Mangalore Flood: ಬೆಳ್ತಂಗಡಿಯ ಮಹಾ ಪ್ರವಾಹಕ್ಕೆ ಒಂದು ವರ್ಷ; ಇನ್ನೂ ಹಸನಾಗಿಲ್ಲ ಸಂತ್ರಸ್ತರ ಬದುಕು

Karnataka Rains: ಕಳೆದ ವರ್ಷ ಅಗಸ್ಟ್​ನಿಂದ ಅಕ್ಟೋಬರ್ ವರೆಗಿನ ಮಳೆಗಾಲದ ಸಮಯದಲ್ಲಿ ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳಿಗೆ ನೆರೆಹಾನಿಯಾಗಿತ್ತು. ಹಾನಿಯಾದ ಮನೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ 289 ಮನೆಗಳನ್ನು ಗುರುತಿಸಲಾಗಿತ್ತು.

news18-kannada
Updated:August 10, 2020, 1:20 PM IST
Mangalore Flood: ಬೆಳ್ತಂಗಡಿಯ ಮಹಾ ಪ್ರವಾಹಕ್ಕೆ ಒಂದು ವರ್ಷ; ಇನ್ನೂ ಹಸನಾಗಿಲ್ಲ ಸಂತ್ರಸ್ತರ ಬದುಕು
ಬೆಳ್ತಂಗಡಿ ಪ್ರವಾಹ
  • Share this:
ಮಂಗಳೂರು (ಆ. 10): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಉಂಟಾದ ಮಹಾ ಪ್ರವಾಹಕ್ಕೆ ಒಂದು ವರ್ಷ ಸಂದಿವೆ. ಈಗ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ..ಆದರೆ ಕಳೆದ ವರ್ಷ ಉಂಟಾಗಿದ್ದ ಪ್ರವಾಹದಲ್ಲಿ ಮನೆ, ಜಮೀನು ಕಳೆದುಕೊಂಡಿದ್ದ ಸಂತ್ರಸ್ತರಿಗೆ ಮಾತ್ರ ಇನ್ನೂ ಏನೂ ನೆರವು ಸಿಕ್ಕಿಲ್ಲ. ಒಂದು ವರ್ಷ ಆದರೂ ಸಂತ್ರಸ್ತರ ಬದುಕು ಮಾತ್ರ ಹಸನಾಗಿಲ್ಲ. ಸಂತ್ರಸ್ತರ ಖಾತೆಗೆ ಸರ್ಕಾರದಿಂದ ಹಣ ಜಮಾವಣೆಯಾದರೂ ತಾಂತ್ರಿಕ ಕಾರಣಗಳಿಂದ ಮನೆ ಪೂರ್ಣವಾಗದೆ ಇನ್ನೂ ಬಾಡಿಗೆ ಮನೆಯಲ್ಲೇ ವಾಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಮತ್ತೊಂದೆಡೆ ನದಿ ಪಾತ್ರದ ಜನರು ಪ್ರವಾಹದ ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಕಳೆದ ವರ್ಷ ಅಗಸ್ಟ್​ನಿಂದ ಅಕ್ಟೋಬರ್ ವರೆಗಿನ ಮಳೆಗಾಲದ ಸಮಯದಲ್ಲಿ ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳಿಗೆ ನೆರೆಹಾನಿಯಾಗಿತ್ತು. ಹಾನಿಯಾದ ಮನೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ 289 ಮನೆಗಳನ್ನು ಗುರುತಿಸಲಾಗಿತ್ತು. ಈವರೆಗೆ  ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಿದ ಲೆಕ್ಕ ಕಂದಾಯ ಇಲಾಖೆಯಲ್ಲಿದೆ. ಆದರೆ, ಲೆಕ್ಕ ನೀಡಿದರೂ ಲೆಕ್ಕ ಮಾತ್ರ ಪಕ್ಕಾ ಆಗಿಲ್ಲ.

203 ಮನೆ ಸಂಪೂರ್ಣ ಹಾನಿ, 55 ಮನೆ ಭಾಗಶಃ ಹಾನಿ ಎಂದು ಪರಿಗಣಿಸಿ ಒಟ್ಟು 289 ಮನೆಗಳು ಹಾನಿಗೊಳಗಾಗಿರುವುದಾಗಿ ಸರ್ಕಾರಕ್ಕೆ ವರದಿ ನೀಡಲಾಗಿದೆ‌.

ಇದನ್ನೂ ಓದಿ: ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​; ರಾಜ್ಯದ ಮಳೆಗೆ 13 ಬಲಿ

ಆದರೆ ಇನ್ನೂ ಮನೆಗಳು ಮಾತ್ರ ಪೂರ್ಣಗೊಂಡಿಲ್ಲ. ಒಟ್ಟು 69 ಮನೆಗಳು ತಳಪಾಯ ಹಂತದಲ್ಲಿದೆ. 77 ಮನೆಗಳು ಗೋಡೆಯ ಹಂತದಲ್ಲಿದೆ. 67 ಮನೆಗಳು ಛಾವಣಿಯ ಹಂತದಲ್ಲಿದೆ. 7 ಮನೆಗಳು ಮಾತ್ರ ಪೂರ್ಣ ಹಂತದಲ್ಲಿದೆ. ಬಾಡಿಗೆ ಮನೆಯಲ್ಲಿ ವಾಸಿಸುವ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಸಾವಿರದಂತೆ 10 ತಿಂಗಳವರೆಗೆ ಮಾಸಿಕ ಬಾಡಿಗೆ ಹಣ ನೀಡಲಾಗಿದೆ. ಈಗ 10 ತಿಂಗಳು ಪೂರ್ಣಗೊಂಡಿದ್ದು ಮುಂದಕ್ಕೆ ಬಾಡಿಗೆ ಕೊಡುವ ಬಗ್ಗೆ ಸರ್ಕಾರದಲ್ಲಿ ಸ್ಪಷ್ಟತೆ ಕಂಡುಬಂದಿಲ್ಲ. ಇತ್ತ ಮನೆಯೂ ಇಲ್ಲದೆ, ಕೊರೊನಾದ ಭಯದಿಂದ ಬದುಕು ಈಗ ಮತ್ತಷ್ಟು ಜಟಿಲವಾಗಿದೆ.

ದಕ್ಷಿಣ ಕನ್ನಡದಲ್ಲಿ ಈ ವರ್ಷವೂ ಮಳೆಯ ಪ್ರಮಾಣ ಹೆಚ್ಚಾಗಿದ್ದು, ನೇತ್ರಾವತಿ, ಕುಮಾರಧಾರಾ ನದಿಗಳು ತುಂಬಿ ಹರಿಯುತ್ತಿವೆ. ಮುಂದಿನ 24 ಗಂಟೆಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಈ ವರ್ಷವೂ ಕಳೆದ ಬಾರಿಯಂತೆ ಪ್ರವಾಹ ಉಂಟಾಗುವ ಭಯ ಕರಾವಳಿಯ ಜನರಿಗೆ ಕಾಡುತ್ತಿದೆ.
Published by: Sushma Chakre
First published: August 10, 2020, 1:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading