ ಅಂತಾ ಹಿಜಾಬ್ ಧಾರಿ ವಿದ್ಯಾರ್ಥಿನಿ ಗೌಸಿಯಾ ಹೇಳಿದ್ದಾರೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ