ಮಂಗಳೂರಿನಲ್ಲಿ ವಿವಾದಾತ್ಮಕ ಗೋಡೆಬರಹ; ಆರೋಪಿಗಳನ್ನು ಪತ್ತೆಹಚ್ಚಿ ಬೇರೆ ದೇಶಕ್ಕೆ ಬಿಡಿ ಎಂದ ಯುಟಿ ಖಾದರ್
ಒಂದು ವಾರದ ಒಳಗೆ ಈ ಆರೋಪಿಗಳ ಪತ್ತೆಯಾಗಬೇಕು. 15 ದಿನದ ಒಳಗೆ ಆರೋಪಿಗಳ ಬಂಧನ ಆಗದೇ ಇದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ ಎಂದು ಕಾಂಗ್ರೆಸ್ ನಾಯಕ ಯು.ಟಿ. ಖಾದರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
news18-kannada Updated:November 30, 2020, 7:56 AM IST

ಮಂಗಳೂರಿನ ಗೋಡೆ ಮೇಲಿನ ವಿವಾದಿತ ಬರಹ
- News18 Kannada
- Last Updated: November 30, 2020, 7:56 AM IST
ಮಂಗಳೂರು (ನ. 30): ಕಡಲನಗರಿ ಮಂಗಳೂರಿನಲ್ಲಿ ಮೊನ್ನೆ ತಾನೇ ಉಗ್ರಗಾಮಿ ಸಂಘಟನೆಗಳಿಗೆ ಜಿಂದಾಬಾದ್ ಹೇಳಿ ಒಂದು ಸಂದೇಶ ಕೊಟ್ಟು ಗೋಡೆಬರಹ ಬರೆಯಲಾಗಿತ್ತು. ಇದರಿಂದ ಕರಾವಳಿಯಲ್ಲಿ ಆತಂಕ ಎದುರಾಗಿತ್ತು. ಪೊಲೀಸರು ದೇಶದ್ರೋಹಿಗಳ ಬೆನ್ನಟ್ಟಿದ್ದಾರೆ. ಆದರೆ ಈ ಬೆನ್ನಲ್ಲೆ ಮತ್ತೊಂದು ಗೋಡೆ ಬರಹ ಈಗ ವಿವಾದ ಸೃಷ್ಟಿ ಮಾಡಿದೆ. ಅದು ಹಳೇ ಪೊಲೀಸ್ ಔಟ್ ಪೋಸ್ಟ್ ಗೋಡೆ ಮೇಲೆ ಬರೆದ ಬರಹವಾಗಿದೆ.
ಮೊನ್ನೆ ತಾನೆ ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ನ ಗೋಡೆ ಮೇಲೆ ಉಗ್ರಗಾಮಿ ಸಂಘಟನೆಗಳಿಗೆ ಜಿಂದಾಬಾದ್ ಹಾಕಿ ಗೋಡೆ ಬರಹ ಬರೆಯಲಾಗಿತ್ತು. ಗೋಡೆಯಲ್ಲಿ ಸಿಕ್ಕ ಸಂದೇಶ ಇಡೀ ಕರಾವಳಿಯನ್ನೇ ಆತಂಕಕ್ಕೆ ದೂಡಿತ್ತು. ಇನ್ನು ಈ ಗೋಡೆ ಬರಹ ಕರಾವಳಿಯಲ್ಲಿ ಕಿಚ್ಚು ಹೆಚ್ಚಿಸಿತ್ತು. ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದರು. ಆ ದೇಶದ್ರೋಹಿಗಳ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ಮದ್ಯೆ ಮತ್ತೊಂದು ಈ ರೀತಿಯ ಗೋಡೆ ಬರಹ ಈಗ ಮಂಗಳೂರಿನಲ್ಲಿ ಕಾಣಿಸಿದೆ. ಮಂಗಳೂರಿನ ಕೋರ್ಟ್ ರಸ್ತೆಯಲ್ಲಿ ಈ ರೀತಿಯ ಗೋಡೆ ಬರಹವನ್ನು ಬರೆಯಲಾಗಿದೆ. ಇದು ಕೋರ್ಟ್ ರಸ್ತೆಯಲ್ಲಿರುವ ಹಳೇ ಪೊಲೀಸ್ ಔಟ್ ಪೋಸ್ಟ್. ಇದರ ಮೇಲೆ ಕಿಡಿಗೇಡಿಗಳು, 'Gustuk e Rasool ek hi saza sar tan say juda' ಎಂದು ಗೋಡೆಬರಹ ಬರೆದಿದ್ದಾರೆ. ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆಯು ದೇಹದಿಂದ ಬೇರ್ಪಡುವುದು ಎಂಬ ಅರ್ಥ ನೀಡುವ ಬರವಣಿಗೆ ಇದಾಗಿದೆ.
ಇದನ್ನೂ ಓದಿ: ಲಾಬಿ ನಡೆಸುತ್ತಿರುವವರು ತಮ್ಮ ಸಚಿವ ಸ್ಥಾನವನ್ನೇ ಬಿಟ್ಟುಕೊಡಲಿ; ರಮೇಶ್ ಜಾರಕಿಹೊಳಿಗೆ ರೇಣುಕಾಚಾರ್ಯ ತಿರುಗೇಟು
ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಗೋಡೆ ಬರಹ ಬರೆಯುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಇದನ್ನ ಯಾರೇ ಆದರೂ ಸಹಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಇದನ್ನು ಪತ್ತೆ ಹಚ್ಚುವುದು ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿ. ಇವರಿಗೆ ಬೆಂಬಲವಾಗಿರುವರನ್ನು ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ. ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಮತ್ತೆ ಮತ್ತೆ ಹೀಗ್ಯಾಕೆ ಆಗ್ತಿದೆ. ಬರೆದವರನ್ನ ಪತ್ತೆ ಹಚ್ಚಿ ಅಂಥವರನ್ನ ಬೇರೆ ದೇಶಕ್ಕೆ ಬಿಟ್ಟು ಬರಬೇಕು. ಅಂಥವರಿಗೆ ನಮ್ಮ ಮಣ್ಣಿನಲ್ಲಿ ಇರಲು ಯಾವುದೇ ಹಕ್ಕಿಲ್ಲ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು ಕಾನೂನಿಗೆ ಹೆದರದ ಪರಿಸ್ಥಿತಿ ಇದೆ. ಗೋಡೆ ಬರಹ, ಇನ್ನಿತರ ವಿಚಾರಗಳು ಕಾಂಗ್ರೆಸ್ ಸರ್ಕಾರ ಇದ್ದಾಗ ಇರಲಿಲ್ಲ. ಆದರೆ ಬಿಜೆಪಿ ಬಂದಾಗ ಸಮಾಜದ್ರೋಹಿ ಶಕ್ತಿಗಳಿಗೆ ಧೈರ್ಯ ಬರುತ್ತದೆ. ಇದಕ್ಕೆ ಜಿಲ್ಲೆಯ ಎಂಪಿ, ಎಂಎಲ್ ಎಗಳು ಉತ್ತರ ಕೊಡಬೇಕು. ಒಂದು ವಾರದ ಒಳಗೆ ಈ ಆರೋಪಿಗಳ ಪತ್ತೆಯಾಗಬೇಕು. 15 ದಿನದ ಒಳಗೆ ಆರೋಪಿಗಳ ಬಂಧನ ಆಗದೇ ಇದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ. ಅವರು ಮಾನಸಿಕ ಅಸ್ವಸ್ಥ ಆಗಿರಲಿ, ಯಾರೇ ಆಗಿರಲಿ ಅರೆಸ್ಟ್ ಮಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದಕ್ಕೆ ಜವಾಬ್ದಾರಿ ಅಲ್ವಾ? ರಾಜ್ಯ ಸರ್ಕಾರ ಕೋಮಾ ಸ್ಥಿತಿಯಲ್ಲಿ ಇದೆ ಅಂತ ಟೀಕಿಸಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಉಗ್ರವಾದವನ್ನು ಸಹಿಸಿಕೊಳ್ಳಲು ದೇಶದಲ್ಲಿ ಜಾಗವಿಲ್ಲ, ಉಗ್ರವಾದಿಗಳು ಹೋಗಬೇಕಾಗಿದ್ದು ಮಸಣಕ್ಕೆ ಮಾತ್ರ. ಖಬರ್ ಸ್ಥಾನಕ್ಕೆ ಕಳುಹಿಸುವಂತಹ ಕೆಲಸವನ್ನು ಸೈನಿಕರು ಹಾಗೂ ಪೊಲೀಸರು ಸಮರ್ಥವಾಗಿ ಮಾಡುತ್ತಿದ್ದಾರೆ. ಉಗ್ರವಾದಿಗಳಿಗೆ ಬಿರಿಯಾನಿ ಕೊಡುವಂತಹ ರಾಜಕಾರಣ ವ್ಯವಸ್ಥೆ ಈಗ ಇಲ್ಲ. ಈಗೇನಿದ್ದರೂ ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡೋದು. ಕಾಶ್ಮೀರದಲ್ಲಿಯೇ ಬಾಲ ಬಿಚ್ಚಿದವರ ಬಾಲ ಕಟ್ ಮಾಡಿದ್ದೇವೆ. ತಲೆಯನ್ನೂ ಕಟ್ ಮಾಡಿದ್ದೇವೆ. ಇಲ್ಲಿಯೂ ಬಾಲ ಬಿಚ್ಚೋಕೆ ಬಿಡೋದಿಲ್ಲ. ಬಾಲ ಮಾತ್ರ ಕಟ್ ಆಗಲ್ಲ, ಉಳಿದಿದ್ದು ಕೂಡ ಕಟ್ ಆಗುತ್ತದೆ ಎಂದು ಎಚ್ಚರಿಕೆಯಿಂದಿರಬೇಕು ಅಂತ ಹೇಳಿದ್ದಾರೆ.
ಇನ್ನು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಕೋರ್ಟ್ ರಸ್ತೆಯ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಆರೋಪಿಗಳು ಮಾತ್ರ ಇನ್ನು ಪತ್ತೆಯಾಗಿಲ್ಲ. ಇನ್ನು ಈ ಪ್ರಕರಣ ರಾಜಕೀಯ ತಿರುವು ಪಡೆದು ಹಳ್ಳ ಹಿಡಿಯೋದಕ್ಕೂ ಮೊದಲು ಪೊಲೀಸರು ಆರೋಪಿಗಳನ್ನ ಬಂಧಿಸುವ ಅವಶ್ಯಕತೆ ಇದೆ.
ಮೊನ್ನೆ ತಾನೆ ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ನ ಗೋಡೆ ಮೇಲೆ ಉಗ್ರಗಾಮಿ ಸಂಘಟನೆಗಳಿಗೆ ಜಿಂದಾಬಾದ್ ಹಾಕಿ ಗೋಡೆ ಬರಹ ಬರೆಯಲಾಗಿತ್ತು. ಗೋಡೆಯಲ್ಲಿ ಸಿಕ್ಕ ಸಂದೇಶ ಇಡೀ ಕರಾವಳಿಯನ್ನೇ ಆತಂಕಕ್ಕೆ ದೂಡಿತ್ತು. ಇನ್ನು ಈ ಗೋಡೆ ಬರಹ ಕರಾವಳಿಯಲ್ಲಿ ಕಿಚ್ಚು ಹೆಚ್ಚಿಸಿತ್ತು. ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದರು. ಆ ದೇಶದ್ರೋಹಿಗಳ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ಮದ್ಯೆ ಮತ್ತೊಂದು ಈ ರೀತಿಯ ಗೋಡೆ ಬರಹ ಈಗ ಮಂಗಳೂರಿನಲ್ಲಿ ಕಾಣಿಸಿದೆ.